Electric Bike 100ಕಿ.ಮೀ ಮೈಲೇಜ್, ಮೇಡ್ ಇನ್ ಇಂಡಿಯಾ ಟಾರ್ಕ್ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್ ಜನವರಿ ಅಂತ್ಯಕ್ಕೆ ಲಾಂಚ್!

By Suvarna News  |  First Published Jan 9, 2022, 4:26 PM IST
  • ಟಾರ್ಕ್ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್ ಜನವರಿ ತಿಂಗಳ ಅಂತ್ಯದಲ್ಲಿ ಲಾಂಚ್
  • ಕೈಗೆಟುಕುವ ದರದಲ್ಲಿ 100 ಕಿ.ಮೀ ಮೈಲೇಜ್ ಬೈಕ್ ಲಭ್ಯ
  • ಬಿಡುಗಡೆ ಬಳಿಕ ಬುಕಿಂಗ್ ಆರಂಭ, ಬೆಲೆ ಹಾಗೂ ಇತರ ಮಾಹಿತಿ ಇಲ್ಲಿವೆ
     

ಪುಣೆ(ಜ.09): ಹೊಸ ವರ್ಷದಲ್ಲಿ(New Year 2022) ಹಲವು ಎಲೆಕ್ಟ್ರಿಕ್ ವಾಹನ(Electric Vehilce) ಬಿಡುಗಡೆಗೆ ಸಜ್ಜಾಗಿದೆ. ವಿಶೇಷ ಅಂದರೆ ಕಳೆದ 5 ವರ್ಷಗಳಲ್ಲಿ ಭಾರತದ ಬಿಡುಗಡೆಯಾದ ಎಲೆಕ್ಟ್ರಿಕ್ ವಾಹನ ಹಾಗೂ 2022ರಲ್ಲಿ ಬಿಡುಗಡೆಯಾಗಲಿರುವ ಎಲೆಕ್ಟ್ರಿಕ್ ವಾಹನ ಬಹುತೇಕ ಸರಿಸಮನಾಗಿದೆ. ಹಲವು ಸ್ಟಾರ್ಟ್ ಅಪ್ ಕಂಪನಿಗಳು ಇದೀಗ ಎಲೆಕ್ಟ್ರಿಕ್ ವಾಹನ ಉತ್ಪಾದನೆಯಲ್ಲಿ ತೊಡಗಿದೆ. ಇದೀಗ ಭಾರತ ಟಾರ್ಕ್ ಮೋಟಾರ್ಸ್(Tork Motors) ಮೊದಲ ಕ್ರಾಟೊಸ್ ಎಲೆಕ್ಟ್ರಿಕ್ ಬೈಕ್(Bike) ಬಿಡುಗಡೆ ಮಾಡಲು ಸಜ್ಜಾಗಿದೆ.

ಟಾರ್ಕ್ ಮೋಟಾರ್ಸ್ ಪುಣೆ ಮೂಲದ ಸ್ಟಾರ್ಟ್ಅಪ್ ಕಂಪನಿ. ಟಾರ್ಕ್ ಬ್ರ್ಯಾಂಡ್‌ ನೇಮ್‌ನಲ್ಲಿ ಎಲೆಕ್ಟ್ರಿಕ್ ಬೈಕ್ ಬಿಡುಗಡೆ ಮಾಡಲು ಸಜ್ಜಾಗಿದೆ. ಹಲವು ಕಾರಣಗಳಿಂದ ವಿಳಂಭವಾದ ಟಾರ್ಕ್ ಮೋಟಾರ್ಸ್ ಬೈಕ್ ಇದೀಗ ಇದೇ ತಿಂಗಳ ಅಂತ್ಯದಲ್ಲಿ ದೇಶದ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಕೊರೋನಾ(Coronavirus) ಕಾರಣ ಕಂಪನಿ ವರ್ಚುವಲ್ ಮೂಲಕ ಬೈಕ್ ಬಿಡುಗಡೆ ಮಾಡಲಿದೆ. ಟಾರ್ಕ್ ಕ್ರಾಟೊಸ್ ಬೈಕ್(Tork Kratos) ಬಿಡುಗಡೆ ಬಳಿಕ ಬುಕಿಂಗ್ ಆರಂಭಗೊಳ್ಳಲಿದೆ. ಫೆಬ್ರವರಿ ಅಂತ್ಯ ಅಥವಾ ಮಾರ್ಚ್ ತಿಂಗಳಲ್ಲಿ ಡೆಲಿವರಿ ಆರಂಭಗೊಳ್ಳಲಿದೆ. ಆನ್‌ಲೈನ್ ಮೂಲಕ ಟಾರ್ಕ್ ಕ್ರಾಟೊಸ್ ಬೈಕ್ ಬುಕಿಂಗ್ ಮಾಡಿಕೊಳ್ಳಬಹುದು.  

Tap to resize

Latest Videos

undefined

Electric Bike 273KM ವೇಗ, 235 ಕಿ.ಮೀ ಮೈಲೇಜ್, ಮಾರುಕಟ್ಟೆಗೆ ಅತ್ಯಂತ ಆಕರ್ಷಕ ಬೈಕ್ ಅನಾವರಣ!

ಟಾರ್ಕ್ ಕ್ರಾಟೊಸ್ ಬೈಕ್ ಒಂದು ಬಾರಿ ಚಾರ್ಚ್ ಮಾಡಿದರೆ 100 ಕಿಲೋಮೀಟರ್ ಮೈಲೇಜ್ ನೀಡಲಿದೆ. ಇನ್ನು ಟಾರ್ಕ್ ಕ್ರಾಟೊಸ್ ಗರಿಷ್ಠ ವೇಗಿ 100 ಕಿ.ಮೀ ಪ್ರತಿ ಗಂಟಗೆ. ಇನ್ನು 1 ಗಂಟೆಯಲ್ಲಿ ಬೈಕ್  ಶೇಕಡ 80 ರಷ್ಟು ಚಾರ್ಜಿಂಗ್ ಆಗಲಿದೆ. ಇನ್ನು ಈಗಾಗಲೇ ಟಾರ್ಕ್ ಪುಣೆ ಸೇರಿದಂತೆ ದೇಶದ ಇತರ ಭಾಗದಲ್ಲಿ ಚಾರ್ಜಿಂಗ್ ಸ್ಟೇಶನ್ ಅಳವಡಿಸಿಕೊಳ್ಳುತ್ತಿದೆ.

ಟಾರ್ಕ್ ಮೋಟಾರ್ಸ್ ಎರಡು ವೇರಿಯೆಂಟ್ ಈ ತಿಂಗಳ ಅಂತ್ಯದಲ್ಲಿ ಬಿಡುಗಡೆ ಮಾಡಲಿದೆ. ಟಾರ್ಕ್ ಕ್ರಾಟೊಸ್ ಹಾಗೂ ಟಾರ್ಕ್  T6X ಬೈಕ್ ಮಾರುಕಟ್ಟೆಗೆ ಬಿಡುಗಡೆಯಾಗಲಿದೆ. ಟಾರ್ಕ್ ಕ್ರಾಟೊಸ್ ಬೈಕ್ ಅಂದಾಜು ಬೆಲೆ 1.05 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ), ಇನ್ನು ಟಾರ್ಕ್  T6X ಅಂದಾಡು ಬೆಲೆ 1.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ). 

Ola S1 Pro Range Test ಒಲಾ S1 ಪ್ರೋ ಸ್ಕೂಟರ್ ನಿಜವಾದ ಮೈಲೇಜ್ ರೇಂಜ್ ಎಷ್ಟು?

ಟಾರ್ಕ್ ಮೋಟಾರ್ಸ್ ಚೊಚ್ಚಲ ಬೈಕ್ 2016ರಲ್ಲಿ ಅನಾವರಣ ಮಾಡಿತ್ತು. ಆದರೆ ಹಲವು ಕಾರಣಗಳಿಂದ ಬಿಡುಗಡೆ ವಿಳಂಭವಾಯಿತು.   T6X ಬೈಕ್ ಸರಿಸುಮಾರು 6 ವರ್ಷಗಳಿಂದ ಅಭಿವೃದ್ಧಿ ಪಡಿಸುತ್ತಿದೆ. ಕೊನೆಗೂ ಅಂತಿಮ ಹಂತದಲ್ಲಿದ್ದು, ಬಿಡುಗಡೆಗೆ ಸಜ್ಜಾಗಿದೆ. ಇದರ ನಡುವೆ ಕೊರೋನಾ ವೈರಸ್ ಹೊಡೆತವೂ ಟಾರ್ಕ್ ಮೋಟಾರ್ಸ್ ವಿಳಂಭಕ್ಕೆ ಕಾರಣವಾಗಿದೆ. 

ಟಾರ್ಕ್ ಮೋಟಾರ್ಸ್ ಬೈಕ್‌ನಲ್ಲಿ ಅತ್ಯಾಧುನಿಕ ಫೀಚರ್ಸ್ ಅಳವಡಿಸಿದೆ. ಜಿಯೋ ಫೆನ್ಸಿಂಗ್, ಕ್ಲೌಡ್ ಕೆನೆಕ್ಟಿವಿಟಿ, ನ್ಯಾವಿಗೇಶನ್, ಆ್ಯಂಟಿ ಥೆಫ್ಟ್ ಸೇರಿದಂತೆ ಹೊಸ ಫೀಚರ್ಸ್ ಈ ಬೈಕ್‌ನಲ್ಲಿದೆ. ಟಾರ್ಕ್‌ನಲ್ಲಿ ಲಯನ್ ಬ್ಯಾಟರಿ ಪ್ಯಾಕ್ ಅಳವಡಿಸಲಾಗಿದೆ. ಇದು ದಕ್ಷ ಬ್ಯಾಟರಿ ಆಗಿದ್ದು, ನಿಖರ ಮೈಲೇಜ್ ನೀಡಲಿದೆ. ಕಂಪನಿ ಹೇಳಿರುವುದು ಸಂಪೂರ್ಣ ಚಾರ್ಜ್‌ಗೆ 100 ಕಿ.ಮೀ ಮೈಲೈಜ್. ಸರಿಸುಮಾರು 90 ರಿಂದ 95 ಕಿ.ಮೀ ಮೈಲೇಜ್ ಸಿಗುವ ಸಾಧ್ಯತೆ ಇದೆ.

ಸ್ಪೋರ್ಟ್ಸ್ ಬೈಕ್ ವಿನ್ಯಾ ನೀಡಲಾಗಿದೆ. LED ಹೈಡ್‌ಲ್ಯಾಂಪ್ಸ್, ಟೆಲಿಸ್ಕೋಪಿಕ್ ಫ್ರಂಟ್ ಪೋರ್ಕ್, ರೇರ್ ಮೊನೊಶಾಕ್, ಎರಡೂ ಡಿಸ್ಕ್ ಬ್ರೇಕ್, ಸ್ಪ್ಲಿಟ್ ಸೀಟ್ ಸೇರಿದಂತೆ ಕೆಲ ಬದಲಾವಣೆಗಳನ್ನು ಈ ಎಲೆಕ್ಟ್ರಿಕ್ ಬೈಕ್‌ನಲ್ಲಿ ಕಾಣಬಹುದಾಗಿದೆ. ಜನವರಿ ಕೊನೆಯ ವಾರದಲ್ಲಿ ಟಾರ್ಕ್ ಮೋಟಾರ್ಸ್ ಎಲೆಕ್ಟ್ರಿಕ್ ಬೈಕ್ ಬಿಡುಗಡೆಯಾಲಿದೆ. ಈ ಮೂಲಕ ದೇಶದ ಎಲೆಕ್ಟ್ರಿಕ್ ವಾಹನಗಳ ಸಾಲಿಗೆ ಮತ್ತೊಂದು ಸೇರಿಕೊಳ್ಳುತ್ತಿದೆ
 

click me!