
ಬೆಂಗಳೂರು: ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ನೀವು ಪ್ಲಾನ್ ಮಾಡಿಕೊಂಡಿದ್ದೀರಾ? ಹಾಗಾದ್ರೆ ಫ್ಲಿಪ್‌ಕಾರ್ಟ್ ಗೋಟ್ ಸೇಲ್ ಲಾಭ ಪಡೆದುಕೊಳ್ಳಲು ಇದು ಸುವರ್ಣವಕಾಶವಾಗಿದೆ. Flipkart GOAT Sale ಆರಂಭವಾಗಿದ್ದು, ಈ ಸೇಲ್ ಜುಲೈ 17ರವರೆಗೆ ಇರಲಿದೆ. ಈ ಸೇಲ್‌ನಲ್ಲಿ ಹಲವು ರಿಯಾಯ್ತಿಗಳನ್ನು ನೀಡಲಾಗಿದೆ. ಅದರಲ್ಲಿಯೂ ಈ ಕೆಳಗಿನ 15 ಸ್ಮಾರ್ಟ್‌ಫೋನ್ ಮೇಲೆ ಹೆಚ್ಚುವರಿ ಡಿಸ್ಕೌಂಟ್ ನೀಡಲಾಗಿದೆ.
ಮೊಟೊರೊಲಾ, ಸ್ಯಾಮ್‌ಸಂಗ್, ರಿಯಲ್ ಮಿ, ವಿವೋ, ಒಪ್ಪೋ ಸೇರಿದಂತೆ ಹಲವು ಪ್ರಮುಖ ಕಂಪನಿಗಳ ಸ್ಮಾರ್ಟ್‌ಫೋನ್ ಮೇಲೆ ಡಿಸ್ಕೌಂಟ್ ನೀಡಲಾಗಿದೆ. ಗ್ರಾಹಕರು ಸೇಲ್‌ನಲ್ಲಿ ಸೂಚಿಸಲಾಗಿರುವ ಬ್ಯಾಂಕ್ ಮೂಲಕ ವ್ಯವಹಾರ ನಡೆಸಿದ್ರೆ ಹೆಚ್ಚುವರಿ ರಿಯಾಯ್ತಿ ನಿಮ್ಮದಾಗಿಸಿಕೊಳ್ಳಬಹುದು. ಇನ್ನು ಈ ಲಿಸ್ಟ್‌ನಲ್ಲಿ ಆಪಲ್ ಕಂಪನಿಯ ಐಫೋನ್ ಸಹ ಕಡಿಮೆ ಬೆಲೆಗೆ ಸಿಗಲಿದೆ. ಆಫರ್ ಹೊಂದಿರುವ ಸ್ಮಾರ್ಟ್‌ಫೋನ್‌ಗಳು ಯಾವವು ಎಂದು ನೋಡೋಣ ಬನ್ನಿ.
ಯಾವ ಸ್ಮಾರ್ಟ್‌ಫೋನ್ ಬೆಸ್ಟ್?
ಈ ಪಟ್ಟಿಯಲ್ಲಿ ನೀಡಲಾದ ಕೆಲವು ಸ್ಮಾರ್ಟ್‌ಫೋನ್‌ಗಳ ಮೇಲೆ ಬ್ಯಾಂಕ್ ರಿಯಾಯ್ತಿ ಮತ್ತು ಎಕ್ಸ್‌ಚೇಂಜ್ ಆಫರ್ ನೀಡಲಾಗಿದೆ. ಈ ಎರಡು ಆಫರ್ ಬಳಕೆ ಮಾಡಿಕೊಂಡರೆ ಇಲ್ಲಿ ನೀಡಲಾಗಿರುವ ಬೆಲೆಗಿಂತ ಕಡಿಮೆಗೆ ಸ್ಮಾರ್ಟ್‌ಫೋನ್ ಸಿಗಲಿವೆ. ನೀವು ಬಜೆಟ್‌ನಲ್ಲಿ ಒಳ್ಳೆಯ ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ, POCO C71, Realme C61 ಮತ್ತು Galaxy F06 ನಿಮಗೆ ಉತ್ತಮ ಆಯ್ಕೆಗಳಾಗಿರಬಹುದು. 5G ಫೋನ್‌ಗಳಿಗೆ ಅಪ್‌ಗ್ರೇಡ್ ಮಾಡುವವರಿಗೆ moto g85, Realme P3X, Infinix Note 50s 5G ಅತ್ಯುತ್ತಮ ಆಯ್ಕೆಗಳಾಗಿರಬಹುದು. ಪ್ರೀಮಿಯಂ ವಿಭಾಗದಲ್ಲಿ iPhone 15, Galaxy S24 FE, Galaxy A35 5G ಖರೀದಿಸಬಹುದು.
| ಸ್ಮಾರ್ಟ್‌ಫೋನ್ | ಮೂಲೆ ಬೆಲೆ | ಆಫರ್ ಬೆಲೆ |
| Motorola moto g85 (8GB) | 20,999 ರೂ. | 14,999 ರೂ. |
| Realme P3 5G (8GB) | 16,999 ರೂ., | 15,499 ರೂ. |
| Samsung Galaxy S24 FE | 50,999 ರೂ. | 35,999 ರೂ. |
| Realme P3X 5G (6GB) | 16,999 ರೂ. | 11,699 ರೂ. |
| Vivo T4 Lite 5G | 13,999 ರೂ. | 9,999 ರೂ. |
| Motorola moto g45 (8GB) | 14,999 ರೂ. | 10,999 ರೂ. |
| Oppo K13x 5G | 16,999 ರೂ. | 11,499 ರೂ. |
| Samsung Galaxy A35 5G | 36,999 ರೂ. | 19,999 ರೂ. |
| POCO C75 5G | 10,999 ರೂ. | 7,499 ರೂ. |
| Realme C61 (4GB) | 10,999 ರೂ. | 7,699 ರೂ. |
| Samsung Galaxy F06 | 13,999 ರೂ. | 7,999 ರೂ. |
| Apple iPhone 15 | 69,900 ರೂ. | 62,900 ರೂ. |
| Motorola moto g35 5G (12GB RAM) | 12,499 ರೂ. | 9,999 ರೂ. |
| Infinix Note 50s 5G (6GB) | 19,999 ರೂ. | 12,249 ರೂ. |
| POCO C71 | 8,999 ರೂ. | 6,399 ರೂ. |
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.