
ಬೆಂಗಳೂರು (ಸೆ.09) – ಭಾರತದ ಪ್ರತಿಷ್ಠಿತ ಆಭರಣ ಬ್ರ್ಯಾಂಡ್‌ಗಳಲ್ಲಿ ಒಂದಾಗಿರುವ ಭೀಮ, ರಾಸ ಲೀಲಾ ಎಂಬ ಆಭರಣ ಸಂಗ್ರಹವನ್ನು ಬಿಡುಗಡೆ ಮಾಡಿದೆ. ಈ ಸಂಗ್ರಹವು ಚಿನ್ನ, ವಜ್ರ ಹಾಗೂ ಅಮೂಲ್ಯ ರತ್ನಗಳಿಂದ ತಯಾರಿಸಲಾದ ಆಭರಣಗಳನ್ನೊಳಗೊಂಡಿದ್ದು , ರಾಧಾಕೃಷ್ಣರಿಂದ ಪ್ರೇರಿತ ವಿನ್ಯಾಸಗಳನ್ನು ಹೊಂದಿದೆ.
ರಾಸ ಲೀಲಾ ಸಂಗ್ರಹವು ರಾಧಾಕೃಷ್ಣರಿಂದ ನಿಧಿವನದಲ್ಲಿ ನಡೆದ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕತೆಯನ್ನೊಳಗೊಂಡ ರಾಸ ಲೀಲಾ ಕಥೆಯಿಂದ ಪ್ರೇರಣೆಯನ್ನು ಪಡೆದಿದ್ದು. ಪ್ರತಿಯೊಂದು ಆಭರಣವು ಈ ಪರಂಪರೆಯ ಅಂಶಗಳಾದ ಸಂಗೀತ, ಚಲನ ವಲನ ಹಾಗೂ ಭಾವಭಂಗಿಗಳನ್ನು ಪ್ರತಿಬಿಂಬಿಸುತ್ತದೆ, — ಈ ವಿನ್ಯಾಸಗಳ ಮೂಲಕ ರಾಧಾಕೃಷ್ಣರ ಸಂಭಂದವನ್ನು ತೋರಿಸುವುದರ ಜೊತೆಗೆ ಸಾಮರಸ್ಯ ಹಾಗು ದೈವಿಕ ಪ್ರೀತಿಯ ಬಗ್ಗೆ ಹೇಳುತ್ತದೆ.
ಭೀಮ, ಚಿನ್ನ, ವಜ್ರ ಮತ್ತು ವಿವಿಧ ರತ್ನಗಳನ್ನೊಳಗೊಂಡ ಈ ಸಂಗ್ರಹವನ್ನು ರೂಪಿಸಿ ನಿಖರವಾದ ಕಲೆಗಾರಿಕೆಯನ್ನು ತೋರಿಸಿಕೊಟ್ಟಿದೆ, ಕಲಾ ಪರಂಪರೆಯ ನಕ್ಷೆಯ ರೂಪ ಮತ್ತು ಸುಂದರ ಕುಸುರಿಗಳಿಂದ ಮಾಡಿದ ಆಭರಣಗಳನ್ನು ಸಾಂಸ್ಕೃತಿಕ ಹಾಗೂ ಭಕ್ತಿ ಭಾವದ ಪ್ರತೀಕವಾಗಿ ರೂಪಿಸಲಾಗಿದೆ.
ರಾಸ ಲೀಲಾ ಸಂಗ್ರಹದಲ್ಲಿನ ಆಭರಣಗಳನ್ನು ಎಲ್ಲಾ ಸಂಧರ್ಭಗಳಲ್ಲಿಯೂ ಧರಿಸುವಂತೆ ರೂಪುಗೊಳಿಸಲಾಗಿದೆ ಮತ್ತು ಪಾರಂಪರಿಕ ಸೊಗಡಿದ್ದರು ಹೊಸ ತಲೆಮಾರಿನ ಅಭಿರುಚಿಯ ತಕ್ಕಂತೆ ವಿನ್ಯಾಸಗೊಳಿಸಲಾಗಿದ್ದು, ಇದು ವೈಯಕ್ತಿಕ ಬಳಕೆ ಹಾಗೂ ಯಾವುದೇ ಸಮಾರಂಭಗಳಿಗೂ ಸಹ ಸೂಕ್ತವಾಗಿವೆ.
ಭೀಮ ಗೋಲ್ಡ್ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಶ್ರೀ ವಿಷ್ಣು ಶರಣ್ ಭಟ್ ರವರು ಹೊಸ ಸಂಗ್ರಹದ ಬಗ್ಗೆ ಮಾತನಾಡುತ್ತ , “ರಾಧಾಕೃಷ್ಣರ ದೈವಿಕ ಪ್ರೀತಿಯ ನಮನವಾಗಿ ನಾವು ರಾಸ ಲೀಲಾ ಸಂಗ್ರಹವನ್ನು ಪರಿಚಯಿಸುತ್ತಿದ್ದೇವೆ. ದೇವರ ಕೃಪೆಯಿಂದ ಪ್ರತಿಯೊಂದು ವಿನ್ಯಾಸದಲ್ಲೂ ಅವರ ಆತ್ಮವನ್ನು ನಾವು ಒಗ್ಗೂಡಿಸಿದ್ದೇವೆ. ಭೀಮದ ಶತಮಾನದ ಕರಕುಶಲತೆಯ ಪರಂಪರೆಯನ್ನು ಮುಂದುವರಿಸುತ್ತಿದ್ದೇವೆ.”
ಒಂದು ಶತಮಾನದಿಂದ ಆಭರಣ ತಯಾರಿಕೆಯಲ್ಲಿ ಭೀಮ ಪ್ರಸಿದ್ಧವಾಗಿದ್ದು, ಸಾಂಸ್ಕೃತಿಕ ಪ್ರತೀಕ ಹಾಗೂ ಕಾರ್ಯಾತ್ಮಕ ವಿನ್ಯಾಸಗಳಿಂದ ಸಂಯೋಜಿಸಿರುವ ವಿಷಯಾಧಾರಿತ ಆಭರಣಗಳ ಸಂಗ್ರಹವನ್ನು ಅಭಿವೃದ್ಧಿಪಡಿಸಿದ್ದು. ರಾಸ ಲೀಲಾ ಸಂಗ್ರಹವು ಇದಕ್ಕೆ ಇತ್ತೀಚಿನ ಸೇರ್ಪಡೆಯಾಗಿದೆ.
ಕರ್ನಾಟಕ, ಆಂಧ್ರ ಪ್ರದೇಶ ಮತ್ತು ತಮಿಳುನಾಡಿನ ಎಲ್ಲಾ ಭೀಮ ಮಳಿಗೆಗಳಲ್ಲಿ ಈ ಸಂಗ್ರಹ ಲಭ್ಯವಿದೆ
ಹೆಚ್ಚಿನ ಮಾಹಿತಿಗಾಗಿ ಭೇಟಿ ನೀಡಿ: Collection , Stores
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.