ಆರ್ಥಿಕ ಹಿಂಜರಿತ: ಚೀನಾಕ್ಕೆ ದೊಡ್ಡ ಗಂಡಾಂತರ ಐಎಂಎಫ್‌

Published : Jan 03, 2023, 09:11 AM IST
ಆರ್ಥಿಕ ಹಿಂಜರಿತ: ಚೀನಾಕ್ಕೆ ದೊಡ್ಡ ಗಂಡಾಂತರ ಐಎಂಎಫ್‌

ಸಾರಾಂಶ

ಮುಂದಿನ ಎರಡು ತಿಂಗಳು ಚೀನಾ ಪಾಲಿಗೆ ಕಠಿಣವಾಗಿರುತ್ತವೆ. ಚೀನಾದ ಆರ್ಥಿಕ ಬೆಳವಣಿಗೆ ಋಣಾತ್ಮಕವಾಗಿರುತ್ತದೆ. ಇದು ಇತರ ಪ್ರದೇಶದ ಮೇಲೆ ಹಾಗೂ ಜಾಗತಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ: ಕ್ರಿಸ್ಟಲಿನಾ ಜಾರ್ಜಿವಾ

ನ್ಯೂಯಾರ್ಕ್: ಆರ್ಥಿಕ ಹಿಂಜರಿತವು 2023ರಲ್ಲಿ ವಿಶ್ವದ ಮೂರನೇ ಒಂದು ಭಾಗಕ್ಕೆ ಏಟು ನೀಡಲಿದೆ. ಕಳೆದ ವರ್ಷಕ್ಕಿಂತ ಈ ವರ್ಷ ಆರ್ಥಿಕತೆ ದೃಷ್ಟಿಯಿಂದ ಕಠಿಣವಾಗಿರಲಿದೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಮುಖ್ಯಸ್ಥೆ ಕ್ರಿಸ್ಟಲಿನಾ ಜಾರ್ಜಿವಾ ಹೇಳಿದ್ದಾರೆ. 

ಮಾಧ್ಯಮ ಸಂವಾದವೊಂದರಲ್ಲಿ ಮಾತನಾಡಿದ ಅವರು, ಉಕ್ರೇನ್‌ನಲ್ಲಿ (Ukraine) ನಡೆಯುತ್ತಿರುವ ಸಂಘರ್ಷ 10 ತಿಂಗಳಾದರೂ ನಿಯಂತ್ರಣವಾಗುತ್ತಿಲ್ಲ. ಇದರ ಜತೆಗೆ ಹಣದುಬ್ಬರ, ಹೆಚ್ಚಿನ ಬಡ್ಡಿದರಗಳು ಮತ್ತು ಒಮಿಕ್ರೋನ್‌ ರೂಪಾಂತರದಿಂದ (Omicron transformation) ಚೀನಾದಲ್ಲಿನ ಆರೋಗ್ಯ ಪರಿಸ್ಥಿತಿ ಉಲ್ಬಣಿಸಿದ್ದು, ಆರ್ಥಿಕತೆಗೂ ಹೊಡೆತ ನೀಡುತ್ತಿದೆ. ಈ ಎಲ್ಲ ಕಾರಣದಿಂದ ವಿಶ್ವ ಆರ್ಥಿಕತೆಯ ಮೂರನೇ ಒಂದು ಭಾಗವು ಆರ್ಥಿಕ ಹಿಂಜರಿತದತ್ತ ಸಾಗಬಹುದು. 2023ನೇ ಇಸವಿ ಕಳೆದ ವರ್ಷಕ್ಕಿಂತ ಕಠಿಣವಾಗಿರುತ್ತದೆ. ಏಕೆಂದರೆ ಅಮೆರಿಕ(America), ಯುರೋಪ್‌(Europe) ಮತ್ತು ಚೀನಾದ (China) ಆರ್ಥಿಕತೆಗಳು ನಿಧಾನಗೊಳ್ಳುತ್ತವೆ’ ಎಂದು ಅಭಿಪ್ರಾಯಪಟ್ಟರು.

‘ಕೆಲವೇ ದೇಶಗಳಲ್ಲಿನ ಆರ್ಥಿಕ ಹೊಡೆತವು ಆರ್ಥಿಕ ಹಿಂಜರಿತದಲ್ಲಿಲ್ಲದ ದೇಶಗಳ ಮೇಲೂ ಪ್ರಭಾವ ಬೀರುತ್ತದೆ. ನೂರಾರು ದಶಲಕ್ಷ ಜನರಿಗೆ ಆರ್ಥಿಕ ಹಿಂಜರಿತದಂತೆ ಭಾಸವಾಗುತ್ತದೆ’ ಎಂದು ಅವರು ವಿವರಿಸಿದರು. ಇನ್ನು ವಿಶೇಷವಾಗಿ ಚೀನಾ (China) ಬಗ್ಗೆ ಮಾತನಾಡಿದ ಅವರು, ‘ಮುಂದಿನ ಎರಡು ತಿಂಗಳು ಚೀನಾ ಪಾಲಿಗೆ ಕಠಿಣವಾಗಿರುತ್ತವೆ. ಚೀನಾದ ಆರ್ಥಿಕ ಬೆಳವಣಿಗೆ ಋುಣಾತ್ಮಕವಾಗಿರುತ್ತದೆ. ಇದು ಇತರ ಪ್ರದೇಶದ ಮೇಲೆ ಹಾಗೂ ಜಾಗತಿಕ ಬೆಳವಣಿಗೆಯ ಮೇಲೂ ಪರಿಣಾಮ ಬೀರುತ್ತದೆ’ ಎಂದರು.

ಕೊರೋನಾತಂಕ: ಚೀನಾ ಸೇರಿ 6 ದೇಶದಿಂದ ಬಂದವರಿಗೆ ಕ್ವಾರಂಟೈನ್‌

ಟ್ವಿಟರಲ್ಲಿ ಭಾರತದ ತಪ್ಪಾದ ಭೂಪಟ ಪೋಸ್ಟ್: ವಾಟ್ಸಾಪ್‌ಗೆ ಸಚಿವ ರಾಜೀವ್‌ ಎಚ್ಚರಿಕೆ

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಇಂಟರ್ನೆಟ್ ಇಲ್ಲದೆಯೂ UPI ಪಾವತಿ ಮಾಡಬಹುದು, *99# ಮೂಲಕ ಹಣ ಕಳುಹಿಸುವುದು ಹೇಗೆ?
ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌