ಹೆಣ್ಣು ಮಕ್ಕಳು ಹೆಚ್ಚು ಇಷ್ಟಪಡ್ತಿರುವ ಎಲೆಕ್ಟ್ರಿಕ್ ಸೈಕಲ್‌ಗಳ ಲಿಸ್ಟ್, ಮಹಿಳೆಯರಿಗೆ ಯಾವುದು ಹೆಚ್ಚು ಸೂಕ್ತ?

Published : Sep 16, 2026, 05:45 PM IST
Best Electric Bikes for Women

ಸಾರಾಂಶ

E-Bikes: ನೀವು ನಿಮ್ಮ ಗೆಳತಿಗೆ, ಮಡದಿಗೆ ಎಲೆಕ್ಟ್ರಿಕ್ ಬೈಕ್ ಕೊಡಿಸಬೇಕು ಅಂದ್ಕೊಂಡಿದ್ದೀರಾ? ಹಾಗಿದ್ದರೆ ನಿಮ್ಮ ಆಯ್ಕೆ ಯಾವ ಸೈಕಲ್ ಆಗಿರಬೇಕು? ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್.

Best E-Bikes: ಎಲೆಕ್ಟ್ರಿಕ್ ಬೈಕ್‌ಗಳು, ಸ್ಕೂಟರ್‍‌ಗಳ ಬೇಡಿಕೆ ಹೆಚ್ಚಾಗ್ತಿದ್ದಂತೆಯೇ ಸೈಲೆಂಟ್ ಆಗಿ ಎಲೆಕ್ಟ್ರಿಕ್ ಸೈಕಲ್‌ಗಳು ಟ್ರೆಂಡ್ ಆಗ್ತಿವೆ. ಮಹಿಳೆಯರು ಎಲೆಕ್ಟ್ರಿಕ್ ಸೈಕಲ್‌ಗಳನ್ನ ತುಂಬಾನೇ ಇಷ್ಟಪಡ್ತಿದ್ದಾರೆ.

ಯಾವುದೇ ಟ್ರಾಫಿಕ್ ಕಿರಿಕಿರಿ ಮಾಡದೇ, ಪರಿಸರ ಮಾಲಿನ್ಯವೂ ಮಾಡದೇ ಸುಲಭವಾಗಿ ಆಫೀಸ್‌ಗೆ ರೀಚ್ ಆಗಲು, ತರಕಾರಿ ತರಲು ಅಥವಾ ಫಿಟ್‌ನೆಸ್‌ಗಾಗಿ ಉತ್ತಮ ಆಯ್ಕೆ ಆಗಿದೆ. ಪ್ರಸ್ತುತ ಮಾರುಕಟ್ಟೆಗಳಲ್ಲಿ ನೂರಾರು ಬಗೆಯ ಇ-ಸೈಕಲ್‌ಗಳಿದ್ದು, ಮಹಿಳೆಯರಿಗೆ ಯಾವುದು ಸೂಕ್ತ ಅನ್ನೋ ವಿವರ ಈ ಕೆಳಗಿನಂತೆ ಇದೆ.

ಬ್ಯಾಟರಿ ಖಾಲಿಯಾದರೂ ಸಾಮಾನ್ಯ ಸೈಕಲ್‌ನಂತೆಯೇ ಪೆಡಲ್ ತುಳಿದುಕೊಂಡು ಹೋಗಬಹುದು. ಆದರೆ ಈ ಸೈಕಲ್‌ಗಳು ಸ್ವಲ್ಪ ಭಾರ ಎನಿಸಬಹುದು. ಹತ್ತಿ-ಇಳಿಯಲು ಸುಲಭವಾಗಿರುವ ಸ್ಟೆಪ್-ಥ್ರೂ (Step-through) ಫ್ರೇಮ್ ಇರುವ ಸೈಕಲ್‌ಗಳು ಮಹಿಳೆಯರಿಗೆ ಅತ್ಯಂತ ಆರಾಮದಾಯಕ. ಇದೇ ಸೈಕಲ್‌ಗಳಿಗೆ ಹೆಚ್ಚು ಬೇಡಿಕೆ ಇದೆ ಎಂದು ವರದಿಯಾಗಿದೆ.

ದೈನಂದಿನ ಓಡಾಟಕ್ಕೆ (City/Commuter)

ಸೈಕಲ್ ಮಾದರಿಯಾಕೆ ಇಷ್ಟವಾಗುತ್ತದೆ?ಅಂದಾಜು ಬೆಲೆ (ಭಾರತೀಯ ರೂಪಾಯಿಗಳಲ್ಲಿ)
Huffy Viennaಕಡಿಮೆ ಬಜೆಟ್‌ನ ಬೆಸ್ಟ್ ಆಯ್ಕೆ₹59,400
Ride1Up Roadster V3ಅತಿ ಕಡಿಮೆ ತೂಕ (ಎತ್ತಿಡಲು ಸುಲಭ)₹1,18,500
Aventon Level 4 RECಬೆಲೆಗೆ ತಕ್ಕ ಅತ್ಯುತ್ತಮ ಮೋಟಾರ್ & ಬ್ಯಾಟರಿ₹1,69,900
Priority Current Plusವೇಗವಾಗಿ ಚಲಿಸುವ ಅಲ್ಟಿಮೇಟ್ ಬೈಕ್₹2,80,400 ರಿಂದ

ಗುಡ್ಡಗಾಡು ಪ್ರದೇಶಗಳಿಗೆ (eMTB)

ಸೈಕಲ್ ಮಾದರಿಯಾಕೆ ಇಷ್ಟವಾಗುತ್ತದೆ?ಅಂದಾಜು ಬೆಲೆ (ಭಾರತೀಯ ರೂಪಾಯಿಗಳಲ್ಲಿ)
Aventon Current ADVಬಜೆಟ್ ಬೆಲೆಯ ಫುಲ್ ಪವರ್ ಮೌಂಟೇನ್ ಬೈಕ್₹3,39,900
Orbea Rise SLಹತ್ತುವ ರಸ್ತೆಗಳಿಗೆ ಅತ್ಯುತ್ತಮ₹4,83,000
Trek Fuel+ EXಅತ್ಯಂತ ನಿಶ್ಯಬ್ದ ಮತ್ತು ಪ್ರೀಮಿಯಂ ಕ್ವಾಲಿಟಿ₹6,79,900

ಮಕ್ಕಳಿಗಾಗಿ (Family & Cargo)

ಸೈಕಲ್ ಮಾದರಿಯಾಕೆ ಇಷ್ಟವಾಗುತ್ತದೆ?ಅಂದಾಜು ಬೆಲೆ (ಭಾರತೀಯ ರೂಪಾಯಿಗಳಲ್ಲಿ)
Segway MUXIಅತ್ಯುತ್ತಮ ಸೇಫ್ಟಿ ಫೀಚರ್ಸ್‌₹1,44,400
Aventon Abound LRಹೆಚ್ಚು ತೂಕ ಹೊರಬಲ್ಲದು, ಜೊತೆಗೆ ಥ್ರೊಟಲ್ ಇದೆ₹1,69,900
Xtracycle Swoop ASMಅತ್ಯಂತ ಶಕ್ತಿಶಾಲಿ ಮೋಟಾರ್₹3,82,400
Bunch Bikeಇದರಲ್ಲಿ ಬರೋಬ್ಬರಿ 4 ಮಕ್ಕಳನ್ನು ಕೂರಿಸಬಹುದು₹5,52,400

ಆರಾಮದಾಯಕ ಸವಾರಿ (Comfort/Cruiser)

ಸೈಕಲ್ ಮಾದರಿಯಾಕೆ ಇಷ್ಟವಾಗುತ್ತದೆ?ಅಂದಾಜು ಬೆಲೆ (ಭಾರತೀಯ ರೂಪಾಯಿಗಳಲ್ಲಿ)
Retrospec Beaumont Rev+ಬಳಸಲು ಸುಲಭ, ಕ್ಯಾರಿಯರ್ ಲಭ್ಯ₹1,35,900
Aventon Pace 5 RECಆರಂಭಿಕ ಸವಾರರಿಗೆ ಹೇಳಿಮಾಡಿಸಿದ್ದು

₹1,52,900

Priority Glideಸಾಮಾನ್ಯ ಸೈಕಲ್‌ನಂತೆಯೇ ಮೃದು ಅನುಭವ₹1,52,900
Electra Townie Go!ಸ್ಟೈಲಿಶ್ ಲುಕ್ ಮತ್ತು ಆರಾಮದಾಯಕ ಸೀಟು₹1,78,400

PREV
Read more Articles on
click me!

Recommended Stories

ಸ್ಟೋರೇಜ್‌ಗೂ ಸೈ, ಮೈಲೇಜ್‌ಗು ಸೈ! ದೊಡ್ಡ ಬೂಟ್ ಸ್ಪೇಸ್ ಇರುವ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್‌ಗಳಿವು!
ಈ ಎರಡು ಕಾರಣಗಳಿಗೆ Suzuki e-Access ಬೆಟರ್, ಬೆಸ್ಟ್ ಸ್ಕೂಟರ್‍‌ ಅಂದ್ರೆ ಇದೇ