ಕದನ ವಿರಾಮದಿಂದ ಕಚ್ಚಾ ತೈಲ ಬೆಲೆ ಕುಸಿತ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರ ಇಳಿಯುತ್ತಾ?

Published : Apr 08, 2026, 04:32 PM IST
 india cuts excise duty on petrol diesel amid iran war crude oil price surge hormuz crisis fuel price impact

ಸಾರಾಂಶ

ಕದನ ವಿರಾಮದಿಂದ ಕಚ್ಚಾ ತೈಲ ಬೆಲೆ ಕುಸಿತ, ಭಾರತದಲ್ಲಿ ಪೆಟ್ರೋಲ್ ಡೀಸೆಲ್ ದರ ಇಳಿಯುತ್ತಾ?, ಹೊರ್ಮುಜ್ ಜಲಸಂಧಿ ತೆರೆಯಲಾಗಿದೆ. ಇತ್ತ ಕಚ್ಟಾ ತೈಲ ಬೆಲೆ 100 ಡಾಲರ್‌ಗೆ ಇಳಿಕೆಯಾಗಿದೆ. ಇದೀಗ ಭಾರತದಲ್ಲಿ ಪೆಟ್ರೋಲ್ ಬೆಲೆ ಕತೆ ಏನು?

ನವದೆಹಲಿ (ಏ.08) ಅಮೆರಿಕ ಹಾಗೂ ಇರಾನ್ ನಡುವಿನ ಯುದ್ಧಕ್ಕೆ ಬ್ರೇಕ್ ಬಿದ್ದಿದೆ. ಕದನ ವಿರಾಮ ಘೋಷಣೆಯಿಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಕದನ ವಿರಾಮ ಘೋಷಣೆ ಬೆನ್ನಲ್ಲೇ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಭಾರಿ ಕುಸಿತ ಕಂಡಿದೆ. ಇದೀಗ ಬ್ಯಾರೆಲ್‌ಗೆ 100 ಡಾಲರ್‌ಗೆ ಇಳಿಕೆಯಾಗಿದೆ. ಇದು ಯುದ್ಧದ ವೇಳೆ 160 ಡಾಲರ್ ವರೆಗೂ ಏರಿಕೆಯಾಗಿತ್ತು. ಕಚ್ಚಾ ತೈಲ ಬೆಲೆ ಇಳಿಕೆಯಿಂದ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಕೆಯಾಗುತ್ತಾ?

ತಾತ್ಕಾಲಿಕ ಕದನ ವಿರಾಮ

ಅಮೆರಿಕ ಇರಾನ್ ಕದನ ವಿರಾಮದಿಂದ ಕಚ್ಚಾ ತೈಲ ಬೆಲೆಯಲ್ಲಿ ಶೇಕಡಾ 13 ರಿಂದ 14ರಷ್ಟು ಇಳಿಕೆಯಾಗಿದೆ. ಯುದ್ಧದ ಸಂದರ್ಭದಲ್ಲಿ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಸಮಸ್ಯೆಯಾಗಿಲ್ಲ. ಆದರೆ ಎಲ್‌ಪಿಜಿ ಗ್ಯಾಸ್ ಸಮಸ್ಯೆ ಎದುರಾಗಿತ್ತು. ಪೂರೈಕೆಯಲ್ಲಿ ವ್ಯತ್ಯಯವಾಗಿತ್ತು. ಇದೀಗ ಸಮಸ್ಯೆ ನಿರಾಳವಾಗಿದೆ. ತೈಲ ಬೆಲೆ ಇಳಿಕೆ ಕಾರಣದಿಂದ ಭಾರತದಲ್ಲಿ ಸದ್ಯಕ್ಕೆ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಹೆಚ್ಚಿನ ವ್ಯತ್ಯಾಸವಾಗುವ ಸಾಧ್ಯತೆ ಇಲ್ಲ. ಕಾರಣ ಕದನ ವಿರಾಮ ತಾತ್ಕಾಲಿಕವಾಗಿದೆ. 2 ವಾರಗಳ ಬಳಿಕ ಯುದ್ಧ ಮತ್ತೆ ಶುರುವಾದರೆ ಸಮಸ್ಯೆ ಬಿಗಡಾಯಿಸಲಿದೆ. ಯುದ್ಧದ ಪರಿಸ್ಥಿತಿ ಎದುರಾದರೆ ಬೆಲೆ, ಹಣದುಬ್ಬರ ನಿಯಂತ್ರಿಸಲು ಶೇಖರಣೆಯ ಅಗತ್ಯವೂ ಭಾರತಕ್ಕಿದೆ. ಹೀಗಾಗಿ ಸದ್ಯ ಭಾರತದಲ್ಲಿ ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಯಾವುದೇ ವ್ಯತ್ಯಾಸದ ಸಾಧ್ಯತೆಗಳಿಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಪ್ರತಿ ಬ್ಯಾರೆಲ್‌ಗೆ ಇದೀಗ 94 ರಿಂದ 96 ಡಾಲರ್ ನಷ್ಟು ಇಳಿಕೆಯಾಗಿದೆ. ಇದು ಇತ್ತೀಚಿನ ದಿನಗಳ ಅತೀ ದೊಡ್ಡ ಕುಸಿತ ಎಂದೇ ಪರಿಗಣಿಸಲಾಗಿದೆ. ಭಾರತ ಅತೀ ಹೆಚ್ಚು ಇಂಧನವನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುತ್ತದೆ. ಯುದ್ಧ ಸಂದರ್ಭದಲ್ಲಿ ಆಗಿರುವ ನಷ್ಟ ಸರಿದೂಗಿಸುವ ಕಾರಣದಿಂದಲೂ ಭಾರತದಲ್ಲಿ ತಕ್ಷಣಕ್ಕೆ ಬೆಲೆ ಇಳಿಕೆ ಅಸಾಧ್ಯವಾಗಿದೆ.

ಹಣದುಬ್ಬರ ನಿಯಂತ್ರಣ

ಕದನ ವಿರಾಮ ಮುಂದುವರಿದು ಶಾಶ್ವತ ಪರಿಹಾರಕಂಡುಕೊಂಡರೆ ಭಾರತದಲ್ಲಿ ತೈಲ ಬೆಲೆಯಲ್ಲಿ ಕೆಲ ವ್ಯತ್ಯಾಸಗಳಾಗುವ ಸಾಧ್ಯತೆ ಇದೆ. ಆಧರೂ ಭಾರಿ ಇಳಿಕೆ ಸಾಧ್ಯತಗೆಳಿಲ್ಲ. ಹಣದುಬ್ಬರ ನಿಯಂತ್ರಸಲು ಪೆಟ್ರೋಲ್ ಡೀಸೆಲ್ ಬೆಲೆ ಸುಸ್ಥಿರವಾಗಿಡಲು ಸರ್ಕಾರ ಮುಂದಾಗಲಿದೆ.

ಕಚ್ಚಾ ತೈಲ ಬೆಲೆ ಇಳಿಕೆ ಭಾರತ ಮಾತ್ರವಲ್ಲ ಎಲ್ಲಾ ದೇಶಗಳಿಗೂ ಸಮಾಧಾನ ತಂದಿದೆ. ಮತ್ತೆ ಯುದ್ಧ ಆರಂಭಗೊಂಡರೆ ಪರಿಸ್ಥಿತಿ ಮತ್ತಷ್ಟು ಹದಗೆಡಲಿದೆ. ಕಾರಣ ಅಮೆರಿಕ ಮತ್ತೆ ಯುದ್ಧ ಆರಂಭಿಸಿದರೆ ಘನಘೋರವಾಗಿರಲಿದೆ. ಇದು ಭಾರತ ಸೇರಿದಂತೆ ಏಷ್ಯಾ ರಾಷ್ಟ್ರಗಳನ್ನು ಇನ್ನಿಲ್ಲದಂತೆ ಕಾಡಲಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

'ಯಾವುದೇ ಬ್ಯಾಕಪ್ ಇಲ್ಲದೇ ಕೆಲಸ ಬಿಟ್ಟೆ': ಒಂದು ಲಕ್ಷದ ಸಂಬಳ ಬಿಟ್ಟು, ಕೇವಲ 14 ತಿಂಗಳಲ್ಲಿ 2 ಲಕ್ಷ ತಿಂಗಳಿಗೆ ಗಳಿಸಲು ಆರಂಭಿಸಿದ ಯುವತಿ!
ಹೋರ್ಮುಜ್‌ನಿಂದ ಇರಾನ್‌ಗೆ ಪ್ರತಿ ತಿಂಗಳು 42000 ಕೋಟಿ ಆದಾಯ: 15 ದಿನದಲ್ಲಿ 2ನೇ ಸಲ ಇಂಧನ ದರ ಏರಿಸಿದ ಚೀನಾ