ಬೆಂಗಳೂರಿನಲ್ಲಿ ಬೇಸಿಗೆ ಹಾಗೂ ನೀರಿನ ಸಮಸ್ಯೆಯಿಂದ ಐಟಿ ಕಂಪನಿಗಳ ಉದ್ಯೋಗಿಗಳು ಊರಿನತ್ತ ತೆರಳಿದ್ದು, ಬೈಯಪ್ಪನಹಳ್ಳ-ಕೆ.ಆರ್.ಪುರಂ ಐಟಿ ಕಾರಿಡಾರ್‌ನಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ತೀವ್ರ ಕುಸಿತವಾಗಿದೆ.
ಬೆಂಗಳೂರು (ಮಾ.30): ಸಿಲಿಕಾನ್ ಸಿಟಿ ಬೆಂಗಳೂರಿಗೆ ವಿವಿಧ ಮೂಲಗಳಿಂದ ಶೇ.30-40 ಆದಾಯವನ್ನು ಕೊಡುತ್ತಿರುವ ಐಟಿ ಕಂಪನಿಗಳು ಹಾಗೂ ಉದ್ಯೋಗಿಗಳು ಮೂಲ ಸೌಕರ್ಯವಾದ ನೀರಿನ ಸಮಸ್ಯೆಯಿಂದಾಗಿ ಬೆಂಗಳೂರು ತೊರೆಯುತ್ತುದ್ದಾರೆ. ಇದರ ಪರಿಣಾಮ ಮೆಟ್ರೋ ಮೇಲೂ ಬೀರಿದ್ದು, ಐಟಿ ಕಾರಿಡಾರ್‌ನಲ್ಲಿ ಮೆಟ್ರೋ ಪ್ರಯಾಣಿಕರ ಸಂಖ್ಯೆ ಭಾರಿ ಕುಸಿತವಾಗಿದೆ. ಇದರಿಂದ ಬಿಎಂಆರ್‌ಸಿಎಲ್ ನಿರೀಕ್ಷಿತ ಆದಾಯ ಸಿಗದೇ ನಷ್ಟ ಅನುಭವಿಸುವ ಆತಂಕಕ್ಕೆ ಸಿಲುಕಿದೆ.
ಹೌದು, ನಮ್ಮ ಬೆಂಗಳೂರು ಎಂದಾಕ್ಷಣ ನಮಗೆ ಐಟಿ ಸಿಟಿ ಎಂದು ಕರೆಯುತ್ತೇವೆ. ನಗರದ ಬಹುಪಾಲು ಆದಾಯವನ್ನು ಐಟಿ ಕಂಪನಿಗಳು ಹಾಗೂ ಅದರ ಉದ್ಯೋಗಿಗಳಿಂದ ಬರುತ್ತದೆ. ಬೆಂಗಳೂರಿನಲ್ಲಿ ಉತ್ಮ ವಾತಾವರಣ ಹಾಗೂ ಸುಸಜ್ಜಿತ ಮೂಲಸೌಕರ್ಯಗಳು ಒದಗಿಸುವ ಹಿನ್ನೆಲೆಯಲ್ಲಿ ಐಟಿ ಕಂಪನಿಗಳು ಬೆಂಗಳೂರಿನಲ್ಲಿ ಕೇಂದ್ರೀಕರಣಗೊಂಡಿದ್ದವು. ಆದರೆ, ಈಗ ಬೆಂಗಳೂರು ಬೃಹತ್ ಬೆಂಗಳೂರು ಆಗಿ ಬೆಳೆದಿದ್ದು, ಕೆಲವೇ ವರ್ಷಗಳಲ್ಲಿ ಬೆಂಗಳೂರಿನ ಜನಸಂಖ್ಯೆ 90 ಲಕ್ಷದಿಂದ 1.40 ಕೋಟಿವರೆಗೆ ಬೆಳೆದಿದೆ.
Breaking: ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟಿಸಿದವರ ಅಸಲಿ ಫೋಟೋ ಬಹಿರಂಗ; ಸುಳಿವು ಕೊಟ್ಟರೆ 10 ಲಕ್ಷ ರೂ. ಬಹುಮಾನ
ಬೆಂಗಳೂರಿನ ಜನಸಂಖ್ಯೆ ಏರಿಕೆಗೆ ತಕ್ಕಂತೆ ಸರ್ಕಾರಗಳು ಹಾಗೂ ಬೆಂಗಳೂರಿನಲ್ಲಿ ಆಡಳಿತ ನಡೆಸುವ ಸ್ಥಳೀಯ ಆಡಳಿತ ಸಂಸ್ಥೆಗಳ ವಿಫಲತೆಯಿಂದಾಗಿ ಮೂಲ ಸೌಕರ್ಯ ಒದಗಿಸುವಲ್ಲಿ ದೊಡ್ಡ ಪ್ರಮಾಣದಲ್ಲಿ ವಿಫಲತೆ ಕಂಡುಬರುತ್ತಿದೆ. ಹೀಗಾಗಿ, ಐಟಿ ಕಜಂಪನಿಗಳು ಕಳೆದ ಮೂರ್ನಾಲ್ಕು ವರ್ಷಗಳಿಂದ ಬೆಂಗಳೂರನ್ನು ತೊರೆಯುವುದಾಗಿ ಸರ್ಕಾರಗಳಿಗೆ ಎಚ್ಚರಿಕೆ ನೀಡುತ್ತಲೇ ಬಂದಿದ್ದವು. ಆದರೂ, ಎಚ್ಚೆತ್ತುಕೊಳ್ಳದ ದಪ್ಪ ಚರ್ಮದ ಸರ್ಕಾರಗಳು ನಿರ್ಲಕ್ಷ್ಯ ಮಾಡಿದ್ದರಿಂದ ಈಗ ಕುಡಿಯುವ ನೀರಿಗೂ ಹಾಹಾಕಾರ ಎದುರಿಸುವ ಪರಿಸ್ಥಿತಿ ಬಂದಿದೆ. ಇದರ ಪರಿಣಾಮ ಸಾರ್ವಜನಿಕ ಸಾರಿಗೆ ಮೆಟ್ರೋ ಆದಾಯದ ಮೇಲೂ ಬೀರಿದೆ.
ಪ್ರಸ್ತುತ ಸಾಲಿನಲ್ಲಿ ಬೆಂಗಳೂರು ಸೇರಿದಂತೆ ಕರ್ನಾಟಕದಲ್ಲಿ ಬರಗಾಲ ಆವರಿಸಿದೆ. ಆದ್ದರಿಂದ ಕಾವೇರಿ ಕಣಿವೆಯಲ್ಲಿ ನೀರಿಲ್ಲದೇ ಬೆಂಗಳೂರಿಗೆ ನೀರು ಸರಬರಾಜಿನಲ್ಲಿ ತೀವ್ರ ಸಮಸ್ಯೆ ಉಂಟಾಗುತ್ತಿದೆ. ಹೀಗಾಗಿ, ಕೆಲವೊಂದು ಕಡಿವಾಣಗಳನ್ನು ವಿಧಿಸುವ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಸಮರ್ಪಕ ನೀರಿನ ಪೂರೈಕೆಯಿಲ್ಲದೇ ಬೆಂಗಳೂರಿನಲ್ಲಿರುವ ಐಷಾರಾಮಿ ಜೀವನ ನಡೆಸುವವರು ಮೂಲ ಸೌಕರ್ಯಗಳಲ್ಲಿ ಒಂದಾದ ನೀರು ಸಮಪರ್ಕವಾಗಿ ಸಿಗದೇ ನಗರವನ್ನು ತೊರೆಯುವ ಪರಿಸ್ಥಿತಿ ಬಂದಿದೆ. ಇನ್ನು ಸ್ವತಃ ಸರ್ಕಾರದಿಂದಲೇ ಐಟಿ ಕಂಪನಿಗಳಿಗೆ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ ಅವಕಾಶ ನೀಡುವಂತೆ ಸೂಚನೆ ನೀಡಲಾಗಿದೆ. ಇದರಿಂದ ಉದ್ಯೋಗಿಗಳು ಬೆಂಗಳೂರು ತೊರೆದು ಊರಿನತ್ತ ತೆರಳಿದ್ದಾರೆ.
ಮೆಟ್ರೋ ಐಟಿ ಕಾರಿಡಾರ್‌ನಲ್ಲಿ ಪ್ರಯಾಣಿಕರ ಸಂಖ್ಯೆ ಕುಸಿತ: ಬೆಂಗಳೂರಿನಲ್ಲಿ ಐಟಿ ಕಾರಿಡಾರ್‌ಗೆ ಸಂಪರ್ಕ ಕಲ್ಪಿಸಿದ ಮೊದಲ ಕಾರಿಡಾರ್ ಮೆಟ್ರೋ ನೇರಳೆ ಮಾರ್ಗವಾಗಿದೆ. ಮಾರ್ಚ್ ತಿಂಗಳಲ್ಲಿ ಪ್ರಯಾಣಿಕರ ಕುಸಿತದಿಂದ ಆದಾಯ ಇಳಿಕೆ ಆಗುವ ಆತಂಕ ಎದುರಾಗಿತ್ತು. ಅದರಂತೆ ಬೈಯಪ್ಪನಹಳ್ಳಿ-ಕೆ.ಆರ್‌ಪುರಂ ಉದ್ಘಾಟನೆ ಬಳಿಕವು ಮೆಟ್ರೋ ಪ್ರಯಾಣಿಕರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಮೆಟ್ರೋದ ಐಟಿ ಕಾರಿಡಾರ್ ಉದ್ಘಾಟನೆಯ ನಂತರ ನೇರಳೆ ಮಾರ್ಗದಲ್ಲಿ ಪ್ರತಿನಿತ್ಯ 7.5 ಲಕ್ಷ ಪ್ರಯಾಣಿಕರು ಸಂಚರಿಸುವ ನಿರೀಕ್ಷೆಯಿತ್ತು. ಆದರೆ, ದೈನಂದಿನ ಪ್ರಯಾಣಿಕರ ಸಂಖ್ಯೆಯು 6.7 ಲಕ್ಷಕ್ಕೆ ಇಳಿಕೆಯಾಗಿದೆ. ಐಟಿ ಕಾರಿಡಾರ್ ಉದ್ಘಾಟನೆಯ ಮುಂಚೆಯೇ ಜನವರಿ 25ರಂದು ಒಮ್ಮೆ ಮಾತ್ರ 7.8 ಲಕ್ಷ ಮಂದಿ ಪ್ರಯಾಣ ಮಾಡಿದ್ದರು. ದಿನದಿಂದ ದಿನಕ್ಕೆ ಹೆಚ್ಚಳವಾಗಬೇಕಿದ್ದ ಪ್ರಯಾಣಿಕರ ಸಂಖ್ಯೆ ನೀರಿನ ಸಮಸ್ಯೆ, ಬಿರು ಬೇಸಿಗೆ ಸೇರಿ ಇತರೆ ಕಾರಣಗಳಿಂದ ಕಡಿಮೆ ಆಗುತ್ತಿದೆ. ಕಳೆದೆರಡು ತಿಂಗಳಿಗೆ ಹೋಲಿಕೆ ಮಾಡಿದ್ದಲ್ಲಿ ಮಾರ್ಚ್ ತಿಂಗಳಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರ ಸಂಖ್ಯೆ 29 ಸಾವಿರದಷ್ಟು ಕುಸಿತವಾಗಿದೆ ಎಂದು ತಿಳಿದುಬಂದಿದೆ.
ಇನ್‌ಸ್ಟಾಗ್ರಾಂ ರೀಲ್ಸ್ ಮಾಡುವಾಗ ಶೋಕಿಗಾಗಿ ಆಟಿಕೆ ಪಿಸ್ತೂಲ್ ತೋರಿಸಿದ ಯುವಕರು; ಲಾಠಿ ರುಚಿ ತೋರಿಸಿದ ಪೊಲೀಸರು
ಮೆಟ್ರೋ ಪ್ರಯಾಣಿಕರ ಸಂಖ್ಯೆ ಇಳಿಕೆಗೆ ಕಾರಣಗಳು: