
ಬೆಂಗಳೂರು (ಆ.04) ಯಮಹಾ ಭಾರತದಲ್ಲಿ ಬೈಕ್ ಮೂಲಕ ಅತೀ ಹೆಚ್ಚು ಜನಪ್ರಿಯವಾಗಿದೆ. 90ರ ದಶಕದಲ್ಲಿ ಯಮಹಾ ಆರ್‌ಎಕ್ಸ್ 100 ಸೇರಿದಂತ ಇತ್ತೀಚಿನ ಹೊಸ ಆವೃತ್ತಿ ಬೈಕ್ ವರೆಗೂ ಭಾರಿ ಜನಪ್ರಿಯತೆ ಪಡೆದಿದೆ. ಯಮಹಾ ತನ್ನ ಶ್ರೀಮಂತ ರೇಸಿಂಗ್ ಪರಂಪರೆಯ, ಜನಪ್ರಿಯ R15 V4 ಮತ್ತು MT-15 ಆವೃತ್ತಿ 2.0 (MT-15 Version 2.0) ಬೈಕ್‌ಗಳಲ್ಲಿ 'ಮಾನ್‌ಸ್ಟರ್ ಎನರ್ಜಿ ಯಮಹಾ ಮೋಟೋಜಿಪಿ ಎಡಿಷನ್' (Monster Energy Yamaha MotoGP Edition) ಬಿಡುಗಡೆ ಮಾಡಿದೆ. ಯಮಹಾದ ಐಕಾನಿಕ್ ರೇಸಿಂಗ್ ಆವೃತ್ತಿಯ ಬೈಕ್‌ಗಳಿಗೆ ಗ್ರಾಹಕರಿಂದ ಬಂದ ಭಾರಿ ಬೇಡಿಕೆಗೆ ಸ್ಪಂದಿಸಿ ಸಂಸ್ಥೆ ಈ ತೀರ್ಮಾನ ಕೈಗೊಂಡಿದೆ.
ಹೊಸ ಬೈಕ್ ಬೆಲೆ
ಹೊಸ R15 V4 ಮತ್ತು MT-15 ಆವೃತ್ತಿ 2.0 ಮೋಟಾರ್‌ಸೈಕಲ್‌ಗಳ ಈ 'ಮಾನ್‌ಸ್ಟರ್ ಎನರ್ಜಿ ಯಮಹಾ ಮೋಟೋಜಿಪಿ ಎಡಿಷನ್' ಬೈಕ್‌ಗಳು ಇಂಧನ ಟ್ಯಾಂಕ್, ಟ್ಯಾಂಕ್ ಶ್ರೌಡ್‌ಗಳು ಹಾಗೂ ಸೈಡ್ ಪ್ಯಾನಲ್‌ಗಳ ಮೇಲೆ ಸಂಸ್ಥೆಯ ಸಿಗ್ನೇಚರ್ ಮೋಟೋಜಿಪಿ ರೇಸಿಂಗ್ ಗ್ರಾಫಿಕ್ಸ್ ಹೊಂದಿದೆ. ಯಮಹಾ ಸಂಸ್ಥೆಯ ರೇಸಿಂಗ್ ಡಿಎನ್‌ಎ (Racing DNA) ಬೈಕ್ ರೈಡಿಂಗ್‌ನಲ್ಲೂ ಅದೇ ಥ್ರಿಲ್ ನೀಡಲಿದೆ. ರೇಸಿಂಗ್ ಮಾದರಿಯ ಆಕರ್ಷಕ ಗ್ರಾಫಿಕ್ಸ್ ಮತ್ತು ಪ್ರೀಮಿಯಂ ವಿನ್ಯಾಸವನ್ನು ಹೊಂದಿರುವ ಈ ಸ್ಪೆಷಲ್ ಎಡಿಷನ್ ಬೈಕ್‌ಗಳು, ಕಣ್ಣಸೆಳೆಯುವ ಸೌಂದರ್ಯದೊಂದಿಗೆ ರೋಮಾಂಚನಕಾರಿ ರೈಡಿಂಗ್ ಕಾರ್ಯಕ್ಷಮತೆಯನ್ನು ನೀಡಲಿವೆ.
ತನ್ನ ಪ್ರಸಿದ್ಧ ಬೈಕ್ ಸರಣಿಯನ್ನು ಮತ್ತಷ್ಟು ಬಲಪಡಿಸಲು, ಯಮಹಾ ಸಂಸ್ಥೆಯು ತನ್ನ ಅತ್ಯಂತ ಜನಪ್ರಿಯ 'FZ-S Fi ಹೈಬ್ರಿಡ್' ಮತ್ತು 'FZ-S Fi' ಬೈಕ್‌ಗಳನ್ನು ಒಳಗೊಂಡಂತೆ ಸಂಪೂರ್ಣ FZ ಸರಣಿಯಲ್ಲಿ ನೂತನ ಬಣ್ಣದ ಆಯ್ಕೆಗಳನ್ನು ಪರಿಚಯಿಸಿದೆ. 2026 ರ ನೂತನ 'FZ-S Fi ಹೈಬ್ರಿಡ್' ಬೈಕ್ ಈಗ ತೀರಾ ಹೊಸದಾದ 'ಐಸ್ ಸ್ಟಾರ್ಮ್' (Ice Storm) ಶೇಡ್‌ನಲ್ಲಿ ಲಭ್ಯವಿದ್ದು, ಇದರ ಅತ್ಯಂತ ಜನಪ್ರಿಯ 'ಮ್ಯಾಟ್ ಬ್ಲ್ಯಾಕ್' (Matte Black) ಮಾದರಿಯು ಸೈಡ್ ಪ್ಯಾನಲ್‌ಗಳ ಮೇಲೆ ಹೆಚ್ಚು ಸ್ಪೋರ್ಟಿ ಹಾಗೂ ಕಂಟೆಂಪರರಿ ಗ್ರಾಫಿಕ್ಸ್ ಪಡೆದುಕೊಂಡಿದೆ.
ಇನ್ನೊಂದೆಡೆ, ಯಮಹಾ 'FZ-S Fi' ಬೈಕ್‌ಗೆ ನೂತನ 'ಮೆಟಾಲಿಕ್ ಬ್ಲ್ಯಾಕ್' (Metallic Black) ಬಣ್ಣದ ಆಯ್ಕೆಯನ್ನು ನೀಡಲಾಗಿದ್ದು, ಇದು ಮೋಟಾರ್‌ಸೈಕಲ್‌ಗೆ ಮತ್ತಷ್ಟು ಗಂಭೀರ, ಮಸಲ್ ಹಾಗೂ ಅಗ್ರೆಸಿವ್ ರಸ್ತೆ ಉಪಸ್ಥಿತಿಯನ್ನು (Street Presence) ನೀಡಲಿದೆ. ಮಾರುಕಟ್ಟೆಗೆ ತರಲಾದ ಈ ಸಾಲು ಸಾಲು ಅಪ್‌ಡೇಟ್‌ಗಳು ಯಮಹಾ ಬ್ರ್ಯಾಂಡ್ ತನ್ನ ಗ್ರಾಹಕರಿಗೆ ಅತ್ಯಾಕರ್ಷಕ ಬೈಕ್ ಮಾಲೀಕತ್ವದ ಅನುಭವವನ್ನು ನೀಡಲು ಶ್ರಮಿಸುತ್ತಿರುವುದನ್ನು ತೋರಿಸುತ್ತದೆ. ಜೊತೆಗೆ, ಭಾರತದಾದ್ಯಂತ ಇರುವ ಬೈಕ್ ಪ್ರಿಯರಿಗೆ ಯಮಹಾದ ರೇಸಿಂಗ್ ಪರಂಪರೆ ಮತ್ತು ತಾಂತ್ರಿಕ ನಾವೀನ್ಯತೆಯನ್ನು ಹತ್ತಿರವಾಗಿಸುವ ಪ್ರಯತ್ನ ಇದಾಗಿದೆ.