Union Budget 2022: ಕ್ರೀಡಾ ಕ್ಷೇತ್ರಕ್ಕೆ ಅತಿಹೆಚ್ಚು ಬಜೆಟ್ ಒದಗಿಸಿದ ಕೇಂದ್ರ ಸರ್ಕಾರ..!

By Suvarna NewsFirst Published Feb 1, 2022, 6:30 PM IST
Highlights

* ಕ್ರೀಡಾ ಕ್ಷೇತ್ರಕ್ಕೆ ಹಿಂದೆಂದಿಗಿಂತಲೂ ಹೆಚ್ಚಿನ ಹಣ ಮೀಸಲಿಟ್ಟ ಕೇಂದ್ರ ಸರ್ಕಾರ

* ಕಳೆದ ವರ್ಷಕ್ಕೆ ಹೋಲಿಸಿದರೆ ಹೆಚ್ಚುವರಿಯಾಗಿ 300 ಕೋಟಿ ರುಪಾಯಿ ಮೀಸಲು

* ಖೇಲೋ ಇಂಡಿಯಾ ಯೋಜನೆಗೂ ಹೆಚ್ಚುವರಿ ಹಣ ಮೀಸಲಿಟ್ಟ ಸರ್ಕಾರ

ನವದೆಹಲಿ(ಫೆ.01): ಕೇಂದ್ರ ಹಣಕಾಸು ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್(Nirmala Sitharaman), ಮಂಗಳವಾರ(ಫೆ.01)ದಂದು 2022-23ನೇ ಸಾಲಿನ ಕೇಂದ್ರ ಬಜೆಟ್ (Union Budget) ಮಂಡಿಸಿದ್ದಾರೆ. ಇದೇ ಸಂದರ್ಭದಲ್ಲಿ ಕೇಂದ್ರ ಸರ್ಕಾರವು ಕ್ರೀಡಾ ಕ್ಷೇತ್ರಕ್ಕೂ (Sports Sector) ತನ್ನ ಬಜೆಟ್‌ನಲ್ಲಿ ಅನುದಾನವನ್ನು ಘೋಷಿಸಿದೆ. 2021-22ನೇ ಸಾಲಿನ ಬಜೆಟ್‌ಗೆ ಹೋಲಿಸಿದರೆ, ಈ ಬಾರಿ ಕ್ರೀಡಾಕ್ಷೇತ್ರಕ್ಕೆ ಹೆಚ್ಚುವರಿಯಾಗಿ 300 ಕೋಟಿ ರುಪಾಯಿ ಹಣವನ್ನು ನೀಡಲಾಗಿದೆ. ಇದರ ಹೊರತಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಬಜೆಟ್‌ನಲ್ಲಿ ಕ್ರೀಡೆ ಎನ್ನುವ ಶಬ್ದವನ್ನು ಬಳಸಿಲ್ಲ, ಇದರ ಬದಲಾಗಿ ಗೇಮಿಂಗ್ ಎನ್ನುವ ಪದ ಬಳಕೆ ಮಾಡಿದ್ದಾರೆ. 

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿನ ಪಾರ್ಲಿಮೆಂಟ್‌ನಲ್ಲಿ ನಿರ್ಮಲಾ ಸೀತಾರಾಮನ್ ಮಂಡಿಸಿದ ಕೇಂದ್ರ ಬಜೆಟ್‌ನಲ್ಲಿ AVGC(ಅನಿಮೇಶನ್, ವಿಶುವಲ್ ಎಫೆಕ್ಟ್ಸ್‌, ಗೇಮಿಂಗ್ ಮತ್ತು ಕಾಮಿಕ್‌) ಉತ್ತೇಜಿಸಲು ಟಾಸ್ಕ್ ಫೋರ್ಸ್‌, ಎಲ್ಲಾ ಸ್ಟೇಕ್‌ ಹೋಲ್ಡರ್ಸ್‌ಗಳನ್ನು ಬಳಸಿಕೊಂಡು ದೇಶಿಯಾ ಸಾಮರ್ಥ್ಯದಲ್ಲಿ ಜಾಗತಿಕ ಬೇಡಿಕೆಯನ್ನು ಪೂರೈಸಲು ಮಾರಕಟ್ಟೆಯನ್ನು ಸಜ್ಜುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.

2021-22ರ ಕೇಂದ್ರ ಬಜೆಟ್‌ನಲ್ಲಿ ಕ್ರೀಡಾ ಕ್ಷೇತ್ರಕ್ಕೆ 2757.02 ಕೋಟಿ ರುಪಾಯಿಗಳನ್ನು ಮೀಸಲಿಡಲಾಗಿತ್ತು. ಆದರೆ 2022-23ರ ಆರ್ಥಿಕ ವರ್ಷದಲ್ಲಿ ಕ್ರೀಡಾ ಕ್ಷೇತ್ರಕ್ಕೆ 3,062.60 ಕೋಟಿ ರುಪಾಯಿಗಳನ್ನು ಹಂಚಿಕೆ ಮಾಡಲಾಗಿದೆ. ಇದರರ್ಥ ಕಳೆದ ಬಜೆಟ್‌ಗೆ ಹೋಲಿಸಿದರೆ, ಈ ವರ್ಷದಲ್ಲಿ ಹೆಚ್ಚುವರಿಯಾಗಿ 305.58 ಕೋಟಿ ರುಪಾಯಿಯನ್ನು ನೀಡಲಾಗಿದೆ. ಈ ಎಲ್ಲಾ ಹಣವು ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ (Commonwealth Games) ಹಾಗೂ ಏಷ್ಯನ್ ಗೇಮ್ಸ್‌ಗೆ (Asian Games) ಸಿದ್ದತೆ ನಡೆಸುತ್ತಿರುವ ಅಥ್ಲೀಟ್ಸ್‌ಗಳ ತರಬೇತಿಗೆ ಬಳಕೆ ಮಾಡಲಾಗುತ್ತದೆ. ಇದರ ಜತೆಗೆ ದೇಶದಲ್ಲಿರುವ ವಿವಿಧ ಕ್ರೀಡಾ ಪ್ರಾಧಿಕಾರಗಳಿಗೆ ಹಂಚಿಕೆ ಮಾಡಲಾಗುತ್ತದೆ. 

Union Budget 2022 : ಆರ್ಥಿಕತೆಯನ್ನು ರಕ್ಷಿಸುವ ನಿಟ್ಟಿನಲ್ಲಿ ಇರುವ ಬಜೆಟ್

ಇನ್ನೊಂದೆಡೆ ನ್ಯಾಷನಲ್ ಯೂತ್ ಎಂಪರ್‌ಮೆಂಟ್ ಪ್ರೋಗ್ರಾಮ್‌(NYEP) ನೀಡಲಾಗುತ್ತಿದ್ದ ಅನುದಾನವನ್ನು ಹೆಚ್ಚಿಗೆ ಮಾಡಲಾಗಿದೆ. 2021-22ರ ಬಜೆಟ್‌ನಲ್ಲಿ ರಾಷ್ಟ್ರೀಯ ಯುವಜನ ಅಭಿವೃದ್ದಿ ಯೋಜನೆಗೆ 108 ಕೋಟಿ ರುಪಾಯಿಗಳನ್ನು ಮೀಸಲಿಡಲಾಗಿತ್ತು. ಈ ಬಾರಿ ಅಂದರೆ 2022-23ನೇ ಸಾಲಿನ ಜಜೆಟ್‌ನಲ್ಲಿ ಈ ಮೊತ್ತವನ್ನು 138 ಕೋಟಿ ರುಪಾಯಿಗೆ ಹೆಚ್ಚಿಗೆ ಮಾಡಲಾಗಿದೆ. ಇನ್ನು ಖೇಲೋ ಇಂಡಿಯಾಗೆ ನೀಡಲಾಗುತ್ತಿದ್ದ ಹಣಕಾಸಿನ ಹಂಚಿಕೆಯಲ್ಲೂ ಹೆಚ್ಚಿಗೆ ಮಾಡಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಖೇಲೋ ಇಂಡಿಯಾ (Khelo India) ಯೋಜನೆಗೆ 879 ಕೋಟಿ ರುಪಾಯಿ ನೀಡಲಾಗಿತ್ತು. ಈ ಆರ್ಥಿಕ ವರ್ಷದಲ್ಲಿ ಖೇಲೋ ಇಂಡಿಯಾ ಯೋಜನೆಗೆ 974 ಕೋಟಿ ರುಪಾಯಿಗಳನ್ನು ಮೀಸಲಿಡಲಾಗಿದೆ.

SPORTS BUDGET: INDIA (In Crores)
14-15: 1156.61
15-16: 1541.31
16-17: 1592
17-18: 1943.21
18-19: 2196.35
19-20: 2826.92
20-21: 2596.14
21-22: 2757.02
22-23: 3062.60
(0.286% of the Union Budget 2022)

— Ronak Kedia (@RonakKedia13)

ಬಜೆಟ್‌ನ ಇನ್ನಿತರೇ ಹೈಲೈಟ್ಸ್‌ಗಳು ಇಲ್ಲಿವೆ ನೋಡಿ

ಹಳ್ಳಿಯ ಮೂಲೆ ಮೂಲೆಗೂ ಇಂಟರ್ನೆಟ್ ಸೇವೆ: ಸದ್ಯ ವಿಶ್ವದ ಕೇವಲ 60 ದೇಶಗಳಲ್ಲಿ ಮಾತ್ರ 5G ಸೇವೆ ಲಭ್ಯವಿದೆ, ಈ ಪಟ್ಟಿಗೆ ಮುಂಬರುವ ದಿನಗಳಲ್ಲಿ ಭಾರತ ಕೂಡಾ ಸೇರ್ಪಡೆಯಾಗಲಿದೆ. 2022-23ರ ವೇಳೆಗೆ ಭಾರತದಲ್ಲಿ 5G ಸೇವೆ ಆರಂಭಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.

ಕಾವೇರಿ ಸೇರಿದಂತೆ 5 ನದಿಗಳ ಜೋಡಣೆಗೆ ಸರ್ಕಾರದ ಒಪ್ಪಿಗೆ: ಕರ್ನಾಟಕದ ಕಾವೇರಿ ಸೇರಿದಂತೆ ದೇಶದ 5 ನದಿಗಳ ಜೋಡನೆಗೆ ಕೇಂದ್ರ ಸರ್ಕಾರ ದೊಡ್ಡ ಮೊಟ್ಟದ ಹಣವನ್ನು ಮೀಸಲಿಟ್ಟಿದೆ.

80 ಲಕ್ಷ ಮನೆ ನಿರ್ಮಾಣಕ್ಕೆ 48,000 ಕೋಟಿ ರುಪಾಯಿ ಮೀಸಲು: ಮೂಲಭೂತ ಅಗತ್ಯತೆಗಳಲ್ಲಿ ಒಂದಾದ ಗೃಹ ನಿರ್ಮಾಣದ ಕನಸಿಗೆ ಕೇಂದ್ರ ಸರ್ಕಾರ ಕೈ ಜೋಡಿಸಿದ್ದು, ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ 80 ಲಕ್ಷ ಮನೆ ನಿರ್ಮಾಣ ಮಾಡುವ ಗುರಿಯನ್ನು ಹಮ್ಮಿಕೊಂಡಿದೆ.
 

click me!