ಜಪಾನ್ ಮೂಲದ ಯಮಹಾ ಭಾರತದಲ್ಲಿ ಮೇಕ್‌ ಇನ್ ಇಂಡಿಯಾ ಮಂತ್ರ, ಬೈಕ್ ಪ್ರಿಯರಿಗೆ ಎಕ್ಸೈಟಿಂಗ್ ಸುದ್ದಿ

Published : Sep 25, 2026, 04:32 PM IST
Yamaha Is Planning To Re enter The 250cc To 1000cc Bike Segment In India

ಸಾರಾಂಶ

ಜಪಾನ್ ಮೂಲದ ಯಮಹಾ ಕಂಪನಿಯು ಭಾರತದಲ್ಲಿ 250cc ಯಿಂದ 1,000cc ವರೆಗಿನ ಪ್ರೀಮಿಯಂ ಬೈಕ್‌ಗಳನ್ನು ಬಿಡುಗಡೆ ಮಾಡಲು ಸಿದ್ಧತೆ ನಡೆಸಿದೆ. ಬೆಲೆ ನಿಯಂತ್ರಣಕ್ಕಾಗಿ ಈ ಬೈಕ್‌ಗಳನ್ನು ಭಾರತದಲ್ಲೇ ಉತ್ಪಾದಿಸಲು ನಿರ್ಧರಿಸಿದ್ದು, R7 ಮತ್ತು ಟೆನೆರೆ 700 ಮಾದರಿಗಳು ಮಾರುಕಟ್ಟೆಗೆ ಬರುವ ನಿರೀಕ್ಷೆಯಿದೆ. ಜೊತೆಗೆ ಭಾರತವನ್ನು ಪ್ರಮುಖ ರಫ್ತು ಕೇಂದ್ರವನ್ನಾಗಿ ಮಾಡುವ ಗುರಿಯನ್ನು ಕಂಪನಿ ಹೊಂದಿದೆ.

ನಿಮಗೇನಾದರೂ ಬೈಕ್‌ ಮೇಲೆ ಕ್ರೇಜ್ ಇದ್ದರೆ ಇಲ್ಲೊಂದು ಎಕ್ಸೈಟಿಂಗ್ ನ್ಯೂಸ್ ಇದೆ. ಜಪಾನ್ ಮೂಲದ 'ಯಮಹಾ' (Yamaha) ಮೆಗಾ ಪ್ಲಾನ್ ಮಾಡಿದೆ. 250cc ಯಿಂದ 1,000cc ವರೆಗಿನ ಪ್ರೀಮಿಯಂ ಬೈಕ್‌ಗಳನ್ನು ಮಾರುಕಟ್ಟೆಗೆ ಲಗ್ಗೆ ಇಡಲು ಸಿದ್ಧತೆ ನಡೆಸಿದ್ದು, ಹೊಸ ಬೈಕ್ ಖರೀದಿ ಪ್ಲಾನ್‌ನಲ್ಲಿದ್ದರೆ ರೆಡಿಯಾಗಿ..

ಭಾರತದಲ್ಲೂ ಪ್ರೀಮಿಯಂ ಬೈಕ್‌ಗಳ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚಾಗ್ತಿದೆ.ಭಾರತಕ್ಕೆ ಯಮಹಾ ಪ್ರೀಮಿಯಂ ಬೈಕ್‌ಗಳನ್ನು ತರುತ್ತಿರುವ ಬಗ್ಗೆ ಯಮಹಾ ಇಂಡಿಯಾ ಅಧ್ಯಕ್ಷ ಹಜಿಮೆ ಓಟಾ (Hajime Aota) ಖಚಿತಪಡಿಸಿದ್ದಾರೆ. ಇನ್ನೊಂದು ಖುಷಿ ಸುದ್ದಿ ಏನೆಂದರೆ.. ಸಾಮಾನ್ಯ ಜನರೂ ಕೂಡ ಹಣ ಹೊಂದಿಸಿ ಖರೀದಿಸಲು ಅನುಕೂಲ ಆಗುವಂತೆ ಅಂದರೆ ದೇಶದಲ್ಲಿ ಬೆಲೆ ನಿಯಂತ್ರಣದಲ್ಲಿಡಲು ಭಾರತದಲ್ಲೇ ಬೈಕ್‌ಗಳ ಉತ್ಪಾದನೆಗೆ ಆದ್ಯತೆ ನೀಡಲಾಗುತ್ತಿದೆ ಎಂದು ಅಧ್ಯಕ್ಷರು ತಿಳಿಸಿದ್ದಾರೆ.

ಯಾವೆಲ್ಲ ಬೈಕ್‌ಗಳು ಬಿಡುಗಡೆ ಆಗ್ತವೆ?

ನಮ್ಮ MotoGP, WorldSBK ರೇಸಿಂಗ್ ಬೈಕ್‌ಗಳು ಜಾಗತಿಕ ಮಟ್ಟದಲ್ಲಿ ದೊಡ್ಡ ಸೌಂಡ್ ಮಾಡ್ತಿವೆ. ಅಷ್ಟೇ ಅಲ್ಲ ವಿದೇಶಗಳಲ್ಲಿ ಯಮಹಾದ ಹತ್ತಾರು ಮಲ್ಟಿ-ಸಿಲಿಂಡರ್ ಸೂಪರ್‌ಬೈಕ್‌ಗಳನ್ನು ಮಾರಾಟ ಮಾಡ್ತಿದೆ. ಇವೆಲ್ಲ ಪವರ್‍‌ಫುಲ್ ಬೈಕ್‌ಗಳಾಗಿದ್ದು, ಭಾರತದಲ್ಲೂ ಇಂಥ ಬೈಕ್‌ಗಳಿಗೆ ವ್ಯಾಪಕ ಬೇಡಿಕೆ ಹೆಚ್ಚಿದೆ. ಹೀಗಾಗಿ ನಾವು ಯಮಹಾದ ದೊಡ್ಡ ಎಂಜಿನ್ ಸಾಮರ್ಥ್ಯದ ಬೈಕ್‌ಗಳನ್ನು ಭಾರತದಲ್ಲಿ ಪರಿಚಯಿಸಲು ಮುಂದಾಗಿದ್ದೇವೆ ಎಂದಿದ್ದಾರೆ.

ಭಾರತಕ್ಕೆ ಬಂದರೆ ಯಾವೆಲ್ಲ ಬೈಕ್‌ಗಳು ಬರಬಹುದು ಅಂತಾ ನೋಡೋದಾದ್ರೆ.. ಇತ್ತೀಚೆಗೆ ಯಮಯಾ ತನ್ನ ಭಾರತ್ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ ನಡೆಸಿತ್ತು. ಈ ವೇಳೆ ತನ್ನ ಜನಪ್ರಿಯ R7 ಮತ್ತು ಟೆನೆರೆ 700 (Tenere 700) ಬೈಕ್‌ಗಳನ್ನು ಪ್ರದರ್ಶಿಸಿದೆ. ಯಮಹಾ R7, ಮಿಡ್ಲ್‌ವೇಟ್ ಸೂಪರ್‌ಸ್ಪೋರ್ಟ್ ಬೈಕ್ ಆಗಿದೆ. ಕ್ರೇಜ್ ಇರೋರಿಗೆ ಇದು ಒಳ್ಳೆಯ ಆಯ್ಕೆ ಆಗಿದೆ. ಇನ್ನೊಂದು ಟೆನೆರೆ 700 (Tenere 700). ಪ್ರಸ್ತುತ ಭಾರತದಲ್ಲಿ ಅಡ್ವೆಂಚರ್ ಬೈಕ್ ಮಾರುಕಟ್ಟೆ ದೊಡ್ಡದಾಗಿ ಬೆಳೆಯುತ್ತಿದೆ. ಹೀಗಾಗಿ ಇದು ಭಾರತಕ್ಕೆ ಬಂದರೆ ಹೊಸ ಕ್ರಾಂತಿ ಸೃಷ್ಟಿಸುವ ನಿರೀಕ್ಷೆ ಇದೆ. ಕಂಪನಿಯು ಅಧಿಕೃತವಾಗಿ ಮಾದರಿಗಳ ಹೆಸರು ಪ್ರಕಟಿಸಿಲ್ಲ. ಆದರೆ ಈ ಎರಡೂ ಬೈಕ್‌ಗಳು ಭಾರತಕ್ಕೆ ಬರೋದು ಬಹುತೇಕ ಖಚಿತ ಎನ್ನಲಾಗ್ತಿದೆ.

ಯಮಹಾ ಭಾರತದಲ್ಲಿ ತನ್ನ ಅಸ್ತಿತ್ವವನ್ನು ಬಲಪಡಿಸಿಕೊಳ್ಳಲು ಇನ್ನೊಂದು ಪ್ಲಾನ್ ಮಾಡಿದೆ. ವಿದೇಶದಿಂದ ಬೈಕ್‌ಗಳನ್ನ ಆಮದು ಮಾಡಿಕೊಳ್ಳುವುದರ ಜೊತೆಗೆ ಸ್ಥಳೀಯವಾಗಿಯೂ ಉತ್ಪಾದಿಸಲು ನಿರ್ಧರಿಸಿದೆ. ಮೇಕ್ ಇನ್ ಇಂಡಿಯಾ ಕಲ್ಪನೆ ಅಡಿಯಲ್ಲಿ ಸ್ಥಳೀಯವಾಗಿ ಒತ್ತು ನೀಡಲಾಗಿದೆ ಎಂದು ಹೇಳಲಾಗ್ತಿದೆ. ಸ್ಥಳೀಯವಾಗಿ ಬೈಕ್‌ಗಳ ಉತ್ಪಾದನೆ ಮಾಡೋದ್ರಿಂದ ದುಬಾರಿ ಆಮದು ಸುಂಕ ತಪ್ಪಲಿದೆ. ಆ ಮೂಲಕ ಕಡಿಮೆ ದರಕ್ಕೆ ಭಾರತೀಯ ಗ್ರಾಹಕರ ಸೂಪರ್ ಬೈಕ್‌ಗಳನ್ನ ಖರೀದಿ ಮಾಡಬಹುದು ಎಂದಿದ್ದಾರೆ.

ಜೊತೆಗೆ ಭಾರತದಲ್ಲಿ ತನ್ನ ಆರ್‌ ಅಂಡ್ ಡಿ (ಸಂಶೋಧನೆ ಮತ್ತು ಅಭಿವೃದ್ಧಿ) ಕೇಂದ್ರ ವಿಸ್ತರಿಸಲು ಯಮಹಾ ಪ್ಲಾನ್ ಮಾಡಿಕೊಂಡಿದೆ. ಯಮಹಾದ ಜಾಗತಿಕ ರಫ್ತಿನಲ್ಲಿ ಇಂಡೋನೇಷ್ಯಾ ಮುಂಚೂಣಿಯಲ್ಲಿದೆ. ಭಾರತದ ಬಲಿಷ್ಠ ಆಟೋಮೊಬೈಲ್ ಪೂರೈಕೆ ಜಾಲ ಬಳಸಿಕೊಂಡು ಇಂಡೋನೇಷ್ಯಾವನ್ನು ಹಿಂದಿಕ್ಕಿ ಭಾರತವನ್ನೇ ಪ್ರಮುಖ ರಫ್ತು ಹಬ್ ಮಾಡುವ ಗುರಿ ಹೊಂದಿದೆ. ಇನ್ನು ಭಾರತದಲ್ಲಿ ಬೈಕ್‌ಗಳ ಬಿಡುಗಡೆಯ ದಿನಾಂಕವನ್ನು ಅಧಿಕೃತವಾಗಿ ಪ್ರಕಟಿಸಲ್ಲ. ಆದರೆ ಬೈಕ್‌ಪ್ರಿಯರಿಗಂತೂ ಎಕ್ಸೈಟಿಂಗ್ ನ್ಯೂಸ್ ಇದಾಗಿದೆ.

PREV
Read more Articles on
click me!

Recommended Stories

ದಿನ ಆಫೀಸ್‌ಗೆ ಹೋಗಿ ಬರಲು ಯಾವ ಸ್ಕೂಟರ್ ಬೆಸ್ಟ್? ಬೆಲೆ ಮತ್ತು ಮೈಲೇಜ್ ವಿವರ
Royal Enfield Classic 350 ಸಿಗ್ನೆಚರ್ ವೈಟ್ ಹೊಸ ವೇರಿಯೆಂಟ್ ಬಿಡುಗಡೆ..! ಬೆಲೆ ಎಷ್ಟು? ಏನಿದರ ವಿಶೇಷತೆ?