Ola Scooter Update ಗ್ರಾಹಕರಿಗೆ ನಿರಾಸೆ, ಓಲಾ ಎಲೆಕ್ಟ್ರಿಕ್ ಸ್ಕೂಟರ್ ಸಾಫ್ಟ್‌ವೇರ್ ಅಪ್‌ಡೇಟ್ ಸದ್ಯಕ್ಕಿಲ್ಲ!

By Suvarna News  |  First Published Jan 9, 2022, 9:32 PM IST

*ಓಲಾ ಸ್ಕೂಟರ್‌ಗಳಲ್ಲಿ ಒಟಿಎ ಸಾಫ್ಟ್‌ವೇರ್‌ಗಳ ಕೊರತೆ

* ಆರು ತಿಂಗಳ ಒಳಗೆ ಅಳವಡಿಸುವುದಾಗಿ ಕಂಪನಿ ಸ್ಪಷ್ಟನೆ

* ಗ್ರಾಹಕರ ಆಕ್ರೋಶದ ಹಿನ್ನೆಲೆಯಲ್ಲಿ ಸ್ಪಷ್ಟನೆ


ಓಲಾ ಎಲೆಕ್ಟ್ರಿಕ್ (Ola electric) ಸ್ಕೂಟರ್ ಬಿಡುಗಡೆಗೆ ಮುನ್ನವೇ ದೇಶಾದ್ಯಂತ ಸಾಕಷ್ಟು ಸುದ್ದಿ ಮಾಡಿದ್ದವು. ಜನರು ಅದನ್ನು ಮುಗಿಬಿದ್ದು ಬುಕಿಂಗ್ ಮಾಡಿ ಅದರ ಡೆಲಿವರಿಗಾಗಿ ಕಾಯುತ್ತಿದ್ದಾರೆ. ಈ ನಡುವೆ ಪೂರೈಕೆ ಮಾಡಿರುವ ಕೆಲವು ವಾಹನಗಳಲ್ಲಿ ಕೂಡ ಕಂಪನಿ, ಭರವಸೆ ನೀಡಿದ ವೈಶಿಷ್ಟ್ಯಗಳನ್ನು ಅಳವಡಿಸಿಲ್ಲ ಎಂಬ ದೂರುಗಳು ಕೇಳಿಬಂದಿವೆ. ಈಗಾಗಲೇ ಗ್ರಾಹಕರಿಗೆ ತಲುಪಿರುವ ಓಲಾ ಎಲೆಕ್ಟ್ರಿಕ್ ಸ್ಕೂಟರ್ಗಳಲ್ಲಿ(Ola Electric Scooter) ಕಂಪನಿ ಈ ಹಿಂದೆ ಭರವಸೆ ನೀಡಿದ್ದ ಕೆಲವು ಪ್ರಮುಖ ವೈಶಿಷ್ಟ್ಯಗಳನ್ನು ಕಳೆದುಕೊಂಡಿವೆ ಎಂದು ವರದಿಯಾಗಿದ್ದು, ಮುಂದಿನ ಕೆಲವು ತಿಂಗಳುಗಳಲ್ಲಿ ಈ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎಂದು ಇವಿ ತಯಾರಕರು ಸ್ಪಷ್ಟಪಡಿಸಿದ್ದಾರೆ.

ಈಗ ಡೆಲಿವರಿಯಾಗಿರುವ ಓಲಾ ಎಲೆಕ್ಟ್ರಿಕ್ ಎಸ್1  (S1) ಹಾಗೂ ಎಸ್1 ಪ್ರೋ (S1 Pro) ಸ್ಕೂಟರ್ಗಳಲ್ಲಿ ಒಟಿಎ ಸಾಫ್ಟ್ವೇರ್ಗಳು ಅಳವಡಿಕೆಯಾಗಿಲ್ಲ. ಈ ಕುರಿತು ಗ್ರಾಹಕರು ದೂರು ಸಲ್ಲಿಸಿದ ನಂತರ, ಇವಿ ತಯಾರಕರು ಮುಂದಿನ ಮೂರರಿಂದ ಆರು ತಿಂಗಳಲ್ಲಿ ಸಾಫ್ಟ್ವೇರ್ ಅಪ್‌ಡೇಟ್(Software Update) ಗ್ರಾಹಕರನ್ನು ತಲುಪಲಿದೆ ಎಂದು ತಿಳಿಸಿದ್ದಾರೆ. ಓಲಾ ಎಲೆಕ್ಟ್ರಿಕ್ನ ಮುಖ್ಯ ಮಾರ್ಕೆಟಿಂಗ್ ಅಧಿಕಾರಿ ವರುಣ್ ದುಬೆ ಇತ್ತೀಚಿನ ಸಂದರ್ಶನವೊಂದರಲ್ಲಿ,  ಕಂಪನಿಯು ತನ್ನ ಗ್ರಾಹಕರು ತನ್ನ ಎಲೆಕ್ಟ್ರಿಕ್ ಸ್ಕೂಟರ್ಗಳನ್ನು ಓಡಿಸಬೇಕೆಂದು ಬಯಸುತ್ತದೆ ಮತ್ತು ಸಮಯ ಕಳೆದಂತೆ ಕೊರತೆಯಿರುವ ವೈಶಿಷ್ಟ್ಯಗಳನ್ನು ಮತ್ತು ಭವಿಷ್ಯದಲ್ಲಿ ಹೊಸ ವೈಶಿಷ್ಟ್ಯಗಳನ್ನು ಸೇರಿಸುತ್ತದೆ ಎಂದು ಹೇಳಿದರು.

Latest Videos

undefined

Ola S1 Pro Range Test ಒಲಾ S1 ಪ್ರೋ ಸ್ಕೂಟರ್ ನಿಜವಾದ ಮೈಲೇಜ್ ರೇಂಜ್ ಎಷ್ಟು?

ಓಲಾ ಸ್ಕೂಟರ್ಗಳಲ್ಲಿ ಕ್ರೂಸ್ ಕಂಟ್ರೋಲ್, ಹಿಲ್ ಹೋಲ್ಡ್, ನ್ಯಾವಿಗೇಷನ್ ಇತ್ಯಾದಿ ವೈಶಿಷ್ಟ್ಯಗಳು ಮುಂದಿನ ಕೆಲವು ತಿಂಗಳುಗಳಲ್ಲಿ ಜೂನ್‌ನಲ್ಲಿ ಲಭ್ಯವಾಗಬೇಕು. ಅದನ್ನು ನಾವು ಗ್ರಾಹಕರಿಗೆ  ಪೂರೈಸಲಿದ್ದೇವೆ. ಅಲ್ಲಿಯವರೆಗೆ ಗ್ರಾಹಕರು ಸ್ಕೂಟರ್ ಬಳಕೆಯನ್ನು ಮುಂದುವರಿಸಬಹುದು. ಹಂತಹಂತವಾಗಿ ಎಲ್ಲಾ ವಾಹನಗಳಲ್ಲಿ ಹೆಚ್ಚಿನ ವೈಶಿಷ್ಟ್ಯಗಳನ್ನು ಸೇರಿಸಲಾಗುವುದು ಎಂದು ದುಬೆ ಹೇಳಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಎಚ್ಟಿ ಆಟೋ ಎಸ್1 ಪ್ರೊ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಪರೀಕ್ಷೆಗೆ ಒಳಪಡಿಸಿದಾಗ, ಗ್ರಾಹಕರಿಗೆ ವಿತರಿಸುವ ಸ್ಕೂಟರ್ಗಳಲ್ಲಿನ ಸಾಫ್ಟ್ವೇರ್ಗಳು ಬೀಟಾ  (Beta) ಆವೃತ್ತಿಯನ್ನು ಹೊಂದಿರುವುದಿಲ್ಲ ಎಂದು ಓಲಾ ಭರವಸೆ ನೀಡಿತ್ತು. ಮೊದಲ ಲಾಟ್ನ ವಿತರಣೆ ವೇಳೆ ಅದನ್ನು ಸೇರಿಸದಿರಬಹದು ಆದರೆ, ನಂತರ, ಅವುಗಳನ್ನು ಅಪ್ಡೇಟ್ ಮಾಡಲಾಗುವುದು ಎಂದಿದ್ದರು.

Ola E cycle ಹೊಸ ವರ್ಷದಲ್ಲಿ ಒಲಾ ಎಲೆಕ್ಟ್ರಿಕ್ ಸೈಕಲ್ ಬಿಡುಗಡೆ? ಕುತೂಹಲ ಮೂಡಿಸಿದ CEO ಟ್ವೀಟ್!

ಈ ಕುರಿತು ಸಂದರ್ಶನದಲ್ಲಿ ಸ್ಪಷ್ಟನೆ ನಿಡಿರುವ ದುಬೆ, ಗ್ರಾಹಕರಿಗೆ ಈ ಸಾಫ್ಟ್ವೇರ್ ಅಪ್ಡೇಟ್ ಮಾಡುವ ಕುರಿತು ಸ್ಪಷ್ಟ ಮಾಹಿತಿ ನಿಡಲಾಗಿತ್ತು. 2022 ರಲ್ಲಿ ನಾವು ಹಲವಾರು ತಿಂಗಳುಗಳಲ್ಲಿ ಇವುಗಳನ್ನು ಪ್ರಮುಖ ಸಾಫ್ಟ್ವೇರ್ ನವೀಕರಣಗಳಾಗಿ ಬಿಡುಗಡೆ ಮಾಡಲಿದ್ದೇವೆ" ತಿಳಿಸಿದ್ದಾರೆ.  ಓಲಾ ಎಲೆಕ್ಟ್ರಿಕ್ ತನ್ನ ಸ್ಕೂಟರ್ಗಳನ್ನು ಭರವಸೆ ನೀಡಿದ ದಿನಾಂಕಗಳನ್ನು ವಿತರಣೆ ಮಾಡಿಲ್ಲ ಎಂಬುದಕ್ಕೆ ಜನರಿಂದ ಭಾರಿ ಆಕ್ರೋಶ ವ್ಯಕ್ತವಾಗಿದೆ. ಜನರು ಸಾಮಾಜಿಕ ಜಾಲತಾಣಗಳಲ್ಲಿ ಕಂಪನಿ ವಿರುದ್ಧ ಕಿಡಿಕಾರುತ್ತಿದ್ದಾರೆ. ಜೊತೆಗೆ, ಕೆಲವೆಡೆ ಟೆಸ್ಟ್ ಡ್ರೈವ್ ಕೂಡ ಲಭ್ಯವಾಗಿಲ್ಲ ಎಂಬ ದೂರುಗಳು ಕೇಳಿಬರುತ್ತಿವೆ. 

ಹಲವು ತಿಂಗಳ ನಂತರ ಕೊನೆಗೂ ಇದಕ್ಕೆ ಉತ್ತರ ನೀಡಿರುವ ಓಲಾ ಎಲೆಕ್ಟ್ರಿಕ್, ಆದಷ್ಟು ಶೀಘ್ರದಲ್ಲಿ ವಿತರಣೆ ಮಾಡುವ ಭರವಸೆ ನೀಡಿದೆ. ಇನ್ನೊಂದೆಡೆ ಕಂಪನಿ ಇಲ್ಲಿಯವರೆಗೆ 4 ಸಾವಿರ ವಾಹನಗಳನ್ನು ಮಾರಾಟ ಮಡುತ್ತಿರುವುದಾಗಿ ಹೇಳುತ್ತಿದ್ದರೆ, ಇಲ್ಲಿಯವರೆಗೆ ಕೇವಲ 500 ರೂ. ವಾಹನಗಳನ್ನು ಮಾರಾಟ ಮಾಡಿದೆ ಎಂದು ಸರ್ಕಾರಿ ಪೋರ್ಟಲ್ಗಳು ತಿಳಿಸಿವೆ. ಇದು ಕೂಡ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. 
ಓಲಾ ಎಲೆಕ್ಟ್ರಿಕ್ ಎಸ್1 ಹಾಗೂ ಎಸ್1 ಪ್ರೋ ಸ್ಕೂಟರ್ಗಳ ದರ 99,999 ಗಳಷ್ಟಿದೆ. ಕಳೆದ ಮುರು ಬಾರಿ ಅದರ ವಿತರಣಾ ದಿನಾಂಕ ಮುಂದೂಡಲ್ಪಟ್ಟಿದ್ದು, ಈಗ ಜನವರಿ 15 ರಂದು ವಾಹನಗಳ ವಿತರಣೆ ಮಾಡುವುದಾಗಿ ಕಂಪನಿ ತಿಳಿಸಿದೆ.
 

click me!