ಪೆಂಟಗನ್‌ ಮೀರಿಸೋ ವಿಶ್ವದ ಬೃಹತ್ ಕಚೇರಿ ಸಂಕೀರ್ಣ ಗುಜರಾತ್‌ನಲ್ಲಿ ಉದ್ಘಾಟಿಸಲಿರೋ ಪ್ರಧಾನಿ ಮೋದಿ

By BK Ashwin  |  First Published Dec 16, 2023, 1:38 PM IST

ಗುಜರಾತ್‌ನ ಸೂರತ್ ಡೈಮಂಡ್ ಬೋರ್ಸ್, 6.7 ಮಿಲಿಯನ್ ಚದರ ಅಡಿ (620,000 ಚದರ ಮೀಟರ್) ಪ್ರದೇಶವನ್ನು ಒಳಗೊಂಡಿದೆ. ಇದು ಜುಲೈನಲ್ಲಿ 32 ಶತಕೋಟಿ ರೂಪಾಯಿ ($384 ಮಿಲಿಯನ್) ವೆಚ್ಚದಲ್ಲಿ ಪೂರ್ಣಗೊಂಡಾಗ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವಾಗಿದೆ.


ಸೂರತ್‌ (ಡಿಸೆಂಬರ್ 16, 2023): ಗಾತ್ರದಲ್ಲಿ ಪೆಂಟಗನ್ ಅನ್ನು ಮೀರಿಸುವ ಹೊಸ ಕಚೇರಿ ಸಂಕೀರ್ಣವು ಭಾರತದಲ್ಲಿ ಅಧಿಕೃತವಾಗಿ ಉದ್ಘಾಟನೆಯಾಗ್ತಿದೆ. ಅದೂ ಗುಜರಾತ್‌ನ ಸೂರತ್‌ನಲ್ಲಿ. ಈ ಮೂಲಕ ಇದು ವಿಶ್ವದ ವಜ್ರದ ರಾಜಧಾನಿಯಾಗುವ ನಗರದ ಮಹತ್ವಾಕಾಂಕ್ಷೆಗಳನ್ನು ಭದ್ರಪಡಿಸುತ್ತದೆ.

ಗುಜರಾತ್‌ನ ಸೂರತ್ ಡೈಮಂಡ್ ಬೋರ್ಸ್, 6.7 ಮಿಲಿಯನ್ ಚದರ ಅಡಿ (620,000 ಚದರ ಮೀಟರ್) ಪ್ರದೇಶವನ್ನು ಒಳಗೊಂಡಿದೆ. ಇದು ಜುಲೈನಲ್ಲಿ 32 ಶತಕೋಟಿ ರೂಪಾಯಿ ($384 ಮಿಲಿಯನ್) ವೆಚ್ಚದಲ್ಲಿ ಪೂರ್ಣಗೊಂಡಾಗ ವಿಶ್ವದ ಅತಿದೊಡ್ಡ ಕಚೇರಿ ಸಂಕೀರ್ಣವಾಗಿದೆ. US ಹೆಗ್ಗುರುತಾದ ಪೆಂಟಗನ್‌ ಅನ್ನು 1943 ರಲ್ಲಿ ತೆರೆಯಲಾಯಿತು ಮತ್ತು 6.5 ಮಿಲಿಯನ್ ಚದರ ಅಡಿ ವಿಸ್ತೀರ್ಣವನ್ನು ಹೊಂದಿದೆ.

Tap to resize

Latest Videos

ಇದನ್ನು ಓದಿ: ಸೂರತ್‌ನ ಡೈಮಂಡ್‌ ಬೋರ್ಸ್‌ ವಿಶ್ವದಲ್ಲೇ ಬೃಹತ್‌ ಕಚೇರಿ! ಅಮೆರಿಕದ ಪೆಂಟಗನ್ ಹಿಂದಿಕ್ಕಿ ನಂ. 1 ಪಟ್ಟಕ್ಕೆ

ಸೂರತ್‌ನಲ್ಲಿರುವ ಸಂಕೀರ್ಣವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಲಿದ್ದಾರೆ. ಈ ಮೂಲಕ ಗುಜರಾತನ್ನು ಆರ್ಥಿಕವಾಗಿ ಹೆಚ್ಚಿಸಲು ಪ್ರಧಾನಿ ಮೋದಿಯವರ ಆಡಳಿತದ ಇತರ ಪ್ರಯತ್ನಗಳ ಜತೆಗೆ ಡೈಮಂಡ್‌ ಬೋರ್ಸ್‌ ಪ್ರಾರಂಭವು ಮತ್ತಷ್ಟು ಉತ್ಸಾಹ ಮೂಡಿಸುತ್ತದೆ. ಹೆಚ್ಚು ವ್ಯಾಪಾರ - ಸ್ನೇಹಿಯನ್ನಾಗಿ ಮಾಡಲು ಸಹ ಹಲವು ಕ್ರಮ ಕೈಗೊಳ್ಳಲಾಗಿದೆ. 

ಮುಂಬೈ ಭಾರತದಲ್ಲಿ ವಜ್ರಗಳ ರಫ್ತಿನ ಕೇಂದ್ರವಾಗಿದೆ, "ಡೈಮಂಡ್ ಸಿಟಿ" ಎಂದೂ ಕರೆಯಲ್ಪಡುವ ಸೂರತ್ ಅಮೂಲ್ಯ ರತ್ನಗಳ ಸಂಸ್ಕರಣೆಯಲ್ಲಿ ಪ್ರಾಬಲ್ಯ ಹೊಂದಿದೆ, ಪ್ರಪಂಚದ ಸುಮಾರು 90 ಪ್ರತಿಶತದಷ್ಟು ಒರಟು ವಜ್ರಗಳನ್ನು ಅಲ್ಲಿಯೇ ಕತ್ತರಿಸಿ ಹೊಳಪು ಮಾಡಲಾಗುತ್ತದೆ. US ಮತ್ತು ಚೀನಾದಂತಹ ಸ್ಥಳಗಳಲ್ಲಿ ಖರೀದಿದಾರರಿಗೆ ಮಾರಲಾಗುತ್ತದೆ. ಹೊಸ ಬೋರ್ಸ್ ಉದ್ಯಮವನ್ನು ಒಂದೇ ಸೂರಿನಡಿ ಕೇಂದ್ರೀಕರಿಸುವ ಗುರಿಯನ್ನು ಹೊಂದಿದೆ.

ಇದನ್ನೂ ಓದಿ: ಪೆಂಟಗನ್‌ ಮೀರಿಸಿದ ಸೂರತ್ ಕಚೇರಿ ಸಂಕೀರ್ಣ; ಅರ್ಥಿಕತೆ, ಉದ್ಯೋಗವಕಾಶಕ್ಕೆ ಉತ್ತೇಜನ: ಪ್ರಧಾನಿ ಮೋದಿ ಮೆಚ್ಚುಗೆ

ಇನ್ನು, ಸೂರತ್ ಬಗ್ಗೆ ಮಾತನಾಡಿದ ಡೈಮಂಡ್ ಬೋರ್ಸಸ್‌ನ ವರ್ಲ್ಡ್ ಫೆಡರೇಶನ್‌ನ ಗೌರವಾಧ್ಯಕ್ಷ ಎಲಿ ಇಝಾಕೋಫ್, ಸೂರತ್ ಒಂದು ಪ್ರಮುಖ (ವಜ್ರ) ಕತ್ತರಿಸುವ ಕೇಂದ್ರವಾಗಿದೆ ಮತ್ತು ಡೈಮಂಡ್‌ ಎಕ್ಸ್‌ಚೇಂಜ್‌ ಬಹಳ ಸಮಯದಿಂದ ಬಾಕಿ ಉಳಿದಿತ್ತು" ಎಂದು ಹೇಳಿದ್ದಾರೆ. ಹಾಗೂ, ವಿಶ್ವಾದ್ಯಂತದ ವಿತರಕರು ಸುರಕ್ಷಿತ ಮತ್ತು ಕೇಂದ್ರೀಕೃತ ಸ್ಥಳದಿಂದ ಆತ್ಮವಿಶ್ವಾಸದಿಂದ ವ್ಯಾಪಾರ ಮಾಡಬಹುದು ಎಂದೂ ಅವರು ಹೇಳಿದರು.
ಹೊಸ ಸಂಕೀರ್ಣವು ಡೈಮಂಡ್ ರಿಸರ್ಚ್ ಮತ್ತು ಮರ್ಕೆಂಟೈಲ್ ಸಿಟಿಯೊಳಗೆ ಇದೆ., ಇದು ಗುಜರಾತ್ ಇಂಟರ್ನ್ಯಾಷನಲ್ ಫೈನಾನ್ಸ್ ಟೆಕ್-ಸಿಟಿ ಅಥವಾ ಗಿಫ್ಟ್ ಸಿಟಿಯ ಮಾದರಿಯ ವ್ಯಾಪಾರ ಜಿಲ್ಲೆಯಾಗಿದ್ದು, ಪ್ರಧಾನಿ ಮೋದಿಯ ಪ್ರಮುಖ ಯೋಜನೆಗಳಲ್ಲಿ ಒಂದಾಗಿದೆ. ಇದು ಒಂಬತ್ತು 15 ಅಂತಸ್ತಿನ ಗೋಪುರಗಳು ಮತ್ತು ಸುಮಾರು 4,700 ಕಚೇರಿಗಳನ್ನು ಹೊಂದಿದೆ. ಈ ಪೈಕಿ ಸುಮಾರು 130 ಕಚೇರಿಗಳು ಈಗಾಗಲೇ ಬಳಕೆಯಲ್ಲಿವೆ ಎಂದು ಸೂರತ್ ಡೈಮಂಡ್ ಬೋರ್ಸ್‌ನ ಅಧ್ಯಕ್ಷ ನಾಗಜಿಭಾಯ್ ಸಕರಿಯಾ ತಿಳಿಸಿದ್ದಾರೆ.
 

click me!