
ನವದೆಹಲಿ: ಜುಲೈ 9ರಿಂದ ಜಾರಿಗೆ ಬರಬೇಕಿದ್ದ ಹೊಸ ತೆರಿಗೆ ನೀತಿಯನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಆಗಸ್ಟ್ 1ರವರೆಗೆ ಮುಂದೂಡಿಕೆ ಮಾಡಿದ್ದಾರೆ. ಈಗಾಗಲೇ 14 ದೇಶಗಳ ಮೇಲೆ ಪರಸ್ಪರ ಸುಂಕ ವಿಧಿಸಲಾಗುತ್ತದೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದ್ದಾರೆ. ಟ್ರಂಪ್ ತೆಗೆದುಕೊಂಡಿರುವ ಈ ನಿರ್ಧಾರದಿಂದ ಜನರು ಸುರಕ್ಷಿತ ಹೂಡಿಕೆಯತ್ತ ಮುಖ ಮಾಡುತ್ತಿದ್ದಾರೆ. ಇಂದು ಚಿನ್ನವನ್ನು ಅತ್ಯಂತ ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗುತ್ತದೆ. ಹಾಗಾಗಿ ಚಿನ್ನದ ಬೇಡಿಕೆ ಹೆಚ್ಚಾಗಲಿದೆ. ಆದ್ದರಿಂದ ಚಿನ್ನದ ಬೆಲೆ ಏರಿಳಿತದ ಮೇಲೆ ನಿಗಾ ಇರಿಸೋದು ಒಳ್ಳೆಯದು ಎಂದು ಹೂಡಿಕೆ ಮತ್ತು ಮಾರುಕಟ್ಟೆ ತಜ್ಞರು ಸಲಹೆ ನೀಡುತ್ತಿದ್ದಾರೆ.
ಜಪಾನ್, ದಕ್ಷಿಣ ಕೊರಿಯಾ ಸೇರಿದಂತೆ 14 ದೇಶಗಳ ಮೇಲೆ ಶೇ.25ರಿಂದ ಶೇ.40 ರಷ್ಟು ಸುಂಕ ವಿಧಿಸಲಾಗುವುದು ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. 1ನೇ ಆಗಸ್ಟ್ 2025ರಿಂದ ಹೊಸ ತೆರಿಗೆಗಳು ಅನ್ವಯವಾಗಲಿವೆ. ಬ್ರಿಕ್ಸ್ ತೆಗೆದುಕೊಳ್ಳುವ ಅಮೆರಿಕ ವಿರೋಧದ ನೀತಿಗಳನ್ನು ಬೆಂಬಲಿಸುವ ರಾಷ್ಟ್ರಗಳ ಮೇಲೆ ಶೇ.10ರಷ್ಟು ತೆರಿಗೆಯನ್ನು ಹೆಚ್ಚುವರಿಯಾಗಿ ವಿಧಿಸಲಾಗುವುದು ಎಂದು ಟ್ರಂಪ್ ಎಚ್ಚರಿಕೆಯನ್ನು ನೀಡಿದ್ದಾರೆ.
ಡೊನಾಲ್ಡ್ ಟ್ರಂಪ್ ಬೆದರಿಕೆ ಸಂದೇಶ
ಸೋಮವಾರ ಟ್ರೂತ್ ಸಾಮಾಜಿಕ ಜಾಲತಾಣದಲ್ಲಿ ಸುಂಕ ವಿಧಿಸುವ ಕುರಿತು ಡೊನಾಲ್ಡ್ ಟ್ರಂಪ್ ಬರೆದುಕೊಂಡಿದ್ದಾರೆ. ಅಮೆರಿಕದನ್ ವಿರೋಧಿ ನೀತಿಗಳೊಂದಿಗೆ ತನ್ನನ್ನು ಗುರುತಿಸುವ ಬ್ರಿಕ್ಸ್ ದೇಶಗಳ ಮೇಲೆ ಶೇ.10 ರಷ್ಟು ಹೆಚ್ಚುವರಿಯಾಗಿ ಸುಂಕ ವಿಧಿಸಲಾಗುತ್ತದೆ ಎಂದು ಬರೆದುಕೊಂಡಿದ್ದಾರೆ. ಜುಲೈ 6 ಮತ್ತು ಜುಲೈ 7ರಂದು ರಿಯೋ ಡಿ ಜನೈರೋದಲ್ಲಿ ನಡೆದ 17ನೇ ಶೃಂಗಸಭೆ ಮುಕ್ತಾಯಗೊಳ್ಳುತ್ತಿದ್ದಂತೆ ಡೊನಾಲ್ಡ್ ಟ್ರಂಪ್ ಈ ಬೆದರಿಕೆಯ ಹೇಳಿಕೆಯನ್ನು ನೀಡಿದ್ದಾರೆ. ಈ ಶೃಂಗಸಭೆಯಲ್ಲಿ ಅಮೆರಿಕ ತೆಗೆದುಕೊಳ್ಳುತ್ತಿರುವ ಏಕಪಕ್ಷೀಯ ನಿರ್ಧಾರ ಮತ್ತು ಸುಂಕ ವಿಧಿಸುವ ಕುರಿತ ಚರ್ಚೆಗಳು ನಡೆದಿದ್ದವು.
ಟ್ರಂಪ್ ಹೇಳಿಕೆಯಿಂದ ಮಾರುಕಟ್ಟೆಯಲ್ಲಿ ಸಂಚಲನ
ಡೊನಾಲ್ಡ್ ಟ್ರಂಪ್ ಈ ಎಚ್ಚರಿಕೆ ಸಂದೇಶದ ಬಳಿಕ ನಾಲ್ಕು ದಿನಗಳಿಂದ ಕುಸಿತ ಕಾಣುತ್ತಿದ್ದ ಚಿನ್ನದ ಬೆಲೆಯಲ್ಲಿ ಮತ್ತೆ ಏರಿಕೆಯಾಗುತ್ತಿದೆ. ಮಲ್ಟಿ ಕಮಾಡಿಟಿ ಎಕ್ಸ್ಚೇಂಜ್ (MCX) ನಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂಗೆ 87,118 ರೂ. ಆಗಿತ್ತು. 22 ಕ್ಯಾರೆಟ್ ಚಿನ್ನದ ಬೆಲೆ ಕೂಡ 10 ಗ್ರಾಂಗೆ 89,283 ರೂ. ಆಗಿತ್ತು. ಬುಲಿಯನ್ ಮಾರುಕಟ್ಟೆಯಲ್ಲಿಯೂ ಸಹ, 10 ಗ್ರಾಂಗೆ 24 ಕ್ಯಾರೆಟ್ ಮತ್ತು 22 ಕ್ಯಾರೆಟ್ ಚಿನ್ನದ ಬೆಲೆ ಕ್ರಮವಾಗಿ 97,520 ರೂ. ಮತ್ತು 89,393 ರೂ. ದಾಖಲಾಗಿದೆ.
ಚೀನಾದಿಂದಲೂ ಚಿನ್ನ ಖರೀದಿ
ಈ ಎಲ್ಲಾ ಬೆಳವಣಿಗೆ ನಡುವೆ ಚೀನಾ ಸಹ ಅತ್ಯಧಿಕವಾಗಿ ಚಿನ್ನವನ್ನು ಖರೀದಿ ಮಾಡುತ್ತಿರೋದರಿಂದ ಚಿಲ್ಲರೆ ಮಾರುಕಟ್ಟೆ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಡಾಲರ್ ಮೇಲಿನ ಅವಲಂಬನೆ ಕಡಿಮೆ ಮಾಡಿಕೊಳ್ಳಲು ಮತ್ತು ವಿದೇಶಿ ವಿನಿಮಯದ ಮೀಸಲು ಪ್ರಮಾಣ ಹೆಚ್ಚಿಸಿಕೊಳ್ಳುವ ದೃಷ್ಟಿಯಲ್ಲಿ ಚೀನಾ ಚಿನ್ನವನ್ನು ಖರೀದಿ ಮಾಡುತ್ತಿದೆ. ಏಪ್ರಿಲ್-2025ರಲ್ಲಿ ಚಿನ್ನದ ಬೆಲೆ ಗರಿಷ್ಟಮಟ್ಟವನ್ನು ತಲುಪಿತ್ತು. ಈ ವರ್ಷದ ಅಂತ್ಯಕ್ಕೆ ಚಿನ್ನದ ಬೆಲೆ ಸಂಪೂರ್ಣವಾಗಿ 1 ಲಕ್ಷದ ಗಡಿ ದಾಟಲಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಭಾರತದಲ್ಲಿಂದು 24 ಕ್ಯಾರಟ್ ಚಿನ್ನದ ಬೆಲೆ
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.