
ಪ್ರತಿಯೊಂದು ಕೆಲ್ಸಕ್ಕೂ ಈಗ ಆಧಾರ್ ಕಾರ್ಡ್ (Aadhaar card) ಅಗತ್ಯ. ಜನರು ಆಧಾರ್ ಕಾರ್ಡ್ ಬ್ಯಾಗ್ ನಲ್ಲಿ ಇಟ್ಕೊಂಡು ತಿರುಗುವ ಸ್ಥಿತಿ ಇದೆ. ಕಚೇರಿ ಕೆಲ್ಸದಲ್ಲಿ ವರ್ಜಿನಲ್ ಆಧಾರ್ ಕಾರ್ಡ್ ತೋರಿಸುವ ಜೊತೆಗೆ ಅದ್ರ ಪ್ರತಿಗಳನ್ನು ದಾಖಲೆ ರೂಪದಲ್ಲಿ ನೀಡ್ಬೇಕು. ಇದು ಸಾಕಷ್ಟು ಸಮಯ ಹಾಳು ಮಾಡೋದಲ್ಲದೆ ಕಾಗದದ ಸಂಖ್ಯೆ ಹೆಚ್ಚು ಮಾಡ್ತಿದೆ. ಇದೆಲ್ಲದಕ್ಕೆ ಅಂತ್ಯ ಹಾಡಲು ಯುಐಡಿಎಐ ಮಹತ್ವದ ನಿರ್ಧಾರಕ್ಕೆ ಬಂದಿದೆ. ಯುಐಡಿಎಐ (UIDAI) ಶೀಘ್ರದಲ್ಲೇ ಹೊಸ ಇ-ಆಧಾರ್ (e-Aadhaar) ವ್ಯವಸ್ಥೆ ಜಾರಿಗೆ ತರಲಿದೆ. ಇದರಲ್ಲಿ, ಆಧಾರ್ ಪರಿಶೀಲನೆಯನ್ನು QR ಕೋಡ್ ಸಹಾಯದಿಂದ ಮಾಡಲಾಗುತ್ತದೆ. ಯುಐಡಿಎಐ, ಇ ಆಧಾರ್ ಜಾರಿಗೆ ತರ್ತಾ ಇದ್ದಂತೆ ನೀವು ಆಧಾರ್ ಪ್ರತಿ ಅಥವಾ ಆಧಾರ್ ಕಾರ್ಡ್ ತೆಗೆದುಕೊಂಡು ಹೋಗುವ ಅಗತ್ಯ ಇರೋದಿಲ್ಲ. ಈ ಹೊಸ ವ್ಯವಸ್ಥೆ 2025 ರ ಅಂತ್ಯದ ವೇಳೆಗೆ ದೇಶಾದ್ಯಂತ ಪ್ರಾರಂಭವಾಗಲಿದೆ. ಈ ಹೊಸ ಆಧಾರ್ ನವೀಕರಣ ಅಪ್ಲಿಕೇಶನ್ ಜನರಿಗೆ ಮತ್ತಷ್ಟು ಅನುಕೂಲ ಮಾಡಿಕೊಡ್ತಿದೆ. ಜನಸಾಮಾನ್ಯರು, ಈ ಅಪ್ಲಿಕೇಷನ್ ಮೂಲಕ ಮನೆಯಿಂದಲೇ ಆಧಾರ್ ಮಾಹಿತಿಯನ್ನು ಬದಲಿಸಬಹುದು. ಹೆಸರು, ವಿಳಾಸ, ಫೋನ್ ಸಂಖ್ಯೆಯಂತಹ ಅನೇಕ ಮಾಹಿತಿಯನ್ನು ಅವರು ಬದಲಿಸಬಹುದು.
ಮಕ್ಕಳ ಬಯೋಮೆಟ್ರಿಕ್ ನವೀಕರಣ : ಯುಐಡಿಎಐ ಮಕ್ಕಳ ಬಯೋಮೆಟ್ರಿಕ್ ನವೀಕರಣದತ್ತಲೂ ಗಮನಹರಿಸುತ್ತಿದೆ. 5 ರಿಂದ 7 ವರ್ಷ ಮತ್ತು 15 ರಿಂದ 17 ವರ್ಷ ವಯಸ್ಸಿನಲ್ಲಿ ಬಯೋಮೆಟ್ರಿಕ್ ನವೀಕರಣ ಅಗತ್ಯ. ಇದಕ್ಕಾಗಿ, ಸಿಬಿಎಸ್ಇಯಂತಹ ಬೋರ್ಡ್ಗಳನ್ನು ಹೊಂದಿರುವ ಶಾಲೆಗಳಲ್ಲಿ ಬಯೋಮೆಟ್ರಿಕ್ ಶಿಬಿರಗಳನ್ನು ಆಯೋಜಿಸುವ ಯೋಜನೆ ಇದೆ. ಇದರಿಂದ ಮಕ್ಕಳು ಸುಲಭವಾಗಿ ಆಧಾರ್ ನವೀಕರಿಸಬಹುದು.
ಹೊಸ ಕ್ಯೂಆರ್ ಕೋಡ್ ವ್ಯವಸ್ಥೆಯು ನಕಲಿ ದಾಖಲೆಗಳ ಬಳಕೆಯನ್ನು ಕಡಿಮೆ ಮಾಡಲು ಸಹಾಯ ಮಾಡಲಿದೆ. ಈ ವ್ಯವಸ್ಥೆಯನ್ನು ರಿಜಿಸ್ಟ್ರಾರ್ ಕಚೇರಿ ಮತ್ತು ಹೋಟೆಲ್ಗಳಂತಹ ಸ್ಥಳಗಳಲ್ಲಿ ಪರೀಕ್ಷಿಸಲಾಗುತ್ತಿದೆ. ಇದು ಸುರಕ್ಷಿತವಾಗಿದೆ. ನಿಮ್ಮ ಅನುಮತಿಯಿಲ್ಲದೆ ನಿಮ್ಮ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಲು ಸಾಧ್ಯವಿಲ್ಲ.
ಆಧಾರ್ ನವೀಕರಣ ಪ್ರಕ್ರಿಯೆಯನ್ನು ಸರಳಗೊಳಿಸುವುದ್ರ ಜೊತೆಗೆ ನೋಂದಣಿ ಮತ್ತು ರಿಯಲ್ ಎಸ್ಟೇಟ್ ವ್ಯವಹಾರಗಳಲ್ಲಿ ನಕಲಿ ದಾಖಲೆಗಳ ಬಳಕೆಯನ್ನು ಕಡಿಮೆ ಮಾಡಲು ಯುಐಡಿಎಐ ಪ್ರಯತ್ನ ಮಾಡ್ತಿದೆ. ಯುಐಡಿಎಐ ಈ ಇ ಆಧಾರ್ ಅಪ್ಲಿಕೇಷನ್ ಬಿಡುಗಡೆ ಮಾಡಿದ್ರೆ, ದಾಖಲೆಗಳ ಸಂಖ್ಯೆ ಕಡಿಮೆ ಆಗಲಿದೆ. ಆಧಾರ್ ನವೀಕರಣ ವೇಗವಾಗಿ ನಡೆಯಲಿದೆ. ಜೊತೆಗೆ ವಂಚನೆ ಅಪಾಯ ಕಡಿಮೆ ಆಗಲಿದೆ. ಮನೆಯಿಂದಲೇ ಹೆಚ್ಚಿನ ಮಾಹಿತಿ ನವೀಕರಣ ಮಾಡೋದ್ರಿಂದ ಜನರ ಸಮಯ ಉಳಿಸಲಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.