ಬೆಂಗಳೂರು(ಜು.04): ಗ್ರಾಹಕರಿಗಾಗಿ ಯಮಹಾ ಮೋಟಾರ್ ಇಂಡಿಯಾ ವಿಶೇಷ ದಿ ಕಾಲ್ ಆಫ್ ದಿ ಬ್ಲೂ ಕಾರ್ಯಕ್ರಮ ಆಯೋಜಿಸಿತ್ತು. ಈ ಬಾರಿ ಬೆಂಗಳೂರಿನಲ್ಲಿ ನಡೆದ ಈ ಕಾರ್ಯಕ್ರಮಕ್ಕೆ 400 ರೈಡರ್‌ಗಳು ಮತ್ತು 1000ಕ್ಕೂ ಹೆಚ್ಚು ಯಮಾಹಾ ಅಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ವರ್ಷ ಯಮಾಹಾ ಆಯೋಜಿಸಿರುವ ಮೊದಲ ಕಸ್ಟಮರ್ ಎಂಗೇಜ್‌ಮೆಂಟ್ ಪ್ರೋಗ್ರಾಮ್ ಆಗಿದೆ.
ಈ ಕಾರ್ಯಕ್ರಮದ ಮೂಲಕ ಪ್ರತಿ ಮೋಟಾರ್‌ಸೈಕಲ್ ಉತ್ಸಾಹಿಯೂ ಯಮಾಹಾದ ಪ್ರೀಮಿಯಂ ಮಾಡೆಲ್ ಶ್ರೇಣಿಯ ಅತ್ಯುತ್ತಮ ತಂತ್ರಜ್ಞಾನ, ಕಾರ್ಯಕ್ಷಮತೆ ಮತ್ತು ಸೇಫ್ಟಿ ಫೀಚರ್‌ಗಳ ರೈಡಿಂಗ್‌ನ ರೋಮಾಂಚನ ಮತ್ತು ಆವಿಷ್ಕಾರದ ಅನುಭವ ಹೊಂದುವ ಅವಕಾಶ ಪಡೆಯುತ್ತಾರೆ. ಈ ಕಾರ್ಯಕ್ರಮದಲ್ಲಿ ಅವರ ಪ್ರತಿಭೆ ಪ್ರದರ್ಶನಕ್ಕೆ ಮತ್ತು ರೈಡಿಂಗ್ ಕೌಶಳ್ಯಗಳನ್ನು ತೀಕ್ಷಣಗೊಳಿಸಲು ಜಿಮ್‌ಖಾನಾ ರೈಡ್ ಆಯೋಜಿಸಲಾಗಿತ್ತು.
undefined
ಯಮಹಾ ಏರಾಕ್ಸ್ 155: ಬಿಡುಗಡೆಯಾದ ಪವರ್‌ಫುಲ್ ಸ್ಕೂಟರ್!
ಈ ರೋಮಾಂಚನವನ್ನು ಮತ್ತಷ್ಟು ಹೆಚ್ಚಿಸಲು ಟೆಸ್ಟ್ ರೈಡ್ ಆಕ್ಟಿವಿಟಿ, ಯಮಾಹಾ ಉತ್ಪನ್ನ ಶ್ರೇಣಿಯ ಪ್ರದರ್ಶನ ಮತ್ತು ಅಕ್ಸೆಸರೀಸ್ ಮತ್ತು ಅಪೇರೆಲ್ಸ್ ಝೋನ್ ಅನ್ನು ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದ ಮತ್ತೊಂದು ಪ್ರಮುಖ ಆಕರ್ಷಣೆ ಎಂದರೆ ಸ್ಟೈಲಿಂಗ್ ಝೋನ್ ಇದರಲ್ಲಿ ಗ್ರಾಹಕರು ವಿವಿಧ ಬಗೆಯ ಫೇಸ್ ಪೇಂಟಿಂಗ್ ಮತ್ತು ಟ್ಯಾಟೂ ಕಲೆಯಲ್ಲಿ ತೊಡಗಿಕೊಂಡರು. ಕಂಪನಿಯು `ದಿ ಕಾಲ್ ಆಫ್ ದಿ ಬ್ಲೂ ವೀಕೆಂಡ್ ಈವೆಂಟ್ಸ್’ ಅನ್ನು ಕರ್ನಾಟಕದ ಇತರೆ ಪ್ರದೇಶಗಳಲ್ಲಿ ಆಯೋಜಿಸಲಿದ್ದು ಗ್ರಾಹಕರ ಜೀವನಶೈಲಿಯ ಭಾಗವಾಗಿ ರೈಡಿಂಗ್ ಸಂಸ್ಕೃತಿಯನ್ನು ಉತ್ತೇಜಿಸುವ ಬ್ರಾಂಡ್‌ನ ಬದ್ಧತೆ ಕುರಿತು ಅರಿವನ್ನು ಹೆಚ್ಚಿಸಲಿದೆ.
‘ದಿ ಕಾಲ್ ಆಫ್ ದಿ ಬ್ಲೂ ವೀಕೆಂಡ್ ಆಕ್ಟಿವಿಟಿ’ಯೊಂದಿಗೆ ಯಮಾಹಾ ಭಾರತದಾದ್ಯಂತ ವಿಸ್ತಾರ ಗ್ರಾಹಕರನ್ನು ಸಕ್ರಿಯಗೊಳಿಸುವ ಉದ್ದೇಶ ಹೊಂದಿದೆ ಮತ್ತು ಉತ್ಸಾಹಕರ, ಸ್ಟೈಲಿಶ್ ಮತ್ತು ಸ್ಪೋರ್ಟಿ ಮಾಡೆಲ್‌ಗಳನ್ನು ವೈಝಡ್‌ಎಫ್-ಆರ್15 ವರ್ಷನ್ 4.0(155ಸಿಸಿ) ಎಬಿಎಸ್‌ನೊಂದಿಗೆ, ವೈಝಡ್‌ಎಫ್-ಆರ್15ಎಸ್ ವರ್ಷನ್ 3.0(155ಸಿಸಿ) ಎಬಿಎಸ್‌ನೊಂದಿಗೆ, ಎಂಟಿ-15(155ಸಿಸಿ) ವರ್ಷನ್ 2.0 ಎಬಿಎಸ್‌ನೊಂದಿಗೆ; ಬ್ಲೂ-ಕೋರ್ ಟೆಕ್ನಾಲಜಿ-ಸನ್ನದ್ಧ ಮಾದರಿಗಳಾದ ಎಫ್‌ಝಡ್ 25(249ಸಿಸಿ) ಎಬಿಎಸ್‌ನೊಂದಿಗೆ, ಎಫ್‌ಝಡ್‌ಎಸ್ 25(249ಸಿಸಿ), ಎಫ್‌ಝಡ್-ಎಸ್ ಎಫ್‌ಐ(149ಸಿಸಿ) ಎಬಿಎಸ್‌ನೊಂದಿಗೆ, ಎಫ್‌ಝಡ್-ಎಕ್ಸ್(149ಸಿಸಿ) ಎಬಿಎಸ್‌ನೊಂದಿಗೆ, ಏರೊಕ್ಸ್(125ಸಿಸಿ) ಎಬಿಎಸ್‌ನೊಂದಿಗೆ ಮತ್ತು ಯುಬಿಎಸ್ ಸನ್ನದ್ಧ ಸ್ಕೂಟರ್‌ಗಳಾದ ಫ್ಯಾಸಿನೊ 125 ಎಫ್‌ಐ ಹೈಬ್ರಿಡ್, ರೇಝಡ್‌ಆರ್ 125 ಎಪ್‌ಐ ಹೈಬ್ರಿಡ್(125ಸಿಸಿ), ಸ್ಟ್ರೀಟ್ ರ‍್ಯಾಲಿ 125 ಎಫ್‌ಐ ಹೈಬ್ರಿಡ್(125ಸಿಸಿ) ಒಳಗೊಂಡಿದೆ.
ಯಮಹಾದಿಂದ ಹೊಸ ಫ್ಯಾಸಿನೋ 125 ಫೈ ಹೈಬ್ರಿಡ್ ಸ್ಕೂಟರ್
ವೈಝಡ್‌ಎಫ್-ಆರ್15ಎಂ ಆ್ಯನಿವರ್ಸರಿ ಎಡಿಷನ್
ಯಮಹಾ ಮೋಟಾರ್ ಇಂಡಿಯಾ ‘ಕಾಲ್ ಫಾರ್ ಬ್ಲೂ’ ಥೀಮ್‌ನಡಿ ತನ್ನ 60ನೇ ವಾರ್ಷಿಕೋತ್ಸವದ ವಿಶೇಷ ಬೈಕ್ ವೈಝಡ್‌ಎಫ್-ಆರ್15ಎಂ ಅನ್ನು ಬಿಡುಗಡೆ ಮಾಡಿದೆ. 155 ಸಿಸಿಯ ಈ ಸೂಪರ್ ಸ್ಪೋಟ್ಸ್‌ರ್ ಮೋಟಾರ್ ಸೈಕಲ್ ಐಕಾನಿಕ್ ವೈಟ್ ಹಾಗೂ ರೆಡ್ ಬಣ್ಣಗಳಲ್ಲಿ ಲಭ್ಯ. 155 ಸಿಸಿ, 4 ಸ್ಟೊ್ರೕಕ್, ಲಿಕ್ವಿಡ್ ಕೂಲ್ಡ್, 4 ವಾಲ್‌್ವ ಇಂಜಿನ್ ಈ ಬೈಕ್‌ನದ್ದು. ಆರು ಸ್ಪೀಡ್ ಗೇರ್ ಬಾಕ್ಸ್‌ಗಳಿವೆ. ಈ ಬೈಕ್ ಬೆಲೆ 1,88,300 ರೂಪಾಯಿ(ಎಕ್ಸ್ ಶೋ ರೂಂ)