ದೇಶ ಪ್ರಮುಖ ದ್ವಿಚಕ್ರವಾಹನ ತಯಾರಿಕಾ ಕಂಪನಿಗಳಲ್ಲಿ ಒಂದಾಗಿರುವ ಟಿವಿಎಸ್ ಮೋಟಾರ್ ಕಂಪನಿಯು ಹೊಸ ದ್ವಿಚಕ್ರವಾಹನವನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 125 ಸಿಸಿ ಎಂಜಿನ್ ಹೊಂದಿರುವ ಈ ಬೈಕ್ ಅತ್ಯಾಕರ್ಷಕವಾಗಿದೆ. ಸ್ಪೋರ್ಟ್ಸ್ ಹಾಗೂ ಕಮ್ಯುಟರ್ಸ್ ಸಮ್ಮಿಶ್ರಣ ಹೊಂದಿರುವ ಈ ಬೈಕ್ ಹೆಸರು-ಟಿವಿಎಸ್ ರೈಡರ್ 125.
ಟಿವಿಎಸ್ ಮೋಟಾರ್ ಕಂಪನಿಯು ಭಾರತೀಯ ಮಾರುಕಟ್ಟೆಗೆ, ಟಿವಿಎಸ್ ರೈಡರ್ 125 ಎಂಬ ಹೊಸ ಮೋಟಾರ್ ಸೈಕಲ್ ಅನ್ನು ಲಾಂಚ್ ಮಾಡಿದೆ. ಸ್ಪೋರ್ಟ್ಸ್ ಲುಕ್ ಹೊಂದಿರುವ ಈ ಬೈಕ್ ಯುವಕರ ಮೆಚ್ಚಿನ ಬೈಕ್ ಆಗುವ ಸಾಧ್ಯತೆ ಇದೆ. ಟಿವಿಎಸ್ ಈ ಹೊಸ ಮೋಟಾರಸ್ ಸೈಕಲ್ ಬೆಲೆ ದಿಲ್ಲಿ ಶೋರೂಮ್‌ನಲ್ಲಿ 77,500 ರೂಪಾಯಿ ಇದೆ.
ರಾಯಲ್ ಎನ್‌ಫೀಲ್ಡ್ ಹೊಸ ಕ್ಲಾಸಿಕ್ 350 ಬುಲೆಟ್ ಲಾಂಚ್
undefined
ಭಾರತವು ಮಾತ್ರವಲ್ಲದೇ ಇಡೀ ಜಗತ್ತಿನಾದ್ಯಂತ ಬೈಕ್ ಖರೀದಿದಾರರ ಪೈಕಿ ಶೇ.39ರಷ್ಟು ಜನರು ಯುವಕರಿದ್ದಾರೆ ಎಂಬುದು ಟಿವಿಎಸ್‌ನ ಅಭಿಪ್ರಾಯವಾಗಿದೆ. ಈ ಹೊಸ ಟಿವಿಎಸ್ ರೈಡರ್ 125 ಬೈಕ್ ಅನ್ನು ಗ್ಲೋಬಲ್ ಫ್ಲಾಟ್‌ಪಾರ್ಮ್‌ನಲ್ಲಿ ನಿರ್ಮಿಸಿ ಭಾರತ ಹಾಗೂ ಸಾರ್ಕ್ ರಾಷ್ಟ್ರಗಳು ಲ್ಯಾಟಿನ್ ಅಮೆರಿಕ ಮಾರುಕಟ್ಟೆಯಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದು ಕಂಪನಿ ಹೇಳಿಕೊಂಡಿದೆ.
ಟಿವಿಎಸ್ ಕಂಪನಿಯ ಈ ಹೊ ಬೈಕ್ ರೈಡರ್ 125 ಸ್ಪೋರ್ಟಿ ಮತ್ತು ಕಮ್ಯುಟರ್ ಬೈಕ್‌ಗಳ ಸಮ್ಮಿಶ್ರಣವಾಗಿದೆ ಎಂದು ಹೇಳಬಹುದು. ಬೈಕ್‌ನ ವಿನ್ಯಾಸದಲ್ಲಿ ನಿಮಗೆ ಗಮನಾರ್ಹವಾಗಿ ಎದ್ದು ಕಾಣುವ ಸಂಗತಿ ಎಂದರೆ, ಡಿಆರ್‌ಎಲ್‌ಗಳೊಂದಿಗೆ ಎಲ್ಇಡಿ ಹೆಡ್‌ಲ್ಯಾಂಪ್ ತುಂಬ ಆಕರ್ಷವಾಗಿದೆ. ಮಸ್ಕುಲರ್ ಲುಕ್ಕಿಂಗ್ ಶೈಲಿಯ ಇಂಧನ ಟ್ಯಾಂಕ್ ಅನ್ನು ಬದಿಯಲ್ಲಿ ಕವಚಗಳು ಮತ್ತು ಎಂಜಿನ್ ಗಾರ್ಡ್ ಅನ್ನು ಸಹ ಪಡೆಯುತ್ತದೆ.
ಟಿವಿಎಸ್ ರೈಡರ್ 125 ಬೈಕ್‌ನ ಇನ್ನೊಂದು ವಿಶೇಷ ಎಂದರೆ ಅದರ ಸೀಟು. ಈ ಬೈಕ್‌ನಲ್ಲಿ ಕಂಪನಿಯು ಸ್ಪ್ಲಿಟ್ ಸೀಟ್ ನೀಡಿದೆ. ಈ ಸೆಗ್ಮೆಂಟ್‌ನಲ್ಲಿ ಈ ರೀತಿಯ ಸೀಟು ಇರುವುದು ಇದೇ ಮೊದಲು. ಹಿಂಬದಿಯಲ್ಲಿ ನೀಡಲಾಗಿರುವ ಗ್ರಾಬ್ ರೇಲ್ ಕೂಡ ಚೆನ್ನಾಗಿದೆ. ಎಲ್ಇಡಿ ಟೇಲ್‌ಲೈಡ್ ಸ್ಟೈಲೀಶ್ ಆಗಿವೆ. 17 ಇಂಚ್ ಅಲಾಯ್ ಚಕ್ರಗಳಿವೆ. ಈ ಬೈಕ್ ಗ್ರಾಹಕರಿಗೆ ಹಳದಿ, ಕೆಂಪು ಮತ್ತು ಕಪ್ಪು ಬಣ್ಣಗಳಲ್ಲಿ ದೊರೆಯುತ್ತದೆ.
ಚೆನ್ನೈ, ಹೈದ್ರಾಬಾದ್‌ನಲ್ಲೂ ಬಜಾಜ್ ಚೇತಕ್ ಇ ಸ್ಕೂಟರ್
ಟಿವಿಎಸ್ ರೈಡರ್ 125 ಮೋಟಾರ್ ಸೈಕಲ್‌ನಲ್ಲಿ ಕಂಪನಿಯು ಸಂಪೂರ್ಣ ಡಿಜಿಟಲ್ ಕಾನ್ಸೋಲ್ ಒದಗಿಸಿದೆ. ಇದರಲ್ಲಿ ನೀವು ಮೂರು ಟ್ರಿಪ್ ಮೀಟರ್ಸ್, ಡಿಸ್ಟನ್ಸಿ ಟು ಎಮ್ಟಿ ಇಂಡಿಕೇಟರ್, ಸ್ಟಾರ್ಟರ್ ಜನರೇಟರ್ ಇಂಡಿಕೇಟರ್, ಗಿಯರ್ ಶಿಫ್ಟ್ ಇಂಡಿಕೇಟರ್, ಅವರೇಜ್ ಸ್ಪೀಡ್ ಇಂಡಿಕೇಟರ್ ಇತ್ಯಾದಿ ಮಾಹಿತಿಯನ್ನುಗಳನ್ನು ಕಾಣಬಹುದು. ಇದರ ಜೊತೆಗೆ , ಸೈಡ್ ಸ್ಟ್ಯಾಂಡ್ ಕಟ್ ಆಫ್ ಸ್ವಿಚ್ ಅನ್ನು ಸೇಫ್ಟಿ ಫೀಚರ್ ಆಗಿ ನೀಡಲಾಗಿದೆ.
ಟಿವಿಎಸ್‌ನ ಈ ಹೊಸ ಬೈಕಿನ ಎಂಜಿನ್ ಬಗ್ಗೆ ಹೇಳುವುದಾದರೆ, 124.8 ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ನೀಡಲಾಗಿದೆ. ಮೂರು ವಾಲ್ವ್‌ಗಳು ಈ ಎಂಜಿನ್ 7500 ಆರ್‌ಪಿಎಂನಲ್ಲಿ ಗರಿಷ್ಠ 11.2 ಬಿಎಚ್‌ಪಿ ಹಾಗೂ 6,000 ಆರ್‌ಪಿಎಂನಲ್ಲಿ 11.2 ಎನ್‌ಎಂ ಗರಿಷ್ಠ ಟಾರ್ಕ್ ಉತ್ಪಾದನೆ ಮಾಡುತ್ತದೆ. 5 ಸ್ಪೀಡ್ ಗಿಯರ್ ಬಾಕ್ಸ್ ನೀಡಲಾಗಿದೆ. ಇಂಕೋ ಮತ್ತು ಪವರ್ ಎಂಬ ಎರಡು ರೈಡಿಂಗ್ ಮೋಡ್‌ಗಳಲ್ಲಿ ಈ ಬೈಕ್ ಸಿಗುತ್ತದೆ.
ಬೈಕ್‌ನ ಸಸ್ಪೆನ್ಷನ್ ವ್ಯವಸ್ಥೆ ಕೂಡ ಚೆನ್ನಾಗಿದೆ. ಬೈಕ್ ಮುಂಭಾಗದಲ್ಲಿ ಕಂಪನಿಯು ಟೆಲೆಸ್ಕಾಪಿಕ್ ಫೋರ್ಕ್ಸ್ ನೀಡಿದ್ದರೆ, ಹಿಂಬದಿಯಲ್ಲಿ ಮೊನೋಶಾಕ್‌ಆಬ್ಸರ್ ಅಳವಡಿಸಲಾಗಿದೆ. ಮುಂಬದಿಯ ಚಕ್ರಕ್ಕೆ ಡಿಸ್ಕ್ ಹಾಗೂ ಹಿಂಬದಿಯಲ್ಲಿ ಡ್ರಮ್ ಬ್ರೇಕ್ ಸಿಸ್ಟಮ್ ಇದೆ. ಸ್ಟ್ಯಾಂಡರ್ಡ್ ಆಗಿ ಈ ಬೈಕಿನಲ್ಲಿ ಕಾಂಬಿ ಬ್ರೇಕಿಂಗ್ ಸಿಸ್ಟಮ್ ಇರುತ್ತದೆ. ಇದನ್ನು ನೀವು ಸುರಕ್ಷತೆಯ ಫೀಚರ್ ಎಂದು ಭಾವಿಸಿಕೊಳ್ಳಬಹುದು.
ಮಿಡ್‌ಸೈಜ್ SUV ಆಸ್ಟರ್ ಪರಿಚಯಿಸಿದ ಎಂಜಿ ಹೆಕ್ಟರ್!
ಹಬ್ಬದ ಸಂದರ್ಭದಲ್ಲಿ ಟಿವಿಎಸ್ ಕಂಪನಿಯು ಈ ಹೊಸ ಟಿವಿಎಸ್ ರೈಡರ್ 125 ಬೈಕ್ ಲಾಂಚ್ ಮಾಡಿರುವುದು ಇತರ ಬ್ರ್ಯಾಂಡ್‌ಗಳಿಗೆ ತೀವ್ರ ಪೈಪೋಟಿ ನೀಡುವ ಸಾಧ್ಯತೆ ಇದೆ. ಹೋಂಡಾ ಕಂಪನಿಯ ಸಿಬಿ ಶೈನ್, ಶೈನ್ ಎಸ್‌ಪಿ 125, ಹೀರೋ ಗ್ಲಾಮರ್, ಬಜಾಜ್ ಪಲ್ಸರ್ 125, ಎನ್ಎಸ್ 125 ಮೋಟಾರ್ ಸೈಕಲ್‌ಗಳಿಗೆ ತೀವ್ರ ಸ್ಪರ್ಧೆಯನ್ನು ನಿರೀಕ್ಷಿಸಬಹುದಾಗಿದೆ.
ಟಿವಿಎಸ್ ಕಂಪನಿಯು ಈಗಾಗಲೇ ಸ್ಟಾರ್ ಸಿಟಿ, ಸ್ಪೋರ್ಟ್ಸ್ ಮೋಟಾರ್ ಸೈಕಲ್‌ಗಳು ಮತ್ತು ಸ್ಕೂಟರ್‌ಗಳ ಮೂಲಕ ಭಾರತೀಯ ದ್ವಿಚಕ್ರವಾಹನ ಮಾರುಕಟ್ಟೆಯಲ್ಲಿ ಸಾಕಷ್ಟು ಪಾಲನ್ನು ಪಡೆದುಕೊಂಡಿದೆ. ಈಗ ಟಿವಿಎಸ್ ರೈಡರ್ 125 ಬೈಕ್ ಮೂಲಕ ತನ್ನ ಅಸ್ತಿತ್ವವನ್ನು ವಿಸ್ತರಿಸಿಕೊಳ್ಳುವ ಸಾಧ್ಯತೆ ಇದೆ.