ನಿಮ್ ಹತ್ರ ಇದಿಲ್ಲದಿದ್ರೆ ಬ್ಯಾಂಕ್ ಖಾತೆ ತೆರೆಯಲು ಬಿಡಲ್ಲ!

Published : Aug 22, 2018, 09:30 PM ISTUpdated : Sep 09, 2018, 09:31 PM IST
ನಿಮ್ ಹತ್ರ ಇದಿಲ್ಲದಿದ್ರೆ ಬ್ಯಾಂಕ್ ಖಾತೆ ತೆರೆಯಲು ಬಿಡಲ್ಲ!

ಸಾರಾಂಶ

ಬ್ಯಾಂಕ್ ಖಾತೆ ತೆರೆಯಲು ಬಯೋಮೆಟ್ರಿಕ್ ಧೃಡೀಕರಣ ಕಡ್ಡಾಯ! ಆಧಾರ್ ಕಾರ್ಡ್ ಪೋಟೊ ಕಾಪಿ ಸಾಲಲ್ಲ ಎಂದ ಯುಐಡಿಎಐ! ವಂಚನೆ ತಪ್ಪಿಸಲು ಮಹತ್ವದ ನಿರ್ಧಾರ ಕೈಗೊಂಡ ಯುಐಡಿಎಐ! ವಂಚನೆ ಕಂಡುಬಂದರೆ ಬ್ಯಾಂಕ್‌ಗಳು ಕೂಡ ಹೊಣೆ

ನವದೆಹಲಿ(ಆ.22): ಬಯೋಮೆಟ್ರಿಕ್ ಅಥವಾ ಒಟಿಪಿ ಧೃಢೀಕರಣ ಇಲ್ಲದೇ ಕೇವಲ ಆಧಾರ್ ಕಾರ್ಡ್ ಪೋಟೊ ಕಾಪಿ ನೀಡುವುದರ ಮೂಲಕ ಯಾವುದೇ ಬ್ಯಾಂಕ್‌ನಲ್ಲಿ ಖಾತೆ ತೆರೆಯಲು ಸಾಧ್ಯವಿಲ್ಲ ಎಂದು ಯುಐಡಿಎಐ ಹೇಳಿದೆ. 

ಈ ಹಿಂದೆ ಬ್ಯಾಂಕ್‌ಗಳಲ್ಲಿ ಖಾತೆ ತೆರೆಯುವಾಗ ದಾಖಲಾತಿಯಾಗಿ ಆಧಾರ್ ಕಾರ್ಡ್ ಪ್ರತಿ ನೀಡಲಾಗುತ್ತಿತ್ತು. ಆದರೆ ಇನ್ನುಮುಂದೆ ಆಧಾರ್ ಕಾರ್ಡ್ ಪೊಟೋ ಕಾಪಿ ನೀಡಿ ಖಾತೆ ತೆರೆಯಲು ಆಗುವುದಿಲ್ಲ ಎಂದು ಯುಐಡಿಎಐ ಸ್ಪಷ್ಟಪಡಿಸಿದೆ. 

ಆರ್‌ಬಿಐ ಹಾಗೂ ಪಿಎಂಎಲ್ ಅದಿಸೂಚನೆಗಳ ಅಡಿಯಲ್ಲಿ, ಬ್ಯಾಂಕ್ ಖಾತೆ ತೆರೆಯಲು ಬಯೋಮೆಟ್ರಿಕ್ ಅಥವಾ ಒಟಿಪಿ ಧೃಢೀಕರಣ ಅಗತ್ಯವಿದೆ. ಬ್ಯಾಂಕಿಂಗ್ ವ್ಯವಹಾರ ಅಥವಾ ಗ್ರಾಹಕರ ಕೆವೈಸಿ ಸ್ವೀಕರಿಸುವ ಮುನ್ನ ಇದು ಅಗತ್ಯವಾಗಿರುತ್ತದೆ. ಒಂದು ವೇಳೆ ಬ್ಯಾಂಕ್‌ಗಳು ಗ್ರಾಹಕರಿಂದ ಬ್ಯಾಂಕ್ ಒಟಿಪಿ ಅಥವಾ ಬಯೋಮೆಟ್ರಿಕ್ ದಾಖಲೆ ಪಡೆಯದೆ ಖಾತೆ ತೆರೆದರೆ, ಮುಂದಾಗಬಹುದಾದ ನಷ್ಟಕ್ಕೆ ಆಯಾ ಬ್ಯಾಂಕ್‌ಗಳೇ ಹೊಣೆ ಎಂದು ಹೇಳಿದೆ.

ಆಧಾರ್ ಹೊಂದಿರುವ ಗ್ರಾಹಕರು ಬ್ಯಾಂಕ್‌ಗಳ ಮಾಡುವ ದೋಷಕ್ಕೆ ಜವಾಬ್ಧಾರರಲ್ಲ. ಕೆಲ ವಂಚನೆಗಾರರು ಬೇರೆಯವರ ವೋಟರ್ ಐಡಿ, ರೇಷನ್ ಕಾರ್ಡ್ ಅಥವಾ ಆಧಾರ್ ಕಾರ್ಡ್ ಪ್ರತಿ ಪಡೆದು ಖಾತೆ ತೆರೆದರೆ ಅದು ಕೇವಲ ಕಾರ್ಡುದಾರರ ಮಾತ್ರ ತಪ್ಪಲ್ಲ. ಬದಲಾಗಿ ಬ್ಯಾಂಕ್‌ಗಳು ಕೂಡ ಜವಾಬ್ಧಾರರಾಗಿರುತ್ತಾರೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

ಗ್ರಾಹಕರ ದಾಖಲಾತಿಗಳನ್ನು ಬೇರೆಯವರು ಬಳಸಿ ಖಾತೆ ತೆರೆದು ವಂಚನೆ ಮಾಡುವುದನ್ನು ತಡೆಗಟ್ಟಲು ಈ ನಿಯಮ ಜಾರಿಗೆ ತರಲು ಯುಐಎಡಿಐ ಈ ನಿರ್ಧಾರಕ್ಕೆ ಬಂದಿದ್ದಾರೆ ಎಂದು ಹೇಳಲಾಗಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

click me!

Recommended Stories

ಗ್ರಾಹಕರಿಗೆ ಬಂಪರ್‌ ಪ್ಲ್ಯಾನ್‌ ಘೋಷಿಸಿದ Vi: 61 ರೂಪಾಯಿಯ ಮೊಬೈಲ್‌ ರಿಚಾರ್ಜ್‌ಗೆ 25 ಸಾವಿರದ ಬೆನಿಫಿಟ್‌!
ಇದೇ ಮೊದಲ ಬಾರಿಗೆ ಅತೀ ದುಬಾರಿಯಾದ ಬೆಳ್ಳಿ, ಚಿನ್ನಕ್ಕಿಂತ ವೇಗದಲ್ಲಿ ಸಾಗುತ್ತಿದೆ ಸಿಲ್ವರ್