Yezdi Bike ಭಾರತದಲ್ಲಿ ಮತ್ತೆ ಯೆಜ್ಡಿ ಯುಗ ಆರಂಭ, 3 ಹೊಸ ಬೈಕ್‌ಗಳೊಂದಿಗೆ ಜ.13ಕ್ಕೆ ಯೆಜ್ಡಿ ಬಿಡುಗಡೆ!

By Suvarna News  |  First Published Jan 12, 2022, 2:05 PM IST
  • ಸ್ಥಗಿತಗೊಂಡಿದ್ದ ಯೆಜ್ಡಿ ಬೈಕ್ ಹೊಸ ರೂಪದಲ್ಲಿ ನಾಳೆ ಲಾಂಚ್
  • 3 ಹೊಸ ಬೈಕ್ ಭಾರತದಲ್ಲಿ ಬಿಡುಗಡೆ, ಮತ್ತೆ ಗತವೈಭವ ಆರಂಭ
  • ಮಹೀಂದ್ರ ಒಡೆತನದ ಕ್ಲಾಸಿಕ್ ಲೆಜೆಂಡ್‌ನಿಂದ ಬೈಕ್ ಮರು ಬಿಡುಗಡೆ

ನವದೆಹಲಿ(ಜ.12): ಭಾರತದಲ್ಲಿ ರೆಟ್ರೋ ಯುಗವನ್ನು ಮತ್ತೆ ಆರಂಭಿಸಿರುವ ಮಹೀಂದ್ರ(Mahindra) ಒಡೆತನದ ಕ್ಲಾಸಿಕ್ ಲೆಜೆಂಡ್ಸ್ ಇದೀಗ ಮತ್ತೊಂದು ಸಿಹಿ ಸುದ್ದಿ ನೀಡಲು ಸಜ್ಜಾಗಿದೆ. ನಾಳೆ(ಜ.13) ಕ್ಲಾಸಿಕ್ ಲೆಜೆಂಡ್ಸ್ ಭಾರತದಲ್ಲಿ  ಯೆಜ್ಡಿ ಬೈಕ್(Yezdi Bike) ಬಿಡುಗಡೆ ಮಾಡುತ್ತಿದೆ. 3 ಹೊಸ ಬೈಕ್‌ಗಳು ನಾಳೆ ಭಾರತದಲ್ಲಿ ಬಿಡುಗಡೆಯಾಗುತ್ತಿದೆ. ಈ ಮೂಲಕ ಯೆಜ್ಡಿ ಯುಗ ಮತ್ತೆ ದೇಶದಲ್ಲಿ ಆರಂಭಗೊಳ್ಳುತ್ತಿದೆ.

ಬರೋಬ್ಬರಿ 25 ವರ್ಷಗಳ ಬಳಿಕ ಭಾರತದ ರಸ್ತೆಗಳಲ್ಲಿ ಯೆಜ್ಡಿ ಅಬ್ಬರಿಸಲು ರೆಡಿಯಾಗಿದೆ. ಜನವರಿ 13 ರಂದು ಯೆಜ್ಡಿ 3 ಹೊಚ್ಚ ಹೊಸ ಬೈಕ್(New Bike) ಬಿಡುಗಡೆ ಮಾಡುತ್ತಿದೆ. ಈ ಕುರಿತು ಈಗಾಗಲೇ ಟೀಸರ್(Yezdi Teaser) ಬಿಡುಗಡೆ ಮಾಡಿರುವ ಯೆಜ್ಡಿ 3 ಬೈಕ್‌ಗಳ ಸಣ್ಣ  ಝಲಕ್ ತೋರಿಸಿದೆ. ಟೀಸರ್ ಭಾರಿ ಸಂಚಲನ ಸೃಷ್ಟಿಸಿದ್ದು, ಇದೀಗ ಯೆಜ್ಡಿ ಬೈಕ್‌ಗಾಗಿ ಹಲವರು ಕಾದು ಕುಳಿತಿದ್ದಾರೆ.

Tap to resize

Latest Videos

Yezdi Roadking return ಬೈಕ್ ಪ್ರಿಯರ ಹೊಸ ವರ್ಷದ ಸಂಭ್ರಮ ಡಬಲ್, ಜ.13ಕ್ಕೆ ಐತಿಹಾಸಿಕ ಯೆಜ್ಡಿ ರೋಡ್‌ಕಿಂಗ್ ಅನಾವರಣ!

ಭಾರತದಲ್ಲಿ ಯೆಜ್ಡಿ ಬೈಕ್ 1996ರ ವರೆಗೆ ಸಕ್ರಿಯವಾಗಿತ್ತು. ಬಳಿಕ ಹಲವು ಕಾರಣಗಳಿಂದ ಯೆಜ್ಡಿ ಬೈಕ್ ಉತ್ಪಾದನೆ ಸ್ಥಗಿತಗೊಳಿಸಿತು. ಆದರೆ ರೆಟ್ರೋ ಬೈಕ್‌(Retro Bike) ಮತ್ತೆ ಕಾರ್ಯರೂಪಕ್ಕೆ ಇಳಿಸಲು ಕ್ಲಾಸಿಕ್ ಲೆಜೆಂಡ್( Classic Legends) ಮುಂದಾಗಿತ್ತು. ಈಗಾಗಲೇ ಕ್ಲಾಸಿಕ್ ಲೆಜೆಂಡ್ ಜಾವಾ ಮೋಟಾರ್‌ಸೈಕಲ್ ಬಿಡುಗಡೆ ಮಾಡಿ ಭಾರಿ ಯಶಸ್ಸು ಸಾಧಿಸಿದೆ. ಇದರ ಬೆನ್ನಲ್ಲೇ ಇದೀಗ ಯೆಜ್ಡಿ ಬೈಕ್ ಬಿಡುಗಡೆಯಾಗುತ್ತಿದೆ. ಯೆಜ್ಡಿ ಬೈಕ್ ನೇರವಾಗಿ ರಾಯಲ್ ಎನ್‌ಫೀಲ್ಡ್, ಹೋಂಡಾ ಹಾಗೂ ಕೆಟಿಎಂ ಬೈಕ್‌ಗಳಿಗೆ ಪ್ರತಿಸ್ಪರ್ಧಿಯಾಗಿದೆ.

ಟೀಸರ್‌ನಲ್ಲಿ ಯೆಜ್ಡಿ ಅಡ್ವೆಂಚರ್ ಹಾಗೂ ಸ್ಕ್ರಾಂಬ್ಲರ್ ಮಾಡೆಲ್ ಕಾಡಿನೊಳಗೆ ಆಫ್ ರೋಡ್ ರೈಡಿಂಗ್ ತೋರಿಸಲಾಗಿದೆ. ಎರಡೂ ಮೋಟೈರ್‌ಸೈಕಲ್ LED ಹೆಡ್‌ಲ್ಯಾಂಪ್ಸ್ ಹೊಂದಿದೆ. ಟ್ವಿನ್ ಸೈಲೆನ್ಸರ್ ಸೇರಿದಂತೆ ಹಲವು ಅತ್ಯಾಧುಕನಿ ಫೀಚರ್ಸ್ ಹಾಗೂ ತಂತ್ರಜ್ಞಾನ ಹೊಂದಿದೆ. ಈ ಟೀಸಲ್ ಬಿಡುಗಡೆಯಾದ ಬೆನ್ನಲ್ಲೇ ಭಾರಿ ಮೆಚ್ಚುಗೆ ಪಡೆದಿದೆ. ಈಗಾಗಲೆ ಅಡ್ವೆಂಚರ್ ಯೆಜ್ಡಿ ಬೈಕ್ ರೋಡ್ ಟೆಸ್ಟ್ ವೇಳೆ ಕಾಣಿಸಿಕೊಂಡಿದೆ. ಇದು ನೇರವಾಗಿ ರಾಯಲ್ ಎನ್‌ಫೀಲ್ಡ್ ಹಿಮಾನಲಯನ್ ಬೈಕ್‌ಗೆ ಪ್ರತಿಸ್ಪರ್ಧಿಯಾಗಿದೆ.

ಮಿಂಚಿ ಮರೆಯಾದ ಭಾರತದ 10 ಜಾವಾ-ಯೆಝೆಡಿ ಬೈಕ್!

ಟೀಸರ್‌ನಲ್ಲಿರುವ ಮತ್ತೊಂದು ಯೆಜ್ಡಿ ಬೈಕ್ ಬಹುಶಃ ಯೆಜ್ಡಿ ರೋಡ್‌ಕಿಂಗ್ ಹೊಸರೂಪದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದೆ. ಕ್ರ್ಯೂಸರ್ ಮೋಟಾರ್‌ಸೈಕಲ್ ರೋಡ್‌ಕಿಂಗ್ LED ಹೆಡ್‌ಲ್ಯಾಂಪ್ಸ್ ಸೇರಿದಂತೆ ಹಲವು ಬದಲಾವಣೆಯೊಂದಿಗೆ ಬೈಕ್ ಬಿಡುಗಡೆಯಾಗಲಿದೆ. ಹೊಸ ಕ್ರ್ಯೂಸರ್ ರೋಡ್‌ಕಿಂಗ್ ಬೈಕ್ LED ಟೈಲ್‌ಲೈಟ್ಸ್, ಇಂಡಿಕೇಟರ್, ಟೆಲಿಸ್ಕೋಫಿಕ್ ಸಸ್ಪೆನ್ಶನ್, ರಿಯರ್ ಶಾಕ್ ಹಾಗೂ ಡಿಸ್ಕ್ ಬ್ರೇಕ್ ನೂತನ ಬೈಕ್‌ನಲ್ಲಿ ಇರಲಿದೆ. ಈಗಾಗಲೇ ರೋಡ್ ಟೆಸ್ಟ್ ವೇಳೆ ಈ ಫೀಚರ್ಸ್ ಯೆಜ್ಡಿ ಬೈಕ್‌ನಲ್ಲಿ ಕಾಣಿಸಿವೆ.

 

The next one ain't gonna be a teaser!​
.
See you in 3 days, Live on YouTube - https://t.co/blHcOKPSZF
. pic.twitter.com/DC6Rtd6jBJ

— yezdiforever (@yezdiforever)

ಯೆಜ್ಡಿ ಮೋಟಾರ್‌ಬೈಕ್ ಎಂಜಿನ್;
ನೂತನ ಯೆಜ್ಡಿ ಬೈಕ್  334cc, ಸಿಂಗಲ್ ಸಿಲಿಂಡರ್, ಲಿಕ್ವಿಡ್ ಕೂಲ್ಡ್ ಎಂಜಿನ್ ಹೊಂದಿದೆ. ಇದು 30.64 bhp ಪವರ್ ಹಾಗೂ 32.74 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. ಮೂರು ಯೆಜ್ಡಿ ಬೈಕ್‌ಗಳಲ್ಲಿ ಎಂಜಿನ್ ಪವರ್ ಬದಲಾಗುವು ಸಾಧ್ಯತೆ ಇದೆ. ಇದರಲ್ಲೂ ಯೆಜ್ಡಿ ಅಡ್ವೆಂಚರ್‍ ಬೈಕ್‌ಗೆ ಹೆಚ್ಚಿನ ಪವರ್ ನೀಡುವ ಸಾಧ್ಯತೆ ಇದೆ. 6 ಸ್ಪೀಡ್ ಗೇರ್‌ಬಾಕ್ಸ್ ಸಾಧ್ಯತೆ ಹೆಚ್ಚಿದೆ.

1987ರಿಂದ 1996ರ ವರೆಗೆ ಯೆಜ್ಡಿ ಭಾರದಲ್ಲಿ ಮೆರೆದಾಡಿತ್ತು. ವಿಶೇಷವಾಗಿ ಮೈಸೂರಿನಲ್ಲಿ ಘಟಕ ಹೊಂದಿದ್ದ ಯೆಜ್ಡಿ ಕರ್ನಾಟಕದ ಮಾತ್ರವಲ್ಲ ಭಾರತೀಯರ ಅಚ್ಚುಮೆಚ್ಚಿನ ಬೈಕ್ ಆಗಿತ್ತು. ಈಗಲೂ ಹಳೆ ಯೆಜ್ಡಿ ಬೈಕ್ ಶಬ್ದ ಕೇಳಿದ ತಕ್ಷಣ ಹಲವರ ಕಿವಿಗಳು ನೆಟ್ಟಗಾಗುತ್ತದೆ. ಇದೀಗ ಹೊಸ ಎಂಜಿನ್ ಅದೇ ಶಬ್ದ ಇರಲಿದೆ. ಆದರೆ ಶಬ್ದದ ಪ್ರಮಾಣ ಕಡಿಮೆ ಇರಲಿದೆ.
 

click me!