
ನವದೆಹಲಿ: ಭಾರತದ ಜನಪ್ರಿಯ ಬೇಕರಿ ಚೈನ್ Theobroma ಇದೀಗ ಪ್ರೈವೇಟ್ ಈಕ್ವಿಟಿ ಫರ್ಮ್ ಕ್ರಿಸ್‌ಕ್ಯಾಪಿಟಲ್ (ChrysCapital) ಒಡೆತನಕ್ಕೆ ಸೇರಿದೆ. ಇಕಾನಮಿಕ್ಸ್ ಟೈಮ್ಸ್ ವರದಿ ಪ್ರಕಾರ, ಚೈನ್ ಥಿಯೋಬ್ರೊಮಾ ಬೇಕರಿಯ ಶೇ.90ರಷ್ಟು ಪಾಲುದಾರಿಕೆಯನ್ನು 2,410 ಕೋಟಿ ರೂ.ಗಳಿಗೆ ಕ್ರಿಸ್ ಕ್ಯಾಪಿಟಲ್ ಖರೀದಿಸಿದೆ. ಈ ಪಾಲುದಾರಿಕೆಯನ್ನ Theobromaದ ಪ್ರಮೋಟರ್ಸ್ ಮತ್ತು ICICI ವೆಂಚರ್ ಮೂಲಕ ಖರೀದಿಸಲಾಗಿದೆ. ಚೈನ್ Theobroma ಕಂಪನಿ ಸ್ಥಾಪಕರ ಕುಟುಂಬ ಶೇ.10ರಷ್ಟು ಪಾಲುದಾರಿಕೆಯನ್ನು ತನ್ನ ಬಳಿಯಲ್ಲಿಯೇ ಉಳಿಸಿಕೊಂಡಿದೆ. ICICI ವೆಂಚರ್ ಬಳಿ ಸಸ್ಯ ಶೇ.42ರಷ್ಟು ಪಾಲುದಾರಿಕೆಯನ್ನು ಹೊಂದಿದ್ದು, 2017ರಲ್ಲಿ 130 ಕೋಟಿ ರೂ.ಗಳಿಗೆ ಖರೀದಿಸಲಾಗಿತ್ತು.
ಈ ಮೊದಲು ಚೈನ್ ಥಿಯೋಬ್ರೊಮಾ ಕಂಪನಿಯ ಮೌಲ್ಯವನ್ನು 3 ಸಾವಿರ ಕೋಟಿಗೆ ಮಾಡಲಾಗಿತ್ತು. ಆದ್ರೆ ಹಣಕಾಸಿನ ವ್ಯವಹಾರದಲ್ಲಿ ಸಾಧಾರಣ ಪ್ರದರ್ಶನದಿಂದಾಗಿ ಕಂಪನಿಯ ವ್ಯಾಲೋಶನ್ ಕಡಿಮೆಯಾಗಿತ್ತು. ನಂತರ ಕೆಲ ವಾರಗಳ ನಂತರ 2,410 ಕೋಟಿ ರೂ.ಗೆ ಕಂಪನಿಯನ್ನು ವ್ಯಾಲೋಷನ್ ಮಾಡಲಾಯ್ತು. ವರದಿಗಳ ಪ್ರಕಾರ ಈ ಮೊತ್ತವನ್ನು ಕಡಿಮೆ ಮೌಲ್ಯಮಾಪನ ಎಂದು ಹೇಳಲಾಗುತ್ತಿದೆ. ಆದ್ರೂ ಫುಡ್ ಆಂಡ್ ಕೆಫೆ ಸೆಕ್ಟರ್‌ನಲ್ಲಿ ಇಂದೊಂದು ಪಾಸಿಟಿವ್ ಬೆಳವಣಿಗೆ ಎಂದು ವಿಶ್ಲೇಷಿಸಲಾಗುತ್ತಿದೆ. ಫುಡ್ ಆಂಡ್ ಕೆಫೆ ರೆಸ್ಟೋರೆಂಟ್ ಉದ್ಯಮ ಮಾರುಕಟ್ಟೆ ಏರಿಳಿತದಿಂದ ಕುಸಿತ ಕಂಡಿತ್ತು. ಇಂತಹ ಸಂದರ್ಭದಲ್ಲಿ ಇಷ್ಟು ದೊಡ್ಡಮಟ್ಟದ ವ್ಯವಹಾರ ಉದ್ಯಮದಲ್ಲಿ ಚೇತರಿಕೆ ಕಾಣುವ ಭರವಸೆಯನ್ನು ಮೂಡಿಸಿದೆ.
Theobroma ಖರೀದಿಸಲು Bain Capital, Carlyle ಮತ್ತು Monginisನ ಮಾಲೀಕ Switz Group ಸೇರಿದಂತೆ ದೊಡ್ಡ ಉದ್ದಿಮೆದಾರರು ಆಸಕ್ತಿ ತೋರಿಸಿದ್ದರು. ಕೊನೆಗೆ ChrysCapital ಈ ಡೀಲ್‌ನ್ನು ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ChrysCapital ಈ ಕಂಪನಿಯನ್ನು ಕ್ಯೂಎಸ್‌ಆರ್ (Quick Service Restaurant) ಪ್ಲಾಟ್‌ಫಾರಂ ಮಾಡುವ ಉದ್ದೇಶವನ್ನು ಹೊಂದಿದೆ. Theobroma ಮತ್ತು The Belgian Waffle Co. ಅಂತಹ ಕಂಪನಿಗಳಲ್ಲಿ ಬಂಡವಾಳ ಹೂಡಿಕೆ ಮಾಡಿ ಫುಡ್ ಸೆಕ್ಟರ್‌ನಲ್ಲಿ ತನ್ನದೇ ಆದ ಸಾಮ್ರಜ್ಯವನ್ನು ಸ್ಥಾಪಿಸುವ ಗುರಿಯನ್ನು ChrysCapital ಹೊಂದಿದೆ.
ಹೇಗಿದೆ Theobroma ಹಣಕಾಸಿನ ಸ್ಥಿತಿಗತಿ?
Theobromaದ 20 ವರ್ಷದ ಪಯಣ
ಕೆನಾಜ್ ಮೆಸ್ಮೆನ್ ಹರ್ಚಂದ್ರಾಯ್ ಮತ್ತು ಅವರ ಸೋದರಿ ಟೀನಾ ಮೆಸ್ಮೆನ್ ವ್ಯಾಕ್ಸ್ ಜೊತೆಯಾಗಿ ಈ ಬೇಕರಿಯನ್ನು ಆರಂಭಿಸಿದ್ದರು. ಕೆನಾಜ್ ಅವರು ಲಂಡನ್‌ನ ಪ್ರಸಿದ್ಧ ‘Le Cordon Bleu’ ಬೇಕಿಂಗ್‌ನಿಂದ ತರಬೇತಿ ಪಡೆದುಕೊಂಡಿದ್ದರು. ಇಲ್ಲಿ ತರಬೇತಿ ಪಡೆದುಕೊಂಡ ನಂತರ ಒಬೇರಾಯ್ ಆದಿತ್ಯವಿಲಾಸ್ ಹೋಟೆಲ್‌ನಲ್ಲಿ ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ್ದರು. 2020ರ The Theobroma Story: Baking a Dream ಪುಸ್ತಕದಲ್ಲಿ ತಾವು ಬೇಕರಿ ಆರಂಭಿಸಿದ ಕುರಿತು ಕೆನಾಜ್ ಬರೆದುಕೊಂಡಿದ್ದಾರೆ. ಒಮ್ಮೆ ಕೆನಾಜ್ ಗಾಯಗೊಂಡಿದ್ದರಿಂದ ಶೆಫ್ ಕೆಲಸವನ್ನು ಬಿಡಬೇಕಾಯ್ತು. ಈ ವೇಳೆ ತಮ್ಮದೇ ಸ್ವಂತ ಬೇಕರಿ ಆರಂಭಿಸುವ ಕನಸನ್ನು ಕಂಡಿದ್ದರು. ತರಬೇತಿ ಮತ್ತು ಅನುಭವ ಹೊಂದಿದ್ದರೂ ಬೇಕರಿ ಆರಂಭಿಸುವಷ್ಟು ಆರ್ಥಿಕವಾಗಿ ಸದೃಢವಾಗಿರಲಿಲ್ಲ.
ಕೆನಾಜ್ ಅವರಿಗೆ ಬೇಕರಿ ಆರಂಭಿಸಲು ಅವರ ತಂದೆ 1.5 ಕೋಟಿ ರೂ. ಸಹಾಯ ಮಾಡಿದ್ದರು. ಬೇಕರಿ ಆರಂಭಿಸೋದು ದೊಡ್ಡ ಮಾತು ಆಗಿರಲಿಲ್ಲ. ಮನೆಯಲ್ಲಿಯೂ ನಾನು ಬೇಕಿಂಗ್ ಮಾಡುತ್ತಿದ್ದೆ. ಆದರೆ ದೊಡ್ಡಮಟ್ಟದಲ್ಲಿ ಬೇಕರಿ ಆರಂಭಿಸುವುದು ಸವಾಲು ಆಗಿತ್ತು ಎಂದು ಕೆನಾಜ್ ತಮ್ಮ ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
2004ರಲ್ಲಿ ಮುಂಬೈನ ಕೊಲ್ಬಾ ಎಂಬ ಪ್ರದೇಶದಲ್ಲಿ ಕೆನಾಜ್ ಅವರ ಮೊದಲ ಬೇಕರಿ ಆರಂಭವಾಯ್ತು. ಕೆನಾಜ್ ಗೆಳಯರೊಬ್ಬರು ಬೇಕರಿಗೆ Theobroma ಹೆಸರು ಸೂಚಿಸಿದ್ದರು. ಗ್ರೀಕ್ ಭಾಷೆಯಲ್ಲಿ Theos ಅಂದ್ರೆ ದೇವರು ಮತ್ತು broma ಅಂದ್ರೆ ಊಟ ಎಂದರ್ಥವಾಗುತ್ತದೆ. Theobromaದ ಪೂರ್ಣ ಅರ್ಥ ದೇವತೆಗಳ ಊಟ ಎಂಬರ್ಥ ಬರುತ್ತದೆ. ಈ ಸಮಯದಲ್ಲಿ ಬೇಕರಿ ಉತ್ಪನ್ನಗಳಿಗೆ ಹೆಚ್ಚು ಬೇಡಿಕೆ ಇರಲಿಲ್ಲ. ನಂತರ ಸೋದರಿ ಟೀನಾ ಜೊತೆಗೂಡಿ ಯುರೋಪಿಯನ್ ಮಾದರಿ ಬೇಕರಿ ಉತ್ಪನ್ನ ತಯಾರಿಸಿ ಮಾರಾಟ ಮಾಡಲು ಮುಂದಾದರು. ಉತ್ಪನ್ನದ ಗುಣಮಟ್ಟದಲ್ಲಿ ಕೆನಾಜ್ ಮತ್ತು ಟೀನಾ ಎಂದಿಗೂ ರಾಜಿ ಮಾಡಿಕೊಳ್ಳದ ಕಾರಣ Theobroma ಇಂದು 2 ಸಾವಿರ ಕೋಟಿ ಮೌಲ್ಯವನ್ನು ಹೊಂದಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.