ಏರಿಕೆ ಓಟದಲ್ಲಿ ರಿಲಯನ್ಸ್ ಪವರ್‌ ಷೇರು, ಈ ಬಾರಿಯಾದ್ರೂ ಸಾಲ ತೀರಿಸಿ ದಿವಾಳಿತನದಿಂದ ಮುಕ್ತರಾಗ್ತಾರಾ ಅಂಬಾನಿ?

By Suvarna NewsFirst Published Mar 26, 2024, 12:17 PM IST
Highlights

ಅನಿಲ್ ಅಂಬಾನಿ ಅವರ ಸಂಸ್ಥೆ ರಿಲಯನ್ಸ್ ಪವರ್ ಷೇರು ಮಾರುಕಟ್ಟೆಯಲ್ಲಿ ಏರಿಕೆಯ ಓಟ ಮುಂದುವರೆಸಿದೆ. ವಾರಾಂತ್ಯದ ಹೋಳಿ ಹಬ್ಬದ ನಂತರ ಅನಿಲ್ ಅಂಬಾನಿಯವರ ರಿಲಯನ್ಸ್ ಪವರ್ ಷೇರುಗಳು ಮತ್ತೆ  ಏರಿಕೆಯತ್ತ ಮುಖ ಮಾಡಿದೆ.

ಮುಂಬೈ (ಮಾ.26): ಭಾರತದ ಅತ್ಯಂತ ಶ್ರೀಮಂತ ವ್ಯಕ್ತಿ ಮುಕೇಶ್ ಅಂಬಾನಿಯವರ ಕಿರಿಯ ಸಹೋದರ ಅನಿಲ್ ಅಂಬಾನಿ, ಅವರ ಸಂಸ್ಥೆ ರಿಲಯನ್ಸ್ ಪವರ್ ಷೇರು ಮಾರುಕಟ್ಟೆಯಲ್ಲಿ ಏರಿಕೆಯ ಓಟ ಮುಂದುವರೆಸಿದೆ.  ವಾರಾಂತ್ಯದ ಹೋಳಿ ಹಬ್ಬದ ನಂತರ ಅನಿಲ್ ಅಂಬಾನಿಯವರ ರಿಲಯನ್ಸ್ ಪವರ್ ಷೇರುಗಳು ಮತ್ತೆ  ಏರಿಕೆಯತ್ತ ಮುಖ ಮಾಡಿದೆ.  ಮಾರ್ಚ್ 26 ರ ಬೆಳಿಗ್ಗೆ ಶೇ. 4.94% ರಷ್ಟು ಜಿಗಿದು 27.60 ರೂ ಬೆಲೆಯನ್ನು ಮುಟ್ಟಿದವು.  

ಇತ್ತೀಚಿನ ದಿನಗಳಲ್ಲಿ ಷೇರು ಮಾರುಕಟ್ಟೆಯು ರಿಲಯನ್ಸ್ ಪವರ್‌ನ ಹರಿತವಾದ ಪುನರಾಗಮನವನ್ನು ವೀಕ್ಷಿಸುತ್ತಿದೆ. ಇದರ  ಷೇರುಗಳು ಒಮ್ಮೆ ರೂ 1 ಕ್ಕೆ ಕುಸಿದಿತ್ತು.  ಇದು ಗರಿಷ್ಠ ಬೆಲೆಯ 99% ಕ್ಕಿಂತ ಹೆಚ್ಚು ಆಗಿತ್ತು. ಜಿಂದಾಲ್ ಕಂಪೆನಿಯ JSW ನವೀಕರಿಸಬಹುದಾದ ಶಕ್ತಿ ಯೋಜನೆಯೊಂದಿಗೆ 132 ಕೋಟಿ ರೂಪಾಯಿಗಳ ಬೃಹತ್ ಒಪ್ಪಂದಕ್ಕೆ ಸಹಿ ಹಾಕಿದ ನಂತರ ರಿಲಯನ್ಸ್ ಪವರ್‌ನಿಂದ ಈ ಬೆಳವಣಿಗೆ ಕಂಡುಬಂದಿದೆ.

ಮಗ ಪ್ರೀತಿಸಿದ್ದ ಮಾಡೆಲ್ ಮನೇಕಾರನ್ನ ಸಂಜಯ್‌ ಗಾಂಧಿ ಸತ್ತ ಬಳಿಕ ಮಧ್ಯರಾತ್ರಿ ಹೊರದಬ್ಬಿದ ಇಂದಿರಾಗಾಂಧಿ!

ರಿಲಯನ್ಸ್ ಪವರ್ ಮಹಾರಾಷ್ಟ್ರದಲ್ಲಿ 45 MW ಪವನ ವಿದ್ಯುತ್ ಯೋಜನೆಯನ್ನು JSW ನವೀಕರಿಸಬಹುದಾದ ಶಕ್ತಿಗೆ 132 ಕೋಟಿ ರೂ.ಗೆ ಮಾರಾಟ ಮಾಡುತ್ತಿದೆ. 2008 ರಲ್ಲಿ ರಿಲಯನ್ಸ್ ಪವರ್ ಷೇರು ಸುಮಾರು 260.78 ರೂಪಾಯಿಗಳಿಗೆ ವಹಿವಾಟು ನಡೆಸುತ್ತಿತ್ತು . ಆದರೆ ಭಾರೀ ಕುಸಿತದ ನಂತರ, 27 ಮಾರ್ಚ್ 2020 ರ ವೇಳೆಗೆ ಷೇರಿನ ಬೆಲೆ ಹೀನಾಯ ಕುಸಿತ ಕಂಡು ಬೆಲೆ ಸುಮಾರು 1.13 ರಷ್ಟಿತ್ತು.

ನಂತರದ ವರ್ಷಗಳಲ್ಲಿ ನಿಧಾನವಾಗಿ ಚೇತರಿಸಿಕೊಂಡ ನಂತರ, ಅನಿಲ್ ಅಂಬಾನಿಯವರ ರಿಲಯನ್ಸ್ ಪವರ್ ಮತ್ತೊಮ್ಮೆ ವ್ಯಾಪಾರಿಗಳ ಗಮನ ಸೆಳೆಯುತ್ತಿದೆ. ಸಾಲದಲ್ಲಿ ಮುಳುಗಿದ್ದ ಅನಿಲ್‌ ಅಂಬಾನಿ ಇತ್ತೀಚೆಗೆ ಐಸಿಐಸಿಐ ಬ್ಯಾಂಕ್, ಆಕ್ಸಿಸ್ ಬ್ಯಾಂಕ್ ಮತ್ತು ಡಿಬಿಎಸ್ ಬ್ಯಾಂಕ್‌ಗೆ ನೀಡಬೇಕಾದ ಸಾಲಗಳನ್ನು ತೀರಿಸಿದ್ದಾರೆ. ಅಂಬಾನಿ ಕಂಪೆನಿಯು ಜಂಟಿಯಾಗಿ ಸುಮಾರು ರೂ 400 ಕೋಟಿ ಸಾಲವನ್ನು ಹೊಂದಿತ್ತು. ಈಗ ಸರಿಸುಮಾರು 30-35% ನಷ್ಟು ಮೂಲ ಸಾಲಗಳನ್ನು ತೀರಿಸಲಾಗಿದೆ. ಈಗ  ಅನಿಲ್ ಅಂಬಾನಿ ಅವರ ಸಂಸ್ಥೆಯು ಜೆಸಿ ಫ್ಲವರ್ಸ್ ಅಸೆಟ್ ರೀಕನ್‌ಸ್ಟ್ರಕ್ಷನ್ ಕಂಪನಿಯೊಂದಿಗೆ ಇರುವ 2100 ಕೋಟಿ ರೂಪಾಯಿ ಸಾಲ ತೀರಿಸುವತ್ತ ಗುರಿ ನೆಟ್ಟಿದೆ ಎಂದು ವರದಿಯಾಗಿದೆ.

ಕೇವಲ 5 ದಿನದಲ್ಲಿ ಸಾಲಗಾರ ಅನಿಲ್ ಅಂಬಾನಿ ಕಂಪನಿಯ ಷೇರುಗಳು ಶೇ.13ಕ್ಕಿಂತ ಹೆಚ್ಚು ಏರಿಕೆ!

ಅನಿಲ್ ಅಂಬಾನಿ ಒಂದು ಕಾಲದಲ್ಲಿ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರಾಗಿದ್ದರು ಮತ್ತು ವಿಶ್ವದ ಆರನೇ ಶ್ರೀಮಂತ ವ್ಯಕ್ತಿಯಾಗಿದ್ದರು ಮತ್ತು 1.83 ಲಕ್ಷ ಕೋಟಿ ರೂ.ಗೂ ಹೆಚ್ಚು ನಿವ್ವಳ ಸಂಪತ್ತನ್ನು ಹೊಂದಿದ್ದರು. ಆದರೆ ಫೆಬ್ರವರಿ 2020 ರಲ್ಲಿ UK ನ್ಯಾಯಾಲಯದ ಮುಂದೆ ಅನಿಲ್ ಅಂಬಾನಿ ದಿವಾಳಿತನವನ್ನು ಘೋಷಿಸಿದರು. ಅಲ್ಲಿಂದ ರಿಲಾಯನ್ಸ್ ಷೇರು ಮಾರುಕಟ್ಟೆಯಲ್ಲಿ ನೆಲಕಚ್ಚಿತ್ತು.

click me!