
ನವದೆಹಲಿ(ನ.21): ಸತತ 8 ದಿನಗಳಿಂದ ಇಳಿಕೆಯ ಹಾದಿ ಹಿಡಿದಿದ್ದ ತೈಲದರ ಇಂದು ಯಾವುದೇ ಇಳಿಕೆ ಕಾಣದೇ ತಟಸ್ಥವಾಗಿದೆ. ಆದರೆ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಇಳಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಆಗಸ್ಟ್ ತಿಂಗಳಿನ ದರಕ್ಕೆ ಸಮಾನವಾಗಿದೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದರ ಇಳಿಕೆ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯದಲ್ಲಿ ಏರಿಕೆಯಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಇಳಿಕೆಯಾಗುತ್ತಿತ್ತು. ಆದರೆ ಇಂದು ಮಾತ್ರ ತೈಲದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬುದು ಗಮನಾರ್ಹ.
ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ನೋಡುವುದಾದರೆ..
ರಾಷ್ಟ್ರ ರಾಜಧಾನಿ ನವದೆಹಲಿ-
ಪೆಟ್ರೋಲ್ ದರ: 76.38 ರೂ.
ಡೀಸೆಲ್ ದರ: 71.27 ರೂ.
ವಾಣಿಜ್ಯ ರಾಜಧಾನಿ ಮುಂಬೈ-
ಪೆಟ್ರೋಲ್ ದರ: 81.90 ರೂ.
ಡೀಸೆಲ್ ದರ: 74.66 ರೂ.
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-
ಪೆಟ್ರೋಲ್ ದರ: 78.33 ರೂ.
ಡೀಸೆಲ್ ದರ: 73.13 ರೂ.
ತಮಿಳುನಾಡು ರಾಜಧಾನಿ ಚೆನ್ನೈ-
ಪೆಟ್ರೋಲ್ ದರ: 79.31 ರೂ.
ಡೀಸೆಲ್ ದರ: 75.31 ರೂ.
ರಾಜ್ಯ ರಾಜಧಾನಿ ಬೆಂಗಳೂರು-
ಪೆಟ್ರೋಲ್ ದರ: 76.99 ರೂ.
ಡೀಸೆಲ್ ದರ: 71.65 ರೂ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.