
ನವದೆಹಲಿ (ಮಾ.27): ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಗ್ರಾಹಕರಿಗೆ ಬರೆ ಎಳೆದಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಕೆಲವು ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ವಾರ್ಷಿಕ ನಿರ್ವಹಣಾ ಶುಲ್ಕದಲ್ಲಿ 75 ರೂಪಾಯಿ ಹೆಚ್ಚಳವಾಗಿದೆ ಎಂದು ತಿಳಿಸಿದೆ. ಎಸ್‌ಬಿಐ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ಮಾಹಿತಿಯ ಪ್ರಕಾರ ಇದು ಏಪ್ರಿಲ್ 1ರಿಂದ ಇದು ಜಾರಿಗೆ ಬರಲಿದೆ. ವಾರ್ಷಿಕ ನಿರ್ವಹಣಾ ಶುಲ್ಕಗಳ ಜೊತೆಗೆ, ಎಸ್‌ಬಿಐ ಡೆಬಿಟ್ ಕಾರ್ಡ್‌ಗಳಿಗೆ ಸಂಬಂಧಿಸಿದ ಇತರ ಶುಲ್ಕಗಳನ್ನು ಕೂಡ ವಿವರಿಸಿದೆ. ಕಾರ್ಡ್‌ನ ಆಧಾರದಲ್ಲಿ ವಿತರಣಾ ಶುಲ್ಕಗಳು ಬದಲಾಗುತ್ತವೆ ಎಂದು ಎಸ್‌ಬಿಐ ತಿಳಿಸಿದೆ. ಅದರಂತೆ ಕ್ಲಾಸಿಕ್, ಸಿಲ್ವರ್, ಗ್ಲೋಬಲ್ ಮತ್ತು ಕಾಂಟ್ಯಾಕ್ಟ್‌ಲೆಸ್ ಡೆಬಿಟ್ ಕಾರ್ಡ್‌ಗಳ ವಿತರಣಾ ಶುಲ್ಕ ಶೂನ್ಯವಾಗಿದ್ದರೆ, ಪ್ಲಾಟಿನಂ ಡೆಬಿಟ್ ಕಾರ್ಡ್‌ನ ವಿತರಣಾ ಶುಲ್ಕ 300 ರೂಪಾಯಿ + ಜಿಎಸ್‌ಟಿ ಎಂದು ಎಸ್‌ಬಿಐ ಮಾಹಿತಿ ನೀಡಿದೆ. ಇದಲ್ಲದೆ, ಗ್ರಾಹಕರು ಡೆಬಿಟ್ ಕಾರ್ಡ್ ರಿಪ್ಲೇಸ್ಮೆಂಟ್ (300 ರೂಪಾಯಿ+ GST), ಡೂಪ್ಲಿಕೇಟ್ PIN/PIN ರೀ ಜನರೇಷನ್ (50 ರೂಪಾಯಿ+ GST) ಮತ್ತು ಅಂತರಾಷ್ಟ್ರೀಯ ವಹಿವಾಟುಗಳಂತಹ ಸೇವೆಗಳಿಗೂ ಶುಲ್ಕ ಪಾವತಿ ಮಾಡಬೇಕಿದೆ.
ಅಂತರರಾಷ್ಟ್ರೀಯ ವಹಿವಾಟು ಶುಲ್ಕಗಳು ಎಟಿಎಂಗಳಲ್ಲಿ ಬ್ಯಾಲೆನ್ಸ್ ವಿಚಾರಣೆಗಾಗಿ 25 ರೂಪಾಯಿ+ ಜಿಎಸ್‌ಟಿ, ಕನಿಷ್ಠ 100 ರೂಪಾಯಿ ಅದರೊಂದಿಗೆ ಎಟಿಎಂ ನಗದು ಹಿಂಪಡೆಯುವ ವಹಿವಾಟುಗಳ ವಹಿವಾಟಿನ ಮೊತ್ತದ 3.5% ಮತ್ತು ಪಾಯಿಂಟ್ ಆಫ್ ಸೇಲ್ ( PoS) ಹಾಗೂ ಇಕಾಮರ್ಸ್ ವಹಿವಾಟುಗಳಿಗೆ ವಹಿವಾಟಿನ ಮೊತ್ತದ 3% ಮತ್ತು ಜಿಎಸ್‌ಟಿ ಇರುತ್ತದೆ ಎಂದು ತಿಳಿಸಿದೆ. ಉಲ್ಲೇಖಿಸಲಾದ ಎಲ್ಲಾ ಶುಲ್ಕಗಳು 18% ಜಿಎಸ್‌ಟಿ ಗೆ ಒಳಪಟ್ಟಿರುತ್ತವೆ.
ಮನೆ ಬಾಡಿಗೆ ಪಾವತಿಗೆ ಎಸ್ ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದೀರಾ? ಹಾಗಾದ್ರೆ ಜೇಬಿಗೆ ಬೀಳುತ್ತೆ ಹೆಚ್ಚುವರಿ ಹೊರೆ
ಇದರ ನಡುವೆ ಎಸ್‌ಬಿಐ ಕಾರ್ಡ್ ತನ್ನ ಪಾಲಿಸಿಗಳಲ್ಲಿ ಬದಲಾವಣೆಯನ್ನು ಪ್ರಕಟಿಸಿದೆ. ಏಪ್ರಿಲ್ 1ರಿಂದ, ಕೆಲವು ಕ್ರೆಡಿಟ್ ಕಾರ್ಡ್‌ಗಳಿಗೆ ರೆಂಟ್ ಪೇಮೆಂಟ್ಸ್ ಮೇಲಿನ ರಿವಾರ್ಡ್ ಪಾಯಿಂಟ್‌ಗಳ ಸಂಚಯವನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ತಿಳಿಸಿದೆ.
ಎಸ್ ಬಿಐ ಕಾರ್ಡ್ ಜೊತೆಗೆ ರಿಲಯನ್ಸ್ ರಿಟೇಲ್ ಒಪ್ಪಂದ; ಗ್ರಾಹಕರಿಗಾಗಿ ಕ್ರೆಡಿಟ್ ಕಾರ್ಡ್ ಬಿಡುಗಡೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.