ಬಿಟ್‌ಕಾಯಿನ್‌ ಮೌಲ್ಯ 190000 ಡಾಲರ್‌ಗೆ: ಇದು 3 ವರ್ಷದ ಗರಿಷ್ಠ!

By Kannadaprabha News  |  First Published Nov 25, 2020, 8:03 AM IST

ಕ್ರಿಪ್ಟೋ ಕರೆನ್ಸಿಯಾದ ಬಿಟ್‌ಕಾಯಿನ್‌ನ ಮೌಲ್ಯ 19000 ಡಾಲರ್‌ಗೆ (14.21 ಲಕ್ಷ)ಗೆ ಏರಿದೆ. ಇದು ಬಿಟ್‌ಕಾಯಿನ್‌ನ 3 ವರ್ಷದ ಗರಿಷ್ಠ ಮೌಲ್ಯ| ವರ್ಷವೊಂದರಲ್ಲೇ ಬಿಟ್‌ಕಾಯಿನ್‌ ಮೌಲ್ಯ ಶೇ.160ರಷ್ಟುಏರಿಕೆ


ನವದೆಹಲಿ(ನ.25): ಕ್ರಿಪ್ಟೋ ಕರೆನ್ಸಿಯಾದ ಬಿಟ್‌ಕಾಯಿನ್‌ನ ಮೌಲ್ಯ 19000 ಡಾಲರ್‌ಗೆ (14.21 ಲಕ್ಷ)ಗೆ ಏರಿದೆ. ಇದು ಬಿಟ್‌ಕಾಯಿನ್‌ನ 3 ವರ್ಷದ ಗರಿಷ್ಠ ಮೌಲ್ಯವಾಗಿದೆ.

ಕೊರೋನಾ ಹಿನ್ನೆಲೆಯಲ್ಲಿ ಬಹುತೇಕ ದೇಶಗಳು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಹೂಡಿಕೆದಾರರು ಬಿಟ್‌ಕಾಯಿನ್‌ ಹೆಚ್ಚು ಸುರಕ್ಷಿತ ಎನ್ನುವ ಕಾರಣಕ್ಕೆ ಇದರತ್ತ ಮುಖ ಮಾಡುತ್ತಿದ್ಧಾರೆ ಎನ್ನಲಾಗಿದೆ.

Tap to resize

Latest Videos

undefined

ಹೀಗಾಗಿ ಈ ವರ್ಷವೊಂದರಲ್ಲೇ ಬಿಟ್‌ಕಾಯಿನ್‌ ಮೌಲ್ಯ ಶೇ.160ರಷ್ಟು ಏರಿಕೆಯಾಗಿದೆ. ಜೊತೆಗೆ ಶೀಘ್ರವೇ ಮೌಲ್ಯ ಸಾರ್ವಕಾಲಿಕ ದಾಖಲೆಯಾದ 20000 ಡಾಲರ್‌ ದಾಟಲಿದೆ ಎಂದು ವಿಶ್ಲೇಷಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸಾಮಾನ್ಯವಾಗಿ ಜಾಗತಿಕ ಆರ್ಥಿಕ ಮಾರುಕಟ್ಟೆಕುಸಿದಾಗ ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮುಖ ಮಾಡುತ್ತಿದ್ದರು, ಆದರೆ ಈ ಬಾರಿ ಬಿಟ್‌ಕಾಯಿನ್‌ನತ್ತ ಹೆಚ್ಚು ಒಲವು ತೋರಿದ್ದು ಅಚ್ಚರಿ ತಂದಿದೆ.

click me!