ಭಾರತದಲ್ಲಿ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ವಿಶೇಷ ಸ್ಥಾನವಿದೆ. ಯುವ ಸಮುೂಹದ ನೆಚ್ಚಿನ ಬೈಕ್ ಇದಾಗಿದೆ.ಹೀಗೆ ಕೆಲ ವರ್ಷಗಳ ಕನಸು ನನಸುಗೊಳಿಸಲು ಬುಕ್ ಮಾಡಿದ್ದ ಬೈಕ್ ಬಂದೇ ಬಿಟ್ಟಿತ್ತು. ಬೈಕ್ ಕೀ ಹಸ್ತಾಂತರವೂ ಆಯಿತು. ಇನ್ನೇನು ಬೈಕ್ ಸ್ಟಾರ್ಟ್ ಮಾಡಬೇಕು ಅನ್ನುವಷ್ಟರಲ್ಲೇ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ಕ್ಷಣಗಳಲ್ಲಿ ಬೆಂಕಿ ಹೊತ್ತಿ ಉರಿದಿದೆ.
ನವದೆಹಲಿ(ಫೆ.28): ರಾಯಲ್ ಎನ್‌ಫೀಲ್ಡ್ ಅತ್ಯಂತ ಜನಪ್ರಿಯ ಬೈಕ್. ಎನ್‌ಫೀಲ್ಡ್ ಖರೀದಿಸಿ ಸುತ್ತಾಡಬೇಕು ಅನ್ನೋದು ಹಲವರ ಕನಸು. ಇನ್ನು ಬೈಕ್ ಬುಕ್ ಮಾಡಿದ ಮೇಲೆ ಕೈಸೇರುವ ದಿನ ಯಾವತ್ತೂ ಮರೆಯಲು ಸಾಧ್ಯವಿಲ್ಲ. ಆದರೆ ಇಲ್ಲೊಬ್ಬರಿಗೆ ಬೈಕ್ ಡೆಲಿವರಿ ಪಡೆದುಕೊಳ್ಳುವ ದಿನವೇ ಅವಘಡ ಸಂಭವಿಸಿದೆ. ಬಹುದಿನಗಳ ಕನಸು ಈಡೇರಿಸಲು ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ ಬುಕ್ ಮಾಡಿದ್ದಾರೆ. ಕೆಲ ದಿನಗಳ ಕಾಯುವಿಕೆ ಬಳಿಕ ಶೋರೂಂನಿಂದ ಕರೆ ಬಂದಿದೆ. ನಿಮ್ಮ ಬೈಕ್ ಆಗಮಿಸಿದೆ. ಪಡೆದುಕೊಳ್ಳಿ ಎಂದಿದ್ದಾರೆ. ಸಂಭ್ರಮದಿಂದ ಶೋ ರೂಂಗೆ ತೆರಳಿ ಕೆಲ ಪ್ರಕ್ರಿಯೆ ಮುಗಿಸಿದ್ದಾರೆ. ಬಳಿಕ ಸಿಬ್ಬಂದಿಗಳಿಂದ ಕೀ ಯನ್ನು ಪಡೆದಿದ್ದಾರೆ. ಶೋರೂಂ ಸರ್ವೀಸ್ ಸ್ಟೇಶನ್‌ನಲ್ಲಿದ್ದ ಹೊಚ್ಚ ಹೊಸ ಬೈಕ್ ಬಳಿ ಬಂದು ಇನ್ನೇನು ಸ್ಟಾರ್ಟ್ ಮಾಡಬೇಕು ಅನ್ನುವಷ್ಟರಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಒಂದೇ ಕ್ಷಣದಲ್ಲಿ ಬೈಕ್ ಹೊತ್ತಿ ಉರಿದ ಘಟನೆ ನಡೆದಿದೆ.
ಸರ್ವೀಸ್ ಸ್ಟೇಶನ್‌ನಲ್ಲಿ ಇತರರ ಹಲವು ರಾಯಲ್ ಎನ್‌ಫೀಲ್ಡ್ ಬೈಕ್ ನಿಲ್ಲಿಸಲಾಗಿದೆ. ಆದರೆ ಈ ಹೊಚ್ಚ ಹೊಸ ಬೈಕ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿದಿದೆ. ತಕ್ಷಣವೇ ಅಲ್ಲಿನ ಸಿಬ್ಬಂದಿಗಳು ನೀರು ತಂದು ಸುರಿದಿದ್ದಾರೆ. ಆದರೆ ಬೆಂಕಿ ನಿಯಂತ್ರಣಕ್ಕೆ ಬಂದಿಲ್ಲ. ಇದೇ ವೇಳೆ ಬೆಂಕಿ ನಂದಿಸುವ ಸಣ್ಣ ಅಗ್ನಿಶಾಮಕದಿಂದ ಬೆಂಕಿ ನಂದಿಸಲಾಗಿದೆ. ಆದರೆ ಬೈಕ್ ಬಾಗಶಃ ಸುಟ್ಟುಹೋಗಿದೆ.
undefined
Royal Enfield Hunter 350: ಬೇರೆ ಬೈಕುಗಳಿಗಿಂತ ಹಗುರ, ಕಡಿಮೆ ಎತ್ತರದ ಸ್ಟೈಲಿಷ್ ಬೈಕು
ಬೆಂಕಿ ನಂದಿಸಿದ ಕಾರಣ ಭಾರಿ ಅವಘಡ ತಪ್ಪಿದೆ. ಕಾರಣ ಸರ್ವೀಸ್ ಸ್ಟೇಶನ್‌ನಲ್ಲಿ ಇದೇ ರೀತ ಹಲವು ಹೊಚ್ಚ ಹೊಸ ಬೈಕ್‌ಗಳಿದ್ದರೆ, ಹಲವು ಬೈಕ್‌ಗಳನ್ನು ಗ್ರಾಹಕರು ಸರ್ವೀಸ್‌ಗಾಗಿ ಬಿಟ್ಟಿದ್ದರು. ಬೆಂಕಿ ಕೆನ್ನಾಲಿಗೆ ಇತರ ಬೈಕ್‌ಗೆ ತಟ್ಟಿದ್ದರೆ, ಎಲ್ಲವೂ ಸುಟ್ಟು ಭಸ್ಮವಾಗುತ್ತಿತ್ತು. ಇಷ್ಟೇ ಅಲ್ಲ ಅತೀ ದೊಡ್ಡ ದುರಂತ ಸಂಭವಿಸುತಿತ್ತು. ಆದಕ್ಕೂ ಮುನ್ನ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಇದೀಗ ಗ್ರಾಹಕನಿಗೆ ಹೊಸ ಬೈಕ್ ನೀಡುವುದಾಗಿ ಶೋ ರೂಂ ಮಾಲೀಕರು ಹೇಳಿದ್ದಾರೆ.
ಸಾಮಾನ್ಯವಾಗಿ ರಾಯಲ್ ಎನ್‌ಫೀಲ್ಡ್ ಬೈಕ್‌ಲ್ಲಿ ಬೆಂಕಿ ಕಾಣಿಸಿಕೊಳ್ಳುವುದು ತೀರಾ ವಿರಳ. ಇಷ್ಟೇ ಅಲ್ಲ ಬಿಸಿಲಿನ ಬೇಗೆಗೆ, ಶಾರ್ಟ್ ಸರ್ಕ್ಯೂಟ್ ಕಾರಣಕ್ಕೆ ರಾಯಲ್ ಎನ್‌ಫೀಲ್ಡ್ ಬೈಕ್‌ಗೆ ಬೆಂಕಿ ಹೊತ್ತಿಕೊಂಡ ಘಟನೆಗಳು ಹೆಚ್ಚಿಲ್ಲ. ರಾಯಲ್ ಎನ್‌ಫೀಲ್ಡ್ ಎಲ್ಲಾ ವಾತಾವರಣಕ್ಕೂ ಹೊಂದಿಕೊಳ್ಳುವ ಕಾರಣ ಬಹುತೇಕರು ಈ ಬೈಕ್ ಇಷ್ಟಪಡುತ್ತಾರೆ. ಇದೀಗ ಬೆಂಕಿ ಹೊತ್ತಿಕೊಂಡ ಘಟನೆ ಕೆಲ ಆತಂಕಕ್ಕೂ ಕಾರಣಾಗಿದೆ. ಇದೀಗ ರಾಯಲ್ ಎನ್‌ಫೀಲ್ಡ್ ಕಂಪನಿ ಈ ಕುರಿತು ತನಿಖೆಗೆ ಮುಂದಾಗಿದೆ. ಯಾವ ಕಾರಣಕ್ಕೆ ಬೆಂಕಿ ಹೊತ್ತಿಕೊಂಡಿದೆ ಅನ್ನೋದು ಪತ್ತೆ ಹಚ್ಚಲು ಮುಂದಾಗಿದೆ.
ಇತ್ತೀಚೆಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳಲ್ಲಿ ಬೆಂಕಿ ಹೊತ್ತಿಕೊಳ್ಳುವ, ಸ್ಪೋಟಗೊಳ್ಳುತ್ತಿರುವ ಪ್ರಕರಣ ಹೆಚ್ಚಾಗಿ ಕಂಡು ಬಂದಿತ್ತು. ಉರಿ ಬಿಸಿಲಿನಿಂದ ಬ್ಯಾಟರಿಯೊಳಗಿನ ಶಾಖ ಹೆಚ್ಚಾಗಿ ಸ್ಫೋಟಗೊಂಡು ಘಟನೆಯೂ ನಡೆದಿದೆ. ನಿಲ್ಲಿಸಿದ್ದ ಬೈಕ್ ಬೆಂಕಿ ಹೊತ್ತಿಕೊಂಡ ಘಟನೆಗಳೂ ನಡೆದಿದೆ. ಈ ಘಟನೆಗಳಲ್ಲಿ ಕೆಲವರು ಬಲಿಯಾಗಿದ್ದಾರೆ. ಇದೀಗ ಇಂಧನ ವಾಹನಗಳಲ್ಲೂ ಬೆಂಕಿ ಕಾಣಿಸಿಕೊಳ್ಳುತ್ತಿರುವುದು ಗ್ರಾಹಕರ ಆತಂಕ ಹೆಚ್ಚಿಸಿದೆ.
ಬೆಂಗಳೂರಿನಲ್ಲಿ ರಾಯಲ್ ಎನ್‌ಫೀಲ್ಡ್ ಅತ್ಯಾಕರ್ಷಕ MS ಕಸ್ಟಮ್ಸ್ ಬೈಕ್ ಅನಾವರಣ!
ರಾಯಲ್ ಎನ್‌ಫೀಲ್ಡ್ ಕ್ಲಾಸಿಕ್ 350 ಬೈಕ್ 349 ಸಿಸಿ ಎಂಜಿನ್ ಹೊಂದಿದೆ. ಇದು ಏರ್ ಕೂಲ್ಡ್ ಎಂಜಿನ್ ಆಗಿದ್ದು, 20.2 PS ಪವರ್ ಹಾಗೂ 27 Nm ಪೀಕ್ ಟಾರ್ಕ್ ಉತ್ಪಾದಿಸಬಲ್ಲ ಸಾಮರ್ಥ್ಯ ಹೊಂದಿದೆ. 5 ಸ್ಪೀಡ್ ಮಾನ್ಯುಯೆಲ್ ಗೇರ್ ಬಾಕ್ಸ್ ಹೊಂದಿರುವ ರಾಯಲ್ ಎನ್‌ಫೀಲ್ಡ್ ಅತ್ಯುತ್ತಮ ಪರ್ಫಾಮೆನ್ಸ್ ನೀಡಬಲ್ಲದು.