ರಾಜಕೀಯ ಏರಿಳಿತಗಳ ಮಧ್ಯೆ ದೋಸ್ತಿ ಬಜೆಟ್ ಆರಂಭ| ವಿಧಾನಸಭೆಯಲ್ಲಿ ಬಜೆಟ್ ಮಂಡಿಸುತ್ತಿರುವ ಸಿಎಂ ಕುಮಾರಸ್ವಾಮಿ| ಚುನಾವಣೆ ಹಿನ್ನೆಲೆಯಲ್ಲಿ ಎಲ್ಲಾ ಧರ್ಮ, ಸಮುದಾಯಗಳಿಗೆ ಭರಪೂರ ಕೊಡುಗೆ| ರಾಜ್ಯದ ಮಠ ಮಾನ್ಯಗಳಿಗೆ ಅನುದಾನದ ಹೊಳೆ|
ಬೆಂಗಳೂರು(ಫೆ.08): ಹಲವು ರಾಜಕೀಯ ಏಳುಬೀಳುಗಳ ಮಧ್ಯೆಯೇ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿ ಮೈತ್ರಿ ಸರ್ಕಾರದ ಬಜೆಟ್ ಮಂಡಿಸುತ್ತಿದ್ದಾರೆ.
ಇನ್ನು ಲೋಕಸಭೆ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯದ ವಿವಿಧ ಧರ್ಮ ಮತ್ತು ಸಮುದಾಯಗಳ ಮಠ ಮಾನ್ಯಗಳಿಗೆ ಭರಪೂರ ಕೊಡುಗೆ ನೀಡಲಾಗಿದೆ.
ಅದರಂತೆ ಮಠ ಮಾನ್ಯಗಳಿಗೆ ದೋಸ್ತಿ ಸರ್ಕಾರ ನೀಡಿರುವ ಆದ್ಯತೆಯತ್ತ ಗಮನಹರಿಸುವುದಾದರೆ...
1. ರಾಜ್ಯ ಕುಂಚಿಟಿಗರ- ಒಕ್ಕಲಿಗರ ಸಂಘದ ಅಭಿವೃದ್ಧಿಗೆ ತಲಾ 2 ಕೋಟಿ ರೂ. ಅನುದಾನ.
2. ಮಂಡ್ಯದ ಕರ್ನಾಟಕ ಸಂಘ, ಜಾನಪದ ಪರಿಷತ್, ಮಲೇಬೆನ್ನೂರಿನ ವೀರಭದ್ರೇಶ್ವರ ಟ್ರಸ್ಟ್ಗೆ ತಲಾ 1 ಕೋಟಿ ರೂ.
3. ತಿಪಟೂರಿನಲ್ಲಿ ಹಾಸ್ಯ ಚಕ್ರವರ್ತಿ ನರಸಿಂಹರಾಜು ಹೆಸರಿನಲ್ಲಿ ಸ್ಮಾರಕ ಸಭಾಮಂದಿರ ನಿರ್ಮಾಣಕ್ಕೆ 2 ಕೋಟಿ ಅನುದಾನ.
4. ಜಾನಪದ ಜಾತ್ರೆಗೆ ಮರು ಜೀವ.
5. ಬೆಂಗಳೂರು ಸೇರಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಜಾನಪದ ಜಾತ್ರೆ ಆಯೋಜನೆ.
6. ಜಾನಪದ ಜಾತ್ರೆ ಆಯೋಜಿಸಲು 2 ಕೋಟಿ ರೂ. ಅನುದಾನ.
7. ಸಿದ್ಧಗಂಗಾಶ್ರೀಗಳ ಹುಟ್ಟೂರು ವೀರಾಪುರದಲ್ಲಿ ವಿಶ್ವ ದರ್ಜೆಯ ಸಾಂಸ್ಕೃತಿಕ, ಪಾರಂಪರಿಕ ಕೇಂದ್ರ ಸ್ಥಾಪನೆ.
8. ವೀರಾಪುರ ಗ್ರಾಮಕ್ಕೆ ವಿಶೇಷ 25 ಕೋಟಿ ರೂ. ಅನುದಾನ.
9. ಬಾಲಗಂಗಾಧರ ಸ್ವಾಮೀಜಿ ಹುಟ್ಟೂರು ಬಿಡದಿಯ ಬಾಣಂದೂರು ಮಾದರಿ ಗ್ರಾಮವಾಗಿ ಅಭಿವೃದ್ಧಿ.
10. ಶ್ರೀಗಳ ಜೀವನ ಸಾಧನೆ ಸಾರುವ ಪಾರಂಪರಿಕ ಕೇಂದ್ರ ಸ್ಥಾಪನೆಗೆ 25 ಕೋಟಿ ರೂ.
11. ನಾಡಪ್ರಭು ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ 5 ಕೋಟಿ ರೂ.
12. ಕೊಡವ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ.
13. ಬೀದರ್ನ ಐತಿಹಾಸಿಕ ಗುರುನಾನಕ್ ಜೀರಾ ಗುರುದ್ವಾರಕ್ಕೆ 10 ಕೋಟಿ.
14. ಬೆಂಗಳೂರಿನ ಹಲಸೂರಿನ ಗುರುದ್ವಾರಕ್ಕೆ 25 ಕೋಟಿ ರೂ. ಅನುದಾನ.
15. ಕ್ರೈಸ್ತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕ್ರೈಸ್ತ ಅಭಿವೃದ್ಧಿ ನಿಗಮ ಸ್ಥಾಪನೆ- 200 ಕೋಟಿ ಅನುದಾನ.
16. ಮೌಲಾನಾ ಆಜಾದ್ ಟ್ರಸ್ಟ್ ಸ್ಥಾಪನೆಗೆ 25 ಕೋಟಿ ರೂ. ಅನುದಾನ.
17. ರಾಜ್ಯದ 5 ಜಿಲ್ಲೆಗಳಲ್ಲಿ ಮುಸ್ಲಿಂ ಹೆಣ್ಣು ಮಕ್ಕಳ ವಸತಿ ಶಾಲೆ ಆರಂಭಕ್ಕೆ 20 ಕೋಟಿ.
18. ದಾವಣಗೆರೆ, ತುಮಕೂರು, ಧಾರವಾಡ, ಗದಗ, ಕಲಬುರಗಿಯಲ್ಲಿ ಮುಸ್ಲಿಂ ಹೆಣ್ಮಕ್ಕಳ ಹಾಸ್ಟೆಲ್.
19. ಮುಸ್ಲಿಂ ಖಬರ್ಸ್ತಾನಗಳಲ್ಲಿ ಮೂಲ ಸೌಲಭ್ಯ ಅಭಿವೃದ್ಧಿಗೆ 10 ಕೋಟಿ ರೂ. ಅನುದಾನ.
20. ಅಲ್ಪಸಂಖ್ಯಾತರ ಮೂಲ ಸೌಲಭ್ಯ ಅಭಿವೃದ್ಧಿಗೆ 400 ಕೋಟಿ ರೂ.
21. ವಿಶ್ವಕರ್ಮ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ. ಅನುದಾನ.
22. ಮಾಲೂರು ತಾಲೂಕಿನ ಶಿವಾರಪಟ್ಟಣದಲ್ಲಿ ಅಮರಶಿಲ್ಪಿ ಜಕಣಾಚಾರಿ ಶಿಲ್ಪಕಲಾ ಕೇಂದ್ರ.
23. ಶಿಲ್ಪಕಲಾ ಕೇಂದ್ರ ಸ್ಥಾಪನೆಗೆ 10 ಕೋಟಿ ಅನುದಾನ
24. ಮಡಿವಾಳ ಮಾಚಿದೇವ ಅಭಿವೃದ್ದಿ ನಿಗಮಕ್ಕೆ 25 ಕೋಟಿ ರೂ.
25. ಸವಿತಾ ಸಮಾಜ ಅಭಿವೃದ್ಧಿ ನಿಗಮ ಸ್ಥಾಪನೆಗೆ ಕ್ರಮ.
26. ಹಿಂದುಳಿದ ವರ್ಗಕ್ಕೆ ಸೇರಿದ ಸೂಕ್ಷ್ಮ ಸಮುದಾಯಗಳ ಅಭಿವೃದ್ದಿಗೆ 134 ಕೋಟಿ.