ಅಮೆರಿಕ ತೈಲ ಮಾರುಕಟ್ಟೆಯಲ್ಲಿ ಕೇಳರಿಯದ ಕುಸಿತ: ಬೆಲೆ ಶೂನ್ಯಕ್ಕಿಂತ ಕೆಳಗೆ!

By Kannadaprabha News  |  First Published Apr 21, 2020, 9:49 AM IST

ಕಚ್ಚಾತೈಲ ಬೆಲೆ ಶೂನ್ಯಕ್ಕಿಂತ ಕೆಳಗೆ!| ಅಮೆರಿಕ ತೈಲ ಮಾರುಕಟ್ಟೆಯಲ್ಲಿ ಕಂಡುಕೇಳರಿಯದ ಕುಸಿತ


ವಾಷಿಂಗ್ಟನ್‌(ಏ.21): ಕೊರೋನಾ ಸೋಂಕು ಆರ್ಥಿಕತೆಗೆ ನೀಡಿರುವ ಹೊಡೆತ, ಅಮೆರಿಕದ ಇತಿಹಾಸ ಕಂಡುಕೇಳರಿಯದ ದಾಖಲೆಯೊಂದನ್ನು ಸೃಷ್ಟಿಸಿದೆ.

ಸೋಮವಾರ ಇಲ್ಲಿನ ತೈಲ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಶೂನ್ಯಕ್ಕಿಂತಲೂ ಕೆಳಗೆ ಕುಸಿದಿದೆ. ಇಲ್ಲಿನ ಟೆಕ್ಸಾಸ್‌ ಬ್ರೆಂಟ್‌ ಫ್ಯೂಚರ್‌ ಮಾರುಕಟ್ಟೆಯಲ್ಲಿ 1 ಬ್ಯಾರಲ್‌ (158 ಲೀ) ಕಚ್ಚಾತೈಲದ ಬೆಲೆ -37.63 ಡಾಲರ್‌ನಲ್ಲಿ ಮುಕ್ತಾಯವಾಗಿದೆ. ಇದು 1983ರಲ್ಲಿ ಫä್ಯಚರ್‌ ಟ್ರೇಡಿಂಗ್‌ ಆರಂಭವಾದ ಬಳಿಕ ದಾಖಲಾದ ಕನಿಷ್ಠ ಮೊತ್ತವಾಗಿದೆ.

Tap to resize

Latest Videos

undefined

ನ್ಯೂಯಾರ್ಕ್ ಕೊರೋನಾ ಸೋಂಕಿತರಿಗೆ ದೇವರಾದ ದಿಗ್ಗಜ ಮಿಲ್ಖಾ ಸಿಂಗ್ ಪುತ್ರಿ!

ಮುಂದಿನ ಮೇ ತಿಂಗಳ ಪೂರೈಕೆಗಾಗಿ ಸೋಮವಾರ ನಡೆದ ಫ್ಯೂಚರ್‌ ಟ್ರೇಡಿಂಗ್‌ನಲ್ಲಿ ವೇಳೆ ಈ ದಾಖಲೆಯ ಕುಸಿತ ಕಂಡುಬಂದಿದೆ. ಮುಂದಿನ ಜೂನ್‌ವರೆಗೂ ಆರ್ಥಿಕತೆ ಚೇತರಿಕೆ ಕಾಣುವ ಸಾಧ್ಯತೆ ಇಲ್ಲದ ಹಿನ್ನೆಲೆಯಲ್ಲಿ ಮೇ ತಿಂಗಳ ಖರೀದಿಗೆ ಯಾರೂ ಮುಂದಾಗಿಲ್ಲ.

ಜೊತೆಗೆ ಬೇಡಿಕೆಗಿಂತ ಉತ್ಪಾದನೆ ಹೆಚ್ಚಾಗಿ, ಸಂಗ್ರಹಕ್ಕೆ ಸ್ಥಾನ ಇಲ್ಲದೇ ಇರುವುದು ಕೂಡಾ ಈ ಪ್ರಮಾಣ ಇಳಿಕೆಗೆ ಕಾರಣವೆನ್ನಲಾಗಿದೆ.

click me!