EPFO 3.0: ಎಟಿಎಂ ಮೂಲಕವೂ ಪಿಎಫ್‌ ವಿತ್‌ಡ್ರಾ ಮಾಡೋಕೆ ಸಿಗಲಿದೆ ಅವಕಾಶ!

By Santosh Naik  |  First Published Nov 29, 2024, 12:59 PM IST

ಕೇಂದ್ರ ಸರ್ಕಾರವು EPFO 3.0 ಯೋಜನೆಯನ್ನು ಪರಿಚಯಿಸಲು ಸಿದ್ಧವಾಗಿದೆ, ಇದು ಉದ್ಯೋಗಿಗಳಿಗೆ ಹೆಚ್ಚಿನ ಉಳಿತಾಯ ಸ್ವಾತಂತ್ರ್ಯ ಮತ್ತು ATM ಮೂಲಕ PF ಹಿಂಪಡೆಯುವಿಕೆಯಂತಹ ಹೊಸ ವೈಶಿಷ್ಟ್ಯಗಳನ್ನು ನೀಡುತ್ತದೆ.


ನವದೆಹಲಿ (ನ.29): ಮಹತ್ವಾಕಾಂಕ್ಷಿಯ ಪ್ಯಾನ್‌ 2.0 ಯೋಜನೆ ಘೋಷಣೆ ಮಾಡಿದ ಬಳಿಕ ಕೇಂದ್ರ ಸರ್ಕಾರ, ಇಪಿಎಫ್‌ಒ 3.0 ಯೋಜನೆಯನ್ನು ಅನಾವರಣ ಮಾಡುವ ಪ್ರಯತ್ನ ಮಾಡುತ್ತಿದೆ. ಈಗಾಗಲೇ ಪಿಎಫ್‌ನ ಭಾಗವಾಗಿರುವ ಉದ್ಯೋಗಿಗಳಿಗೆ ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸುತ್ತಿದೆ. ಎಕ್ಸ್‌ಕ್ಲೂಸಿವ್‌ ಆಗಿ ಈ ಮಾಹಿತಿಯನ್ನು ಕೇಂದ್ರ ಸರ್ಕಾರದ ಮೂಲಗಳು ಹಂಚಿಕೊಂಡಿದೆ. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆ (EPFO) ಭವಿಷ್ಯ ನಿಧಿಗೆ (PF) ಉದ್ಯೋಗಿ ಕೊಡುಗೆಗಳ ಮೇಲಿನ 12% ಮಿತಿಯನ್ನು ತೆಗೆದುಹಾಕಬಹುದು ಎನ್ನಲಾಗಿದೆ. ಪಿಎಫ್‌ ಹೊಂದಿರುವ ಉದ್ಯೋಗಿಗಳು ಎಟಿಎಂಗಳನ್ನು ಬಳಸಿಕೊಂಡು ನೇರವಾಗಿ ಪಿಎಫ್‌ ಹಿಂಪಡೆಯುವ ಆಯ್ಕೆಯನ್ನೂ ನೀಡುವ ಸಾಧ್ಯತೆ ಇದೆ. ಆ ಮೂಲಕ ಹಣ ವಿತ್‌ಡ್ರಾಅನ್ನು ಇನ್ನಷ್ಟು ಅನುಕೂಲಕರವಾಗಿರಿಸುವ ಗುರಿಯನ್ನು ಹೊಂದಿದೆ. ಉದ್ಯೋಗಿಗಳು ತಮ್ಮ ಉಳಿತಾಯದ ಆದ್ಯತೆಗಳ ಆಧಾರದ ಮೇಲೆ ತಮ್ಮ ಪಿಎಫ್ ಖಾತೆಗಳಿಗೆ ಕೊಡುಗೆ ನೀಡಲು ಸಾಧ್ಯವಾಗಲಿದೆ ಎಂದೂ ವರದಿಯಾಗಿದೆ.

ಯೋಜನೆಯು ಯಾವುದೇ ಸಮಯದಲ್ಲಿ ಪ್ರಸ್ತುತ ಮಿತಿಯನ್ನು ಮೀರಿ ಠೇವಣಿಗಳನ್ನು ಅನುಮತಿಸಬಹುದಾಗಿದೆ. ಹಾಗಿದ್ದರೂ, ಉದ್ಯೋಗದಾತರ ಕೊಡುಗೆಗಳು ಸಂಬಳ ಆಧಾರಿತವಾಗಿ ಉಳಿಯುತ್ತವೆ ಆ ಮೂಲಕ ವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಖಾತ್ರಿಪಡಿಸುತ್ತದೆ ಎಂದು ತಿಳಿಸಿದ್ದಾರೆ.

Tap to resize

Latest Videos

ಹೆಚ್ಚಿನ ಉಳಿತಾಯಕ್ಕೆ ಹೆಚ್ಚಿನ ಸ್ವಾತಂತ್ರ್ಯ: ಈ ಪ್ರಸ್ತಾವನೆಯು ಆರಂಭಿಕ ಚರ್ಚೆಯ ಹಂತದಲ್ಲಿದೆ. ಹೆಚ್ಚಿನ ಉಳಿತಾಯಕ್ಕೆ ಪ್ರಾಮುಖ್ಯತೆ ಹಾಗೂ ತಮ್ಮ ಹಣದ ಬಗ್ಗೆ ಹೆಚ್ಚಿನ ಸ್ವಾತಂತ್ರ್ಯ ನೀಡುವುದು ಸರ್ಕಾರದ ಪ್ರಾಥಮಿಕ ಗುರಿಯಾಗಿದೆ. ಪಿಎಫ್‌ ಉದ್ಯೋಗಿಗಳು ತಮ್ಮ ಹೆಚ್ಚುವರಿ ಮೊತ್ತವನ್ನು ಭವಿಷ್ಯದ ಪ್ರಯೋಜನಗಳಿಗಾಗಿ ಹೆಚ್ಚಿನ ಪಿಂಚಣಿಗಳಾಗಿ ಪರಿವರ್ತಿಸಬಹುದು ಎಂದು ವರದಿ ಹೇಳಿದೆ.

2025ರ ಮಧ್ಯಭಾಗದಲ್ಲಿ ಎಟಿಎಂ ಮೂಲಕ ಪಿಎಫ್‌ ವಿತ್‌ಡ್ರಾ: ಕಾರ್ಮಿಕ ಸಚಿವಾಲಯವು ಎಟಿಎಂಗಳ ಮೂಲಕ ಪಿಎಫ್ ಹಿಂಪಡೆಯುವಿಕೆಯನ್ನು ಸಕ್ರಿಯಗೊಳಿಸಲು ಕಾರ್ಡ್‌ಗಳನ್ನು ನೀಡುವ ಕೆಲಸ ಮಾಡುತ್ತಿದೆ ಎಂದು ವರದಿಯಾಗಿದೆ. ಈ ಸೌಲಭ್ಯವನ್ನು 2025 ರ ಮೇ-ಜೂನ್ ವೇಳೆಗೆ ಬಿಡುಗಡೆ ಮಾಡುವ ನಿರೀಕ್ಷೆಯಿದೆ, ಇದು EPFO ​​ಚಂದಾದಾರರಿಗೆ ಮತ್ತಷ್ಟು ಅನುಕೂಲವನ್ನು ತರುತ್ತದೆ.

Rules Change From 1st December: ಡಿಸೆಂಬರ್‌ನಲ್ಲಿ ಬದಲಾಗಲಿವೆ ಈ ನಿಯಮಗಳು

ಹೆಚ್ಚಿನ ಪಿಂಚಣಿಗಳಿಗಾಗಿ EPS-95 ಪರಿಷ್ಕರಣೆ: ಗುರುವಾರ (ನವೆಂಬರ್ 28), ಕಾರ್ಮಿಕ ಸಚಿವಾಲಯವು ನೌಕರರ ಪಿಂಚಣಿ ಯೋಜನೆ 1995 (ಇಪಿಎಸ್ -95) ಅನ್ನು ನವೀಕರಿಸುವ ಕೆಲಸ ಮಾಡುತ್ತಿದೆ ಎಂದು ಪಿಟಿಐ ವರದಿ ಬಹಿರಂಗಪಡಿಸಿದೆ. ಪ್ರಸ್ತುತ, ಉದ್ಯೋಗಿಗಳ ಸಂಪೂರ್ಣ 12% ಕೊಡುಗೆಯು EPF ಖಾತೆಗೆ ಹೋಗುತ್ತದೆ, ಆದರೆ ಉದ್ಯೋಗದಾತರ ಕೊಡುಗೆಯ 8.33% ಅನ್ನು EPS-95 ಗೆ ಮತ್ತು ಉಳಿದ 3.67% ಅನ್ನು EPF ಗೆ ಹಂಚಲಾಗುತ್ತದೆ. ನೌಕರರು ನೇರವಾಗಿ ಇಪಿಎಸ್-95 ಗೆ ಕೊಡುಗೆ ನೀಡಲು ಸಚಿವಾಲಯವು ಪರಿಗಣಿಸುತ್ತಿದೆ ಎಂದು ವರದಿ ಹೇಳಿದೆ. ಈ ಕ್ರಮವು ಪಿಎಫ್‌ ಹೊಂದಿರುವ ವ್ಯಕ್ತಿಗಳೀಗೆ ತಮ್ಮ ಪಿಂಚಣಿ ಪ್ರಯೋಜನಗಳನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಇಪಿಎಸ್‌-95ಗೆ ಹೆಚ್ಚಿನ ಕೊಡುಗೆ ನೀಡುವುದರಿಂದ ನಿವೃತ್ತಿಯ ವೇಳೆ ಹೆಚ್ಚಿನ ಬೆನಿಫಿಟ್‌ ಪಡೆಯಲು ಸಾಧ್ಯವಾಗಲಿದೆ.

Bank Holiday: ಡಿಸೆಂಬರ್‌ ತಿಂಗಳಲ್ಲಿ ಬ್ಯಾಂಕ್‌ ರಜೆಗಳ ಲಿಸ್ಟ್‌!

click me!