ಮುಂದಿನ ಮಾರ್ಚ್ ಒಳಗೆ ದೇಶದ ಶೇ.50 ಎಟಿಎಂ ಬಂದ್

By Web DeskFirst Published Nov 21, 2018, 6:01 PM IST
Highlights

ಆಧುನಿಕ ಜಗತ್ತಿನ ಪ್ರತಿಯೊಬ್ಬರು ಪ್ರತಿ ದಿನದ ವಹಿವಾಟಿಗೆ, ನಗದು ಹಣಕ್ಕಾಗಿ ಎಟಿಎಂಗಳನ್ನೇ ನಂಬಿಕೊಂಡಿದ್ದಾರೆ. ನೋಟ್ ಬ್ಯಾನ್ ಸಂದರ್ಭ ಎಟಿಎಂಗಳಲ್ಲಿ ಹಣ ಸಿಗದೆ ಇದ್ದಾಗ ದೇಶ ಕಂಡ ಸಮಸ್ಯೆಗಳು  ದೊಡ್ಡ ಮಟ್ಟದಲ್ಲಿಯೇ ವರದಿಯಾಗಿತ್ತು. ಆದರೆ ಈಗ ದೊರೆತಿರುವ ವರದಿ ನಮಗೆಲ್ಲ ಮತ್ತೊಂದು ಆಘಾತ ನೀಡುತ್ತಿದೆ.

ಮುಂಬೈ[ನ.21] 2019ರ ಮಾರ್ಚ್ ವೇಳೆಗೆ ದೇಶದಲ್ಲಿರುವ ಎಟಿಎಂಗಳಲ್ಲಿ ಶೇ. 50ರಷ್ಟು ಎಟಿಎಂಗಳು ಕೆಲಸ ನಿಲ್ಲಿಸಲಿವೆ. ಆಪರೇಟರ್ ಗಳ ಕೊರತೆ ಈ ಎಲ್ಲ ಎಟಿಎಂಗಳ ಸ್ಥಗಿತಕ್ಕೆ ಕಾರಣವಾಗಲಿದೆ ಎಂದು ವರದಿಯೊಂದು ಹೇಳಿದೆ.

ಈ ಬಗ್ಗೆ ವರದಿ ನೀಡಿರುವ ಕಾನ್ಫಿಡರೇಶನ್ ಆಫ್ ಎಟಿಎಂ ಇಂಡಸ್ಟರಿ,  ಭಾರತದಲ್ಲಿ 2.38 ಲಕ್ಷ  ಎಟಿಎಂಗಳಿವೆ. ಇವುಗಳಲ್ಲಿ ಅರ್ಧದದಷ್ಟು ಎಟಿಎಂ ಗಳು ಸ್ಥಗಿತವಾಗಲಿವೆ. ಸರಕಾರಿ ಯೋಜನೆಗಳ ಲಾಭ ಪಡೆಯುವವರು ಮತ್ತು ಸೆಮಿ ಅರ್ಬನ್ ಪ್ರದೇಶದ ಜನರಿಗೆ ತೊಂದರೆ ಆಗಲಿದೆ ಎಂದು ವರದಿ ಹೇಳಿದೆ.

ಉದ್ಯೋಗ ಕಳೆದುಕೊಳ್ಳುವ ಭೀತಿಯೂ ಎದುರಾಗಲಿದೆ. ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಅಪ್ ಡೇಡ್ ಮಾಡುವ ಅಗತ್ಯ ಎದುರಾಗಲಿದ್ದು ನಿರ್ವೆಹಣೆ ಮಾಡುವ ಕಂಪನಿಗಳು ಯಾವ ತೀರ್ಮಾನ ಮಾಡಲಿವೆ ಎಂಬುದು ಮುಖ್ಯವಾಗಲಿದೆ ಎಂದು ಸಿಎಟಿಎಂಐ ವಕ್ತಾರರೊಬ್ಬರು ತಿಳಿಸಿದ್ದಾರೆ.

click me!