ಹಳೆ ಬೀರುವಿನಲ್ಲಿ 50 ಪೈಸೆ ನಾಣ್ಯಗಳ ಗಂಟಿದ್ರೆ ಈಗ್ಲೇ ಹೊರಕ್ಕೆ ತೆಗೀರಿ, ಅದ್ರ ವ್ಯಾಲ್ಯೂ ಏನು ಅಂತ ನಾವು ಹೇಳ್ತೇವೆ

Published : Oct 06, 2026, 12:55 PM IST
50 paise

ಸಾರಾಂಶ

ಈಗೇನಿದ್ರೂ ಆನ್ಲೈನ್ ಪೇಮೆಂಟ್ ಕಾಲ. ಜನರ ಬಳಿ ನೋಟುಗಳಿರೋದೇ ಅಪರೂಪ. ಇನ್ನು ನಾಣ್ಯಗಳು ಬಹಳ ಅಪರೂಪ. ಇದ್ರೂ ಐದು, ಒಂದು, ಎರಡು ರೂಪಾಯಿ ನಾಣ್ಯ ಸಿಗಬಹುದು. ಆದ್ರೆ ಕೆಲವರ ಬಳಿ ಈಗ್ಲೂ 50 ಪೈಸೆ ನಾಣ್ಯ ಇದೆ. ಈ 50 ಪೈಸೆ ಈಗ ಮಾನ್ಯವಾ, ಅದನ್ನು ಏನು ಮಾಡ್ಬೇಕು ಎಂಬ ಮಾಹಿತಿ ಇಲ್ಲಿದೆ.

ಒಂದು ಕಾಲದಲ್ಲಿ ಅಂಗಡಿಯಲ್ಲಿ ಸಣ್ಣಪುಟ್ಟ ವಸ್ತುಗಳು 50 ಪೈಸೆಗೆ ಸಿಗ್ತಿತ್ತು. ಈಗ ಈ 50 ಪೈಸೆಗೆ ಬೆಲೆ ಇಲ್ಲದಂತಾಗಿದೆ. ಹಾಗಾಗಿ 50 ಪೈಸೆ ಕಾಣಸಿಗೋದು ಅಪರೂಪ. ನಿಮ್ಮ ಮನೆಯ ಬೀರು ಅಥವಾ ಬ್ಯಾಗ್‌ ನಲ್ಲಿ 50 ಪೈಸೆ ನಾಣ್ಯ ಸಿಕ್ಕರೆ ಏನು ಮಾಡ್ಬೇಕು ಗೊತ್ತಾ?

50 ಪೈಸೆ ನಾಣ್ಯ ಈಗಲೂ ಮಾನ್ಯವಾ?

ಮೊದಲಿಗೆ ಮುಖ್ಯವಾದ ವಿಷಯ ಏನಂದ್ರೆ, 50 ಪೈಸೆ ನಾಣ್ಯ ಇನ್ನೂ ಕಾನೂನುಬದ್ಧ ನಾಣ್ಯವಾಗಿದೆಯೇ ಎಂಬುದನ್ನು ನೀವು ತಿಳಿಯಬೇಕು. ಆರ್ಬಿಐ ಮಾಹಿತಿ ಪ್ರಕಾರ, 50 ಪೈಸೆ ನಾಣ್ಯ ಈಗ್ಲೂ ಮಾನ್ಯವಾಗಿದೆ. ಸರ್ಕಾರ ಬಿಡುಗಡೆ ಮಾಡಿರುವ 50 ಪೈಸೆ, 1 ರೂಪಾಯಿ, 2 ರೂಪಾಯಿ, 5 ರೂಪಾಯಿ, 10 ರೂಪಾಯಿ ಮತ್ತು 20 ರೂಪಾಯಿಯ ವಿವಿಧ ವಿನ್ಯಾಸದ ನಾಣ್ಯಗಳು ಈಗಲೂ ಲೀಗಲ್ ಟೆಂಡರ್ ಆಗಿವೆ. ಆದ್ರೆ 25 ಪೈಸೆ ಮತ್ತು ಅದಕ್ಕಿಂತ ಕಡಿಮೆ ಮೌಲ್ಯದ ನಾಣ್ಯಗಳು 2011ರ ಜೂನ್ 30ರಿಂದ ಕಾನೂನುಬದ್ಧ ಚಲಾವಣೆಯಲ್ಲಿ ಇಲ್ಲ.

50 ಪೈಸೆಯನ್ನು ಹೇಗೆ ಬಳಸಬಹುದು?

ಇಲ್ಲಿ ಒಂದು ಮುಖ್ಯ ನಿಯಮ ಇದೆ. ಆರ್ಬಿಐ ನಿಯಮದ ಪ್ರಕಾರ, ಒಂದು ವಹಿವಾಟಿನಲ್ಲಿ 50 ಪೈಸೆಯ ನಾಣ್ಯಗಳನ್ನು ಗರಿಷ್ಠ 10 ರೂಪಾಯಿ ಮೊತ್ತದವರೆಗೆ ಪಾವತಿಸಲು ಬಳಸಬಹುದು. ಅಂದರೆ ನಿಮ್ಮ ಬಳಿ 50 ಪೈಸೆಯ 20 ನಾಣ್ಯಗಳಿದ್ದರೆ, ಅದರ ಒಟ್ಟು ಮೌಲ್ಯ 10 ರೂಪಾಯಿ. ಈ ಮಿತಿಯೊಳಗೆ ಅವು ಕಾನೂನುಬದ್ಧವಾಗಿವೆ. ಇದಕ್ಕಿಂತ ಹೆಚ್ಚಿನ ಮೊತ್ತದ 50 ಪೈಸೆ ನಾಣ್ಯಗಳನ್ನು ಯಾರಾದರೂ ತಮ್ಮ ಇಚ್ಛೆಯಿಂದ ಸ್ವೀಕರಿಸಬಹುದು. ಆದರೆ ಅದನ್ನು ಸ್ವೀಕರಿಸುವಂತೆ ಅವರನ್ನು ಬಲವಂತ ಮಾಡಲು ಸಾಧ್ಯವಿಲ್ಲ.

50 ಪೈಸೆ ನಾಣ್ಯಗಳಿದ್ದರೆ ಏನು ಮಾಡಬೇಕು?

ಇತ್ತೀಚಿನ ದಿನಗಳಲ್ಲಿ ಅಂಗಡಿಗಳಲ್ಲಿ 50 ಪೈಸೆ ನಾಣ್ಯಗಳನ್ನು ಬಳಸುವುದು ಕಷ್ಟವಾಗಬಹುದು. ಆದ್ರೆ ಅದರಿಂದ ಆ ನಾಣ್ಯದ ಮೌಲ್ಯ ಮುಗಿದಿದೆ ಎಂದರ್ಥವಲ್ಲ. ನಿಮ್ಮ ಬಳಿ ಸಾಕಷ್ಟು 50 ಪೈಸೆ ನಾಣ್ಯಗಳಿದ್ದರೆ, ಅವುಗಳನ್ನು ಬ್ಯಾಂಕ್ನಲ್ಲಿ ಠೇವಣಿ ಮಾಡಬಹುದು ಅಥವಾ ನಾಣ್ಯಗಳನ್ನು ಬದಲಿಸಿಕೊಳ್ಳುವ ಸೌಲಭ್ಯವನ್ನು ಬಳಸಬಹುದು. ಆರ್ಬಿಐ ನಿಯಮಗಳ ಪ್ರಕಾರ, ಬ್ಯಾಂಕ್ ಶಾಖೆಗಳು ನಾಣ್ಯಗಳನ್ನು ಸ್ವೀಕರಿಸುವ ವ್ಯವಸ್ಥೆ ಹೊಂದಿರಬೇಕು. ಸಣ್ಣ ಮೌಲ್ಯದ ನೋಟುಗಳು ಅಥವಾ ನಾಣ್ಯಗಳನ್ನು ಸ್ವೀಕರಿಸಲು ನಿರಾಕರಿಸಬಾರದು. ನಾಣ್ಯಗಳನ್ನು ಬ್ಯಾಂಕ್ನಲ್ಲಿ ಠೇವಣಿ ಮಾಡುವುದಕ್ಕೂ ಗರಿಷ್ಠ ಮಿತಿ ನಿಗದಿಪಡಿಸಲಾಗಿಲ್ಲ. ನಿಮ್ಮ ಬಳಿ 50 ಪೈಸೆ ನಾಣ್ಯ ಸಿಕ್ಕರೆ ಅದನ್ನು ಎಸೆಯಬೇಡಿ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅಗ್ಗದ ಬೆಲೆಯಲ್ಲಿ ಸ್ಮಾರ್ಟ್​ಫೋನ್ಸ್​​: ಭಾರತದ ಮೊಬೈಲ್ ಕ್ರಾಂತಿ- ಆಮದಿನಿಂದ ರಫ್ತಿನವರೆಗಿನ ಅಚ್ಚರಿ ಪಯಣ
ಬೆಂಗಳೂರಿನ ಭವಿಷ್ಯ ಬದಲಿಸಲು 13,500 ಎಕರೆಗಳ ಮೆಗಾ ಪ್ಲಾನ್! 9 ಕೈಗಾರಿಕಾ ಟೌನ್‌ಶಿಪ್, 1 ಟ್ರಿಲಿಯನ್ ಆರ್ಥಿಕತೆಯ ಗುರಿ