ಬೆಂಗಳೂರಿನ ಎಥರ್‌ನಿಂದ ಹೊಸ EL01 ಎಲೆಕ್ಟ್ರಿಕ್ ಸ್ಕೂಟರ್ ಆ.29ಕ್ಕೆ ಬಿಡುಗಡೆ, ಬೆಲೆ, ಮೈಲೇಜ್ ಎಷ್ಟು?

Published : Aug 03, 2026, 11:01 AM IST
Ather EL01 Electric Scooter Set for August 29 Debut

ಸಾರಾಂಶ

ಬೆಂಗಳೂರು ಮೂಲದ ಎಥರ್ ಎನರ್ಜಿ ಇದೀಗ ಮತ್ತೊಂದ ಫ್ಯಾಮಿಲಿ ಸ್ಕೂಟರ್ ಲಾಂಚ್ ಮಾಡುತ್ತಿದೆ. ಟೀಸರ್ ಬಿಡುಗಡೆ ಮಾಡಲಾಗಿದೆ. ಆ.29ಕ್ಕೆ ಬಿಡುಗಡೆಯಾಗಲಿರುವ ಈ ಸ್ಕೂಟರ್ ಬೆಲೆ, ಮೈಲೇಜ್ ಎಷ್ಟು?

ಬೆಂಗಳೂರು (ಆ.03) ಭಾರತದಲ್ಲಿ ಲಭ್ಯವಿರುವ ಅತ್ಯುತ್ತಮ ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಬೆಂಗಳೂರಿನ ಎಥರ್ ಎನರ್ಜಿ ಅಗ್ರ ಸ್ಥಾನದಲ್ಲಿದೆ. ಉತ್ತಮ ಗುಣಮಟ್ಟ, ಮೈಲೇಜ್ , ಪರ್ಫಾಮೆನ್ಸ್ ಮೂಲಕ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಸ್ಪೋರ್ಟ್ಸ್ ಸ್ಕೂಟರ್ ಬಳಿಕ ರಿಜ್ತಾ ಮೂಲಕ ಫ್ಯಾಮಿಲಿ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಿದ ಎಥರ್ ಇದೀಗ ಮತ್ತೊಂದು ಫ್ಯಾಮಿಲಿ ಒರಿಯೆಂಟೆಡ್ ಇವಿ ಬಿಡುಗಡೆ ಮಾಡುತ್ತಿದೆ. ಎಥರ್ EL01 ಎಲೆಕ್ಟ್ರಿಕ್ ಸ್ಕೂಟರ್ ಆಗಸ್ಟ್ 29ಕ್ಕೆ ಬಿಡುಗಡೆಯಾಗುತ್ತಿದೆ.

ಹೊಸ ಇವಿ ಸ್ಕೂಟರ್ ಬೆಲೆ ಎಷ್ಟು?

ಎಥರ್ ಎನರ್ಜಿ ಹೊಸ EL01 ಎಲೆಕ್ಟ್ರಿಕ್ ಸ್ಕೂಟರ್ ಬೆಲೆ 1 ರಿಂದ 1.25 ಲಕ್ಷ ರೂಪಾಯಿ ಒಳಗೆ ಇರಲಿದೆ ಎಂದು ಅಂದಾಜಿಸಲಾಗಿದೆ. ಸದ್ಯ ಮಾರುಕಟ್ಟೆಯಲ್ಲಿರುವ ಎಥರ್ ರಿಜ್ತಾ ಸ್ಕೂಟರ್ ಬೆಲೆ 1.21 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ) ಇನ್ನು ಎಥರ್ 450 ರೇಂಜ್ ಸ್ಕೂಟರ್ ಬೆಲೆ 1.28 ಲಕ್ಷ ರೂಪಾಯಿ (ಎಕ್ಸ್ ಶೋ ರೂಂ).

ಹೊಸ ತಂತ್ರಜ್ಞಾನ

ಹೊಸ ವಿನ್ಯಾಸ, ಹೊಸ ತಂತ್ರಜ್ಞಾನ ಹಾಗೂ ಮತ್ತಷ್ಟು ಸುರಕ್ಷತೆ ಹಾಗೂ ಅರಾಮದಾಯಕ ರೈಡ್‌ಗೆ ಈ ಸ್ಕೂಟರ್ ಉತ್ತಮ ಆಯ್ಕೆಯಾಗಿದೆ ಎಂದು ಕಂಪನಿ ಹೇಳಿಕೊಂಡಿದೆ. ಹಲವು ಹೊಸತನಗಳು ಈ ಸ್ಕೂಟರ್‌ನಲ್ಲಿ ಇರಲಿದೆ. ಹ್ಯಾಂಡಲ್‌‍ಬಾರ್ ಮೌಂಟೆಡ್ ಹೆಡ್‌ಲೈಟ್, ಎಲ್‌ಇಡಿ ಡೇ ಟೈಮ್ ರನ್ನಿಂಗ್ ಲೈಟ್, 14 ಇಂಚಿನ ಫ್ರಂಟ್ ಹಾಗೂ 12 ಇಂಚಿನ ರೇರ್ ವ್ಹೀಲ್ ನೀಡಲಾಗಿದೆ. ಹೆಚ್ಚು ಬ್ಯಾಲೆನ್ಸ್ ಮೂಲಕ ಈ ಸ್ಕೂಟರ್ ಸಿಟಿ ಹಾಗೂ ಇತರ ರಸೆಗಳಲ್ಲಿ ಸುಲಭವಾಗಿ ರೈಡ್ ಮಾಡಲು ಸಾಧ್ಯವಿದೆ. ಮೆಟಲ್ ಬಾಡಿ ಪ್ಯಾನಲ್ ಮೂಲಕ ನಿರ್ಮಾಣಗೊಂಡಿರುವ ಹೊಸ EL01 ಸ್ಕೂಟರ್ ಎಥರ್ ಕುಟುಂಬದ ಕೈಗೆಟುಕುವ ದರದ ಸ್ಕೂಟರ್ ಆಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಸದ್ಯ ಎಥರ್ EL01 ಸ್ಕೂಟರ್ ಬ್ಯಾಟರಿ ಹಾಗೂ ಮೈಲೇಜ್ ಕುರಿತು ಸ್ಪಷ್ಟ ಮಾಹಿತಿ ಹೊರಬಂದಿಲ್ಲ. ಶೀಘ್ರದಲ್ಲೇ ಈ ಕುರಿತ ಮಾಹಿತಿಗಳು ಲಭ್ಯವಾಗಲಿದೆ. ಹೊಸ ಎಥರ್ EL01 ಎಲೆಕ್ಟ್ರಿಕ್ ಸ್ಕೂಟರ್ ಮೈಲೇಜ್ ರೇಂಜ್ ವಿಚಾರದಲ್ಲಿ ಹೊಸ ದಾಖಲೆ ಬರೆಯುವ ಸಾಧ್ಯತೆ ಇದೆ. ಈಗಗಾಲೇ ಎಥರ್ ಎಲೆಕ್ಟ್ರಿಕ್ ಸ್ಕೂಟರ್ 2kWh ದಿಂದ 5kWh ಬ್ಯಾಟರಿ ಪ್ಯಾಕ್ ಬಳಸಿದೆ. ಹೊಸದಾಗಿ ಬಿಡುಗಡೆಯಾಗುವ ಸ್ಕೂಟರ್‌ನಲ್ಲಿ ಯಾವ ಬ್ಯಾಟರಿ ಪ್ಯಾಕ್ ಅನ್ನೋ ಕುತೂಹಲ ತೀವ್ರಗೊಂಡಿದೆ.

ಆಗಸ್ಟ್ 29ಕ್ಕೆ ಎಥರ್ EL01 ಎಲೆಕ್ಟ್ರಿಕ್ ಸ್ಕೂಟರ್ ಜೊತೆ ಇತರ ಕೆಲ ಲಾಂಚ್ ಕೂಡ ನಡೆಯಲಿದೆ. ಇತರ ಕೆಲ ಎಥರ್ ಉತ್ಪನ್ನಗಳು ಲಾಂಚ್ ಆಗಲಿದೆ. ಹೆಚ್ಚುವರಿ ಆ್ಯಕ್ಸಸರಿ ಸೇರಿದಂತೆ ಗ್ರಾಹಕರ ಸೆಳೆಯುವ ಹಲವು ಉತ್ಪನ್ನಗಳನ್ನು ಎಥರ್ ಲಾಂಚ್ ಮಾಡಲು ನಿರ್ಧರಿಸಿದೆ.

PREV
Read more Articles on
click me!

Recommended Stories

ಜಾವಾ ಯೆಜ್ಡಿ 3 ಹೊಸ ಬೈಕ್‌ಗಳು ಅನಾವರಣ: ಕೇರಳದ ಕೊಚ್ಚಿಯಲ್ಲಿ ಬಿಡುಗಡೆ ।
ಗೂಳಿಯಂತೆ ನುಗ್ಗೋ ಪಲ್ಸರ್ ಲವರ್ಸ್‌ಗೆ ಗುಡ್ ನ್ಯೂಸ್! ಹೊಸ ಬೈಕ್‌ನೊಂದಿಗೆ ಬಜಾಜ್ ಕಮ್‌ಬ್ಯಾಕ್, ಲಾಂಚ್ ಡೇಟ್ ಫಿಕ್ಸ್!