Credit Card : ಪರ್ಸ್ ನಲ್ಲಿ ಕ್ರೆಡಿಟ್ ಕಾರ್ಡಿದೆ ಅಂತಾ ಮೈಮರೆತೀರಿ, ಜೋಕೆ!

By Suvarna News  |  First Published Dec 7, 2021, 4:38 PM IST

 ಕ್ರೆಡಿಟ್ ಕಾರ್ಡ್ ಇರೋದೇ ಹೋದಲ್ಲಿ ಬಂದಲ್ಲಿ ಉಜ್ಜುಕೆ, ಬಿಲ್ ಬಂದ್ಮೇಲೆ ನೋಡಿಕೊಂಡರಾಯ್ತು ಅನ್ನೋರಿಗೇನೂ ನಮ್ಮಲ್ಲಿ ಕೊರತೆಯಿಲ್ಲ.ಆದ್ರೆ ನಂತರ ಬರುವ ಬಿಲ್, ಬಡ್ಡಿ ಎಂಥವರ ತಲೆಯನ್ನಾದ್ರೂ  ತಿರುಗಿಸುತ್ತದೆ. ಹೀಗೆ ಕ್ರೆಡಿಟ್ ಕಾರ್ಡ್ ಬಿಲ್ ಬಂದಮೇಲೆ ತಲೆ ಕೆಡಿಸಿಕೊಳ್ಳೋ ಬದಲು ಬಳಸುವಾಗಲೇ ಎಚ್ಚರಿಕೆ ವಹಿಸೋದು ಉತ್ತಮ ಅಲ್ವಾ? 


ದಿನಕ್ಕೆ ನಾಲ್ಕೈದು ಕರೆ ಬರ್ತಿರುತ್ತೆ. ಒಂದಲ್ಲ ಒಂದು ಬ್ಯಾಂಕ್ (Bank) ನವರು ಕರೆ ಮಾಡಿ ಕ್ರೆಡಿಟ್ ಕಾರ್ಡ್(Credit card) ಕೊಡ್ತೆವೆ, ಇಷ್ಟು ಲಿಮಿಟ್,ಅಷ್ಟು ಲಿಮಿಟ್ ಅಂತಾ ಮಾಹಿತಿ ನೀಡ್ತಿರುತ್ತಾರೆ. ಡಿಜಿಟಲ್ ಭಾರತದಲ್ಲಿ ಕ್ರೆಡಿಟ್ ಕಾರ್ಡ್ ಬಳಕೆದಾರರ ಸಂಖ್ಯೆ ಹೆಚ್ಚಾಗಿದೆ. ಜೇಬಿನಲ್ಲಿ ಹಣ(Money)ವಿಲ್ಲವಿದ್ರೂ ಪರ್ಸ್ (Purse)ನಲ್ಲಿ ಕ್ರೆಡಿಟ್ ಕಾರ್ಡ್ ಇದೆ ಎಂಬ ಧೈರ್ಯವಿರುತ್ತದೆ. ಕ್ರೆಡಿಟ್ ಕಾರ್ಡ್ ಬುದ್ಧಿವಂತರ ಮೊದಲ ಆಯ್ಕೆ ಎನ್ನಲಾಗುತ್ತದೆ. ಕ್ರೆಡಿಟ್ ಕಾರ್ಡ್ ನಿಂದ ಹಲವಾರು ಪ್ರಯೋಜನಗಳಿವೆ. ಹಣವಿಲ್ಲವೆಂದ್ರೂ ಆರಾಮವಾಗಿ ಖರೀದಿ ಮಾಡಬಹುದು. ಖಾತೆಯಲ್ಲಿ ಹಣವಿಲ್ಲ,ತಕ್ಷಣ ಹಣ ಪಾವತಿ ಮಾಡಬೇಕೆಂಬ ಚಿಂತೇಯೂ ಇರುವುದಿಲ್ಲ. ಕ್ರೆಡಿಟ್ ಕಾರ್ಡ್ ನಿಂದ ಪಾವತಿಸಲ್ಪಟ್ಟ ಹಣಕ್ಕೆ ಸಮಯವಿರುವ ಕಾರಣ,ಗ್ರಾಹಕರು (Customer) ಆರಾಮವಾಗಿ ಹಣ ಮರು ಪಾವತಿ ಮಾಡುತ್ತಾರೆ. ಆದರೆ ಕ್ರೆಡಿಟ್ ಕಾರ್ಡ್ ಬಳಸುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಗತ್ಯವಿದೆ, ಹಾಗಾದರೆ ಕ್ರೆಡಿಟ್ ಕಾರ್ಡ್ ಬಳಸುವಾಗ ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ವಿಷಯಗಳು ಯಾವುವು ಎಂಬುದನ್ನು ನೋಡೋಣ.

ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂಪಡೆಯಬೇಡಿ (Dont withdraw money from credit card) : ಇದು ನೆನಪಿಡಬೇಕಾದ ಅಂಶದಲ್ಲಿ ಮುಖ್ಯವಾದದ್ದು. ಎಂದೂ, ಎಲ್ಲಾ ಕ್ರೆಡಿಟ್ ಕಾರ್ಡ್ ಬಳಕೆದಾರರು ಕ್ರೆಡಿಟ್ ಕಾರ್ಡ್‌ಗಳಿಂದ ಹಣವನ್ನು ವಿತ್ ಡ್ರಾ (Money withdraw) ಮಾಡಬಾರದು. ತುರ್ತು ಪರಿಸ್ಥಿತಿ ಹೊರತುಪಡಿಸಿ, ಬೇರೆ ಯಾವುದೇ ಸಮಯದಲ್ಲೂ ಕ್ರೆಡಿಟ್ ಕಾರ್ಡ್‌ನಿಂದ ಹಣವನ್ನು ಹಿಂತೆಗೆದುಕೊಳ್ಳುವ ಬಗ್ಗೆ ಯೋಚಿಸಬೇಡಿ. ಕ್ರೆಡಿಟ್ ಕಾರ್ಡ್‌ಗಳಿಂದ ನೀವು ನಗದು ವಿತ್ ಡ್ರಾ ಮಾಡಿದ್ರೆ ನಗದಿನ ಮೇಲೆ ಹೆಚ್ಚಿನ ಬಡ್ಡಿ(Interest)ಯನ್ನು ಪಾವತಿಸಬೇಕಾಗುತ್ತದೆ. ಕ್ರೆಡಿಟ್ ಕಾರ್ಡ್‌ನಿಂದ ನಗದು ಹಿಂಪಡೆಯಲು ಯಾವುದೇ ಬಡ್ಡಿ ರಹಿತ ಅವಧಿ ಇರುವುದಿಲ್ಲ.ಈವರೆಗೆ ಹಣ ವಿತ್ ಡ್ರಾ ಮಾಡ್ತಿದ್ದರೆ ಈಗ್ಲೇ ಅದನ್ನು ನಿಲ್ಲಿಸಿ.

Tap to resize

Latest Videos

undefined

Multiple Bank Accounts: ಒಂದಕ್ಕಿಂತ ಹೆಚ್ಚು ಬ್ಯಾಂಕ್ ಖಾತೆ ಇವೆಯಾ? ಈಗಲೇ ಎಚ್ಚೆತ್ತುಕೊಳ್ಳಿ

ಶಾಪಿಂಗ್ ಮಾಡುವಾಗ ಇದು ನೆನಪಿರಲಿ (Keep in mind while shopping) : ಶಾಪಿಂಗ್ ಗೆ ಹೋದಾಗ ಅನೇಕರು ಮನೆಯಿಂದ ತೆಗೆದುಕೊಂಡು ಹೋದ ಖರೀದಿ ಪಟ್ಟಿ ಮರೆಯುತ್ತಾರೆ. ಮಾಲ್ ಗಳಿಗೆ ಹೋದಾಗ ಇದು ಹೆಚ್ಚು. ಕಂಡ,ಕಂಡದ್ದೆಲ್ಲ ಖರೀದಿ ಮಾಡಿ,ಬಜೆಟ್ ಗಿಂತ ಹೆಚ್ಚು ಖರ್ಚು ಮಾಡ್ತಾರೆ. ತಕ್ಷಣ ನಗದು ಪಾವತಿ ಮಾಡುವ ಅಗತ್ಯವಿಲ್ಲದ ಕಾರಣ, ಕ್ರೆಡಿಟ್ ಕಾರ್ಡ್‌ ಉಜ್ಜುತ್ತಾರೆ. ಈ ಶಾಪಿಂಗ್ ನಿಂದ ಖಾತೆಯಲ್ಲಿರುವ ಹಣ ಖರ್ಚಾಗುವುದಿಲ್ಲ ನಿಜ. ಆದರೆ ಕ್ರೆಡಿಟ್ ಕಾರ್ಡ್‌ ಮೂಲಕ ಪಾವತಿ ಮಾಡಿದ ಹಣ ಉಚಿತವಲ್ಲ. ಬ್ಯಾಂಕ್ ಗೆ ಅದನ್ನು ವಾಪಸ್ ಮಾಡಬೇಕು.ಮೊದಲೇ ಹೇಳಿದಂತೆ ಅದಕ್ಕೆ ಬಡ್ಡಿಯನ್ನು ಪಾವತಿ ಮಾಡಬೇಕಾಗುತ್ತದೆ. ನೀವು ಕ್ರೆಡಿಟ್ ಕಾರ್ಡ್ ಮೂಲಕ ಹಣ ಪಾವತಿ ಮಾಡಿದ ದಿನದಿಂದ ಬಡ್ಡಿ ಶುರುವಾಗುತ್ತದೆ. ನೀವು ಹಣ ಪಾವತಿ ವಿಳಂಬ ಮಾಡಿದರೆ ಬಡ್ಡಿ ಮತ್ತಷ್ಟು ಹೆಚ್ಚಾಗುತ್ತದೆ. 

Credit Card Spend: ಅಕ್ಟೋಬರ್ ತಿಂಗಳಲ್ಲಿ 1 ಲಕ್ಷ ಕೋಟಿ ರೂಪಾಯಿ ದಾಖಲೆ ವ್ಯವಹಾರ!

ಬಿಲ್ ಪಾವತಿ (Bill payment) : ಯಾವಾಗಲೂ ಕ್ರೆಡಿಟ್ ಕಾರ್ಡ್ ಬಿಲ್ ಗಳನ್ನು ಸಮಯಕ್ಕೆ ಸರಿಯಾಗಿ ಪಾವತಿಸಬೇಕು. ಕ್ರೆಡಿಟ್ ಕಾರ್ಡ್ ಬಿಲ್‌  ಪಾವತಿ ತಡವಾದರೆ ಹೆಚ್ಚಿನ ಬಡ್ಡಿ ಪಾವತಿಸಬೇಕಾಗುತ್ತದೆ.ಇದು ನಿಮ್ಮ ಕ್ರೆಡಿಟ್ ಸ್ಕೋರ್ (Credit score) ಕಡಿಮೆ ಮಾಡುತ್ತದೆ. ಕ್ರೆಡಿಟ್ ಸ್ಕೋರ್ ಕಡಿಮೆಯಾದ್ರೆ ಭವಿಷ್ಯದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ. ಬ್ಯಾಂಕ್ ಗಳಿಂದ ಸಾಲವನ್ನು ಪಡೆಯಲು ಕ್ರೆಡಿಟ್ ಸ್ಕೋರ್ ಬಹಳ ಮುಖ್ಯ. ಕ್ರೆಡಿಟ್ ಸ್ಕೋರ್ ಕಡಿಮೆಯಾದರೆ ಸಾಲ ಸುಲಭವಾಗಿ ಸಿಗುವುದಿಲ್ಲ. ಕ್ರೆಡಿಟ್ ಕಾರ್ಡ್ ಬಿಲ್ ಪಾವತಿ ಸಮಯಕ್ಕೆ ಸರಿಯಾಗಿ ಸಾಧ್ಯವಿಲ್ಲ ಎನ್ನುವವರು ಯಾವುದೇ ಕಾರಣಕ್ಕೂ ಕ್ರೆಡಿಟ್ ಕಾರ್ಡ್ ಮೂಲಕ ವಹಿವಾಟು ನಡೆಸಬೇಡಿ. 
 

click me!