
ಬೆಂಗಳೂರು: ಸೆಪ್ಟೆಂಬರ್ 11ರಂದು ದೇಶದ್ಯಾಂತ ಬ್ಯಾಂಕ್ ಯೂನಿಯನ್‌ಗಳು ಮುಷ್ಕರಕ್ಕೆ ಕರೆ ನೀಡಿದೆ. ವಾರಕ್ಕೆ ಐದು ದಿನಗಳ ಕೆಲಸದ ವಿಧಾನ, ಪಿಂಚಣಿಯ ಬೇಡಿಕೆಗಳನ್ನು ಈಡೇರಿಸುವಂತೆ ಬೇಡಿಕೆ ಇಟ್ಟಿದ್ದು, ಇದರ ಪ್ರಭಾವ ಸತತ ನಾಲ್ಕು ದಿನಗಳ ಕಾಲ ಬ್ಯಾಂಕ್‌ಗಳು ಬಂದ್ ಆಗಲಿದೆ.
ಬ್ಯಾಂಕ್ ಖಾತೆದಾರಿಗೆ ಬಿಗ್ ಅಲರ್ಟ್ ಇಲ್ಲಿದೆ. ಬ್ಯಾಂಕ್ ಸತತವಾಗಿ ನಾಲ್ಕು ದಿನಗಳ ಕಾಲ ಬಂದ್ ಆಗಲಿದೆ. ಬ್ಯಾಂಕ್ ನೌಕರರು ವಿವಿಧ ಬೇಡಿಕೆಗಳನ್ನು ಮುಂದಿಟ್ಟು ಮುಷ್ಕರಕ್ಕೆ ಕರೆ ನೀಡಿದ್ದು, ವಾರಕ್ಕೆ ಐದು ದಿನಗಳ ಕೆಲಸ ವಿಧಾನವನ್ನು ಜಾರಿ ಮಾಡಬೇಕು. ಪಿಂಚಣಿ ಸಮಸ್ಯೆಗಳನ್ನು ತಕ್ಷಣದಿಂದಲೇ ಬಗೆಹರಿಸಬೇಕು. ಕೆಲಸ ಸಾಮರ್ಥ್ಯದ ಆಧಾರದ ಮೇಲೆ ಪ್ರೋತ್ಸಾಹ ಯೋಜನೆಗಳನ್ನು ಜಾರಿ ಮಾಡಬೇಕು ಎಂದು ಸಿಬ್ಬಂದಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ.
ಕೇಂದ್ರ ಸರ್ಕಾರ ಮೇಲೆ ಒತ್ತಡ ಹೇರಲು ಬ್ಯಾಂಕ ಯೂನಿಯನ್‌ಗಳು ಶುಕ್ರವಾರ ದೇಶದಾದ್ಯಂತ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಇದರೊಂದಿಗೆ ನಾಳೆ ಅಂದರೆ ಸೆಪ್ಟೆಂಬರ್ 11 ರಿಂದ ಬ್ಯಾಂಕ್ ಸೇವೆಗಳಲ್ಲಿ ಸಮಸ್ಯೆಗಳು ಎದುರಾಗಲಿದೆ. ಆ ಬಳಿ ಎರಡನೇ ಶನಿವಾರ ಮತ್ತು ಭಾನುವಾರ ರಜೆ ಇದ್ದು, ಸೋಮವಾರ ಗಣೇಶ ಚತುರ್ಥಿಯ ಇರುವುದರಿಂದ ಸಾರ್ವತ್ರೀಕ ರಜೆ ಇದ್ದು, ಸತತವಾಗಿ ನಾಲ್ಕು ದಿನಗಳು ಬಂದ್ ಇರಲಿದೆ.
ಸೆಪ್ಟೆಂಬರ್ 11ರಂದು ಮುಷ್ಕರ ಇರುವ ಕಾರಣ ಬ್ಯಾಂಕ್ ಚಟುವಟಿಕೆಗಳ ಮೇಲೆ ಪ್ರಭಾವ ಉಂಟಾಗಲಿದೆ. ಆ ಬಳಿಕ ಸೆಪ್ಟೆಂಬರ್ 12ರಂದು ಶನಿವಾರ ಎರಡನೇ ಶನಿವಾರ ಬ್ಯಾಂಕ್ ರಜೆ ಇರುವುದರಿಂದ ಈ ದಿನವೂ ಬ್ಯಾಂಕ್ ಕ್ಲೋಸ್ ಇರಲಿದೆ. ಇನ್ನು ಸೆಪ್ಟೆಂಬರ್ 13ರಂದು ಭಾನುವಾರ ಎಲ್ಲಾ ಸರ್ಕಾರಿ ಸೇರಿದಂತೆ ಬ್ಯಾಂಕ್‌ಗಳಿಗೆ ರಜೆ ಇರಲಿದೆ. ಆ ಬಳಿಕ ಸೋಮವಾರ ಗಣೇಶ ಹಬ್ಬ ಬಂದಿರುವ ಕಾರಣ ಸೆಪ್ಟೆಂಬರ್ 14 ತಾರೀಖು ಸಾರ್ವತ್ರೀಕ ರಜೆ ಇರುವ ದೇಶದಾದ್ಯಂತ ಬ್ಯಾಂಕ್‌ಗಳು ಬಂದ್ ಇರಲಿದೆ. ಇದರೊಂದಿಗೆ ಸೆಪ್ಟೆಂಬರ್ 11 ರಿಂದ 14ರ ವರೆಗೂ ಸತತವಾಗಿ ನಾಲ್ಕು ದಿನಗಳ ಕಾಲ ಬ್ಯಾಂಕ್ ಬಂದ್ ಆಗುತ್ತವೆ.
ಸತತ ರಜೆ ಇರುವ ಕಾರಣ ಬ್ಯಾಂಕ್‌ನಲ್ಲಿ ನಗದು ಡಿಪಾಸಿಟ್, ವಿತ್ ಡ್ರಾ, ಚೆಕ್ ಕ್ಲೀಯರ್ ನೊಂದಿಗೆ ಇತರರ ಸೇವೆಗಳು ಬಂದ್ ಇರಲಿದೆ. ಸಾಮಾನ್ಯ ಜನರೊಂದಿಗೆ ವ್ಯಾಪಾರ, ವಾಣಿಜ್ಯ ವರ್ಗದ ಮೇಲೆ ಇದರ ನೇರ ಪ್ರಭಾವ ಇರಲಿದೆ. ತಮ್ಮ ಬೇಡಿಕೆಗಳನ್ನು ಈಡೇರಿಸಲು ಸೆಪ್ಟೆಂಬರ್ 28ರಿಂದ ಮೂರು ದಿನಗಳ ಕಾಲ, ಆ ಬಳಿಕ ಅಕ್ಟೋಬರ್ 26 ರಿಂದ ಬ್ಯಾಂಕ್ ನೌಕರರ ಸಂಘಗಳು ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿವೆ.
ಈಗಾಗಲೇ ಕೇಂದ್ರ ಸರ್ಕಾರ ಬ್ಯಾಂಕ್ ಯೂನಿಯನ್‌ಗಳೊಂದಿಗೆ ಚರ್ಚೆ ನಡೆಸಿದೆ. ಆದರೆ ಈ ಚರ್ಚೆಗಳು ವಿಫಲವಾಗಿದ್ದು, ಶುಕ್ರವಾರ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಐದು ದಿನಗಳ ಕೆಲಸದ ಅವಧಿ ನಿಗದಿ ಮಾಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು ಅಲ್ಲಿಯವರೆಗೂ ಮುಷ್ಕರ ಹಿಂದಕ್ಕೆ ಪಡೆಯುವುದಿಲ್ಲ ಎಂದು ಯೂನಿಯನ್‌ಗಳ ಎಚ್ಚರಿಕೆ ನೀಡಿದ್ದಾರೆ. ಕೇಂದ್ರ ಸರ್ಕಾರ ಕಾರ್ಮಿಕ ಇಲಾಖೆಯ ಅಧಿಕಾರಿಗಳು, ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್ಸ್ (UFBU) ಪ್ರತಿನಿಧಿಗಳು ಮಾತುಕತೆ ನಡೆಸಿದ್ದು, ಮುಷ್ಕರವನ್ನು ಮುಂದೂಡುವಂತೆ ಮನವಿ ಮಾಡಿದ್ದಾರೆ. ಆದರೆ ಬ್ಯಾಂಕ್ ಯೂನಿಯನ್‌ಗಳು ಇದನ್ನು ನಿರಾಕರಿಸಿ ಮುಷ್ಕರಕ್ಕೆ ಕರೆ ನೀಡಿವೆ.
ವ್ಯವಹಾರ (business ideas in kannada) , ಬ್ಯಾಂಕಿಂಗ್ (Banking News), ಹಣಕಾಸು, ಭಾರತೀಯ ಆರ್ಥಿಕತೆ, ಜಾಗತಿಕ ಮಾರುಕಟ್ಟೆ, ಷೇರು ಮಾರುಕಟ್ಟೆ, ಹೂಡಿಕೆ ಸೇರಿದಂತೆ ಇನ್ನಿತರ ಮತ್ತು ಇತ್ತೀಚಿನ ಹಣಕಾಸಿನ ಸುದ್ದಿಗಳನ್ನು ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಓದಿರಿ.