ವಿಶ್ವದ ಶ್ರೀಮಂತರ ಪಟ್ಟಿಯಲ್ಲಿ ನಂ.1 ಸ್ಥಾನಕ್ಕೆ ಟೆಸ್ಲಾ ಸಿಇಒ ಎಲಾನ್ ಮಸ್ಕ್ ಹಾಗೂ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ನಡುವೆ ಪೈಪೋಟಿ ಮುಂದುವರಿದಿದೆ.ಈ ಬಾರಿ ಈ ಸ್ಥಾನ ಮರಳಿ ಮಸ್ಕ್ ತೆಕ್ಕೆ ಸೇರಿದೆ.ಗುರುವಾರ ಬಿಡುಗಡೆಯಾದ ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಪ್ರಕಾರ ಮಸ್ಕ್ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ಈ ಸ್ಥಾನಕ್ಕೇರಿದ್ದಾರೆ.
ನ್ಯೂಯಾರ್ಕ್ (ಜೂ.1): ಟೆಸ್ಲಾ ಹಾಗೂ ಸ್ಪೇಸ್ ಎಕ್ಸ್ ಸಿಇಒ ಎಲಾನ್ ಮಸ್ಕ್ ವಿಶ್ವದ ನಂ.1 ಶ್ರೀಮಂತನ ಪಟ್ಟವನ್ನು ಮರಳಿ ಪಡೆದಿದ್ದಾರೆ. ಗುರುವಾರ ಬಿಡುಗಡೆಯಾದ ಬ್ಲೂಮ್ ಬರ್ಗ್ ಬಿಲಿಯನರ್ಸ್ ಸೂಚ್ಯಂಕದ ಪ್ರಕಾರ ಮಸ್ಕ್ ಫ್ರೆಂಚ್ ಉದ್ಯಮಿ ಬರ್ನಾರ್ಡ್ ಅರ್ನಾಲ್ಟ್ ಅವರನ್ನು ಹಿಂದಿಕ್ಕಿ ಈ ಸ್ಥಾನಕ್ಕೇರಿದ್ದಾರೆ. ಅರ್ನಾಲ್ಟ್ ಅವರ ನಿವ್ವಳ ಸಂಪತ್ತಿನಲ್ಲಿ 5.25 ಬಿಲಿಯನ್ ಡಾಲರ್ ಇಳಿಕೆಯಾಗಿದೆ. ಇದರಿಂದ ಅವರ ನಿವ್ವಳ ಸಂಪತ್ತು 187 ಬಿಲಿಯನ್ ಡಾಲರ್ ಗೆ ಕುಸಿತ ಕಂಡಿದೆ. 74 ವರ್ಷದ ಈ ಫ್ರೆಂಚ್ ಉದ್ಯಮಿ ಒಡೆತನದ ಎಲ್ ವಿಎಂಎಚ್ ಷೇರುಗಳು ಪ್ಯಾರಿಸ್ ಟ್ರೇಡಿಂಗ್ ನಲ್ಲಿ ಶೇ.2.6ರಷ್ಟು ಕುಸಿತ ಕಂಡಿವೆ. ಇನ್ನೊಂದೆಡೆ ಮಸ್ಕ್ ನಿವ್ವಳ ಸಂಪತ್ತಿನಲ್ಲಿ ಸುಮಾರು 2 ಮಿಲಿಯನ್ ಏರಿಕೆಯಾಗಿದ್ದು, 192 ಬಿಲಿಯನ್ ಡಾಲರ್ ಗೆ ತಲುಪಿದೆ. ಈ ವರ್ಷ ಈ ಇಬ್ಬರು ಶ್ರೀಮಂತ ಉದ್ಯಮಿಗಳು ವಿಶ್ವದ ನಂ.1 ಸಿರಿವಂತರ ಪಟ್ಟಕ್ಕೆ ಭಾರೀ ಪೈಪೋಟಿ ನಡೆಸುತ್ತ ಬಂದಿದ್ಧಾರೆ. ಇನ್ನು ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಶ್ರೀಮಂತರ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದು, ಇವರ ನಿವ್ವಳ ಸಂಪತ್ತು 144 ಬಿಲಿಯನ್ ಡಾಲರ್. ದೀರ್ಘ ಸಮಯದ ತನಕ ವಿಶ್ವದ ನಂ.1 ಶ್ರೀಮಂತ ವ್ಯಕ್ತಿ ಪಟ್ಟವನ್ನು ಮಸ್ಕ್ ಕಾಯ್ದುಕೊಂಡು ಬಂದಿದ್ದರು. ಆದರೆ, 2022ರ ಡಿಸೆಂಬರ್‌ನಲ್ಲಿಇವರ ಆದಾಯದಲ್ಲಿ 138 ಬಿಲಿಯನ್ ಡಾಲರ್ ಇಳಿಕೆಯಾಗಿತ್ತು. ಈ ಸಮಯದಲ್ಲಿ, ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಸ್ಥಾನವನ್ನು ಸಹ ಕಳೆದುಕೊಳ್ಳಬೇಕಾಯಿತು. ನಂತರ ಈ ವರ್ಷದ ಫೆಬ್ರವರಿ ಅಂತ್ಯದಲ್ಲಿ ಮಸ್ಕ್ ಮತ್ತೆ ನಂ.1 ಪಟ್ಟವನ್ನು ಮರಳಿ ಪಡೆದಿದ್ದರು. ಆರೆ, ಆ ಬಳಿಕ ಮತ್ತೆ ಆ ಸ್ಥಾನ ಕೈಜಾರಿತ್ತು.
ಎಲಾನ್ ಮಸ್ಕ್ ಸಂಪತ್ತಿನಲ್ಲಿ ಹೆಚ್ಚಳಕ್ಕೆ ಟೆಸ್ಲಾ ಸಂಸ್ಥೆಯ ಯಶಸ್ಸೇ ಕಾರಣ ಎಂದು ಹೇಳಲಾಗಿದೆ. ಬರೀ ಟೆಸ್ಲಾದಲ್ಲೇ ಮಸ್ಕ್ ಅವರ ಶೇ.71ರಷ್ಟು ಸಂಪತ್ತಿದ್ದು, ಇದರಲ್ಲಿ ಭಾರೀ ಏರಿಕೆ ಕಂಡುಬಂದಿದೆ ಎನ್ನಲಾಗಿದೆ. ನಿರಂತರವಾಗಿ ವಿಶ್ವದ ನಂ.1 ಶ್ರೀಮಂಮತನ ಪಟ್ಟ ಕಾಯ್ದುಕೊಂಡು ಬಂದಿದ್ದ ಮಸ್ಕ್ ಗೆ ಟ್ವಿಟ್ಟರ್ ಖರೀದಿ ಬಳಿಕ ಇದನ್ನು ಉಳಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ.
ಮಾನವನ ಮೆದುಳಿಗೆ ಚಿಪ್ ಜೋಡಿಸಿ ಪ್ರಯೋಗ: ಎಲಾನ್ ಮಸ್ಕ್ ಕಂಪನಿಗೆ ಅಮೆರಿಕ ಅಸ್ತು
2023ನೇ ಸಾಲಿಗೆ ಪ್ರವೇಶಿಸುವಾಗಲೇ ಎಲಾನ್ ಮಸ್ಕ್ ಸಂಪತ್ತಿನಲ್ಲಿ ಭಾರೀ ಇಳಿಕೆ ಕಂಡುಬಂದಿತ್ತು. 2023ಏ ಸಾಲಿನ ಪ್ರಾರಂಭದಲ್ಲಿ ಅವರ ಸಂಪತ್ತು 137 ಬಿಲಿಯನ್ ಡಾಲರ್ ಆಗಿತ್ತು. ನವೆಂಬರ್ 2021 ರಿಂದ ಡಿಸೆಂಬರ್ 2022ರ ನಡುವೆ ಎಲಾನ್ ಮಸ್ಕ್ ಬರೋಬ್ಬರಿ 182 ಶತಕೋಟಿ ಡಾಲರ್ ಅಂದರೆ, ಅಂದಾಜು 15 ಲಕ್ಷ ಕೋಟಿ ರೂಪಾಯಿಗಳನ್ನು ಕಳೆದುಕೊಂಡಿದ್ದರು. ಈ ಮೂಲಕ ಅತೀ ಹೆಚ್ಚು ಆಸ್ತಿ ಕಳೆದುಕೊಂಡ ವಿಶ್ವದ ಮೊದಲ ವ್ಯಕ್ತಿ ಎಂಬ ಗಿನ್ನಿಸ್ ವಿಶ್ವ ದಾಖಲೆ ಕೂಡ ಮಸ್ಕ್ ಹೆಸರಲ್ಲಿ ಸೃಷ್ಟಿಯಾಗಿತ್ತು.
2021ರ ನವೆಂಬರ್‌ನಲ್ಲಿ ಮಸ್ಕ್ ಅವರ ಒಟ್ಟು ಆಸ್ತಿ ಅಂದಾಜು 26 ಲಕ್ಷ ಕೋಟಿ ರೂಪಾಯಿ ಆಗಿತ್ತು. ಇನ್ನು ಇದು ಮಸ್ಕ್ ಅವರ ಆದಾಯದ ಉತ್ತುಂಗದ ಅವಧಿ ಎಂದೇ ಹೇಳಲಾಗಿದೆ. 320 ಬಿಲಿಯನ್ ಅಮೇರಿಕನ್ ಡಾಲರ್ ಸಂಪತ್ತಿಗೆ ಮಸ್ಕ್ ಒಡೆಯರಾಗಿದ್ದರು. 2022ರ ಡಿಸೆಂಬರ್‌ನಲ್ಲಿಇವರ ಆದಾಯದಲ್ಲಿ 138 ಬಿಲಿಯನ್ ಡಾಲರ್ ಇಳಿಕೆಯಾಗಿತ್ತು. ಈ ಸಮಯದಲ್ಲಿ, ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ ಎನ್ನುವ ಸ್ಥಾನವನ್ನು ಸಹ ಕಳೆದುಕೊಳ್ಳಬೇಕಾಯಿತು. ಇದಕ್ಕೆಲ್ಲ 44 ಬಿಲಿಯನ್ ಡಾಲರ್ ವ್ಯಯಿಸಿ ಟ್ವಿಟ್ಟರ್ ಖರೀದಿಸಿರುವ ಜೊತೆಗೆ ಟೆಸ್ಲಾ ಷೇರುಗಳ ಬೆಲೆಯಲ್ಲಿ ಇಳಿಕೆಯಾಗಿರುವುದು ಕೂಡ ಕಾರಣ ಎಂದು ಹೇಳಲಾಗಿತ್ತು.
ಟ್ವಿಟ್ಟರ್‌ನಲ್ಲಿ ಇನ್ನು ಆರ್ಟಿಕಲ್ ಓದೋಕು ಕೊಡಬೇಕು ದುಡ್ಡು!
ಇನ್ನು ಭಾರತೀಯ ಉದ್ಯಮಿ ಗೌತಮ್ ಅದಾನಿ ಈ ಪಟ್ಟಿಯಲ್ಲಿ ಮತ್ತೆ ಒಂದು ಸ್ಥಾನ ಕುಸಿದಿದ್ದಾರೆ. 18ನೇ ಸ್ಥಾನದಲ್ಲಿದ್ದ ಅದಾನಿ 19ನೇ ಸ್ಥಾನಕ್ಕೆ ಕುಸಿದಿದ್ದಾರೆ. ಮೇ 31ರಂದು ಅದಾನಿ ಸಂಪತ್ತಿನಲ್ಲಿ 310 ಬಿಲಿಯನ್ ಡಾಲರ್ ಕುಸಿತ ಕಂಡುಬಂದಿದೆ. ಪರಿಣಾಮ ಅವರ ನಿವ್ವಳ ಸಂಪತ್ತು 61.3 ಶತಕೋಟಿ ಡಾಲರ್ ಗೆ ಇಳಿಕೆಯಾಗಿದೆ. ಇನ್ನೊಬ್ಬ ಉದ್ಯಮಿ ಮುಖೇಶ್ ಅಂಬಾನಿ ಸಂಪತ್ತಿನಲ್ಲಿ ಕೂಡ 1.73 ಶತಕೋಟಿ ಡಾಲರ್ ಇಳಿಕೆಯಾಗಿದೆ.