ಅನಂತ್ ಅಂಬಾನಿಗೆ ಅಪ್ಪನ ದುಬಾರಿ ಗಿಫ್ಟ್ ;ದುಬೈಯಲ್ಲಿ640 ಕೋಟಿ ಮೌಲ್ಯದ ಬಂಗಲೆ ಖರೀದಿಸಿದ ಮುಖೇಶ್!

By Suvarna News  |  First Published Mar 4, 2024, 12:23 PM IST

ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿ ವಿವಾಹಪೂರ್ವ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆದಿವೆ. ಈ ನಡುವೆ ಕೆಲವು ವರದಿಗಳ ಪ್ರಕಾರ ಮುಖೇಶ್ ಅಂಬಾನಿ ಪುತ್ರನಿಗಾಗಿ ದುಬೈಯಲ್ಲಿ 640 ಕೋಟಿ ರೂ. ಮೌಲ್ಯದ ಐಷಾರಾಮಿ ಬಂಗಲೆ ಖರೀದಿಸಿದ್ದಾರೆ.


ಮುಂಬೈ (ಮಾ.4): ಭಾರತದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಹಾಗೂ ಅವರ ಕುಟುಂಬ ಐಷಾರಾಮಿ ಜೀವನಶೈಲಿ, ಪಾರ್ಟಿಗಳ ಮೂಲಕ ಸದಾ ಸುದ್ದಿಯಲ್ಲಿರುತ್ತಾರೆ. ಈಗಂತೂ ಸಾಮಾಜಿಕ ಜಾಲತಾಣದಲ್ಲಿ ಎಲ್ಲಿ ನೋಡಿದರೂ ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಹಾಗೂ ರಾಧಿಕಾ ಮರ್ಚೆಂಟ್ ವಿವಾಹಪೂರ್ವ ಕಾರ್ಯಕ್ರಮದ್ದೇ ಸುದ್ದಿ. ಗುಜರಾತ್ ಜಾಮ್ ನಗರದಲ್ಲಿ ಮಾ.1ರಿಂದ ಮೂರು ದಿನಗಳ ಕಾಲ ನಡೆದ ಈ ಅದ್ದೂರಿ ಕಾರ್ಯಕ್ರಮದಲ್ಲಿ ದೇಶ ಮಾತ್ರವಲ್ಲ, ವಿದೇಶದ ಉದ್ಯಮಿಗಳು, ಗಣ್ಯರು ಹಾಗೂ ಸೆಲೆಬ್ರೆಟಿಗಳು ದೊಡ್ಡ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅಂಬಾನಿ ಕುಟುಂಬ ಸದಸ್ಯರ ಧಿರಿಸು, ವಾಚ್ ನಿಂದ ಹಿಡಿದು ಕಾರ್ಯಕ್ರಮದ ಊಟದ ಮೆನು ತನಕ ಎಲ್ಲವೂ ದೊಡ್ಡ ಸುದ್ದಿಯಾಗಿದೆ. ಅಂಬಾನಿ ಕುಟುಂಬ ಅಂದ ಮೇಲೆ ದುಬಾರಿ ಹಾಗೂ ಐಷಾರಾಮಿ ವಸ್ತುಗಳು ಕಾಮನ್. ಕಾರಿನಿಂದ ಹಿಡಿದು ಮನೆ ತನಕ ಎಲ್ಲವೂ ಲಕ್ಸುರಿ. ಈಗ ಅಂಬಾನಿ ಕುಟುಂಬದ ಒಡೆತನದ ದುಬಾರಿ ವಸ್ತುಗಳ ಸಾಲಿಗೆ ಮತ್ತೊಂದು ಸೇರ್ಪಡೆಯಾಗಿದೆ. ಅದೇ ದುಬೈ ಕಡಲ ಕಿನಾರೆಯಲ್ಲಿ ಖರೀದಿಸಿರುವ 640 ಕೋಟಿ ರೂ. (80 ಶತಕೋಟಿ ಡಾಲರ್ ) ಮೌಲ್ಯದ ಬಂಗಲೆ.

ಮುಖೇಶ್ ಅಂಬಾನಿ ಕಿರಿಯ ಪುತ್ರ ಅನಂತ್ ಅಂಬಾನಿಗಾಗಿ ದುಬೈಯ ಬೀಚ್ ಪಕ್ಕದಲ್ಲಿ 640 ಕೋಟಿ ರೂ. ಮೌಲ್ಯದ ಬಂಗಲೆಯನ್ನು ಇತ್ತೀಚೆಗೆ ಖರೀದಿಸಿದ್ದಾರೆ ಎಂದು ವರದಿಯಾಗಿದೆ. ಇದು ದುಬೈಯಲ್ಲಿನ ಅತೀ ಹೆಚ್ಚು ಮೌಲ್ಯದ ಮನೆ ಖರೀದಿ ಒಪ್ಪಂದವಾಗಿದೆ ಎಂದು ಹೇಳಲಾಗಿದೆ. ಪಾಮ್ ಜುಮೆರಹಾ ಸಮೀಪದಲ್ಲಿಈ ಆಸ್ತಿಯನ್ನು ಈ ವರ್ಷದ ಪ್ರಾರಂಭದಲ್ಲಿ ಅನಂತ್ ಅಂಬಾನಿಗೋಸ್ಕರ ಖರೀದಿಸಲಾಗಿದೆ. ಆದರೆ, ಈ ಬಗ್ಗೆ ಅಂಬಾನಿ ಕುಟುಂಬ ಈ ತನಕ ಯಾವುದೇ ಮಾಹಿತಿ ನೀಡಿಲ್ಲ ಎಂದು ವರದಿಗಳು ತಿಳಿಸಿವೆ.ಈ ಬೀಚ್ ಬದಿಯ ವಿಲ್ಲಾಗಳು ತಾಳೆ ಮರದ ಆಕೃತಿಯಲ್ಲಿರುವ ಕೃತಕ ದ್ವೀಪಸಮೂಹದ ಉತ್ತರ ಭಾಗದಲ್ಲಿವೆ. ಈ ವಿಲ್ಲಾಗಳು ಒಳಾಂಗಣ ವಿನ್ಯಾಸದೊಂದಿಗೆ ಸುಸರ್ಜ್ಜಿತವಾಗಿವೆ. ಈ ಬಂಗಲೆಯಲ್ಲಿ 10 ಬೆಡ್ ರೂಮ್ ಗಳು, ಒಂದು ಖಾಸಗಿ ಸ್ಪಾ, ಒಳಾಂಗಣ ಹಾಗೂ ಹೊರಾಂಗಣ ಪೂಲ್ ಗಳಿವೆ.

Tap to resize

Latest Videos

ಅನಂತ್ ಅಂಬಾನಿ ಕೈಲಿದ್ದ 18 ಕೋಟಿಯ ದುಬಾರಿ ವಾಚ್‌ಗೆ ಮನಸೋತ ಮಾರ್ಕ್ ಜುಕರ್‌ಬರ್ಗ್ ಪತ್ನಿ

ಅಂಬಾನಿ ಖರೀದಿಸಿರುವ ಮನೆಯಿರುವ ಆವರಣದಲ್ಲೇ ಬ್ರಿಟಿಷ್ ಫೂಟ್ ಬಾಲ್ ಆಟಗಾರ ಡೆವಿಡ್ ಬೆಕ್ಯಾಮ್ ಮತ್ತವರ ಪತ್ನಿ ವಿಕ್ಟೋರಿಯಾ ಹಾಗೂ ಬಾಲಿವುಡ್ ಸೂಪರ್ ಸ್ಟಾರ್ ಶಾರೂಕ್ ಖಾನ್ ಮನೆಗಳಿವೆ. ಹೀಗಾಗಿ ದುಬೈಯಲ್ಲಿ ಶಾರೂಕ್ ಖಾನ್ ಹಾಗೂ ಅಂಬಾನಿ ನೆರೆಹೊರೆಯವರಾಗಿದ್ದಾರೆ. 

ಈ ಖರೀದಿಯು ಇತ್ತೀಚೆಗೆ ಮುಖೇಶ್ ಅಂಬಾನಿ ಜಿಯೋ ಆಡಳಿತ ಮಂಡಳಿಗೆ ರಾಜೀನಾಮೆ ನೀಡಿ, ಅದರ ಜವಾಬ್ದಾರಿಗಳನ್ನು ಹಿರಿಯ ಪುತ್ರ ಆಕಾಶ್ ಅಂಬಾನಿ ಅವರಿಗೆ ಹಸ್ತಾಂತರಿಸಿದ ಬಳಿಕ ನಡೆದಿದೆ. 

ಮುಖೇಶ್ ಅಂಬಾನಿ ಇತ್ತೀಚಿನ ದಿನಗಳಲ್ಲಿ ವಿದೇಶಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಇಂಗ್ಲೆಂಡ್ ನಲ್ಲಿ ಸ್ಟೋಕ್ ಪಾರ್ಕ್ ಮನ್ಸಿನ್ ಅನ್ನು 79 ಮಿಲಿಯನ್ ಡಾಲರ್ ಮೌಲ್ಯಕ್ಕೆ ಖರೀದಿಸಿದ್ದರು. ಹಾಗೆಯೇ ನ್ಯೂಯಾರ್ಕ್ ನಲ್ಲಿ 98 ಮಿಲಿಯನ್ ಡಾಲ್ ಮೌಲ್ಯಕ್ಕೆ ಮ್ಯಾಂಡರಿನ್ ಒರಿಯಂಟಲ್ ಖರೀದಿಸಿದ್ದರು. 

ಪುತ್ರ ಅನಂತ್ ನಲ್ಲಿ ತಂದೆ ಧೀರೂಭಾಯಿ ಅವರನ್ನೇ ಕಾಣುತ್ತಿದ್ದೇನೆ: ಮುಖೇಶ್ ಅಂಬಾನಿ ಭಾವುಕ ಮಾತು

ಅನಂತ್ ಬಳಿ ವಿಶ್ವದ ಅತೀ ದುಬಾರಿ ವಾಚ್  
ವಿವಾಹಪೂರ್ವ ಕಾರ್ಯಕ್ರಮಕ್ಕೆ ಅನಂತ್ ಅಂಬಾನಿ ವಿಶ್ವದ ಅತೀ ದುಬಾರಿ ವಾಚ್‌ ಎನಿಸಿರುವ ಸುಮಾರು 18 ಕೋಟಿ ರೂಪಾಯಿಗಳ ಪ್ಯಾಟೆಕ್ ಫಿಲಿಪ್ ಗ್ರ್ಯಾಂಡ್ ಮಾಸ್ಟರ್ ಚಿಮ್ ವಾಚ್ ಧರಿಸಿದ್ದರು.  ಇದನ್ನು ನೋಡಿ ಫೇಸ್‌ಬುಕ್ ಮಾಲೀಕ ಮಾರ್ಕ್ ಜುಕರ್‌ಬರ್ಗ್ ಪತ್ನಿ ಪೆಸ್ಸಿಲ್ಲಾ ಬೆರಗಾದ ದೃಶ್ಯ ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 18 ಕೋಟಿ ಮೊತ್ತದ ಈ ದುಬಾರಿ ವಾಚ್ ಪ್ರೆಸಿಲ್ಲಾ ಮನಸೆಳೆದಿದ್ದು, ಆಕೆ ಅನಂತ್ ಅಂಬಾನಿ ಕೈ ಹಿಡಿದು ವಾಚ್ ಅನ್ನು ನೋಡುತ್ತಿರುವ ದೃಶ್ಯ ಕ್ಯಾಮರಾಗಳಲ್ಲಿ ಸೆರೆ ಆಗಿದ್ದು ವೈರಲ್ ಆಗಿದೆ.  ವಾಚ್ ಗಮನಿಸಿದ ಆಕೆ ಬೆಲೆ ಎಷ್ಟು ಎಂದು ಕೇಳುತ್ತಿರುವುದಲ್ಲದೇ ವಾವ್ ಎಂದು ಉದ್ಗಾರ ತೆಗೆಯುತ್ತಿರುವ ದೃಶ್ಯವಿದೆ. 

click me!