Meta 8000 ಉದ್ಯೋಗಿಗಳಿಗೆ ಗೇಟ್ ಪಾಸ್ ಬೆನ್ನಲ್ಲೇ Linkedin ನಿಂದಲೂ 600 ನೌಕರರು ವಜಾ!

Kannadaprabha News   | Kannada Prabha
Published : May 21, 2026, 06:58 AM IST
Following Meta s 8000 Job Cuts LinkedIn Lays Off 600 Employees

ಸಾರಾಂಶ

Linkedin layoff: ವೃತ್ತಿಪರ ನೆಟ್‌ವರ್ಕಿಂಗ್ ವೇದಿಕೆಯಾದ ಲಿಂಕ್ಡ್‌ಇನ್‌, 600ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾಗೊಳಿಸಲು ನಿರ್ಧರಿಸಿದೆ. ಕಂಪನಿಯು ಆದಾಯದಲ್ಲಿ ಬೆಳವಣಿಗೆ ಕಂಡರೂ, ಆದ್ಯತೆಗಳನ್ನು ಪೂರೈಸಲು ಮೂಲಸೌಕರ್ಯದಲ್ಲಿ ಹೆಚ್ಚು ಹೂಡಿಕೆ ಮಾಡುವ ಕಾರಣ ನೀಡಿ ಈ ಕಠಿಣ ನಿರ್ಧಾರವನ್ನು ಕೈಗೊಂಡಿದೆ.

ಕ್ಯಾಲಿಫೋರ್ನಿಯಾ: ಟೆಕ್‌ ಕ್ಷೇತ್ರದಲ್ಲಿ ಉದ್ಯೋಗಿಗಳ ವಜಾ ಪರ್ವ ಮುಂದುವರಿದಿದ್ದು, ವೃತ್ತಿಪರ ನೆಟ್‌ವರ್ಕಿಂಗ್ ವೇದಿಕೆಯಾಗಿರುವ ಲಿಂಕ್ಡ್‌ಇನ್‌ 600ಕ್ಕೂ ಹೆಚ್ಚು ಉದ್ಯೋಗಿಗಳನ್ನು ವಜಾ ಮಾಡಲು ನಿರ್ಧರಿಸಿದೆ ಎಂದು ವರದಿಯಾಗಿದೆ. ಮೆಟಾ ಕಂಪನಿಯ 8000 ಜನರ ವಜಾ ಬೆನ್ನಲ್ಲೇ ವಿಷಯ ಹೊರಬಿದ್ದಿದೆ.

ಶೇ.5ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಸಿಇಒ ಡೇನಿಯಲ್ ಶಪೆರೋ ಘೋಷಿಸಿದ್ದರು.

ಇತ್ತೀಚೆಗಷ್ಟೇ ತನ್ನ ಒಟ್ಟು ಉದ್ಯೋಗಿಗಳ ಪೈಕಿ ಶೇ.5ರಷ್ಟು ಜನರನ್ನು ಕೆಲಸದಿಂದ ತೆಗೆದುಹಾಕುವುದಾಗಿ ಸಿಇಒ ಡೇನಿಯಲ್ ಶಪೆರೋ ಘೋಷಿಸಿದ್ದರು. ಕಳೆದ ವಾರ ಹೊರಡಿಸಲಾಗಿದ್ದ ಅಧಿಸೂಚನೆಯ ಪ್ರಕಾರ, ಜು.13ರಿಂದ 606 ಜನರ ಲಿಂಕ್ಡ್‌ಇನ್‌ ಜತೆಗಿನ ಔದ್ಯೋಗಿಕ ಸಂಬಂಧ ಕೊನೆಗೊಳ್ಳಲಿದೆ.

ಇದರಲ್ಲಿ ಬಹುಪಾಲು (352) ಉದ್ಯೋಗಿಗಳು ಮೌಂಟೇನ್ ವ್ಯೂ ಕಚೇರಿಯಲ್ಲಿದ್ದವರು

ಇದರಲ್ಲಿ ಬಹುಪಾಲು (352) ಉದ್ಯೋಗಿಗಳು ಮೌಂಟೇನ್ ವ್ಯೂ ಕಚೇರಿಯಲ್ಲಿದ್ದವರು. ಸಿಇಒ ಡೇನಿಯಲ್ ಶಪೆರೋ ಇತ್ತೀಚೆಗಷ್ಟೇ ಜಾಗತಿಕವಾಗಿ ಶೇ.5ರಷ್ಟು ಉದ್ಯೋಗಿಗಳನ್ನು (875ರಷ್ಟು ಜನರನ್ನು) ತೆಗೆದುಹಾಕಲು ಮುಂದಾಗಿದ್ದು, ‘ಕಂಪನಿಯ ಆದ್ಯತೆಗಳನ್ನು ಪೂರೈಸಲು ಅಗತ್ಯವಾದ ಮೂಲಸೌಕರ್ಯದಂತಹ ಕ್ಷೇತ್ರಗಳ ಮೇಲೆ ಹೆಚ್ಚು ಹೂಡಿಕೆ ಮಾಡಬೇಕಿದೆ’ ಎಂದು ಹೇಳಿದ್ದರು. ಲಿಂಕ್ಡ್‌ಇನ್ ತನ್ನ 3ನೇ ತ್ರೈಮಾಸಿಕ ಗಳಿಕೆಯಲ್ಲಿ ವರ್ಷದಿಂದ ವರ್ಷಕ್ಕೆ ಶೇ.12ರಷ್ಟು ಆದಾಯದ ಬೆಳವಣಿಗೆ ಕಂಡಿರುವ ಹೊರತಾಗಿಯೂ ಈ ನಿರ್ಧಾರ ಮಾಡಲಾಗಿದೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಭಾರತದ ಮೊದಲ ಪೆಟ್ರೋಲ್ ಬಂಕ್ ಎಲ್ಲಿ, ಯಾವಾಗ ಆರಂಭವಾಯ್ತು? ಬೆಂಗಳೂರಿನಿಂದ ಮುಂಬೈಗೆ ಹೋಗಲು 3 ರೂ. ಪೆಟ್ರೋಲ್ ಸಾಕು!
ಬೆಂಗಳೂರಿನಲ್ಲಿ ಅಜೀಂ ಪ್ರೇಮ್‌ಜೀ ಪುತ್ರನ ಬಿಗ್ ಡೀಲ್: ಬರೋಬ್ಬರಿ 45.71 ಕೋಟಿಗೆ ಐಷಾರಾಮಿ ಪೆಂಟ್‌ಹೌಸ್ ಖರೀದಿಸಿದ ತಾರಿಕ್ ಪ್ರೇಮ್‌ಜೀ!