ತಿಂಗಳ ಸಂಬಳ ಎಣಿಸುವವರಿಗೆ ಗುಡ್ ನ್ಯೂಸ್ ಕೊಟ್ಟ ಹೈಕೋರ್ಟ್!

By Web DeskFirst Published Nov 19, 2018, 8:25 PM IST
Highlights

ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಕಿರಿಕಿರಿ ಇನ್ನಿಲ್ಲ! ಆಧಾರ್ ಲಿಂಕ್ ಮಾಡದ್ದಕ್ಕೆ ವೇತನ ತಡೆ ಹಿಡಿಯುವಂತಿಲ್ಲ! ಬಾಂಬೆ ಹೈಕೋರ್ಟ್‌ನಿಂದ ಮಹತ್ವದ ತೀರ್ಪು! ಬ್ಯಾಂಕ್ ಖಾತೆಗೆ ಆಧಾರ್ ಲಿಂಕ್ ಮಾಡುವುದು ಕಡ್ಡಾಯವಲ್ಲ! ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿದ ಬಾಂಬೆ ಹೈಕೋರ್ಟ್

ಮುಂಬೈ(ನ.19): ಓರ್ವ ವ್ಯಕ್ತಿಯ ವೇತನದ ಖಾತೆಗೆ ಆಧಾರ್ ಸಂಪರ್ಕ ಮಾಡಿಲ್ಲ ಎಂಬ ಕಾರಣಕ್ಕೆ ಆತನ ಸಂಬಳವನ್ನು ತಡೆಹಿಡಿದಿಡುವುದು ಎಷ್ಟು ಸರಿ ಎಂದು ಬಾಂಬೆ ಹೈಕೋರ್ಟ್ ಕೇಂದ್ರಕ್ಕೆ ಪ್ರಶ್ನೆ ಮಾಡಿದೆ.

ಪೋರ್ಟ್ ಟ್ರಸ್ಟ್ ಉಯೋಗಿಯೊಬ್ಬರು ತಮ್ಮ ಸಂಬಳದ ಖಾತೆಗೆ ಆಧಾರ್ ಸಂಖ್ಯೆಯನ್ನು ಲಿಂಕ್ ಮಾಡಿಲ್ಲದ ಕಾರಣ ಅವರಿಗೆ 2016ರಿಂದಲೂ ವೇತನ ಪಾವತಿ ಮಾಡಿಲ್ಲ. ಈ ಕುರಿತಂತೆ ಉದ್ಯೋಗಿಯು ಕೋರ್ಟ್ ಮೊರೆ ಹೋಗಿದ್ದು ಇದೀಗ ನ್ಯಾಯಾಲಯ ಕಳೆದ ಸಪ್ಟೆಂಅರ್ ನಲ್ಲಿ ಆಧಾರ್ ಕುರಿತಂತೆ ಸುಪ್ರೀಂ ತೀರ್ಪನ್ನು ಉಲ್ಲೇಖಿಸಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

ನ್ಯಾಯಮೂರ್ತಿ ಎ.ಎಸ್. ಓಕಾ ಮತ್ತು ಎಸ್.ಕೆ. ಶಿಂಧೆ ಅವರನ್ನೊಳಗೊಂಡ ನ್ಯಾಯಪೀಠ ಈ ಸಂಬಂಧ ವಿಚಾರಣೆ ನಡೆಸಿದೆ. ಮುಂಬೈ ಪೋರ್ಟ್ ಟ್ರಸ್ಟ್ ನಲ್ಲಿ ಚಾರ್ಟರ್ಡ್ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ರಮೇಶ್ ಪುರಲೆ ಈ ಸಂಬಂಧ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.

ರಮೇಶ್ ತಮ್ಮ ಬ್ಯಾಂಕ್ ಖಾತೆಯನ್ನು ತನ್ನ ಆಧಾರ್ ಕಾರ್ಡ್ ಜೊತೆ ಲಿಂಕ್ ಮಾಡಲು ವಿಫಲವಾದ ಬಳಿಕ ಅವರ ವೇತನವನ್ನು ತಡೆ ಹಿಡಿಯಲಾಗಿತ್ತು. ಈ ಹಿನ್ನೆಲೆಯಲ್ಲಿ ರಮೇಶ್ ನ್ಯಾಯಾಲಯದ ಮೊರೆ ಹೋಗಿದ್ದರು.

ಕಳೆದ ಸೆಪ್ಟೆಂಬರ್ 26ರಂದು ಸುಪ್ರೀಂ ಕೋರ್ಟ್ ಆಧಾರ್ ಸಂಬಂಧಿಸಿ ಮಹತ್ವದ ತೀರ್ಪು ಪ್ರಕಟಿಸಿ ಕೇಂದ್ರದ ಬಯೋಮೆಟ್ರಿಕ್ ಯೋಜನೆಯಾದ ಆಧಾರ್ ಮಾನ್ಯತೆಯನ್ನು ಸೀಮಿತ ವಲಯಗಳಿಗೆ ಮಾತ್ರವೇ ಕಡ್ಡಾಯಗೊಳಿಸಿದೆ. ಇದೇ ವೇಳೆ ಬ್ಯಾಂಕ್ ಖಾತೆ, ಶಾಲಾ ಪ್ರವೇಶ ಹಾಗೂ ಮೊಬೈಲ್ ಸಿಮ್ ಖರೀದಿಗಾಗಿ ಆಧಾರ್ ಕಡ್ಡಾಯವಲ್ಲ ಎಂದು ನ್ಯಾಯಾಲಯ ಸ್ಪಷ್ಟವಾಗಿ ಹೇಳಿತ್ತು.

ಇದೀಗ ಸರ್ವೋಚ್ಚ ನ್ಯಾಯಾಲಯದ ಈ ತೀರ್ಪಿನ ಆಧಾರದಲ್ಲಿ ಬಾಂಬೆ ಹೈಕೋರ್ಟ್ ಅರ್ಜಿದಾರರಿಗೆ ಬಾಕಿ ಪಾವತಿಸಲು ಸರ್ಕಾರಕ್ಕೆ ಸೂಚನೆ ನೀಡಿದೆ.

click me!