
ನವದೆಹಲಿ(ಆ.02): ವಾರ್ಷಿಕ 5 ಕೋಟಿಗಿಂತಲೂ ಹೆಚ್ಚು ವಹಿವಾಟು ನಡೆಸಿ ಜಿಎಸ್‌ಟಿ ತೆರಿಗೆ ಕಟ್ಟುವ ಉದ್ಯಮಿಗಳು ಇನ್ನು ಮುಂದೆ, ಲೆಕ್ಕ ಪರಿಶೋಧಕರಿಂದ (ಚಾರ್ಟೆಡ್ ಅಕೌಂಟೆಂಟ್) ಕಡ್ಡಾಯ ಲೆಕ್ಕ ಪರಿಶೋಧನೆ ವರದಿ ಸಲ್ಲಿಸುವ ಬದಲು ಸ್ವಯಂ ಪ್ರಮಾಣಪತ್ರ ಒದಗಿಸಿದರೆ ಸಾಕು ಎಂದು ಕೇಂದ್ರೀಯ ನೇರ ತೆರಿಗೆ ಮಂಡಳಿ ಪ್ರಕಟಿಸಿದೆ.
ಇದು ಸಣ್ಣ ಉದ್ಯಮಿಗಳಿಗೆ ಭಾರೀ ಪ್ರಮಾಣದಲ್ಲಿ ನೆರವಾಗಲಿದೆ ಎಂದು ಹೇಳಲಾಗಿದೆ.
ಹಾಲಿ ಇರುವ ನಿಯಮಗಳ ಪ್ರಕಾರ ವಾರ್ಷಿಕ 2 ಕೋಟಿ ರು.ವರೆಗೆ ವಹಿವಾಟು ನಡೆಸುವವರು ವಾರ್ಷಿಕ ಜಿಎಸ್‌ಟಿಆರ್-9/9ಎ ಸಲ್ಲಿಸುವುದು ಕಡ್ಡಾಯ.
ಇನ್ನು 5 ಕೋಟಿ ರು.ಗಿಂತ ಮೇಲ್ಪಟ್ಟವಹಿವಾಟು ನಡೆಸುವವರು ಜಿಎಸ್‌ಟಿಆರ್-9ಸಿ ಸಲ್ಲಿಸಬೇಕು. ಮತ್ತು ಈ ಲೆಕ್ಕಾಚಾರವನ್ನು ಲೆಕ್ಕ ಪರಿಶೋಧಕರಿಂದ ಪರಿಶೋಧನೆಗೆ ಒಳಪಡಿಸಿರಬೇಕಿತ್ತು. ಇದೀಗ ಈ ನಿಯಮವನ್ನು ಸರಳೀಕರಿಸಲಾಗಿದೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.