Budget Session 11 ಕೋಟಿ ರೈತರಿಗೆ PM ಕಿಸಾನ್, ಜೀವ ಉಳಿಸಿಲು ಲಸಿಕೆ, ಅಭಿವೃದ್ಧಿ ಭಾರತ ಅಭಿನಂದಿಸಿದ ರಾಷ್ಟ್ರಪತಿ!

By Suvarna News  |  First Published Jan 31, 2022, 12:36 PM IST
  • ರಾಷ್ಟ್ರಪತಿ ಭಾಷಣದೊಂದಿದೆ ಕೇಂದ್ರ ಬಜೆಟ್ ಅಧಿವೇಶನ ಆರಂಭ
  • ಕೋವಿಡ್ ವಾರಿಯರ್ಸ್ ಅಭಿನಂದಿಸಿದ ರಾಮನಾಥ್ ಕೋವಿಂದ್
  • ಸರ್ಕಾರದ ಸಾಧನಗಳ ವಿವರಣೆ ನೀಡಿದ ರಾಷ್ಟ್ರಪತಿ
  • ಕೇಂದ್ರ ಬಜೆಟ್ 2022 ಅಧಿವೇಶನದಲ್ಲಿ ರಾಮನಾಥ್ ಕೋವಿಂದ್ ಭಾಷಣ ಹೈಲೈಟ್ಸ್

ನವದೆಹಲಿ(ಜ.31):  ಕೇಂದ್ರ ಬಜೆಟ್ ಅಧಿವೇಶನ 2022 ಆರಂಭಗೊಂಡಿದೆ. ಸೋಮವಾರ(ಜ.31) ರಾಷ್ಟ್ರಪತಿ ರಾಮನಾಥ್ ಕೋವಿಂದ್(Ram Nath Kovind) ಭಾಷಣದೊಂದಿದೆ ಬಜೆಟ್ ಅಧಿವೇಶನ(Budget Session 2022) ಆರಂಭಗೊಂಡಿದೆ. ರಾಷ್ಟ್ರಪತಿ ತಮ್ಮ ಭಾಷಣದ ಆರಂಭದಲ್ಲೇ ಕೋವಿಡ್ ವಾರಿಯರ್ಸ್‌ಗೆ ಅಭಿನಂದನೆ ಸಲ್ಲಿಸಿದ್ದಾರೆ. ಇದೇ ವೇಳೆ ಜನರ ಜೀವ ಉಳಿಸಿದ ಲಸಿಕೆ, ರೈತರಿಗೆ ಪಿಎಂ ಕಿಸಾನ್ ಯೋಜನೆ ನೆರವು ಸೇರಿದಂತೆ ಭಾರತದ ಕಳೆದೊಂದು ವರ್ಷದಲ್ಲಿನ ಸಾಧನೆ, ಅಭಿವೃದ್ಧಿ ಕುರಿತು ಬೆಳಕು ಚೆಲ್ಲಿದ್ದಾರೆ. 

ಕೊರೋನಾ ಕಾರಣ ಹಲವ ಜೀವಗಳು ಬಲಿಯಾಗಿವೆ. ಈ ಸಂದಿಗ್ಧ ಪರಿಸ್ಥಿತಿಯಲ್ಲಿ ವೈದ್ಯರು, ನರ್ಸ್, ವಿಜ್ಞಾನಿಗಳು, ಆರೋಗ್ಯ ಕಾರ್ಯಕರ್ತರು, ಫ್ರಂಟ್‌ಲೈನ್ ವಾರಿಯರ್ಸ್ ಜೊತೆಯಾಗಿ ಪ್ರವರ್ತಿಸಿದ್ದಾರೆ. ಈ ವೇಳೆ ಸಂಘಟಿತರಾಗಿ ಕಾರ್ಯನಿರ್ವಹಿಸಿದ ಎಲ್ಲರಿಗೂ ರಾಮನಾಥ್ ಕೋವಿಂದ್ ಧನ್ಯವಾದ ಅರ್ಪಿಸಿದ್ದಾರೆ.  ಕೇಂದ್ರ ಸರ್ಕಾರ ಆರಂಭಿಸಿದ ಜನರ ಜೀವ ಉಳಿಸಿಲು ಆರಂಭಿಸಿದ ಲಸಿಕಾ ಅಭಿಯಾನ(Vaccine Drive) ಯಶಸ್ವಿಯಾಗಿದೆ. ಒಂದು ವರ್ಷದಲ್ಲಿ 150 ಕೋಟಿಗೂ ಅಧಿಕ ಡೋಸ್ ನೀಡಲಾಗಿದೆ. ಈ ಮೂಲಕ ಲಸಿಕೆಯಲ್ಲಿ ಭಾರತ ಹೊಸ ಇತಿಹಾಸ ರಚಿಸಿದೆ. ಇತರ ಎಲ್ಲಾ ದೇಶಗಳಿಂತ ವೇಗವಾಗಿ ಹಾಗೂ ದೇಶದ ಜನರಿಗೆ ಪರಿಣಾಮಕಾರಿಯಾಗಿ ಲಸಿಕೆ ನೀಡಾಗಿದೆ. ಇದು ಕೋವಿಡ್ ವಿರುದ್ಧದ ಹೋರಾಟದಲ್ಲಿ ಅತೀ ದೊಡ್ಡ ಗೆಲುವಾಗಿದೆ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.

Tap to resize

Latest Videos

undefined

Union Budget 2022: ಆದಾಯ ತೆರಿಗೆ ಮಿತಿ ಹೆಚ್ಚಳ, ಆರೋಗ್ಯ ವಲಯಕ್ಕೆ ಹೆಚ್ಚಿನ ಅನುದಾನ ಸಾಧ್ಯತೆ

ಭಾರತದ ಸಮಗ್ರ ಅಭಿವದ್ಧಿ, ಸಮಾನತೆ, ಸೌಹಾರ್ದತೆ ಕುರಿತು ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್  ಆದರ್ಶವನ್ನು ಉಲ್ಲೇಖಿಸಿದರು. ಆದರ್ಶ ಸಮಾಜ ಎಲ್ಲರಿಗೂ ಸಮಾನತೆ, ಎಲ್ಲರಲ್ಲೂ ಸೌಹಾರ್ದತೆ, ಸಾಮಾಜಿಕ ಮೌಲ್ಯಗಳನ್ನು ಎತ್ತಿಹಿಡಿಯುವ ಸಮಾಜವಾಗಿದೆ ಎಂದು ಅಂಬೇಡ್ಕರ್ ಹೇಳಿದ್ದರು.  ಜನರಂದ ಆಯ್ಕೆಯಾದ ಸರ್ಕಾರ ಪ್ರಜಾಪ್ರಭುತ್ವದ ಮೂಲಕ ಜನರ ಭಾವನೆಗಳನ್ನು, ಅವರ ಜೀವನವನ್ನು ಗೌರವಿಸುವ, ಸುಧಾರಿಸುವ ಸಂಸ್ಥೆಯಾಗಿದೆ. ನನ್ನ ಸರ್ಕಾರ ಅಂಬೇಡ್ಕರ್ ಆದರ್ಶದ ಪಥದಲ್ಲಿ ಸಾಗಿಸಿದೆ. ಅದೇ ಮಾರ್ಗದರ್ಶಿಯನ್ನು ಅಳವಡಿಸಿಕೊಂಡು ಮುನ್ನಡೆಯುತ್ತಿದೆ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.

"

ಆರೋಗ್ಯ ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ಸರ್ಕಾರದ ಆಯುಷ್ಮಾನ್(Ayushman Bharat) ಭಾರತ ಆರೋಗ್ಯ ಯೋಜನೆ ದೇಶವನ್ನು ಬಿಕ್ಕಟ್ಟಿನಿಂದ ಪಾರುಮಾಡಲು ನೆರವಾಗಿದೆ. ದೇಶದಲ್ಲಿ  64,000 ಕೋಟಿ ರೂಪಾಯಿ ಆಯುಷ್ಮಾನ್ ಭಾರತ್ ಆರೋಗ್ಯ ಮೂಲಸೌಕರ್ಯ ಮಿಷನ್ ಭಾರತದ ಆರೋಗ್ಯ ಬಿಕ್ಕಟ್ಟನ್ನು ಎದುರಿಸಲು ನೆರವಾಗಿದೆ ಎಂದರು

ಅತೀ ದೊಡ್ಡ ಆಹಾರ ವಿತರಣೆ

ಕೊರೋನಾ(Coronavirus) ಕಾರಣ ಜನರ ಜೀವನ ದುಸ್ತರವಾಗಿದೆ. ಇದರ ಗಂಭೀರತೆಯನ್ನು ಅರಿತಿರುವ ಸರ್ಕಾರ ಯಾರೂ ಹಸಿವಿನಿಂದ ಇರಬಾರದು ಎಂದು ಗರೀಬ್ ಕಲ್ಯಾಣ್ ಯೋಜನೆಯನ್ನು(Garib Kalyan Yojana) ಮತ್ತಷ್ಟು ವಿಸ್ತಾರ ಮಾಡಿದೆ. ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ ಯೋಜನೆಯಿಂದ ಪ್ರತಿ ತಿಂಗಳು ಬಡವರಿಗೆ ಉಚಿತ ಪಡಿತರ ವಿತರಿಸಲಾಗುತ್ತಿದೆ. ಇದು ಭಾರತದ ಅತೀ ದೊಡ್ಡ ಆಹಾರಾ ವಿತರಣಾ ಕಾರ್ಯಕ್ರಮವಾಗಿದೆ. ಕೋವಿಡ್ ಕಾರಣ ಹಲವು ಹಂತಗಳಲ್ಲಿ ಈ ಯೋಜನೆ ವಿಸ್ತರಿಲಾಗಿದ್ದು, ಇದೀಗ ಮಾರ್ಚ್ 2022ರವರೆಗೆ ವಿಸ್ತರಣೆ ಪಡೆದುಕೊಂಡಿದೆ ಎಂದು ರಾಮಾನಥ್ ಕೋವಿಂದ್ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

11 ಕೋಟಿ ರೈತರಿಗೆ 1.80 ಲಕ್ಷ ಕೋಟಿ ರೂ ಪಿಎಂ ಕಿಸಾನ್ 

ಗ್ರಾಮೀಣ ಕುಟುಂಬಗಳಿಗೆ ನೀರು ಒದಗಿಸುವ ನಿಟ್ಟಿಲ್ಲಿ ಹರ್ ಘರ್ ಜಲ್ ಯೋಜನೆ ಅಡಿ 6 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನೀರು ಒದಗಿಸಲಾಗಿದೆ.  ಬೀದಿ ಬದಿ ವ್ಯಾಪಾರಿಗಳಿಗೆ  2,900 ಕೋಟಿ ರೂಪಾಯಿ ನೆರವು ನೀಡಲಾಗಿದೆ. ಇದರಿಂದ 28 ಲಕ್ಷ ಬೀದಿ ಬದಿ ವ್ಯಾಪಾರಿಗಳು ಲಾಭ ಪಡೆದಿದ್ದಾರೆ.ಗ್ರಾಮೀಣ ಕುಟುಂಬಗಳಿಗೆ ನೀರು ಒದಗಿಸುವ ನಿಟ್ಟಿಲ್ಲಿ ಹರ್ ಘರ್ ಜಲ್ ಯೋಜನೆ ಅಡಿ 6 ಕೋಟಿಗೂ ಹೆಚ್ಚು ಗ್ರಾಮೀಣ ಕುಟುಂಬಗಳಿಗೆ ನೀರು ಒದಗಿಸಲಾಗಿದೆ.  ಬೀದಿ ಬದಿ ವ್ಯಾಪಾರಿಗಳಿಗೆ  2,900 ಕೋಟಿ ರೂಪಾಯಿ ನೆರವು ನೀಡಲಾಗಿದೆ. ಇದರಿಂದ 28 ಲಕ್ಷ ಬೀದಿ ಬದಿ ವ್ಯಾಪಾರಿಗಳು ಲಾಭ ಪಡೆದಿದ್ದಾರೆ. 11 ಕೋಟಿ ರೈತ ಕುಟುಂಬಗಳು ಪ್ರಧಾನ ಮಂತ್ರಿ ಕಿಸಾನ್ ಯೋಜನೆ ಲಾಭ ಪಡೆದುಕೊಂಡಿದ್ದಾರೆ. 1.80 ಲಕ್ಷ ಕೋಟಿ ರೂಪಾಯಿ ಈಗಾಗಲೇ ರೈತರ ಖಾತೆಗಳಿಗೆ ಹಂಚಲಾಗಿದೆ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಕೃಷಿ ರಫ್ತಿನಲ್ಲಿ ಭಾರತ ದಾಖಲೆ
ಕೊರೋನಾ ಕಾರಣ ರೈತರು ಹಲವು ಸಮಸ್ಯೆಗಳನ್ನು ಎದುರಿಸಿದ್ದಾರ. ಇದರ ನಡುವೆ ರೈತರ ದಾಖಲೆ ಬೆಳೆ ಬೆಳೆಯಲು ಸಾಧ್ಯವಾಗಿದೆ. ಇದರ ಪರಿಣಾಮ 2020-21ರಲ್ಲಿ 30 ಕೋಟಿ ಟನ್ ಆಹಾರ ಧಾನ್ಯಗಳು ಮತ್ತು 33 ಕೋಟಿ ತೋಟಗಾರಿಗೆ ಉತ್ಪನ್ನ ಉತ್ಪಾದಿಸಿದ್ದಾರೆ. ಇದರಿಂದ ದೇಶದ ಕೃಷಿ ರಫ್ತೂ 3 ಲಕ್ಷ ಕೋಟಿ ದಾಟಿದೆ ಎಂದು ರಾಮನಾಥ್ ಕೋವಿಂದ್ ಹೇಳಿದ್ದಾರೆ.

ಮಹಿಳಾ ಸಬಲೀಕರಣ
ಸರ್ಕಾರದ ಬೇಟಿ ಬಚಾವೋ, ಬೇಟಿ ಪಡಾವೋ ಸೇರಿದಂತೆ ಹಲವು ಯೋಜನೆಗಳು ಮಹಿಳೆಯರು(women empowering), ಹೆಣ್ಣುಮಕ್ಕಳನ್ನು ಸಬಲೀಕರಣಗೊಳಿಸಲು ನೆರವಾಗಿದೆ. ಇದರಿಂದ ರಾಷ್ಟ್ರವೂ ಅಭಿವೃದ್ಧಿ ಪಥದಲ್ಲಿ ಹಾಗೂ ಹೊಸ ದಿಕ್ಕಿನತ್ತ ಸಾಗುತ್ತಿದೆ. ದೇಶದ ಸ್ತ್ರೀ ಶಕ್ತಿಯನ್ನು ಸಶಕ್ತಗೊಳಿಸುವ ಮೂಲಕ ಹೊಸ ಭಾರತ ನಿರ್ಮಾಣ ಮಾಡಲು ಸರ್ಕಾರ ಕಟಿಬದ್ಧವಾಗಿದೆ ಎಂದರು.

ರಕ್ಷಣಾ ಒಪ್ಪಂದದಲ್ಲಿ ಮೇಕ್ ಇನ್ ಇಂಡಿಯಾ
ಮೇಕ್ ಇನ್ ಇಂಡಿಯಾ ಮತ್ತೊಂದು ಹಂತಕ್ಕೆ ವಿಸ್ತರಣೆಗೊಂಡಿದೆ. ಅದರಲ್ಲೂ ಪ್ರಮುಖವಾಗಿ ರಕ್ಷಣಾ ಕ್ಷೇತ್ರದಲ್ಲಿ ಇದೀಗ ಮೇಕ್ ಇನ್ ಇಂಡಿಯಾ(Make in India) ಭಾರಿ ಬದಲಾವಣೆ ತಂದಿದೆ. ಮೇಕ್ ಇನ್ ಇಂಡಿಯಾದ ಪರಿಣಾಮ ನಮ್ಮ ಸಶಸ್ತ್ರ ಪಡೆ ಬಳಸುವ 209ಕ್ಕೂ ಹೆಚ್ಚು ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುತ್ತಿಲ್ಲ. ಇದು ಮೇಕ್ ಇನ್ ಇಂಡಿಯಾದ ಅತೀ ದೊಡ್ಡ ಸಾಧನೆಯಾಗಿದೆ ಎಂದು ಕೋವಿಂದ್ ಹೇಳಿದ್ದಾರೆ.

ವಿಶ್ವ ಮನ್ನಣೆ ಪಡೆದ ಯೋಗ ಆಯುರ್ವೇದ

ಕೇಂದ್ರ ಸರ್ಕಾರದ ಸತತ ಪ್ರಯತ್ನ ಹಾಗೂ ಇಚ್ಚಾಶಕ್ತಿಯಿಂದ ಭಾರತದ ಸಾಂಪ್ರಾದಿಯಕ ಔಷಧಿ ಆಯುರ್ವೇದ ಹಾಗೂ ದೈಹಿಕ ಹಾಗೂ ಮಾನಸಿಕ ಸದೃಡತೆಯ ಯೋಗ ವಿಶ್ವದಲ್ಲೇ ಮನ್ನಣೆ ಪಡೆದಿದೆ. 2014ರಲ್ಲಿ ಭಾರತ 6,000 ಕೋಟಿ ರೂಪಾಯಿ ಆಯುಷ್ ಉತ್ಪನ್ನಗಳನ್ನು ರಫ್ತು ಮಾಡಿದೆ. ಇದರ ಪ್ರಮಾಣ 2021ರಲ್ಲಿ ಗಣನೀಯವಾಗಿ ಏರಿಕೆಯಾಗಿದೆ. 2021ರಲ್ಲಿ ಆಯುಷ್ ಉತ್ಪನ್ನಗಳ ಪ್ರಮಾಣ 11,000 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ರಾಮನಾಥ್ ಕೋವಿಂದ್ ದೇಶದ ಆಯುರ್ವೇದ ಶಕ್ತಿಯನ್ನು ಭಾಷಣದಲ್ಲಿ ಉಲ್ಲೇಖಿಸಿದ್ದಾರೆ.

FDIನಲ್ಲಿ ದಾಖಲೆ ಮೊತ್ತ ಹೂಡಿಕೆ
ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ದೇಶವಾಗಿರುವ ಭಾರತ ವಿದೇಶಿ ಬಂಡವಾಳ ಹೂಡಿಕೆ ಆಕರ್ಷಿಕಸಲು ನೆರವಾಗಿದೆ. 48 ಶತಕೋಟಿ ಅಮೆರಿಕನ್ ಡಾಲರ್ ಮೊತ್ತ FDI ರೂಪದಲ್ಲಿ ಭಾರತಕ್ಕೆ ಹರಿದುಬಂದಿದೆ. ಇದೇ ಕೇವಲ ಆರ್ಥಿಕ ವರ್ಷದ ಮೊದಲ ಏಳು ತಿಂಗಳಲ್ಲಿ ಹರಿದುಬಂದ ಮೊತ್ತ ಅನ್ನೋದು ವಿಶೇಷವಾಗಿದೆ.

 

click me!