ಇನ್ಪಿಗೆ ನೀಡಿದ ಗಡುವು ಮುಗಿದರೂ ಸರಿ ಆಗದ ಐಟಿ ವೆಬ್‌ಸೈಟ್‌ ದೋಷ!

Published : Sep 16, 2021, 08:40 AM IST
ಇನ್ಪಿಗೆ ನೀಡಿದ ಗಡುವು ಮುಗಿದರೂ ಸರಿ ಆಗದ ಐಟಿ ವೆಬ್‌ಸೈಟ್‌ ದೋಷ!

ಸಾರಾಂಶ

* ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್‌ನಲ್ಲಿ ದೋಷ * ದೋಷಗಳನ್ನು ಸರಿಪಡಿಸಲು ಇಸ್ಫೋಸಿಸ್‌ ಸಂಸ್ಥೆಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವು ಅಂತ್ಯ * ಇನ್ಪಿಗೆ ನೀಡಿದ ಗಡುವು ಮುಗಿದರೂ ಸರಿ ಆಗದ ಐಟಿ ವೆಬ್‌ಸೈಟ್‌ ದೋಷ

ನವದೆಹಲಿ(ಸೆ.16): ಆದಾಯ ತೆರಿಗೆ ಇಲಾಖೆಯ ಹೊಸ ವೆಬ್‌ಸೈಟ್‌ನಲ್ಲಿ ದೋಷಗಳನ್ನು ಸರಿಪಡಿಸಲು ಇಸ್ಫೋಸಿಸ್‌ ಸಂಸ್ಥೆಗೆ ಕೇಂದ್ರ ಸರ್ಕಾರ ನೀಡಿದ್ದ ಗಡುವು ಸೆ.15ರ ಬುಧವಾರಕ್ಕೆ ಮುಕ್ತಾಯಗೊಂಡಿದೆ. ಆದರೂ ವೆಬ್‌ಸೈಟ್‌ನಲ್ಲಿನ ದೋಷಗಳು ಇನ್ನೂ ಮುಂದುವರೆದಿವೆ.

ವೆಬ್‌ಸೈಟ್‌ ಬಿಡುಗಡೆ ಆಗಿ ಮೂರು ತಿಂಗಳು ಕಳೆದಿದ್ದರೂ ಐಟಿ ರಿಟರ್ನ್ಸ್‌ ಸಲ್ಲಿಕೆಯಲ್ಲಿ ಪರಿಷ್ಕರಣೆ ಮಾಡಲು, ರೀಫಂಡ್‌ ಸ್ಥಿತಿಗಳನ್ನು ಪರಿಶೀಲಿಸಲು ಮತ್ತು ರೀಫಂಡ್‌ ಮರು ಬಿಡುಗಡೆ ಮನವಿ ಸಲ್ಲಿಸಲು ಸಾಧ್ಯವಾಗುತ್ತಿಲ್ಲ. ವೆಬ್‌ಸೈಟ್‌ನಲ್ಲಿ ಈಗಲೂ ಹಲವು ಬಗೆಯ ಲೋಪದೋಷಗಳು ಹಾಗೆಯೇ ಉಳಿದುಕೊಂಡಿವೆ.

2013​-14ನೇ ಸಾಲಿಗಿಂತಲೂ ಮುನ್ನ ಸಲ್ಲಿಕೆಯಾದ ಐಟಿಆರ್‌ಗಳ ಮಾಹಿತಿಯನ್ನು ಪಡೆಯಲು ಸಾಧ್ಯವಾಗುತ್ತಿಲ್ಲ ಎಂದು ತೆರಿಗೆ ತಜ್ಞರು ಹೇಳಿದ್ದಾರೆ. ಹೀಗಾಗಿ ಇನ್ನೊಂದು ಸುತ್ತಿನಲ್ಲಿ ಇಸ್ಫೋಸಿಸ್‌ ಸಂಸ್ಥೆಯನ್ನು ಸರ್ಕಾರ ತರಾಟೆಗೆ ತೆಗೆದುಕೊಳ್ಳುವ ಸಾಧ್ಯತೆ ಇದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಮೋದಿ-ಪುಟಿನ್‌ ಒಪ್ಪಂದ: 40 ದಿನಗಳಲ್ಲ, ಕೇವಲ 24 ದಿನಗಳಲ್ಲೇ ರಷ್ಯಾಗೆ ತಲುಪಲಿದೆ ಭಾರತದ ಸರಕುಗಳು!