ಬೆಂಗಳೂರಿನ ರಿವರ್ ಸ್ಟಾರ್ಟ್‌ಅಪ್‌ನಿಂದ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ!

By Suvarna News  |  First Published Feb 24, 2023, 4:17 PM IST

ಬೆಂಗಳೂರು ಎಲೆಕ್ಟ್ರಿಕ್ ವಾಹನ ಸ್ಟಾರ್ಟ್ ಕಂಪನಿ ತವರು. ಇದೀಗ ಬೆಂಗಳೂರಿನಿಂದ ಮತ್ತೊಂದು ಅತ್ಯಾಕರ್ಷಕ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಗೆ ಬಿಡುಗಡೆಯಾಗಿದೆ. ರಿವರ್ ಸ್ಟಾರ್ಟ್ಅಪ್ ಕಂಪನಿ ಲಾಂಚ್ ಮಾಡಿರುವ ಇಂಡೀ ಇವಿ ಸ್ಕೂಟರ್ ಹೇಗಿದೆ? ಇದರ ಬೆಲೆ, ಮೈಲೇಜ್ ರೇಂಜ್ ಹಾಗೂ ಇತರ ಫೀಚರ್ಸ್ ಮಾಹಿತಿ ಇಲ್ಲಿದೆ.
 


ಬೆಂಗಳೂರು(ಫೆ.24): ಬೆಂಗಳೂರು ಹಲವು ಎಲೆಕ್ಟ್ರಿಕ್ ಸ್ಕೂಟರ್ ಹಾಗೂ ಎಲೆಕ್ಟ್ರಿಕ್ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದೀಗ ರಿವರ್ ಸ್ಟಾರ್ಟ್ಅಪ್ ಕಂಪನಿ ಹೊಚ್ಚ ಹೊಸ ಇಂಡೀ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್ ಮಾಡಿದೆ. ಎಲೆಕ್ಟ್ರಿಕ್ ಸ್ಕೂಟರ್ ಪೈಕಿ ಇಂಡೀ ಹೊಸ ವಿನ್ಯಾಸ ಹೊಂದಿದೆ. 6.7 kW ಪವರ್ ಹೊಂದಿರುವ ಇಂಡೀ ಸ್ಕೂಟರ್ ಒಂದು ಬಾರಿ ಚಾರ್ಜ್ ಮಾಡಿದರೆ 120 ಕಿಲೋಮೀಯರ್ ಮೈಲೇಜ್ ರೇಂಜ್ ನೀಡಲಿದೆ. ಇದರ ಬೆಲೆ 1.25 ಲಕ್ಷ ರೂಪಾಯಿ(ಎಕ್ಸ್ ಶೋ ರೂಂ ಬೆಂಗಳೂರು). ಸ್ಕೂಟರ್ ಗರಿಷ್ಠ ಸ್ಪೀಡ್ 90 ಕಿಲೋಮೀಟರ್ ಪ್ರತಿ ಗಂಟೆಗೆ.

ಇಂಡೀ ಸ್ಕೂಟರ್‌ನ್ನು ಸ್ಟಾಂಡರ್ಡ್ ಚಾರ್ಜಿಂಗ್ ಪಾಯಿಂಟ್ ಅಂದರೆ ತ್ರಿ ಪಿನ್ ಸಾಮಾನ್ಯ ಚಾರ್ಜರ್ ಪಾಯಿಂಟ್‌ನಲ್ಲಿ 5 ಗಂಟೆಯಲ್ಲಿ ಶೇಕಡಾ 80 ರಷ್ಟು ಚಾರ್ಜ್ ಆಗಲಿದೆ. ಪ್ರತಿ ನಿತ್ಯ ಬಳಕೆಗೆ ಈ ಸ್ಕೂಟರ್ ಹೆಚ್ಚು ಸೂಕ್ತವಾಗಿದೆ. ಇಕೋ, ರೈಡ್ ಹಾಗೂ ರಶ್ ಮೊಡ್ ಮೂಲಕ ಈ ಸ್ಕೂಟರ್ ರೈಡ್ ಮಾಡಬಹುದು. ಇದೀಗ ಬಿಡುಗಡೆಯಾಗಿರುವ ಇಂಡೀ ಸ್ಕೂಟರ್ ಆಗಸ್ಟ್ ತಿಂಗಳಲ್ಲಿ ಬುಕಿಂಗ್ ಮಾಡಿದವರ ಕೈಸೇರಲಿದೆ.

Tap to resize

Latest Videos

undefined

 

ಮೇಡ್ ಇನ್ ಇಂಡಿಯಾ ಆಟೋಬ್ಯಾಲೆನ್ಸ್ ಸ್ಕೂಟರ್ ಅನಾವರಣ, ಇದು ವಿಶ್ವದಲ್ಲೇ ಮೊದಲು!

ಮೊದಲ ಹಂತದಲ್ಲಿ ಬೆಂಗಳೂರು ಸೇರಿದಂತೆ ಪ್ರಮುಖ 5 ನಗರಗಳಲ್ಲಿ ಇಂಡೀ ಸ್ಕೂಟರ್ ವಿತರಣೆ ಆರಂಭಗೊಳ್ಳಲಿದೆ. ಬಳಿಕ 50 ನಗರಗಳಲ್ಲಿ ಈ ಸ್ಟೂಟರ್ ಲಭ್ಯವಾಗಲಿದೆ. ಈ ಸ್ಕೂಟರ್ ಸಂಪೂರ್ಣವಾಗಿ ಬೆಂಗಳೂರಿನಲ್ಲೇ ಉತ್ಪಾದನೆಯಾಗಲಿದೆ. ಬೆಂಗಳೂರಿನ ರಿವರ್ ಉತ್ಪಾದನಾ ಘಟಕದಲ್ಲಿ ವಾರ್ಷಿಕ 1 ಲಕ್ಷ ಸ್ಕೂಟರ್ ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ.  ರಿವರ್ ಸ್ಟಾರ್ಟ್ ಅಪ್ ಕಂಪನಿಯ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಇದಾಗಿದೆ. ಮೊದಲ ಪ್ರಯತ್ನದಲ್ಲೇ ಭಾರಿ ಸಂಚಲನ ಸೃಷ್ಟಿಸಿದೆ. 

ಸ್ಕೂಟರ್ 14 ಇಂಚಿನ ವ್ಹೀಲ್ ಹೊಂದಿದೆ. ಇದರಿಂದ ಉತ್ತಮ ರೈಡ್ ಸಾಧ್ಯವಾಗಲಿದೆ. ನಗರ ಹಾಗೂ ಗ್ರಾಮೀಣ ಯಾವುದೇ ಭಾಗಗಕ್ಕೂ ಈ ಸ್ಕೂಟರ್ ಹೆಚ್ಚು ಸೂಕ್ತವಾಗಲಿದೆ. ಈ ಸ್ಕೂಟರ್ ಸೀಟ್ ಕೆಳಭಾಗದಲ್ಲಿ 43 ಲೀಟರ್ ಸ್ಟೋರೇಜ್ ಬಾಕ್ಸ್ ಹೊಂದಿದೆ. ಮುಂಭಾಗದ ಗ್ಲೌವ್ ಬಾಕ್ಸ್‌ನಲ್ಲಿ 12 ಲೀಟರ್ ಸ್ಟೋರೇಜ್ ಸಾಮರ್ಥ್ಯ ಹೊಂದಿದೆ. 

ಸ್ಕೂಟರ್ ಮುಂಭಾಗದ ಬೀಮ್ ಹೆಡ್‌ಲ್ಯಾಂಪ್ ವಿಭಿನ್ನವಾಗಿದೆ. ಸಿಗ್ನೇಚರ್ ಟ್ವಿನ್ ಬೀಮ್ ಹೆಡ್‌ಲ್ಯಾಂಪ್‌ಗಳು ಸ್ಕೂಟರ್ ಆಕರ್ಷಕ ಹೆಚ್ಚಿಸಿದೆ.  ಸ್ಕೂಟರ್ ರೋಡ್ ಗ್ರೀಪ್, ಉತ್ತಮ ನಿರ್ವಹಣೆ ಸಮಾರ್ಥ್ಯ ಹೊಂದಿದೆ. ಇನ್ನು ಸೇಫ್‌ಗಾರ್ಡ್ ಹೊಂದಿರುವುದರಿಂದ ರೈಡರ್‌ಗೆ ಹೆಚ್ಚಿನ ಸುರಕ್ಷತೆಯನ್ನು ಒದಗಿಸುತ್ತಿದೆ. 

ಕೈಗೆಟುಕವ ದರದಲ್ಲಿ ಕೊಮಾಕಿ ಎಲೆಕ್ಟ್ರಿಕ್ ಸ್ಕೂಟರ್ ಲಾಂಚ್, 100 ಕಿ.ಮೀ ಮೈಲೇಜ್!

ರಿವರ್ ಇಂಡೀ ಸ್ಕೂಟರ್ ಜನರ ಪ್ರತಿನಿತ್ ಜೀವನಕ್ಕಾಗಿ ವಿನ್ಯಾಸಗೊಳಿಸಲಾಗಿದೆ. ಇದು ನಮ್ಮ ಮೊದಲ ಉತ್ಪನ್ನವಾಗಿದೆ. ಜೀವನಶೈಲಿ, ಪ್ರಾಯೋಗಿಕತೆ, ಸಾಮರ್ಥ್ಯ ಮತ್ತು ಶೈಲಿಯೊಂದಿಗೆ ಬಿಡುಗಡೆ ಮಾಡಲಾಗಿದೆ. ಮನೆಯಲ್ಲೇ ಸುಲಭ ಚಾರ್ಚಿಂಗ್ ಮೂಲಕ ಚಾರ್ಜ್ ಮಾಡಿಕೊಳ್ಳಬಹುದು. ಅತ್ಯಾಧುನಿಕ ತಂತ್ರಜ್ಞಾನ ಹೊಂದಿದೆ ಎಂದು ರಿವರ್ ಸಂಹ ಸಂಸ್ಛಾಪಕ ಅರವಿಂದ್ ಮಣಿ ಹೇಳಿದರು.  ಈ ಸ್ಕೂಟರ್ ಭಾರತದ ಎಲೆಕ್ಟ್ರಿಕ್ ಮಾರುಕಟ್ಟೆಯಲ್ಲಿ ಹೊಸ ಸಂಚಲನ ಸೃಷ್ಟಿಸಲಿದೆ ಎಂದರು.
 

click me!