ಕಚೇರಿ ಲಿಫ್ಟ್ ನಲ್ಲಿ 3 ಗಂಟೆ ಸಿಕ್ಹಾಕಿಕೊಂಡ ಉದ್ಯೋಗಿ, ದಿನದ ಸಂಬಳವೇ ಕಟ್!

By Suvarna NewsFirst Published Sep 27, 2023, 5:02 PM IST
Highlights

ಕಂಪನಿಗಳ ನಿಯಮ ಭಿನ್ನವಾಗಿರುತ್ತೆ. ಕಚೇರಿಗೆ ತಡವಾಗಿ ಬಂದವರ ಸ್ಯಾಲರಿಗೆ ಕತ್ತರಿ ಬೀಳೋದು ಮಾಮೂಲು. ರಜೆ ಹಾಕಿದವರಿಗೂ ಸಂಬಳ ನೀಡಲ್ಲ. ಕಚೇರಿಗೆ ಬಂದು, ಲಿಫ್ಟ್ ನಲ್ಲಿ ಸಿಕ್ಕಿಬಿದ್ದು, ಕಚೇರಿ ಕೆಲಸ ಮಾಡಿದವನಿಗೆ ಏನಾಯ್ತು? 
 

ದೊಡ್ಡ ದೊಡ್ಡ ಕಟ್ಟಡಗಳು ತೆಲೆ ಎತ್ತುತ್ತಿರುವ ಕಾರಣ ಲಿಫ್ಟ್ ಅನಿವಾರ್ಯವಾಗಿದೆ. ಮನೆ ಇರಲಿ, ಕಚೇರಿ ಇರಲಿ ಈಗ ಲಿಫ್ಟ್ ಬಳಸದ ಜನರಿಲ್ಲ. ಅನೇಕ ಬಾರಿ ಲಿಫ್ಟ್ ಕೆಟ್ಟು ನಿಂತ ಸುದ್ದಿಯನ್ನು ನಾವು ಕೇಳ್ತೇವೆ. ನೀವೂ ಲಿಫ್ಟ್ ನಲ್ಲಿ ಸಿಕ್ಕಿ ಬಿದ್ದಿರಬಹುದು. ಸಾಮಾನ್ಯವಾಗಿ ಲಿಫ್ಟ್ ನಲ್ಲಿ ಸಿಕ್ಕಿಬಿದ್ದಾಗ ಭಯ ಆಗೋದು ಸಹಜ. ಸುರಕ್ಷಿತವಾಗಿ ಹೊರ ಬಂದ್ಮೇಲೆ ದೊಡ್ಡ ನಿಟ್ಟುಸಿರು ಬಿಡ್ತೇವೆ. ಕಚೇರಿ ಲಿಫ್ಟ್ ನಲ್ಲಿ ಈ ರೀತಿಯಾದ್ರೆ ಕಂಪನಿ ಆ ದಿನ ನಮಗೆ ಎಕ್ಸ್ ಕ್ಯೂಸ್ ನೀಡೋದಲ್ಲದೆ ಸಂಬಳ ಸಹಿತ ರಜೆ ನೀಡ್ಬಹುದು ಅಂತಾ ನಾವೆಲ್ಲ ಅಂದುಕೊಳ್ತೇವೆ. ಆದ್ರೆ ಎಲ್ಲ ಕಚೆರಿಯಲ್ಲೂ ನೀವು ಊಹಿಸಿದ್ದು ನಡೆಯೋದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಉದ್ಯೋಗಿಯೊಬ್ಬನ ಕಥೆ ವೈರಲ್ ಆಗಿದೆ. ರೆಡ್ಡಿಟ್ ನಲ್ಲಿ ವ್ಯಕ್ತಿ ತನ್ನ ನೋವನ್ನು ತೋಡಿಕೊಂಡಿದ್ದಾರೆ.

ಕಾರ್ಪೋರೇಟ್ (Corporate)  ಕಂಪನಿ ಮಾತ್ರವಲ್ಲದೆ ಸಣ್ಣ ಕಂಪನಿಗಳಲ್ಲಿ ಕೂಡ ಉದ್ಯೋಗಿ (Employee) ಗಳಿಗೆ ಕೆಲಸದ ಸಮಯ ನಿಗದಿಯಾಗಿರುತ್ತದೆ. ಬೆಳಿಗ್ಗೆ ಲಾಗಿನ್ ಮಾಡೋದು ತಡವಾದ್ರೆ ಸಂಬಳಕ್ಕೆ ಕತ್ತರಿ ಬೀಳುತ್ತೆ. ಆದ್ರೆ ಕಚೇರಿ (Office) ಲಿಫ್ಟ್ ನಲ್ಲೇ ದೋಷವಿದ್ದಾಗ, ಅಲ್ಲಿಯವರೆಗೆ ಉದ್ಯೋಗಿ ಬಂದಿದ್ದಾನೆ ಎಂಬುದು ಗೊತ್ತಾದ ಮೇಲೂ ಆತನ ಸಂಬಳ ಕಟ್ ಮಾಡೋದು ಅಂದ್ರೆ ಹೇಗೆ ಹೇಳಿ? ಬ್ಯಾಂಕ್ ಉದ್ಯೋಗಿಗೆ ಈ ಅನುಭವವೂ ಆಗಿದೆ. ಬ್ಯಾಂಕ್ ಉದ್ಯೋಗಿ ಕೆಲಸಕ್ಕೆ ಗೈರಾಗಿದ್ದಾನೆ ಎಂದು ಘೋಷಣೆ ಮಾಡಿದ್ದಲ್ಲದೆ ಆತನ ಒಂದು ದಿನದ ಸಂಬಳವನ್ನು ಕಟ್ ಮಾಡಲಾಗಿದೆ.

ಬಿಲಿಯನೇರ್ ಆಗಿದ್ರೂ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿಯಲ್ಲಿ ರತನ್‌ ಟಾಟಾ ಹೆಸರಿಲ್ಲ, ಯಾಕೆ?

ಮೂರು ಗಂಟೆ ಲಿಫ್ಟ್ ನಲ್ಲಿ ಸಿಕ್ಕಿಬಿದ್ದ ಉದ್ಯೋಗಿ : ರೆಡ್ಡಿಟ್ ನಲ್ಲಿ ವ್ಯಕ್ತಿ ತನ್ನ ಕಥೆ ಬರೆದಿದ್ದಾನೆ. ನಿನ್ನೆ ನಾನು ಕಚೇರಿಗೆ ಹೊರಟಿದ್ದೆ. ಕಚೇರಿ ಲಿಫ್ಟ್ ಹತ್ತಿದೆ. ಇದ್ದಕ್ಕಿದ್ದಂತೆ ಲಿಫ್ಟ್ ಬಂದ್ ಆಯ್ತು. ವಿದ್ಯುತ್ ಸಹ ಇರಲಿಲ್ಲ. ನಾನು ನಿರ್ವಹಣೆ ಇಲಾಖೆ ಮತ್ತು ನನ್ನ ಕಚೇರಿಗೆ ಕರೆ ಮಾಡಲು ಪ್ರಯತ್ನಿಸುತ್ತಿದ್ದೆ. ಆದ್ರೆ ಸಂಪರ್ಕ ಸಿಗ್ತಿರಲಿಲ್ಲ. ಅನೇಕ ಪ್ರಯತ್ನದ ನಂತ್ರ ಹೆಚ್ ಆರ್ ಗೆ ಕರೆ ಹೋಯ್ತು. ನಾನು ಲಿಫ್ಟ್ ನಲ್ಲಿ ಸಿಕ್ಕಿಬಿದ್ದಿರೋದಾಗಿ ಅವರಿಗೆ ತಿಳಿಸಿದೆ. ರಕ್ಷಣಾ ಸಿಬ್ಬಂದಿ ಅಲ್ಲಿಗೆ ಬಂದು ಲಿಫ್ಟ್ ಓಪನ್ ಮಾಡುವ ಪ್ರಯತ್ನ ನಡೆಸಿದ್ರು. ಸತತ ಮೂರು ಗಂಟೆಗಳ ನಂತರ ನನ್ನನ್ನು ಲಿಫ್ಟ್ ನಿಂದ ಹೊರ ತೆಗೆದ್ರು ಎಂದ ವ್ಯಕ್ತಿ ಮುಂದೇನಾಯ್ತು ಎಂಬುದನ್ನು ಬರೆದಿದ್ದಾನೆ. 

ಏರ್‌ ಇಂಡಿಯಾದಿಂದ ಮರೆಯಾಗಲಿದೆ ಸೀರೆ ಟ್ರೆಂಡ್‌, ಗಗನಸಖಿಯರಿಗೆ ಡಿಸೈನರ್‌ ಡ್ರೆಸ್‌!

ಲಿಫ್ಟ್ ನಿಂದ ಹೊರ ಬಂದ ನಾನು ಚೇತರಿಸಿಕೊಳ್ಳುವ ಮೊದಲೇ, ನೀನು ತಡವಾಗಿ ಬಂದ ಕಾರಣ ನೀನು ರಜೆ ಎಂದು ದಾಖಲಿಸುವುದಲ್ಲದೆ ಸಂಬಳ ಕಟ್ ಮಾಡುತ್ತೇನೆ ಎಂದರು. ಇದ್ರಿಂದ ನನಗೆ ಮತ್ತಷ್ಟು ಬೇಸರವಾಯ್ತು. ನಾನು ರಜೆ ತೆಗೆದುಕೊಂಡು ಮನೆಗೆ ಹೋಗೋದಾಗಿ ಎಎಮ್ ಗೆ ಹೇಳಿದೆ. ಆದ್ರೆ ಎಎಮ್, ಸಿಬ್ಬಂದಿ ಕೊರತೆಯಿರುವ ಕಾರಣ ನೀನು ಕೆಲಸ ಮಾಡ್ಬೇಕು ಅಂದ್ರು. ಕರ್ತವ್ಯದ ಸಮಯವನ್ನು ಸರಿ ಮಾಡಿದ್ರೆ ನಾನು ಕೆಲಸ ಮಾಡೋದಾಗಿ ಎಎಂಗೆ ಹೇಳಿದೆ. ಆದ್ರೆ ಅವರು, ನನ್ನ ಮೇಲೆಯೇ ಆರೋಪ ಮಾಡಲು ಶುರು ಮಾಡಿದ್ರು. ಇದ್ರಲ್ಲಿ ನನ್ನ ತಪ್ಪೇನಿದೆ ಎಂದು ನಾನು ಪ್ರಶ್ನೆ ಮಾಡಿದಾಗ ಲಿಫ್ಟ್ ಕ್ಯಾಮರಾ ರೆಕಾರ್ಡ್ ಹಾಗೂ ಹೆಚ್ ಆರ್ ನೊಂದಿಗೆ ನನ್ನ ಅನುಭವವನ್ನು ದಾಖಲಿಸಿಕೊಂಡಿದ್ದಾರೆ ಎಂದು ಉದ್ಯೋಗಿ ಬರೆದಿದ್ದಾನೆ. ಆತನ ಪೋಸ್ಟ್ ಗೆ ಸಿಕ್ಕಾಪಟ್ಟೆ ಪ್ರತಿಕ್ರಿಯೆ ಬಂದಿದೆ. ಅನೇಕರು ಕೆಲಸ ತೊರೆಯುವಂತೆ ಉದ್ಯೋಗಿಗೆ ಸಲಹೆ ನೀಡಿದ್ರೆ ಮತ್ತೆ ಕೆಲವರು ಕಂಪನಿ ನಿಯಮವನ್ನು ಖಂಡಿಸಿದ್ದಾರೆ. 
 

click me!