ಟಿಸಿಎಸ್ ಬೆನ್ನಲ್ಲೇ ಉದ್ಯೋಗ ಕಡಿತಕ್ಕೆ ಮುಂದಾದ ಅಮೇಜಾನ್, ಶೀಘ್ರ WPB ಸಿಇಒ ರಾಜೀನಾಮೆ

Published : Aug 05, 2025, 08:18 PM IST
Amazon

ಸಾರಾಂಶ

ಟಿಸಿಎಸ್ 12000 ಉದ್ಯೋಗ ಕಡಿತಕ್ಕೆ ಮುಂದಾದ ಬೆನ್ನಲ್ಲೇ ಮಾರುಕಟ್ಟೆಯಲ್ಲಿ ಅಲ್ಲೋಕಲ್ಲೋ ಆರಂಭಗೊಂಡಿದೆ. ಇದರ ಬೆನ್ನಲ್ಲೇ ಇದೀಗ ಅಮೇಜಾನ್ ಉದ್ಯೋಗ ಕಡಿತ ಮಾಡುತ್ತಿದೆ. ಇದರ ಪರಿಣಾಮ ಸಿಇಒ ಶೀಘ್ರದಲ್ಲೇ ರಾಜೀನಾಮೆ ನೀಡಲಿದ್ದಾರೆ.

ವಾಶಿಂಗ್ಟನ್ (ಆ.05) ಆರ್ಥಿಕ ಹಿಂಜರಿತ ತೀವ್ರಗೊಳ್ಳುತ್ತಿದೆಯಾ ಅನ್ನೋ ಪ್ರಶ್ನೆಗೆ ಸದ್ಯ ನಡೆಯುತ್ತಿರುವ ಬೆಳವಣಿಗೆ ಆತಂಕ ತರುತ್ತಿದೆ. ಟಿಸಿಎಸ್ ಈಗಾಗಲೇ ಉದ್ಯೋಗ ಕಡಿತ ಘೋಷಿಸಿದೆ. ಬರೋಬ್ಬರಿ 12,000 ಉದ್ಯೋಗ ಕಡಿತ ಘೋಷಿಸಿದೆ. ಇದರ ನಡುವೆ ಅತೀದೊಡ್ಡ ಜಾಗತಿಕ ಕಂಪನಿಯಾಗಿರುವ ಅಮೇಜಾನ್ ಉದ್ಯೋಗ ಕಡಿತ ಘೋಷಿಸಿದೆ. ಅಮೇಜಾನ್ ಸಂಸ್ಥೆಯ ವಾಂಡರೆ ಪಾಡ್‌ಕಾಸ್ಟ್ ಬ್ಯೂಸಿನೆಸ್ ವಿಭಾಗವನ್ನೇ ಅಮೇಜಾನ್ ಸಂಪೂರ್ಣವಾಗಿ ಹೊಸದಾಗಿ ಆರಂಭಿಸುತ್ತಿದೆ. ಹೀಗಾಗಿ ಈ ವಿಭಾಗದ ಎಲ್ಲಾ ಉದ್ಯೋಗ ಕಡಿತಗೊಳ್ಳುತ್ತಿದೆ. ಈ ವಿಭಾಗ ರಿವ್ಯಾಂಪ್ ಮಾಡುತ್ತಿರುವ ಕಾರಣ ಶೀಘ್ರದಲ್ಲೇ ವಾಂಡರೇ ಪಾಡ್‌ಕಾಸ್ಟ್ ಬ್ಯೂಸಿನೆಸ್ ಸಿಇಒ ಜೆನ್ ಸರ್ಜೆಂಟ್ ರಾಜೀನಾಮೆ ನೀಡುತ್ತಿದ್ದಾರೆ.

ವಾಂಡೆರೇಯಲ್ಲಿ ಮಹತ್ವದ ಬದಲಾವಣೆ

ವಾಂಡರೇ ಪಾಡ್‌ಕಾಸ್ಟ್ ವಿಭಾಗದಲ್ಲಿ ಮಹತ್ವದ ಬದಲಾವಣೆ ಮಾಡಲಾಗುತ್ತಿದೆ. ಯ್ಯೂಟ್ಯೂಬ್ , ಸ್ಪಾಟಿಫೈ‌ಗೆ ಪ್ರತಿಸ್ಪರ್ಧಿಯಾಗಿ ವಾಂಡರೇ ಬೆಳೆಸಲು ಅಮೇಜಾನ್ ಮುಂದಾಗಿದೆ. ಅಮೇಜಾನ್ ಸ್ಟೋರಿಟೆಲ್ಲಿಂಗ್ ಹಾಗೂ ಸಬ್‌‌ಸ್ಕ್ರಿಪ್ಶನ್ ವಾಂಡರೆಯನ್ನು ಆಡಿಬಲ್ ಜೊತೆ ಮರ್ಜ್ ಮಾಡಲು ಮುಂದಾಗಿದೆ. ಹೊಸದಾಗಿ ಅಮೆಜಾನ್ ಆಡಿಯೋಬುಕ್ ಹೊಸ ರೂಪದಲ್ಲಿ ಬಿಡುಗಡೆಯಾಗುತ್ತಿದೆ.

ಅಮೇಜಾನ್ ಉದ್ಯೋಗ ಕಡಿತ ಎಷ್ಟು?

ಅಮೇಜಾನ್ ಸದ್ಯ 110 ಮಂದಿ ಉದ್ಯೋಗ ಕಡಿತ ಮಾಡಲು ಮುಂದಾಗಿದೆ. ವಾಂಡರೇ ಪಾಡ್‌ಕಾಸ್ಟ್ ವಿಭಾಗ 110 ಮಂದಿ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಹೊಸ ರೂಪದಲ್ಲಿ ಬ್ಯೂಸಿನೆಸ್ ಮಾಡೆಲ್ ಜಾರಿಗೊಳಿಸಲು ಅಮೇಜಾನ್ ಮುಂದಾಗಿದೆ.

ಹಲವು ಟೆಕ್ ಕಂಪನಿಗಳಲ್ಲಿ ಉದ್ಯೋಗ ಕಡಿತ ಭೀತಿ

ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ದೇಶಗಳಲ್ಲಿನ ಟೆಕ್ ಕಂಪನಿಗಳು ಉದ್ಯೋಗ ಕಡಿತ ಮಾಡುತ್ತಿದೆ. ಇದು ಮತ್ತೊಂದು ಅತೀ ದೊಡ್ಡ ಆರ್ಥಿಕ ಹಿಂಜರಿತಕ್ಕೆ ಕಾರಣವಾಗುತ್ತಾ ಅನ್ನೋ ಆತಂಕವೂ ಹಲವರನ್ನು ಕಾಡುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಭಾರತದ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ 12,000 ಉದ್ಯೋಗ ಕಡಿತ ಮಾಡಲು ಮುಂದಾಗಿದೆ. 2026ರ ಆರಂಭದಿಂದ ಹಂತ ಹಂತವಾಗಿ ಟಿಸಿಎಸ್ ಉದ್ಯೋಗ ಕಡಿತಗೊಳ್ಳಲಿದೆ. ಟಿಸಿಎಸ್ ಉದ್ಯೋಗ ಕಡಿತ ಭಾರಿ ಕೋಲಾಹಲ ಸೃಷ್ಟಿಸಿದೆ. ಟಿಸಿಎಸ್ ಒಟ್ಟು ಉದ್ಯೋಗಿಳ ಪೈಕಿ ಶೇಕಡಾ 2ರಷ್ಟು ಮಾತ್ರ ಉದ್ಯೋಗ ಕಡಿತ ಮಾಡುತ್ತಿದೆ ಎಂದಿದೆ.

 

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ವಿಶ್ವದ ಅತಿ ಬಲಿಷ್ಠ ಕರೆನ್ಸಿಗಳಿವು: ಭಾರತದ ರುಪಾಯಿ ಮುಂದೆ ಘರ್ಜಿಸುವ ಡಾಲರ್ ಈ ದೇಶದ ಕರೆನ್ಸಿ ಮುಂದೆ ಡಮ್ಮಿ!
ಆರ್‌ಬಿಐ ಮಹತ್ವದ ನಿರ್ಧಾರ, ರೆಪೋ ದರ ಬದಲಾವಣೆಯಿಂದ ಸಾಲದ ಬಡ್ಡಿ ಭಾರಿ ಇಳಿಕೆ