ಬ್ಯಾಂಕ್‌ಗಳು ಸ್ಥಳೀಯ ಭಾಷೆ ಮಾತನಾಡುವವರನ್ನು ನೇಮಿಸಬೇಕು: Nirmala Sitharaman

By BK AshwinFirst Published Sep 17, 2022, 4:26 PM IST
Highlights

ನೀವು ವ್ಯಾಪಾರ ಮಾಡುವುದಕ್ಕಾಗಿ ಅಲ್ಲಿದ್ದೀರಿ. ನಾಗರಿಕರಲ್ಲಿ ಕೆಲವು ಮೌಲ್ಯ ವ್ಯವಸ್ಥೆಯನ್ನು ಬೆಳೆಸಲು ಅಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಬ್ಯಾಂಕ್‌ನವರಿಗೆ ಸಲಹೆ ನೀಡಿದ್ದಾರೆ.

ಇತ್ತೀಚೆಗೆ ದೇಶದ ಹಲವೆಡೆ ಹಿಂದಿ ದಿವಸ್‌ (Hindi Diwas) ಆಚರಣೆ ನಡೆದಿತ್ತು. ಇದಕ್ಕೆ ಹಲವು ಕನ್ನಡಿಗರು ಸೇರಿ ದಕ್ಷಿಣ ಭಾರತದ ಹಲವೆಡೆ ತೀವ್ರ ಪ್ರತಿಭಟನೆಗಳು ನಡೆದಿದ್ದವು. ಹಾಗೂ, ಕೇಂದ್ರ ಸರ್ಕಾರದ ಹಿಂದಿ ಹೇರಿಕೆಯ (Hindi Imposition) ವಿರುದ್ಧ ತೀವ್ರ ಆಕ್ರೋಶಗಳೂ ವ್ಯಕ್ತವಾಗಿದ್ದವು. ಈ ಬೆನ್ನಲ್ಲೇ ಕೇಂದ್ರ ಹಣಕಾಸು ಸಚಿವೆ (Union Finance Minister) ನಿರ್ಮಲಾ ಸೀತಾರಾಮನ್‌ ಮಹತ್ವದ ಹೇಳಿಕೆಯೊಂದನ್ನು ನೀಡಿದ್ದಾರೆ. ಬ್ಯಾಂಕ್‌ಗಳು ಸ್ಥಳೀಯ ಭಾಷೆ (Local Language) ಮಾತನಾಡುವವರನ್ನು ನೇಮಿಸಬೇಕು. ಇನ್ನು, ಬ್ಯಾಂಕ್‌ ಸಿಬ್ಬಂದಿಗಳ ನೇಮಕಾತಿಯಲ್ಲಿ ಸ್ಥಳೀಯ ಭಾಷೆ ಬಲ್ಲವರನ್ನು ನೇಮಿಸಿಕೊಳ್ಳುವ ಒಳಗೊಳ್ಳುವಿಕೆ ಇರಬೇಕೆಂದು ಶುಕ್ರವಾರ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ ಎಂದು ವರದಿಗಳು ಹೇಳಿವೆ.

ಮುಂಬೈನಲ್ಲಿ ನಡೆದ 75ನೇ ಭಾರತೀಯ ಬ್ಯಾಂಕ್‌ ಅಸೋಸಿಯೇಷನ್‌ನ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ( 75th Annual General Meeting of Indian Banks Association) ಈ ಸಂಬಂಧ ಮಾತನಾಡಿದ ನಿರ್ಮಲಾ ಸೀತಾರಾಮನ್‌, ನೀವು ವ್ಯಾಪಾರ ಮಾಡುವುದಕ್ಕಾಗಿ ಅಲ್ಲಿದ್ದೀರಿ. ನಾಗರಿಕರಲ್ಲಿ ಕೆಲವು ಮೌಲ್ಯ ವ್ಯವಸ್ಥೆಯನ್ನು ಬೆಳೆಸಲು ಅಲ್ಲ ಎಂದು ಕೇಂದ್ರ ಹಣಕಾಸು ಸಚಿವೆ ಬ್ಯಾಂಕ್‌ನವರಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ದೇಶದ ವೈವಿಧ್ಯತೆಯ ಹಿನ್ನೆಲೆ ಇದು ಅಗತ್ಯ ಎಂದೂ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ ಎಂದೂ ವರದಿಯಾಗಿದೆ.

ಇದನ್ನು ಓದಿ: Hindi Diwas: ದೇಶದ ಏಕತೆಗೆ ಹಿಂದಿ ಅತ್ಯಂತ ನಿರ್ಣಾಯಕ; ಕೇಂದ್ರ ಶಿಕ್ಷಣ ಸಚಿವರ ವಾದ
 
ಬ್ಯಾಂಕ್‌ಗಳ ಶಾಖೆಗಳಲ್ಲಿ (Bank Branches) ಸ್ಥಳೀಯ ಭಾಷೆ ಮಾತನಾಡಲು ಗೊತ್ತಿಲ್ಲದ ಉದ್ಯೋಗಿ ಇದ್ದರೆ ಹಾಗೂ ಅವರು ದೇಶಭಕ್ತಿ ಉಳ್ಳವರಾಗಿದ್ದಾಗ, ‘’ನೀವು ಹಿಂದಿಯನ್ನು ಮಾತನಾಡುವುದಿಲ್ಲವೇ, ಹಾಗಾದರೆ ನೀವು ಭಾರತೀಯರು ಆಗಿಲ್ಲದಿರಬಹುದು’’ ಎಂದು ಬ್ಯಾಂಕ್‌ಗೆ ಬರುವ ಗ್ರಾಹಕರಿಗೆ ಹೇಳಿದರೆ, ಇದರಿಂದ ವ್ಯಾಪಾರಕ್ಕೆ ಒಳ್ಳೆಯದಾಗುವುದಿಲ್ಲ ಎಂದೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.  ಹಾಗೂ, ಬ್ಯಾಂಕ್‌ ಶಾಖೆಗಳಲ್ಲಿ ನೇಮಕವಾಗಿರುವ ಉದ್ಯೋಗಿಗಳನ್ನು ಪರಿಶೀಲನೆ ನಡೆಸಿ, ಹಾಗೂ ಸ್ಥಳೀಯ ಭಾ‍ಷೆ ಮಾತನಾಡಲು ಗೊತ್ತಿಲ್ಲದವರಿಗೆ ಗ್ರಾಹಕರೊಂದಿಗೆ ವ್ಯವಹರಿಸುವ ಉದ್ಯೋಗಗಳಿಗೆ ನಿಯೋಜಿಸಬಾರದು. ಜನರನ್ನು ನೇಮಿಸಿಕೊಳ್ಳುವಾಗ ನೀವು ಹೆಚ್ಚು ಸಂವೇದನಾಶೀಲ ಮಾರ್ಗಗಳನ್ನು ಹೊಂದಿರಬೇಕು ಎಂದೂ ಬ್ಯಾಂಕ್‌ಗಳಿಗೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ. 

ಅಲ್ಲದೆ, ಗ್ರಾಹಕರ ಅನುಕೂಲಕ್ಕಾಗಿ ಧನಾತ್ಮಕತೆಯ ಶಕ್ತಿಯನ್ನು ಪ್ರೋತ್ಸಾಹಿಸುವಂತೆಯೂ ನಿರ್ಮಲಾ ಸೀತಾರಾಮನ್ ಅವರು ಬ್ಯಾಂಕುಗಳಿಗೆ ಕೇಳಿಕೊಂಡರು. "ನೀವು ಹೀಗೆ ಹೇಳಬೇಕೆಂದು ನಾನು ಬಯಸುತ್ತೇನೆ ... ನಾವು ನಿಮಗೆ ಸೇವೆ ಸಲ್ಲಿಸಲು ಸಿದ್ಧರಿದ್ದೇವೆ, ಕ್ರಿಯಾತ್ಮಕವಾಗಿರಿ ಮತ್ತು ಗ್ರಾಹಕರನ್ನು ಎಲ್ಲಿ ಬೇಕಾದರೂ ಭೇಟಿಯಾಗುವುದಾಗಿ ತಿಳಿಸ. ಅಲ್ಲದೆ, ನಿಮ್ಮ ರೂಢಿಗಳನ್ನು ಹಾಗೆಯೇ ಇರಿಸಿಕೊಂಡು  ಅವರೊಂದಿಗೆ ವ್ಯಾಪಾರ ಮಾಡಿ ಎಂದು ಅವರಿಗೆ ತಿಳಿಸಿರಿ’’ ಎಂದೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಮುಂಬೈನಲ್ಲಿ ಬ್ಯಾಂಕ್‌ಗಳಿಗೆ ಸಲಹೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

ಇದನ್ನೂ ಓದಿ: Hindi Diwas: ''ಅಧಿಕೃತ ಭಾಷೆ ಹಿಂದಿ ದೇಶವನ್ನು ಒಗ್ಗೂಡಿಸುತ್ತದೆ'' ಎಂದ ಅಮಿತ್ ಶಾ

ನಿರ್ಮಲಾ ಸೀತಾರಾಮನ್‌ ಹೇಳಿಕೆಗೆ ಅರುಣ್‌ ಜಾವಗಲ್‌ ಪ್ರತಿಕ್ರಿಯೆ ಹೀಗಿದೆ.. 
ಇನ್ನು, ಸ್ಥಳೀಯ ಭಾಷೆ ಮಾತನಾಡುವವರಿಗೆ ಪ್ರಾಧಾನ್ಯತೆ ನೀಡಲು ಬ್ಯಾಂಕುಗಳಿಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಸಲಹೆ ನೀಡಿದ ವಿಚಾರವಾಗಿ ಕನ್ನಡಿಗ ಅರುಣ್‌ ಜಾವಗಲ್‌ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಟ್ವೀಟ್‌ ಮಾಡಿರುವ ಅವರು, ಬರಿ ಬಾಯಿ ಮಾತಿನಿಂದ ಬ್ಯಾಂಕು/ಬ್ಯಾಂಕಿನ ಸಿಬ್ಬಂದಿ ಬದಲಾಗೊಲ್ಲಾ. Consumer protection act 1986 ಗೆ ತಿದ್ದುಪಡಿ ತಂದು, ಗ್ರಾಹಕರ ಭಾಷಾ ಹಕ್ಕನ್ನು ಎತ್ತಿಹಿಡಿಯುವ ಅಂಶಗಳನ್ನು ಸೇರಿಸಬೇಕು. RBI ನ master circular on ‌Hindi usage ಸುತ್ತೋಲೆ ವಾಪಸ್ ಪಡೆಯಬೇಕು, IBPS ಪರೀಕ್ಷೆಯನ್ನು ಆಯಾ ರಾಜ್ಯದ ಯುವಕರೇ ಬರೆಯಲು ಸಾಧ್ಯವಾಗಬೇಕು’’ ಎಂದೂ ತಮ್ಮ ಅಧಿಕೃತ ಟ್ವಿಟ್ಟರ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. 

ಬರಿ ಬಾಯಿ ಮಾತಿನಿಂದ ಬ್ಯಾಂಕು/ಬ್ಯಾಂಕಿನ ಸಿಬ್ಬಂದಿ ಬದಲಾಗೊಲ್ಲಾ. Consumer protection act 1986 ಗೆ ತಿದ್ದುಪಡಿ ತಂದು, ಗ್ರಾಹಕರ ಭಾಷಾ ಹಕ್ಕನ್ನು ಎತ್ತಿಹಿಡಿಯುವ ಅಂಶಗಳನ್ನು ಸೇರಿಸಬೇಕು. RBI ನ master circular on ‌Hindi usage ಸುತ್ತೋಲೆ ವಾಪಸ್ ಪಡೆಯಬೇಕು, IBPS ಪರೀಕ್ಷೆಯನ್ನು ಆಯಾ ರಾಜ್ಯದ ಯುವಕರೇ ಬರೆಯಲು ಸಾಧ್ಯವಾಗಬೇಕು pic.twitter.com/x6HFVq7OsW

— ಅರುಣ್ ಜಾವಗಲ್ | Arun Javgal (@ajavgal)
click me!