ಪ್ರಧಾನಿ ಮೋದಿ ಆತ್ಮನಿರ್ಭರ್ ಭಾರತ್‌ ಪರಿಕಲ್ಪನೆಗೆ ಕೈಜೋಡಿಸಿದ ಫ್ಲಿಪ್‌ಕಾರ್ಟ್!

By Suvarna News  |  First Published Nov 2, 2021, 10:06 PM IST
  • ರಾಷ್ಟ್ರೀಯ ಜೀವನೋಪಾಯ ಮಿಷನ್  ಜೊತೆ ಫ್ಲಿಪ್ ಫ್ಲಿಪ್‌ಕಾರ್ಟ್ ಒಪ್ಪಂದ
  • ರಾಷ್ಟ್ರೀಯ ಮಾರುಕಟ್ಟೆ ಕಲ್ಪಿಸುವ ಮೂಲಕ ಗ್ರಾಮೀಣ ಜೀವನೋಪಾಯ ಸುಧಾರಣೆ 
  • ಕುಶಲಕರ್ಮಿಗಳು, ನೇಕಾರರು ಮತ್ತು ಕುಶಲಕರ್ಮಿಗಳ ನುರಿತ ಕೌಶಲ್ಯ

ಬೆಂಗಳೂರು(ನ.02):  ಪ್ರಧಾನಿ ನರೇಂದ್ರ ಮೋದಿಯ(Narendra Modi) ಆತ್ಮನಿರ್ಭರ್ ಭಾರತ್ ಪರಿಕಲ್ಪನೆಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ದೇಶದ ಉತ್ಪಾದನೆಯಲ್ಲಿ ಹೊಸ ಅಧ್ಯಾಯ ಆರಂಭಗೊಂಡಿದೆ. ಇದೀಗ ಆತ್ಮನಿರ್ಭರ್ ಭಾರತ್‌ಗೆ ಫ್ಲಿಫ್‌ಕಾರ್ಟ್(Flipkart) ಕೈಜೋಡಿಸಿದೆ.  ದೇಶೀಯ ಇ-ಕಾಮರ್ಸ್(E commerce) ಮಾರ್ಕೆಟ್ ಪ್ಲೇಸ್ ಫ್ಲಿಪ್ ಕಾರ್ಟ್ ಭಾರತ ಸರ್ಕಾರದ ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (DAY-NRLM) ಕಾರ್ಯಕ್ರಮವಾದ ಮಹತ್ವಾಕಾಂಕ್ಷೆಯ ದೀನದಯಾಳ್ ಅಂತ್ಯೋದಯ ಯೋಜನೆ ಅನುಷ್ಠಾನಕ್ಕಾಗಿ ಗ್ರಾಮೀಣಾಭಿವೃದ್ಧಿ ಇಲಾಖೆಯ ಜೊತೆಗೆ ಒಪ್ಪಂದಕ್ಕೆ ಸಹಿ ಹಾಕಿದೆ. 

ಹಬ್ಬದ ಸೀಸನ್‌ಗೆ ಬಿಗ್ ಬಿಲಿಯನ್ ಡೇಸ್ ಮಾರಾಟ ಮೇಳ ಘೋಷಿಸಿದ ಫ್ಲಿಪ್‌ಕಾರ್ಟ್!

Tap to resize

Latest Videos

undefined

ಈ ಒಪ್ಪಂದದ ಮೂಲಕ ಸ್ಥಳೀಯ ವ್ಯಾಪಾರಗಳು ಹಾಗೂ ಸ್ವಯಂ ಸೇವಾ ಗುಂಪುಗಳನ್ನು ಅದರಲ್ಲೂ ವಿಶೇಷವಾಗಿ ಮಹಿಳೆಯರ ನೇತೃತ್ವದ ಗುಂಪುಗಳನ್ನು ಇ-ಕಾಮರ್ಸ್ ವ್ಯಾಪ್ತಿಗೆ ತರುವ ಮೂಲಕ ಸಬಲೀಕರಣಗೊಳಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಲಾಗುತ್ತದೆ. ಸ್ವಯಂ ಉದ್ಯೋಗ ಮತ್ತು ಉದ್ಯಮಶೀಲತೆಗಾಗಿ ಗ್ರಾಮೀಣ ಸಮುದಾಯಗಳ ಸಾಮರ್ಥ್ಯಗಳನ್ನು ಬಲಪಡಿಸುವ ನಿಟ್ಟಿನಲ್ಲಿ DAY-NRLM ನ ಗುರಿಯೊಂದಿಗೆ ಪಾಲುದಾರಿಕೆಯನ್ನು ಜೋಡಿಸಲಾಗಿದೆ. ಇದರೊಂದಿಗೆ ಪ್ರಧಾನಮಂತ್ರಿಯವರ ``ಆತ್ಮನಿರ್ಭರ್ ಭಾರತ್’’ ದೇಷ್ಟಿಕೋನಕ್ಕೆ ಮತ್ತಷ್ಟು ಉತ್ತೇಜನವನ್ನು ನೀಡುತ್ತದೆ.

ದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್, ಗ್ರಾಮೀಣಾಭಿವೃದ್ಧಿ ಇಲಾಖೆಯ ರಾಜ್ಯ ಸಚಿವರಾದ ಸಾಧ್ವಿ ನಿರಂಜನ್ ಜ್ಯೋತಿ ಮತ್ತು ಫಗ್ಗನ್ ಸಿಂಗ್ ಕುಲಾಸ್ತೆ ಅವರ ಸಮ್ಮುಖದಲ್ಲಿ ಜಂಟಿ ಕಾರ್ಯದರ್ಶಿ (ಆರ್ ಎಲ್) DAY-NRLM ಚರಣ್ ಜೀತ್ ಸಿಂಗ್ ಮತ್ತು ಫ್ಲಿಪ್ ಕಾರ್ಟ್ ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಅವರು ಒಪ್ಪಂದಕ್ಕೆ ಸಹಿ ಹಾಕಿದರು.

ಈ ಒಪ್ಪಂದವು ಫ್ಲಿಪ್ ಕಾರ್ಟ್ ಸಮರ್ಥ್ ನ ಭಾಗವಾಗಿದೆ ಮತ್ತು ಕುಶಲಕರ್ಮಿಗಳು, ನೇಕಾರರು ಮತ್ತು ಕುಶಲಕರ್ಮಿಗಳ ನುರಿತ ಕೌಶಲ್ಯಗಳನ್ನು ನೀಡಿ ಕಡಿಮೆ ವ್ಯವಹಾರ ಸಂಪರ್ಕ ಇರುವ ಸಮುದಾಯಗಳಿಗೆ ಫ್ಲಿಪ್ ಕಾರ್ಟ್ ಮಾರುಕಟ್ಟೆಯ ಮೂಲಕ ರಾಷ್ಟ್ರೀಯ ಮಾರುಕಟ್ಟೆ ಪ್ರವೇಶವನ್ನು ಒದಿಸುವ ಗುರಿಯನ್ನು ಈ ಒಪ್ಪಂದ ಒಳಗೊಂಡಿದೆ. ಇದರ ಜೊತೆಗೆ ಜ್ಞಾನ ಮತ್ತು ತರಬೇತಿಗಾಗಿ ಮೀಸಲಾದ ಬೆಂಬಲವನ್ನು ನೀಡುತ್ತದೆ. ಸಮಯಾಧಾರಿತ ಇನ್ ಕ್ಯುಬೇಶನ್ ಮತ್ತು ಆನ್ ಬೋರ್ಡಿಂಗ್, ಕ್ಯಾಟಲಾಗಿಂಗ್, ಮಾರ್ಕೆಟಿಂಗ್, ಅಕೌಂಟ್ ಮ್ಯಾನೇಜ್ಮೆಂಟ್, ಬ್ಯುಸಿನೆಸ್ ಇನ್ ಸೈಟ್ಸ್ ಮತ್ತು ವೇರ್ ಹೌಸಿಂಗ್ ನಂತಹ ವಿಭಾಗಗಳಲ್ಲಿ ಸೂಕ್ತ ಬೆಂಬಲ ನೀಡುವ ಮೂಲಕ ಫ್ಲಿಪ್ ಕಾರ್ಟ್ ಸಮರ್ಥ್ ಸ್ಥಳೀಯ ಮಾರುಕಟ್ಟೆಯಲ್ಲಿನ ಅಡೆತಡೆಗಳನ್ನು ನಿವಾರಿಸಲಿದೆ. ಇದು ವ್ಯವಹಾರವನ್ನು ಹೆಚ್ಚು ಮಾಡಲು ಮತ್ತು ವ್ಯಾಪಾರ ಸೇರ್ಪಡೆಗೆ ಪೂರಕವಾದ ಹೆಚ್ಚು ಹೆಚ್ಚು ತಾಣಗಳನ್ನು ಕಲ್ಪಿಸಲಿದೆ. ಅದೇ ರೀತಿ ಅವರಿಗೆ ಸುಸ್ಥಿರವಾದ ಅತ್ಯುತ್ತಮ ಜೀವನೋಪಾಯ ಸಾಗಿಸುವ ಅವಕಾಶಗಳನ್ನು ಸೃಷ್ಟಿಸಲು ನೆರವಾಗಲಿದೆ.

3.6 ಬಿಲಿಯನ್‌ ಅಮೆರಿಕನ್ ಡಾಲರ್‌ ಸಂಗ್ರಹಿಸಿ ದಾಖಲೆ ಬರೆದ ಫ್ಲಿಪ್‌ಕಾರ್ಟ್

ಗ್ರಾಮೀಣಾಭಿವೃದ್ಧಿ ಸಚಿವಾಲಯದ DAY-NRLM ಕಾರ್ಯಕ್ರಮವು ದೇಶದ ಎಲ್ಲಾ 28 ರಾಜ್ಯಗಳು ಮತ್ತು 6 ಕೇಂದ್ರಾಡಳಿತ ಪ್ರದೇಶಗಳ 706 ಜಿಲ್ಲೆಗಳ 6,768 ಬ್ಲಾಕ್ ಗಳನ್ನು ತಲುಪುತ್ತಿದೆ. ಇಲ್ಲಿ 71 ಲಕ್ಷ ಎಸ್ ಎಚ್ ಜಿಗಳಲ್ಲಿ 7.84 ಕೋಟಿ ಮಹಿಳೆಯರು ಸೇರಿದ್ದಾರೆ. ಈ ಮೂಲಕ ಬಡ ಗ್ರಾಮೀಣ ಮಹಿಳೆರನ್ನು ಸಬಲರನ್ನಾಗಿ ಮಾಡುವ ಗೇಮ್ ಚೇಂಜಿಂಗ್ ಉಪಕ್ರಮ ಎನಿಸಿದೆ. ಈ ಮಿಷನ್ ಅಡಿ ವಿವಿಧ ವರ್ಗಗಳು ಮತ್ತು ಜಾತಿಗಳ ಬಡ ಮಹಿಳೆಯರು ಎಸ್ ಎಚ್ ಜಿಗಳನ್ನು ರಚಿಸಿಕೊಂಡಿದ್ದಾರೆ ಮತ್ತು  ತಮ್ಮದೇ ಆದ ಒಕ್ಕೂಟಗಳನ್ನು ಮಾಡಿಕೊಂಡಿದ್ದಾರೆ. ಇವುಗಳ ಮೂಲಕ ತಮ್ಮ ಸದಸ್ಯರಿಗೆ ಹಣಕಾಸು ಮತ್ತು ಸಾಮಾಜಿಕ ಅಭಿವೃದ್ಧಿ ಸೇವೆಗಳನ್ನು ಒದಗಿಸಿ ಅವರ ಆದಾಯ ಮತ್ತು ಜೀವನ ಮಟ್ಟವನ್ನು ಸುಧಾರಣೆ ಮಾಡಲಾಗುತ್ತಿದೆ. ಜೀವನೋಪಾಯ ಚಟುವಟಿಕೆಗಳನ್ನು ಉತ್ತೇಜಿಸುವ ಪ್ರಯತ್ನಗಳ ಭಾಗವಾಗಿ ಎಸ್ ಎಚ್ ಜಿಗಳು ತಯಾರಿಸುವ ಸ್ಥಳೀಯ ಮತ್ತು ಗ್ರಾಮೀಣ ಉತ್ಪನ್ನಗಳನ್ನು ಎನ್ಆರ್ ಎಲ್ ಎಂ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಪ್ರಚುರಪಡಿಸುವ ನಿರಂತರ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಇದಕ್ಕಾಗಿ ಸಾರಸ್ ಫೇರ್ಸ್, ಸಾರಸ್ ಗ್ಯಾಲರಿ ಮತ್ತು ರೀಟೇಲ್ ಔಟ್ ಲೆಟ್ ಗಳು, ರಾಜ್ಯ ಮಾಲೀಕತ್ವದ ಆನ್ ಲೈನ್ ಇ-ಕಾಮರ್ಸ್ ವೇದಿಕೆಗಳು ಹಾಗೂ ಇತರ ವಾಣಿಜ್ಯ ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳನ್ನು ಕಲ್ಪಿಸಲಾಗುತ್ತಿದೆ.

ಎಸ್ ಎಚ್ ಜಿಗಳು ನಮ್ಮ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿವೆ ಮತ್ತು ನಾವು ಅವರ ವಾರ್ಷಿಕ ಆದಾಯವನ್ನು 1 ಲಕ್ಷ ರೂಪಾಯಿಗಳಿಗೆ ಹೆಚ್ಚಿಸುವ ಗುರಿಯನ್ನು ಇಟ್ಟುಕೊಂಡಿದ್ದೇವೆ. ಈ ಸದುದ್ದೇಶದ ಕಾರ್ಯಕ್ಕೆ ಕೊಡುಗೆ ನೀಡುವ ಎಲ್ಲಾ ಪಾಲುದಾರರನ್ನು ಗುರುತಿಸುವ ಮತ್ತು ಅವರೊಂದಿಗೆ ಸಹಭಾಗಿತ್ವ ಹೊಂದುವ ಪ್ರಯತ್ನಗಳನ್ನು ನಡೆಸುತ್ತಿದ್ದೇವೆ. ಡೇ ಎನ್ ಆರ್ ಎಲ್ ಎಂ ಮತ್ತು ಫ್ಲಿಪ್ ಕಾರ್ಟ್ ನಡುವಿನ ಪಾಲುದಾರಿಕೆಯು ಈ ಪ್ರಕ್ರಿಯೆಗೆ ನೆರವಾಗಲಿದೆ. ಭಾರತದಲ್ಲಿ, ವಿದೇಶ ಮತ್ತು ಇ-ಕಾಮರ್ಸ್ ಪ್ಲಾಟ್ ಫಾರ್ಮ್ ಗಳಲ್ಲಿ ಗ್ರಾಮೀಣ ಉತ್ಪನ್ನಗಳಿಗೆ ಸಾಕಷ್ಟು ಬೇಡಿಕೆ ಇದೆ. ಈ ಅವಕಾಶವನ್ನು ಬಳಸಿಕೊಳ್ಳಲು ಇದು ಪರಿಣಾಮಕಾರಿಯಾದ ಸಾಧನವಾಗಿದೆ ಎಂದು  ಕೇಂದ್ರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸಚಿವ ಗಿರಿರಾಜ್ ಸಿಂಗ್ ಹೇಳಿದರು.

ಫ್ಲಿಪ್ ಕಾರ್ಟ್ ಸಮರ್ಥ್ ನೊಂದಿಗೆ DAY-NRLM ನ ಪಾಲುದಾರಿಕೆಯು ಒಂದು ಸದೃಢವಾದ ಸಾಮರ್ಥ್ಯವನ್ನು ರಚಿಸುವ ವೇದಿಕೆಯಾಗಿದೆ. ಇದರ ಮೂಲಕ ಗ್ರಾಮೀಣ ಜೀವನೋಪಾಯ, ವಿಶೇಷವಾಗಿ ಮಹಿಳೆಯರ ಮೇಲೆ ಪರಿಣಾಮಕಾರಿಯಾದ ಪ್ರಭಾವವನ್ನು ಬೀರಲಿದೆ. ಈ ಒಂದು ಹೆಜ್ಜೆಯು ಗ್ರಾಮೀಣ ವ್ಯವಹಾರಗಳನ್ನು ನಿರ್ಮಾಣ ಮಾಡಲು ಮತ್ತು ಬೆಂಬಲಿಸಲು ಅಗತ್ಯವಿರುವ ಸಂಪನ್ಮೂಲಗಳನ್ನು ಸಜ್ಜುಗೊಳಿಸುತ್ತದೆ. ಅಲ್ಲದೇ, ಅವುಗಳ ಬೆಳವಣಿಗೆಗೆ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ನೆರವಾಗುತ್ತದೆ. ಪ್ರಸ್ತುತ ಕೋವಿಡ್ ನಂತರದ ಕಾಲಘಟ್ಟದಲ್ಲಿ ಇದು ಅಂತರ್ಗತವಾದ ಮತ್ತು ದೃಢವಾದ ರಾಷ್ಟ್ರೀಯ ಅಭಿವೃದ್ಧಿಗೆ ನಿರ್ಣಾಯಕವಾಗಲಿದೆ ಎಂದು DAY-NRLM ನ ಜಂಟಿ ನಿರ್ದೇಶಕ ಚರಣಜೀತ್ ಸಿಂಗ್ ಹೇಳಿದರು.

ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿರುವ ದುರ್ಬಲ ವರ್ಗದ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಬೆಳವಣಿಗೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ನಾವು ಭಾರತೀಯ ಮಾರುಕಟ್ಟೆಯ ನಮ್ಮ ಜ್ಞಾನವನ್ನು ಬಳಸಿಕೊಳ್ಳುತ್ತೇವೆ. ಭಾರತದ ಸ್ಥಳೀಯ ಕುಶಲಕರ್ಮಿಗಳು, ನೇಕಾರರು ಮತ್ತು ಸ್ವಸಹಾಯ ಗುಂಪುಗಳು ವಿಸ್ತಾರವಾದ ಜನರನ್ನು ತಲುಪುವ ಮತ್ತು ತಮ್ಮ ಪ್ರದೇಶಗಳ ಹೊರಗೂ ತಲುಪುವ ಸಾಮರ್ಥ್ಯವನ್ನು ಹೊಂದಿವೆ. ಈ ದಿಸೆಯಲ್ಲಿ ಫ್ಲಿಪ್ ಕಾರ್ಟ್ ಸಮರ್ಥ್ ದೇಶಾದ್ಯಂತ ಇರುವ 350 ಮಿಲಿಯನ್ ಗೂ ಅಧಿಕ ಗ್ರಾಹಕರನ್ನು ತಲುಪುವ ಅವಕಾಶವನ್ನು ಕಲ್ಪಿಸುತ್ತದೆ. ನಾವು DAY-NRLM ನ ಜೊತೆಗೆ ಪಾಲುದಾರಿಕೆ ಹೊಂದುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ ಎಂದು ಫ್ಲಿಪ್ ಕಾರ್ಟ್ ಗ್ರೂಪ್ ನ ಚೀಫ್ ಕಾರ್ಪೊರೇಟ್ ಅಫೇರ್ಸ್ ಆಫೀಸರ್ ರಜನೀಶ್ ಕುಮಾರ್ ಹೇಳಿದರು.

ದುರ್ಬಲ ವರ್ಗದ ದೇಶೀಯ ಸಮುದಾಯಗಳು ಮತ್ತು ವ್ಯಾಪಾರಗಳಿಗೆ ಉತ್ತಮ ಅವಕಾಶಗಳನ್ನು ಕಲ್ಪಿಸುವುದು ಮತ್ತು ಜೀವನೋಪಾಯವನ್ನು ಉತ್ತಮಗೊಳಿಸುವ ಉದ್ದೇಶದಿಂದ 2019 ರಲ್ಲಿ ಫ್ಲಿಪ್ ಕಾರ್ಟ್ ಸಮರ್ಥ್ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಪ್ರಸ್ತುತ ಫ್ಲಿಪ್ ಕಾರ್ಟ್ ಸಮರ್ಥ್ 9,50,000 ಕ್ಕೂ ಅಧಿಕ ಕುಶಲಕರ್ಮಿಗಳು, ನೇಕಾರರ ಜೀವನೋಪಾಯವನ್ನು ಸುಧಾರಣೆ ಮಾಡುವ ನಿಟ್ಟಿನಲ್ಲಿ ಬೆಂಬಲ ನೀಡುತ್ತಿದೆ. ಈ ಪ್ಲಾಟ್ ಫಾರ್ಮ್ ಗೆ ಇನ್ನೂ ಹೆಚ್ಚಿನ ಮಾರಾಟಗಾರರನ್ನು ಸೇರ್ಪಡೆ ಮಾಡುವ ದಿಸೆಯಲ್ಲಿ ನಿರಂತರ ಪ್ರಯತ್ನಗಳನ್ನು ನಡೆಸುತ್ತಿದೆ.
 

click me!