ಫ್ರಾನ್ಸ್ ಯಾಕೆ? ಭಾರತದ ಅಳಿಯ ಸಿಕ್ಕಿಲ್ವಾ? ನೆಟ್ಟಿಗನ ಪ್ರಶ್ನೆಗೆ ಮಹೀಂದ್ರ ಖಡಕ್ ಉತ್ತರ!

Published : Nov 27, 2022, 07:31 PM IST
ಫ್ರಾನ್ಸ್ ಯಾಕೆ? ಭಾರತದ ಅಳಿಯ ಸಿಕ್ಕಿಲ್ವಾ? ನೆಟ್ಟಿಗನ ಪ್ರಶ್ನೆಗೆ ಮಹೀಂದ್ರ ಖಡಕ್ ಉತ್ತರ!

ಸಾರಾಂಶ

ಉದ್ಯಮಿ ಆನಂದ್ ಮಹೀಂದ್ರ ಟ್ವಿಟರ್‌ನಲ್ಲಿ ಸಕ್ರಿಯ. ಸದಾ ಒಂದಲ್ಲ ಒಂದು ಕುತೂಹಲಕರ ಮಾಹಿತಿ, ವಿಡಿಯೋಗಳನ್ನು ಹಂಚಿಕೊಳ್ಳುತ್ತಾರೆ. ಹೀಗೆ ಹಂಚಿಕೊಂಡ ಟ್ವೀಟ್‌ಗೆ ನೆಟ್ಟಿಗನೊಬ್ಬ ಅನಗತ್ಯ ಪ್ರಶ್ನೆ ಕೇಳಿದ್ದಾನೆ. ನಿಮಗೆ ಭಾರತೀಯ ಅಳಿಯ ಯಾಕಿಲ್ಲ ಎಂದು ಪ್ರಶ್ನಿಸಿದ್ದಾನೆ. ಈ ಪ್ರಶ್ನೆಗೆ ಆನಂದ್ ಮಹೀಂದ್ರ ಖಡಕ್ ಉತ್ತರ ನೀಡಿದ್ದಾರೆ. 

ಮುಂಬೈ(ನ.27): ಉದ್ಯಮಿ ಆನಂದ್ ಮಹೀಂದ್ರ ಪ್ರತಿ ಬಾರಿ ಟ್ವಿಟರ್ ಮೂಲಕ ಆಸಕ್ತಿಕರ ವಿಚಾರಗಳನ್ನು ಹಂಚಿಕೊಳ್ಳುತ್ತಾರೆ. ಹೀಗಾಗಿ ಆನಂದ್ ಮಹೀಂದ್ರ ಟ್ವೀಟ್ ಅತೀ ಹೆಚ್ಚಿನ ಲೈಕ್ಸ್ ಹಾಗೂ ಕಮೆಂಟ್ ಪಡೆಯುತ್ತವೆ. ಹೀಗೆ ಆನಂದ್ ಮಹೀಂದ್ರ ತಮ್ಮ ಅಳಿಯ ಉಚ್ಚಾರಣೆ ಕುರಿತು ಟ್ವೀಟ್ ಮಾಡಿದ್ದಾರೆ. ಫ್ರಾನ್ಸ್ ಅಳಿಯನ ಉಚ್ಚಾರಣೆ ಹೇಗೆ ಎಂದು ವಿವರಿಸಿದ ಆನಂದ್ ಮಹೀಂದ್ರ, ಪದಗಳ ಉಚ್ಚಾರಣೆಯನ್ನು ಹೇಳಿದ್ದಾರೆ. ಆದರೆ ಭಾರತದಲ್ಲಿ ಉಚ್ಚಾರಣೆ ಸರಳ ಹಾಗೂ ಸ್ಪಷ್ಟವಾಗಿದೆ. ಇದೇ ಕಾರಣಕ್ಕೆ ನನ್ನ ಭಾರತ್ ಮಹಾನ್ ಎಂದು ಆನಂದ್ ಮಹೀಂದ್ರ ಹೇಳಿದ್ದಾರೆ. ಆನಂದ್ ಮಹೀಂದ್ರ ಈ ಟ್ವೀಟ್ ಮಾಡಿದ ಬೆನ್ನಲ್ಲೇ ವಿಜಯ್ ಅನ್ನೋ ನೆಟ್ಟಿಗ ನಿಮಗೆ ಫ್ರಾನ್ಸ್ ಯಾಕೆ, ಭಾರತೀಯ ಅಳಿಯ ಯಾಕಿಲ್ಲ ಎಂದು ಪ್ರಶ್ನಿಸಿದ್ದಾನೆ. ನೆಟ್ಟಿಗನ ಪ್ರಶ್ನೆಗೆ ಅಷ್ಟೆ ತಾಳ್ಮೆಯಿಂದ ಆನಂದ್ ಮಹೀಂದ್ರ ಉತ್ತರಿಸಿದ್ದಾರೆ. ಮಕ್ಕಳಿಗೆ ಅವರ ಸಂಗಾತಿಯನ್ನು ಹುಡುಕವ ಸ್ವಾತಂತ್ರ್ಯವಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಕ್ವಾಸಾಂಗ್(croissant) ಪದ ಉಚ್ಚಾರಣೆ ಸುಲಭವಲ್ಲ. ಈ ಬ್ರೆಡ್ ಅತ್ಯಂತ ನೋವಿನ ಹಾಗೂ ತಲೆನೋವಿನಿಂದ ಕೂಡಿದೆ ಅನ್ನೋದನ್ನು ಫ್ರಾನ್ಸ್ ಅಳಿಯ ಒಪ್ಪಿಕೊಳ್ಳತ್ತಾರೆ. ಇದೇ ಕಾರಣಕ್ಕೆ ನಾವು ಭಾರತೀಯರು ಉಚ್ಚಾರಣೆಯನ್ನು ಸರಳ ಹಾಗೂ ಸ್ಪಷ್ಟವಾಗಿ ಮಾಡಿದ್ದಾರೆ. ಈ ರೀತಿಯ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್ ನಮ್ಮದು ಎಂದಿದ್ದಾರೆ.

ಭಾರತದ ಕೊನೆಯ ಟೀ ಸ್ಟಾಲ್‌ನಲ್ಲಿ ಡಿಜಿಟಲ್ ಪೇಮೆಂಟ್‌ಗೆ ಅವಕಾಶ; ಆನಂದ್ ಮಹೀಂದ್ರಾ ಟ್ವೀಟ್

ಈ ಟ್ವೀಟ್‌ಗೆ ಪ್ರತಿಕ್ರಿಯಿಸಿದ ನೆಟ್ಟಿಗ ವಿಜಯ್, ಇದು ಅನಗತ್ಯ ಆದರೂ ಕೇಳುತ್ತೇನೆ, ನಿಮಗೆ ಭಾರತೀಯ ಅಳಿಯ ಯಾಕಿಲ್ಲ ಎಂದು ಪ್ರಶ್ನಿಸಿದ್ದಾರೆ. ಆನಂದ್ ಮಹೀಂದ್ರ ತಾಳ್ಮೆಯಿಂದಲೇ ಈತನ ಪ್ರಶ್ನೆಗೆ ಉತ್ತರಿಸಿದ್ದಾರೆ. ಮಕ್ಕಳಿಗೆ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದೆ. ಯಾಕೆಂದರೆ ಅನಗತ್ಯವಾಗಿ ಅವರ ಸ್ವಾತಂತ್ರ್ಯದಲ್ಲಿ ಹಸ್ತಕ್ಷೇಪ ಮಾಡುವುದು ನನ್ನ ಕೆಲಸವಲ್ಲ. ಅವರು ಸ್ವತಂತ್ರವಾಗಿ ತಮ್ಮ ಬಾಳ ಸಂಗಾತಿಯನ್ನು ಆಯ್ಕೆಮಾಡಿಕೊಳ್ಳುತ್ತಾರೆ ಎಂದರೆ ನಾನು ಹೆಮ್ಮೆ ಪಡುತ್ತೇನೆ ಎಂದು ಆನಂದ್ ಮಹೀಂದ್ರ ಟ್ವೀಟ್ ಮಾಡಿದ್ದಾರೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ರಿಲಯನ್ಸ್‌ ಪವರ್‌, 10 ಮಂದಿ ವಿರುದ್ಧ ಇ.ಡಿ.ಚಾರ್ಜ್‌ಶೀಟ್‌
ಇಂದಿಗೋ ನಾಳೆಗೋ ಎನ್ನುವಂತಿಲ್ಲ, ತಕ್ಷಣದಿಂದಲೇ ಪ್ರಯಾಣಿಕರಿಗೆ ಹಣ ರೀಫಂಡ್‌ ಮಾಡಿ; ಇಂಡಿಗೋಗೆ ಸೂಚಿಸಿದ ಸರ್ಕಾರ!