ಲಾಕ್‌ಡೌನ್ ಸಡಿಲಿಕೆಯಾದರೂ ಕೊರೋನಾ ವೈರಸ್ ಆರ್ಭಟವೇನು ಕಡಿಮೆಯಾಗಿಲ್ಲ. ಇತ್ತ ಉದ್ಯಮಗಳು ಚೇತರಿಕೆ ಕಂಡಿಲ್ಲ. ಇಷ್ಟು ದಿನ ಹೇಗೋ ತಳ್ಳಿದ ಕಂಪನಿಗಳು ಇದೀಗ ನಷ್ಠ ತಾಳಲಾರದೆ ಬಾಗಿಲು ಮುಚ್ಚುತ್ತಿವೆ. ಇದೀಗ ಉಬರ್ ಕಂಪನಿ ಮುಂಬೈ ಕಚೇರಿಯನ್ನು ಮುಚ್ಚಿದೆ.
ಮುಂಬೈ(ಜು.04): ಕೊರೋನಾ ವೈರಸ್ ಹೊಡೆತಕ್ಕೆ ಹಲವು ಕಂಪನಿಗಳು ಈಗಾಗಲೇ ಬಾಗಿಲು ಮುಚ್ಚಿದೆ. ಇನ್ನು ಬಹುತೇಕ ಕಂಪನಿಗಳು ಆರ್ಥಿಕ ನಷ್ಟದಲ್ಲೇ ನಡೆಯುತ್ತಿದೆ. ಇದೀಗ ಕೊರೋನಾ ವೈರಸ್ ಕಾರಣ ಸಾರಿಗೆ ವ್ಯವಸ್ಥೆಗೆ ತೀವ್ರ ಹೊಡೆತ ನೀಡಿದೆ. ಇದೀಗ ಉಬರ್ ಟ್ಯಾಕ್ಸಿ ಸರ್ವೀಸ್ ಮುಂಬೈನ ಕಚೇರಿಯನ್ನು ಮುಚ್ಚಿದೆ. ಆದರೆ ಮುಂಬೈ ಗ್ರಾಹಕರಿಗೆ ಯಾವುದೇ ಸಮಸ್ಯೆ ಎದುರಾಗದಂತೆ ನೋಡಿಕೊಳ್ಳಲಾಗುವುದು ಎಂದು ಉಬರ್ ಸ್ಪಷ್ಟಪಡಿಸಿದೆ.
ಇಂದಿನಿಂದ ಆಟೋ, ಕ್ಯಾಬ್, ಟ್ಯಾಕ್ಸಿ ಸೇವೆ ಶುರು!...
ಕೊರೋನಾ ವೈರಸ್ ಬಳಿಕ ಉಬರ್ ಕಂಪನಿ ಕೆಲ ಮಹತ್ವದ ನಿರ್ಧಾರ ಕೈಗೊಂಡಿದೆ. ಇದರ ಪ್ರಕಾರ ವೆಚ್ಚ ಹಾಗೂ ಉದ್ಯೋಗಿಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ. ಇದಕ್ಕಾಗಿ ವಿಶ್ವದಲ್ಲಿ ಒಟ್ಟು 45 ಕಚೇರಿಗಳನ್ನು ಮುಚ್ಚಲಾಗುತ್ತಿದೆ. ಇದರ ಭಾಗವಾಗಿ ಇದೀಗ ಮುಂಬೈ ಕಚೇರಿಗೆ ಬೀಗಿ ಬಿದ್ದಿದೆ.
ಇವತ್ತು ನಿಮ್ಮ ಕೊನೆಯ ದಿನ; ವಿಡಿಯೋ ಕಾಲ್ ಮಾಡಿ 3700 ಮಂದಿ ಉದ್ಯೋಗದಿಂದ ತೆಗೆದು ಹಾಕಿದ ಉಬರ್
ಕೊರೋನಾ ವೈರಸ್ ವಕ್ಕರಿಸಿದ ಬಳಿಕ ಮುಂಬೈ ಕಚೇರಿಯಲ್ಲಿನ ಬಹುತೇಕರು ಮನೆಯಿಂದ ಕೆಲಸ ಮಾಡಲು ಅವಕಾಶ ಮಾಡಿಕೊಡಲಾಗಿದೆ. ಇದೀಗ ಮುಂಬೈ ಕಚೇರಿ ಮುಚ್ಚಲಾಗಿರುವ ಕಾರಣ, ಕೆಲ ಉದ್ಯೋಗ ಕಡಿತವಾಗಲಿದೆ. ಸದ್ಯ ಉಬರ್ ಮುಂಬೈ ಕಚೇರಿಯಲ್ಲಿ ಉದ್ಯೋಗ ಕಡಿತ ಮಾಡಲಾಗಿಲ್ಲ. ಲಾಕ್‌ಡೌನ್ ಸಂದರ್ಭದಲ್ಲೇ ಉಬರ್ ಭಾರತದಲ್ಲಿ 600 ಮಂದಿಯ ಉದ್ಯೋಗ ಕಡಿತಗೊಳಿಸುವ ಸೂಚನೆ ನೀಡಿತ್ತು
ವಿಶ್ವದಲ್ಲೇ ಉಬರ್ ಒಟ್ಟು 6,700 ಮಂದಿ ಉದ್ಯೋಗ ಕಡಿತ ಮಾಡುವುದಾಗಿ ಹೇಳಿದೆ. ಕಂಪನಿ ಚೇತರಿಸಿಕೊಳ್ಳುವವರೆಗೆ ಇದೇ ಪರಿಸ್ಥಿತಿ ಮುಂದುವರಿಯಲಿದೆ ಎಂದು ಉಬರ್ ಹೇಳಿದೆ.