
ನವದೆಹಲಿ(ಡಿ.22): ಯಾವುದೇ ತೆರಿಗೆ ಮತ್ತು ಡೀಲರ್ ಕಮಿಷನ್ ಸೇರಿಸದಿದ್ದರೆ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಒಂದು ಲೀಟರ್ ಪೆಟ್ರೋಲ್‌ಗೆ ಕೇವಲ 34ರೂಪಾಯಿ ಬೆಲೆ ನೀಡಬೇಕಗುತ್ತದೆ. ಚಳಿಗಾಲದ ಸಂಸತ್ ಅಧಿವೇಶನ ನಡೆಯುತ್ತಿದ್ದು, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ವಿಚಾರವು ಸದ್ದು ಮಾಡಿದ ಸಂದರ್ಭದಲ್ಲಿ ಖುದ್ದು ಕೇಂದ್ರದ ರಾಜ್ಯ ಹಣಕಾಸು ಸಚಿವರೇ ಈ ಮಾಹಿತಿಯನ್ನು ಬಿಚ್ಚಿಟ್ಟಿದ್ದಾರೆ.
ಈ ಮಧ್ಯೆ ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯಲ್ಲಿ ಗಣನೀಯ ಇಳಿಕೆ ಕಂಡುಬಂದ ಹಿನ್ನಲೆಯಲ್ಲಿ ದೇಶದಲ್ಲಿ ಪೆಟೋಲ್ ದರದಲ್ಲಿ 19 ರಿಂದ 20 ಪೈಸೆ ಮತ್ತು ಡೀಸೆಲ್ ದರದಲ್ಲಿ 22 ಪೈಸೆಯಷ್ಟು ಇಳಿಕೆ ಕಂಡುಬಂದಿದೆ.
ಅದರಂತೆ ದೇಶದ ಮಹಾನಗರಗಳಲ್ಲಿ ಇಂದಿನ ತೈಲ ದರಗಳತ್ತ ಗಮನಹರಿಸುವುದಾದರೆ...
ರಾಷ್ಟ್ರ ರಾಜಧಾನಿ ನವದೆಹಲಿ-
ಪೆಟ್ರೋಲ್- 70.27 ರೂ. (19 ಪೈಸೆ ಇಳಿಕೆ)
ಡೀಸೆಲ್- 64.19 ರೂ. (20 ಪೈಸೆ ಇಳಿಕೆ)
ವಾಣಿಜ್ಯ ರಾಜಧಾನಿ ಮುಂಬೈ-
ಪೆಟ್ರೋಲ್- 75.86 ರೂ. (18 ಪೈಸೆ ಇಳಿಕೆ)
ಡೀಸೆಲ್- 67.14 ರೂ. (22 ಪೈಸೆ ಇಳಿಕೆ)
ಪ.ಬಂಗಾಳ ರಾಜಧಾನಿ ಕೋಲ್ಕತ್ತಾ-
ಪೆಟ್ರೋಲ್- 72.33 ರೂ. (18 ಪೈಸೆ ಇಳಿಕೆ)
ಡೀಸೆಲ್- 65.92 ರೂ. (20 ಪೈಸೆ ಇಳಿಕೆ)
ತಮಿಳುನಾಡು ರಾಜಧಾನಿ ಚೆನ್ನೈ-
ಪೆಟ್ರೋಲ್- 72.88 ರೂ.(20 ಪೈಸೆ ಇಳಿಕೆ)
ಡೀಸೆಲ್- 67.74 ರೂ.(21 ಪೈಸೆ ಇಳಿಕೆ)
ರಾಜ್ಯ ರಾಜಧಾನಿ ಬೆಂಗಳೂರು-
ಪೆಟ್ರೋಲ್- 70.81 ರೂ. (19 ಪೈಸೆ ಇಳಿಕೆ)
ಡೀಸೆಲ್- 64.51 ರೂ. (20 ಪೈಸೆ ಇಳಿಕೆ)
ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್ ಗೆ 3,240 ರೂ (5 ರೂ. ಇಳಿಕೆ) ಆಗಿದೆ.
ಪೆಟ್ರೋಲ್ ಬೆಲೆ ಲೀಟರ್‌ಗೆ ಕೇವಲ 34 ರೂ, ಡೀಸೆಲ್ 38 ರೂ!
ಕೆಜಿಎಫ್ ನೋಡೊ ಮುನ್ನ ಪೆಟ್ರೋಲ್ ಬೆಲೆ ನೋಡೊದು ಚೆನ್ನ!
ಪೆಟ್ರೋಲ್ ರೇಟ್ ಏರಿಕೆ: ಎಲ್ಲಿ, ಎಷ್ಟು ದರ ತಿಳಿಯಬೇಕೆ?
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.