
ಎಲ್ಲ ರೀತಿಯ ಉತ್ಪನ್ನಗಳು ಅಮೇಜಾನ್‌ನಲ್ಲಿ ಸಿಗುತ್ತವೆ. ಆದರೂ, ಮೀಶೋ, ಶಾಪ್ಸಿಯಂಥ ಆ್ಯಪ್‌ಗಳು ಬಹಳ ಕಡಿಮೆ ಬೆಲೆಗೆ ವಸ್ತುಗಳು ಕೈಗೆಟುಕುವಂತೆ ಮಾಡಿ ಖ್ಯಾತಿ ಪಡೆದವು. ಇದೀಗ ಈ ಸ್ಪರ್ಧೆ ಎದುರಿಸಲು ಅಮೇಜಾನ್ ಇಂಡಿಯಾವು 'ಅಮೇಜಾನ್ ಬಜಾರ್' ಲಾಂಚ್ ಮಾಡಿದೆ. ಈ ಇ-ಕಾಮರ್ಸ್ ಸೈಟ್‌ನಲ್ಲಿ ಉತ್ಪನ್ನಗಳು 600 ರೂ.ಗಿಂತಲೂ ಕಡಿಮೆ ಬೆಲೆಯಲ್ಲಿ ದೊರಕುತ್ತವೆ.
ಕೈಗೆಟುಕುವ ಬೆಲೆಯ, ಬ್ರಾಂಡ್ ಇಲ್ಲದ ಫ್ಯಾಷನ್ ಮತ್ತು ಜೀವನಶೈಲಿ ಉತ್ಪನ್ನಗಳ ಆಕರ್ಷಕ ಶ್ರೇಣಿಯನ್ನು ಅಮೇಜಾನ್ ಬಜಾರ್ ಪ್ರದರ್ಶಿಸಲಿದೆ. ಭಾರತೀಯ ಗ್ರಾಹಕರ ವೈವಿಧ್ಯಮಯ ಅಗತ್ಯಗಳು ಮತ್ತು ಆದ್ಯತೆಗಳನ್ನು ಪೂರೈಸುವ ಬಜಾರ್ ಶೈಲಿ ಇದೆಂದು ಕಂಪನಿಯು ಭರವಸೆ ನೀಡಿದೆ. ಗುಣಮಟ್ಟ ಅಥವಾ ಶೈಲಿಯಲ್ಲಿ ರಾಜಿ ಮಾಡಿಕೊಳ್ಳದೆ ಬಜೆಟ್ ಸ್ನೇಹಿ ಆಯ್ಕೆಗಳನ್ನು ಒದಗಿಸುವುದರ ಮೇಲೆ ಗಮನ ಹರಿಸಿರುವುದಾಗಿ ಅಮೇಜಾನ್ ಹೇಳಿದೆ.
ಅಮೆಜಾನ್ ಇಂಡಿಯಾದ ಆಂಡ್ರಾಯ್ಡ್ ಅಪ್ಲಿಕೇಶನ್ ಮೂಲಕವೇ ಬಜಾರ್‌ಗೆ ಪ್ರವೇಶಿಸಬಹುದಾಗಿದೆ. ಇ-ಕಾಮರ್ಸ್ ಸೈಟ್ 600 ರೂ.ಗಿಂತ ಕಡಿಮೆ ಬೆಲೆಯ ಬಟ್ಟೆ, ಕೈಗಡಿಯಾರಗಳು, ಬೂಟುಗಳು, ಆಭರಣಗಳು ಮತ್ತು ಬ್ಯಾಗ್‌ಗಳು ಸೇರಿದಂತೆ ಬ್ರಾಂಡ್ ಮಾಡದ ಉತ್ಪನ್ನಗಳನ್ನು ಪಟ್ಟಿ ಮಾಡಲು ಮಾರಾಟಗಾರರನ್ನು ಆಯ್ಕೆ ಮಾಡಿದೆ. ಪ್ರೈಮ್ ಸದಸ್ಯರಿಗೆ ಅಂದಾಜು ವಿತರಣಾ ಸಮಯವು 4-5 ದಿನಗಳು.
ಗ್ರಾಹಕರು, ವಿಶೇಷವಾಗಿ ಭಾರತದಾದ್ಯಂತ ಇರುವ ಉತ್ಪಾದನಾ ಕೇಂದ್ರಗಳಿಂದ ಮಾರಾಟಗಾರರು ನೀಡುವ ಸಮಂಜಸವಾದ ಬೆಲೆಯ ಮನೆ ಮತ್ತು ಫ್ಯಾಶನ್ ವಸ್ತುಗಳನ್ನು ಹುಡುಕಬಹುದು ಮತ್ತು ಖರೀದಿಸಬಹುದು ಎಂದು ಕಂಪನಿ ಹೇಳಿದೆ.
ಸಾಯಿಪಲ್ಲವಿ ಅಭಿನಯದ ಈ 6 ಚಿತ್ರಗಳನ್ನು ಖಂಡಿತಾ ಮಿಸ್ ಮಾಡ್ಕೋಬೇಡಿ!
ಹೊಸ ಭಾರತೀಯ ಗ್ರಾಹಕರನ್ನು ತಲುಪಲು ಅಮೆಜಾನ್‌ಗೆ ಬಜಾರ್ ಒಂದು ಮಾರ್ಗವನ್ನು ನೀಡುವ ಸಾಧ್ಯತೆಯಿದೆ. ನಗರಗಳಲ್ಲಿ ವಾಸಿಸುವವರು ಮತ್ತು ಪ್ರೈಮ್ ಸದಸ್ಯರಾಗಿರುವವರು ಅಮೆಜಾನ್ ಇಂಡಿಯಾವನ್ನು ಹೆಚ್ಚು ಆಯ್ಕೆ ಮಾಡುತ್ತಾರೆ. ಏಕೆಂದರೆ ಇದು ಸ್ಟ್ರೀಮಿಂಗ್ ವೀಡಿಯೊ ಮತ್ತು ಸಂಗೀತದ ಜೊತೆಗೆ ವೇಗದ ವಿತರಣೆಯನ್ನು ಒದಗಿಸುತ್ತದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.