7th Pay Commission: ಕೇಂದ್ರ ಸರ್ಕಾರಿ ನೌಕರರರಿಗೆ ಮೋದಿ ಸರ್ಕಾರದ ಹೋಳಿ ಗಿಫ್ಟ್, ತುಟ್ಟಿಭತ್ಯೆ ಹೆಚ್ಚಳ?

Published : Mar 09, 2022, 04:02 PM ISTUpdated : Mar 09, 2022, 04:03 PM IST
7th Pay Commission: ಕೇಂದ್ರ ಸರ್ಕಾರಿ ನೌಕರರರಿಗೆ ಮೋದಿ ಸರ್ಕಾರದ ಹೋಳಿ ಗಿಫ್ಟ್, ತುಟ್ಟಿಭತ್ಯೆ ಹೆಚ್ಚಳ?

ಸಾರಾಂಶ

* ಹೋಳಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಭರ್ಜರಿ ಸುದ್ದಿ * ಕೇಂದ್ರ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (ಡಿಎ) ಹೆಚ್ಚಿಸಲು ನಿರ್ಧಾರ * ಡಿಎ ಎಷ್ಟು ಹೆಚ್ಚಾಗಬಹುದು? ಯಾವಾಗ ಘೋಷಣೆ? ಇಲ್ಲಿದೆ ವಿವರ

ನವದೆಹಲಿ(ಮಾ.09): ಹೋಳಿಗೂ ಮುನ್ನ ಕೇಂದ್ರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಭರ್ಜರಿ ಸುದ್ದಿ ಸಿಗಲಿದೆ. ವರದಿಗಳ ಪ್ರಕಾರ, ಸರ್ಕಾರವು ಕೇಂದ್ರ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆಯನ್ನು (Dearness Allowance) ಹೆಚ್ಚಿಸಲು ನಿರ್ಧರಿಸಿದೆ ಎನ್ನಲಾಗಿದೆ. ಹೋಳಿ ಹಬ್ಬಕ್ಕೂ ಮುನ್ನವೇ ಈ ಬಗ್ಗೆ ಘೋಷಣೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಈ ನಿರ್ಧಾರದಿಂದ 50 ಲಕ್ಷಕ್ಕೂ ಹೆಚ್ಚು ಸರ್ಕಾರಿ ನೌಕರರು ಮತ್ತು 65 ಲಕ್ಷಕ್ಕೂ ಹೆಚ್ಚು ಪಿಂಚಣಿದಾರರು ನೇರ ಪ್ರಯೋಜನ ಪಡೆಯಲಿದ್ದಾರೆ.

CEA For Central Government Employees:ಮಕ್ಕಳ ಶಿಕ್ಷಣ ಭತ್ಯೆ ಕ್ಲೇಮ್ ಮಾಡಲು ಕೇಂದ್ರ ಸರ್ಕಾರಿ ನೌಕರರಿಗೆ ಮಾ.31 ಗಡುವು

ಡಿಎ ಎಷ್ಟು ಹೆಚ್ಚಾಗಬಹುದು?

ಕೇಂದ್ರ ನೌಕರರು (Central Government Employees) ಪ್ರಸ್ತುತ ಶೇ. 31 ರಷ್ಟು ತುಟ್ಟಿಭತ್ಯೆಯನ್ನು (ಡಿಎ) ಪಡೆಯುತ್ತಾರೆ. ವರದಿಗಳ ಪ್ರಕಾರ, ಕೈಗಾರಿಕಾ ಕಾರ್ಮಿಕರ (AICPI) ಅಖಿಲ ಭಾರತ ಗ್ರಾಹಕ ಬೆಲೆ ಸೂಚ್ಯಂಕದ ಡಿಸೆಂಬರ್ 2021 ರ ಡೇಟಾವನ್ನು ಗಮನದಲ್ಲಿಟ್ಟುಕೊಂಡು, ಸರ್ಕಾರವು ಕೇಂದ್ರ ಉದ್ಯೋಗಿಗಳ DAಯನ್ನು ಮೂರು ಪ್ರತಿಶತದಷ್ಟು ಹೆಚ್ಚಿಸಬಹುದು. ಇದರೊಂದಿಗೆ ಕೇಂದ್ರ ಉದ್ಯೋಗಿಗಳ ಡಿಎ ಶೇ 34ರಷ್ಟು ಆಗಲಿದೆ.

ಈ ದಿನಾಂಕದಂದು ಘೋಷಣೆ ಆಗಬಹುದು

ದೇಶದ 5 ರಾಜ್ಯಗಳಲ್ಲಿ ಇತ್ತೀಚೆಗೆ ನಡೆದ ಚುನಾವಣೆಯ ಫಲಿತಾಂಶ ಮಾರ್ಚ್ 10 ರಂದು ಪ್ರಕಟವಾಗಲಿದೆ. ಇದರೊಂದಿಗೆ ಚುನಾವಣಾ ನೀತಿ ಸಂಹಿತೆಯೂ ಅಂತ್ಯವಾಗಲಿದೆ. ಆ ಬಳಿಕ ಸರಕಾರ ಡಿಎ ಬಗ್ಗೆ ನಿರ್ಧಾರ ಕೈಗೊಳ್ಳಬಹುದು. ವರದಿಗಳ ಪ್ರಕಾರ, ಮಾರ್ಚ್ 16, 2022 ರಂದು ಕೇಂದ್ರ ಸಚಿವ ಸಂಪುಟದ ಸಭೆ ನಡೆಯಲಿದೆ. ಕೇಂದ್ರ ನೌಕರರ ತುಟ್ಟಿಭತ್ಯೆ (ಡಿಎ) ಮತ್ತು ಡಿಯರ್‌ನೆಸ್ ರಿಲೀಫ್ (ಡಿಆರ್) ಹೆಚ್ಚಿಸಲು ಈ ಸಭೆಯಲ್ಲಿ ಘೋಷಣೆ ಮಾಡಬಹುದು ಎನ್ನಲಾಗಿದೆ.

ಕೇಂದ್ರ ನೌಕರರಿಗೆ ಹೋಳಿ ಉಡುಗೊರೆ

7ನೇ ವೇತನ ಆಯೋಗದ ಶಿಫಾರಸಿನಂತೆ ಕೇಂದ್ರ ಸರ್ಕಾರ ಮಾರ್ಚ್ 16 ರಂದು ಕೇಂದ್ರ ನೌಕರರ ತುಟ್ಟಿ ಭತ್ಯೆ ಹೆಚ್ಚಳವನ್ನು ಘೋಷಿಸಿದರೆ, ಹೋಳಿಗೂ ಮುನ್ನ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಮೋದಿ ಸರ್ಕಾರ ಹೋಳಿ ಹಬ್ಬಕ್ಕೆ ಕೊಡುವ ಉಡುಗೊರೆಯಾಗಲಿದೆ. ಈ ಬಾರಿ ಮಾರ್ಚ್ 18 ರಂದು ದೇಶಾದ್ಯಂತ ಹೋಳಿ ಹಬ್ಬ (Holi Festival) ಆಚರಿಸಲಾಗುತ್ತದೆ ಎಂಬುವುದು ಉಲ್ಲೇಖನೀಯ.

ನೌಕರರಿಗೆ ಗುಡ್‌ನ್ಯೂಸ್: 15 ಸಾವಿರಕ್ಕಿಂತ ಹೆಚ್ಚು ವೇತನ ಇರುವವರಿಗೆ ಹೊಸ ಪೆನ್ಶನ್ ಸ್ಕೀಮ್!

Dearness Allowance ಎಂದರೇನು?

ಹಣದುಬ್ಬರ ನಿರಂತರವಾಗಿ ಹೆಚ್ಚುತ್ತಿದೆ ಎಂಬುದು ಗಮನಿಸಬೇಕಾದ ಸಂಗತಿ. ಅಂತಹ ಪರಿಸ್ಥಿತಿಯಲ್ಲಿ, ಕೇಂದ್ರ ನೌಕರರ ಆದಾಯವನ್ನು ಹೆಚ್ಚಿಸುವುದು ಸಹ ಅಗತ್ಯವಾಗಿದೆ. ಹಣದುಬ್ಬರದ ಪರಿಣಾಮವನ್ನು ಕಡಿಮೆ ಮಾಡಲು ಸರ್ಕಾರವು ತನ್ನ ಉದ್ಯೋಗಿಗಳಿಗೆ ಮತ್ತು ಪಿಂಚಣಿದಾರರಿಗೆ DA ನೀಡುತ್ತದೆ. ತುಟ್ಟಿಭತ್ಯೆಯ ಲೆಕ್ಕಾಚಾರವನ್ನು ಮೂಲ ವೇತನದ ಆಧಾರದ ಮೇಲೆ ಮಾಡಲಾಗುತ್ತದೆ. ಸಾಮಾನ್ಯವಾಗಿ, ಕೇಂದ್ರ ಸರ್ಕಾರವು ಪ್ರತಿ ವರ್ಷ ಜನವರಿ ಮತ್ತು ಜುಲೈನಲ್ಲಿ ಡಿಎ ಮತ್ತು ಡಿಆರ್‌ಗೆ ಸಂಬಂಧಿಸಿದ ಪ್ರಯೋಜನಗಳನ್ನು ಪರಿಷ್ಕರಿಸುತ್ತದೆ. ನಗರಗಳಿಗೆ ಅನುಗುಣವಾಗಿ ಉದ್ಯೋಗಿಗಳ ಡಿಎಯಲ್ಲಿ ವ್ಯತ್ಯಾಸವಿದೆ.

PREV

ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.

Read more Articles on
click me!

Recommended Stories

ಅನಿಲ್ ಅಂಬಾನಿ ಕುಟುಂಬಕ್ಕೆ ಮತ್ತೊಂದು ಶಾಕ್, ಪುತ್ರನ ವಿರುದ್ದ 228 ಕೋಟಿ ರೂ ವಂಚನೆ ಕೇಸ್
ಮದ್ಯ ಮಾರಾಟಕ್ಕೆ ಇಳಿದ ಯುವರಾಜ್‌ ಸಿಂಗ್‌, ಒಂದು ತಿಂಗಳ ಸಂಬಳಕ್ಕೆ ಬರುತ್ತೆ ಒಂದು ಬಾಟಲ್‌!