ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಮಿಸಲಾದ ವಸತಿ ಸಮುಚ್ಛಯಗಳ ಮನೆಗಳ ಮಾರಾಟಕ್ಕೆ ಫೆ.17ರಂದು ಕೋನದಾಸಪುರದಲ್ಲಿ ಫ್ಲ್ಯಾಟ್ ಮೇಳವನ್ನು ಆಯೋಜಿಸಲಾಗಿದೆ.
ಬೆಂಗಳೂರು (ಫೆ.16): ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ (ಬಿಡಿಎ) ನಿರ್ಮಾಣ ಮಾಡಲಾದ ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ಗಳನ್ನು ಖರೀದಿ ಮಾಡುವುದಕ್ಕೆ ಅನುಕೂಲ ಆಗುವಂತೆ ಫೆ.17ರಂದು ಫ್ಲ್ಯಾಟ್ ಮೇಳವನ್ನು ಆಯೋಜನೆ ಮಾಡಲಾಗಿದೆ. ಮನೆ ಖರೀದಿಗೆ ಆಸಕ್ತಿ ಇರುವವರು ಆರಂಭಿಕ ಠೇವಣಿ ಮಾಡಿ ಅಪಾರ್ಟ್ಮೆಂಟ್ ಹಂಚಿಕೆ ಪತ್ರವನ್ನು ಪಡೆಯಬಹುದು.
ಬಿಡಿಎ ವತಿಯಿಂದ ಚಂದ್ರಾ ಬಡಾವಣೆ (3 ಬಿ.ಹೆಚ್.ಕೆ), ಕಣಿಮಿಣಿಕೆ ಹಂತ-2, ಹಂತ-3 (2 ಬಿ.ಹೆಚ್.ಕೆ), ಕಣಿಮಿಣಿಕೆ ಹಂತ-4 (3 ಬಿ.ಹೆಚ್.ಕೆ), ಕೊಮ್ಮಘಟ್ಟ ಹಂತ-1 ಮತ್ತು ಹಂತ-2 (2 ಬಿ.ಹೆಚ್.ಕೆ) ಮತ್ತು ಕೋನದಾಸಪುರ ಹಂತ-2 (2 ಬಿ.ಹೆಚ್.ಕೆ) ರಲ್ಲಿ ವಸತಿ ಸಮುಚ್ಛಯವನ್ನು ನಿರ್ಮಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ಪ್ರಾಧಿಕಾರವು 'ಫ್ಲಾಟ್ ಮೇಳ'ವನ್ನು ಫೆ.17ರ ಬೆಳಿಗ್ಗೆ 9.00 ರಿಂದ ಸಂಜೆ 4.30ರವರೆಗೆ ಕೋನದಾಸಪುರ ವಸತಿ ಸಮುಚ್ಛಯದಲ್ಲಿ ಆಯೋಜಿಸಲಾಗಿದೆ.
undefined
ಮೈಸೂರಿಗೆ ಬಂಪರ್ ಕೊಡುಗೆ ಕೊಟ್ಟ ಸಿಎಂ ಸಿದ್ದರಾಮಯ್ಯ; ಆದ್ರೆ, ಬಾದಾಮಿ ಕ್ಷೇತ್ರವನ್ನೇ ಮರೆತುಬಿಟ್ರಾ?
ಫ್ಲ್ಯಾಟ್ ಮೇಳದಲ್ಲಿ ಭಾಗವಹಿಸುವ ಗ್ರಾಹಕರು ಸ್ಥಳದಲ್ಲಿಯೇ ಪ್ರಾರಂಭಿಕ ಠೇವಣಿಯನ್ನು ಪಾವತಿಸಿ, ಹಂಚಿಕೆ ಪತ್ರವನ್ನು ಸ್ವೀಕರಿಸಬಹುದು. ಹಂಚಿಕೆ ಪತ್ರವನ್ನು ಸ್ವೀಕರಿಸಿದ 10 ದಿನದೊಳಗೆ ಫ್ಲಾಟ್ ನ ಪೂರ್ಣ ಮೊತ್ತವನ್ನು ಪಾವತಿಸುದರೆ ನಂತರದ 10 ದಿನಗಳಲ್ಲಿ ಫ್ಲಾಟ್ ಅನ್ನು ನೋಂದಣಿ ಮಾಡಿಕೊಡಲಾಗುವುದು. ಈ ಮೇಳದಲ್ಲಿ ಹೋಮ್ ಲೋನ್ ನೀಡುವುದಕ್ಕೆ ಬ್ಯಾಂಕ್ ಗಳು ಭಾಗವಹಿಸುತ್ತವೆ. ಇದರಿಂದ ಸಾಲ ಸೌಲಭ್ಯವೂ ಸಹ ಸ್ಥಳದಲ್ಲಿಯೇ ದೊರಕುವುದು.
ಬಜೆಟ್‌ನಲ್ಲಿ ಬೆಂಗಳೂರು ಅಭಿವೃದ್ಧಿಗೆ ಭರ್ಜರಿ ಘೋಷಣೆ, ಮೆಟ್ರೋ, ಟನಲ್ ರೋಡ್, ಬಿಎಂಟಿಸಿಗೆ ಸಿಕ್ಕಿದ್ದೆಷ್ಟು?
35 ಕೋಟಿ ರೂ. ಮೌಲ್ಯದ ಆಸ್ತಿ ವಶಕ್ಕೆ ಪಡೆದ ಬಿಡಿಎ: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಆಯುಕ್ತ ಎನ್. ಜಯರಾಮ್ ನಿರ್ದೇಶನದಂತೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಆರಕ್ಷಕ ಅಧೀಕ್ಷಕ ಕೆ. ನಂಜುಂಡೇಗೌಡ ನೇತೃತ್ವದಲ್ಲಿ ಫೆ.8ರಂದು ನಡೆದ ಕಾರ್ಯಾಚರಣೆಯಲ್ಲಿ ಹೇರೋಹಳ್ಳಿ ಗ್ರಾಮದಲ್ಲಿ ಸುಮಾರು ರೂ. 35 ಕೋಟಿ ಆಸ್ತಿಯನ್ನು ವಶಪಡಿಸಿಕೊಂಡಿರುತ್ತದೆ. ಬೆಂಗಳೂರು ಉತ್ತರ ತಾಲ್ಲೂಕು, ಯಶವಂತಪುರ ಹೋಬಳಿ, ಹೇರೋಹಳ್ಳಿ ಗ್ರಾಮದ ಸರ್ವೆ ನಂಬರ್ 64ರಲ್ಲಿನ ಪ್ರಾಧಿಕಾರದ 0-32.45 ಗುಂಟೆ ಜಮೀನಿನಲ್ಲಿ ಸ್ಥಳೀಯರು ಅನಧಿಕೃತವಾಗಿ ನಿರ್ಮಾಣ ಮಾಡಿಕೊಂಡಿದ್ದ ಶೆಡ್ ಗಳು / ಕಟ್ಟಡಗಳನ್ನು ತೆರವುಗೊಳಿಸಿ ಸುಮಾರು 35 ಕೋಟಿ ರೂ. ಬೆಲೆಯ ಜಮೀನನ್ನು ಪ್ರಾಧಿಕಾರವು ತನ್ನ ವಶಕ್ಕೆ ತೆಗೆದುಕೊಂಡಿರುತ್ತದೆ.